IND vs SA: ಧವನ್ ಔಟ್ ಆದ ಬೆನ್ನಲ್ಲೆ ಬ್ಯಾಟ್ ಬೀಸಲು ಜೊತೆಯಾಗಿ ಬಂದ ಪಂತ್-ಐಯರ್; ಕಾರಣವೇನು ಗೊತ್ತಾ?

ಧವನ್ ಔಟ್ ಆದ ಬೆನ್ನಲ್ಲೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಐಯರ್ ಹಾಗೂ ಪಂತ್ ಇಬ್ಬರೂ ಜೊತೆಯಾಗಿ ಮೈದಾನಕ್ಕಿಳಿದರು. ಈ ಸಂದರ್ಭ ಚಿನ್ನಸ್ವಾಮಿಯಲ್ಲಿ ನೆರದಿದ್ದ ಅಭಿಮಾನಿಗಳ ಜೊತೆ ಕೊಹ್ಲಿಗೂ ಒಮ್ಮೆ ಶಾಕ್ ಆಯಿತು.

Vinay Bhat | news18-kannada
Updated:September 23, 2019, 11:53 AM IST
IND vs SA: ಧವನ್ ಔಟ್ ಆದ ಬೆನ್ನಲ್ಲೆ ಬ್ಯಾಟ್ ಬೀಸಲು ಜೊತೆಯಾಗಿ ಬಂದ ಪಂತ್-ಐಯರ್; ಕಾರಣವೇನು ಗೊತ್ತಾ?
ರಿಷಭ್ ಪಂತ್ ಹಾಗೂ ಶ್ರೇಯಸ್ ಐಯರ್
  • Share this:
ಬೆಂಗಳೂರು (ಸೆ. 23): ನಿನ್ನೆ ಚಿನ್ನಸ್ವಾಮಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತ ಕಳಪೆ ಬ್ಯಾಟಿಂಗ್​ಗೆ ಬೆಲೆ ತೆತ್ತಬೇಕಾಯಿತು. ಟಿ-20 ವಿಶ್ವಕಪ್​ಗೂ ಮೊದಲು ನಡೆದ ಪರೀಕ್ಷೆಯಲ್ಲಿ ಕೊಹ್ಲಿ ಪಡೆ ಫೇಲ್ ಆದರು. ಕ್ರೀಸ್ ಕಚ್ಚಿ ಆಡಲು ವಿಫಲವಾದ ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗಳು ಹರಿಣಗಳ ಬೌಲಿಂಗ್ ದಾಳಿಗೆ ಶರಣಾದರು.

ಈ ಮಧ್ಯೆ ಶಿಖರ್ ಧವನ್ ಔಟ್ ಆದ ಬೆನ್ನಲ್ಲೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ರಿಷಭ್ ಪಂತ್ ಹಾಗೂ ಶ್ರೇಯಸ್ ಐಯರ್ ಜೊತೆಗಾಗಿ ಮೈದಾನಕ್ಕಿಳಿದ ಘಟನೆ ನಡೆದಿದೆ.

8ನೇ ಓವರ್​ನ ತಬ್ರೈಜ್ ಶಂಸಿ ಬೌಲಿಂಗ್​ನಲ್ಲಿ36 ರನ್ ಗಳಿಸಿದ್ದ ಶಿಖರ್ ಧವನ್ ಔಟ್ ಆದರು. ನಾನ್ ಸ್ಟ್ರೈಕ್​ನಲ್ಲಿ ವಿರಾಟ್ ಕೊಹ್ಲಿ ಇದ್ದರು. ಇತ್ತ ಧವನ್ ಔಟ್ ಆದ ಬೆನ್ನಲ್ಲೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಶ್ರೇಯಸ್ ಐಯರ್ ಹಾಗೂ ರಿಷಭ್ ಪಂತ್ ಇಬ್ಬರೂ ಜೊತೆಯಾಗಿ ಮೈದಾನಕ್ಕಿಳಿದರು.

ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು? ಎಂಬ ಪ್ರಶ್ನೆಗೆ ಕಾಜಲ್ ನೀಡಿದ ಉತ್ತರವೇನು ಗೊತ್ತಾ..?

 ಈ ಸಂದರ್ಭ ಚಿನ್ನಸ್ವಾಮಿಯಲ್ಲಿ ನೆರದಿದ್ದ ಅಭಿಮಾನಿಗಳ ಜೊತೆ ಕೊಹ್ಲಿಗೂ ಒಮ್ಮೆ ಶಾಕ್ ಆಯಿತು. 4ನೇ ಕ್ರಮಾಂಕದಲ್ಲಿ ಯಾರು ಆಡಬೇಕು ಎಂಬ ಗೊಂದಲ ಎದುರಾಯಿತು. ಬಳಿಕ ಶ್ರೇಯಸ್ ಐಯರ್ ಪೆವಿಲಿಯನ್​ಗೆ ವಾಪಾಸ್ ಆಗಿ ಪಂತ್ ಕ್ರೀಸ್​ಗೆ ಬಂದರು.

ಪಂದ್ಯ ಮುಗಿದ ಬಳಿಕ ಈ ಘಟನೆ ಬಗ್ಗೆ ವಿವರಿಸಿದ ನಾಯಕ ಕೊಹ್ಲಿ, '10 ಓವರ್ ಬಳಿಕ 2ನೇ ವಿಕೆಟ್ ನಾವು ಕಳೆದುಕೊಂಡರೆ 4ನೇ ಕ್ರಮಾಂಕದಲ್ಲಿ ಪಂತ್ ಕಣಕ್ಕಿಳಿಯಬೇಕಿತ್ತು. ಎಲ್ಲಾದರು 10 ಓವರ್ ಮುಂಚೆನೇ 2ನೇ ವಿಕೆಟ್ ಪತನಗೊಂಡರೆ ಶ್ರೇಯಸ್ ಐಯರ್ 4ನೇ ಕ್ರಮಾಂಕದಲ್ಲಿ ಆಡಬೇಕು ಎಂಬ ಯೋಜನೆ ಹಾಕಿಕೊಂಡಿದ್ದೆವು'

ಯುವರಾಜ್ ಜೆರ್ಸಿ ನಂಬರ್ 12 ಅನ್ನು ನಿವೃತ್ತಿಯೆಂದು ಘೋಷಿಸಿ; ಬಿಸಿಸಿಗೆ ಗಂಭೀರ್ ಮನವಿ

'ಈ ವಿಚಾರ ಬಗ್ಗೆ ಬ್ಯಾಟಿಂಗ್ ಕೋಚ್ ಇಬ್ಬರಿಗೂ ಯಾವ ಸಂದರ್ಭದಲ್ಲಿ ಕಣಕ್ಕಿಳಿಯಬೇಕು ಎಂಬುದನ್ನು ಹೇಳಿದ್ದರು. ಆದರೆ, ಇಬ್ಬರೂ ಸರಿಯಾಗಿ ಅರ್ಥಮಾಡಿಕೊಳ್ಳದ ಕಾರಣ ಗೊಂದಲಕ್ಕೀಡಾಗಿ ಪಂತ್-ಐಯರ್ ಒಮ್ಮೆಲೆ ಕ್ರೀಸ್​ಗೆ ಬರುವಂತಾಯಿತು' ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.

 ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿ 1-1ರ ಸಮಬಲದಿಂದ ಅಂತ್ಯಗೊಂಡಿದೆ. ಅಕ್ಟೋಬರ್ 2 ರಿಂದ ಮೂರು ಪಂದ್ಯಗಳ ಟೆಸ್ಟ್​ ಸರಣಿ ಪೈಕಿ ಮೊದಲ ಪಂದ್ಯ ಆರಂಭವಾಗಲಿದೆ. ಇದಕ್ಕೂ ಮೊದಲು ಸೆ. 26 ರಿಂದ ಮೂರು ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ.
First published: September 23, 2019, 11:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading