HOME » NEWS » Sports » CRICKET THERE WAS NO INTENT FROM MS DHONI BEN STOKES ON INDIAS CHASE IN 2019 WORLD CUP VS ENGLAND VB

ಧೋನಿ ವಿಶ್ವಕಪ್​ನಲ್ಲಿ ಗೆಲುವಿಗಾಗಿ ಹೋರಾಟವೇ ನಡೆಸಲಿಲ್ಲ; ಸ್ಟಾರ್ ಆಟಗಾರನಿಂದ ಶಾಕಿಂಗ್ ಹೇಳಿಕೆ

ನಮ್ಮ ತಂಡದ ವಿರುದ್ಧ ಭಾರತ ಸುಲಭ ಜಯ ಸಾಧಿಸಿಬಹುದಿತ್ತು. ಆದರೆ, ಧೋನಿ ಪಂದ್ಯವನ್ನು ಗೆಲ್ಲುವ ಪ್ರಯತ್ನವನ್ನೇ ಮಾಡಲಿಲ್ಲ. ನಾಯಕ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ನಡೆ ಕೂಡ ತಮಗೆ ಅಚ್ಚರಿ ಮೂಡಿಸಿತ್ತು.

news18-kannada
Updated:May 27, 2020, 9:21 AM IST
ಧೋನಿ ವಿಶ್ವಕಪ್​ನಲ್ಲಿ ಗೆಲುವಿಗಾಗಿ ಹೋರಾಟವೇ ನಡೆಸಲಿಲ್ಲ; ಸ್ಟಾರ್ ಆಟಗಾರನಿಂದ ಶಾಕಿಂಗ್ ಹೇಳಿಕೆ
2019ರ ಐಸಿಸಿ ವಿಶ್ವಕಪ್‍ನ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿರುವುದು ಅವರ ಕೊನೆಯ ಪಂದ್ಯ ಎಂಬುದು ನನ್ನ ಅನಿಸಿಕೆ. ಅಲ್ಲಿಗೆ ಅವರು ಭಾರತದ ಪರ ಆಟ ಮುಗಿಸಲಿದ್ದಾರೆ ಎಂದು ಭಾವಿಸುತ್ತೇನೆ ಎಂದು ಅನುಭವಿ ಆಫ್ ಸ್ಪಿನ್ನರ್ ಹೇಳಿದರು.
  • Share this:
2019 ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುಕಂಡು ಅಭಿಯಾನ ಅಂತ್ಯಗೊಳಿಸಿತ್ತು. ಸೆಮೀಸ್​ನಲ್ಲಿ ಭಾರತ ಸೋಲು ಕಾಣಲು ಮಹೇಂದ್ರ ಸಿಂಗ್ ಧೋನಿ ರನೌಟ್ ಪ್ರಮುಖ ಕಾರಣ ಎಂದು ಅನೇಕರು ಟೀಕಿಸಿದ್ದರು. ಈ ಸೋಲಿನ ಬಳಿಕ ಧೋನಿ ಮೈದಾನಕ್ಕೂ ಇಳಿಯಲಿಲ್ಲ.

ಈ ನಡುವೆ ಸದ್ಯ ಇಂಗ್ಲೆಂಡ್ ತಂಡದ ಸ್ಟಾರ್ ಆಲ್​ರೌಂಡರ್ ಆಟಗಾರ ಬೆನ್ ಸ್ಟೋಕ್ಸ್​ ಧೋನಿ ಕುರಿತು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ವಿಶ್ವಕಪ್ ಟೂರ್ನಿಯ ರೌಂಡ್ ರಾಬಿನ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ಎದುರು ಗೆಲ್ಲುವ ಪ್ರಯತ್ನವೇ ಮಾಡಲಿಲ್ಲ ಎಂದು ಹೇಳಿದ್ದಾರೆ.

On this day in 1999: ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಗಂಗೂಲಿ-ದ್ರಾವಿಡ್ ಜೊತೆಯಾಟಕ್ಕೆ 21 ವರ್ಷ!

'ನಮ್ಮ ತಂಡದ ವಿರುದ್ಧ ಭಾರತ ಸುಲಭ ಜಯ ಸಾಧಿಸಿಬಹುದಿತ್ತು. ಆದರೆ, ಧೋನಿ ಪಂದ್ಯವನ್ನು ಗೆಲ್ಲುವ ಪ್ರಯತ್ನವನ್ನೇ ಮಾಡಲಿಲ್ಲ. ನಾಯಕ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ನಡೆ ಕೂಡ ತಮಗೆ ಅಚ್ಚರಿ ಮೂಡಿಸಿತ್ತು' ಎಂದು ಹೇಳಿದ್ದಾರೆ. ಕಳೆದ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ಲೀಗ್ ಹಂತದಲ್ಲಿ ಕೇವಲ ಒಂದು ಪಂದ್ಯವನ್ನಷ್ಟೆ ಸೋತಿತ್ತು. ಅದು ಇಂಗ್ಲೆಂಡ್ ವಿರುದ್ಧ ಆಗಿತ್ತು.

'ಅಂದು ನಾವು ಭಾರತಕ್ಕೆ ಗೆಲ್ಲಲು 338 ರನ್​ಗಳ ಟಾರ್ಗೆಟ್ ನೀಡಿದ್ದೆವು. ಎಂಎಸ್‌ ಧೋನಿ ಕ್ರೀಸ್‌ಗೆ ಬಂದಾಗ ಭಾರತ ತಂಡಕ್ಕೆ 11 ಓವರ್‌ಗಳಲ್ಲಿ 112 ರನ್‌ ಗಳಿಸುವ ಅಗತ್ಯವಿತ್ತು. ಧೋನಿ ಸಿಕ್ಸರ್‌ ಬಾರಿಸುವ ಕಡೆಗೆ ಮನಸ್ಸು ಮಾಡದೆ ಕೇವಲ 1 ರನ್‌ಗಳನ್ನು ತೆಗೆಯುವುದರಲ್ಲಿ ನಿರತರಾಗಿದ್ದರು. ಅಂದಹಾಗೆ ಆ ಪಂದ್ಯವನ್ನು ಭಾರತ ಇನ್ನು ಒಂದು ಡಝನ್‌ ಎಸೆತಗಳು ಬಾಕಿ ಇರುವಾಗಲೇ ಗೆಲ್ಲಬಹುದಿತ್ತು' ಎಂಬುದು ಸ್ಟೋಕ್ಸ್​ ಮಾತು.

Sri Lanka Cricket: ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಯುವ ಆಟಗಾರ ಅರೆಸ್ಟ್​

'ಭಾರತದ ಗೆಲುವಿಗಾಗಿ ಧೋನಿ ಆಗಲಿ ಅಥವಾ ಅವರ ಜೊತೆಗಾರ ಕೇದಾರ್‌ ಜಾಧವ್‌ ಆಗಲಿ ಪ್ರಯತ್ನ ಮಾಡಲೇ ಇಲ್ಲ. ರೋಹಿತ್‌ ಮತ್ತು ವಿರಾಟ್‌ ಆಟವೂ ಅಚ್ಚರಿ ತಂದಿತ್ತು. ಆದರೆ, ಆ ಅವಧಿಯಲ್ಲಿ ನಾವು ಉತ್ತಮ ಬೌಲಿಂಗ್‌ ಸಂಘಟಿಸಿದ್ದೆವು ಕೂಡ. ಆದರೆ, ಅವರ ಬ್ಯಾಟಿಂಗ್‌ ನಿಜಕ್ಕೂ ವಿಚಿತ್ರವಾಗಿತ್ತು. ಪಂದ್ಯದಲ್ಲಿ ಅವರ ತಂಡ ಹಿಂದೆ ಬೀಳುವಂತೆ ಮಾಡಿದ್ದೇ ಅವರು. ಎದುರಾಳಿ ಮೇಲೆ ಒತ್ತಡ ಹೇರುವ ಯಾವುದೇ ಪ್ರಯತ್ನ ಅವರು ಮಾಡಲಿಲ್ಲ. ಒಂದು ವಿಚಿತ್ರ ತಂತ್ರಗಾರಿಕೆ ಅನುಸರಿಸಿದ್ದರು' ಎಂದು ಸ್ಟೋಕ್ಸ್​ ಹೇಳಿದ್ದಾರೆ.
First published: May 27, 2020, 9:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories