72 ಎಸೆತಗಳಲ್ಲಿ 13 ರನ್​ಗಳ ಅವಶ್ಯಕತೆ: ಕೇವಲ 12 ರನ್​ಗಳೊಳಗೆ ಆಸ್ಟ್ರೇಲಿಯನ್ ತಂಡ ಸರ್ವಪತನ..!

ಟಾಸ್ ಗೆದ್ದ ವಿಕ್ಟೋರಿಯಾ ತಂಡ ಮೊದಲು ಬ್ಯಾಟಿಂಗ್ ನಡೆಸಿತು. ತಾಸ್ಮೆನಿಯಾ ಬೌಲರುಗಳ ಮಾರಕ ದಾಳಿಗೆ ಸರ್ವಪತನ ಕಂಡ ವಿಕ್ಟೋರಿಯಾ ಆಟಗಾರರು  47.5 ಓವರ್‌ಗಳಲ್ಲಿ 185 ರನ್‌ಗಳಿಸಲಷ್ಟೇ ಶಕ್ತರಾದರು.

zahir | news18-kannada
Updated:September 23, 2019, 7:06 PM IST
72 ಎಸೆತಗಳಲ್ಲಿ 13 ರನ್​ಗಳ ಅವಶ್ಯಕತೆ: ಕೇವಲ 12 ರನ್​ಗಳೊಳಗೆ ಆಸ್ಟ್ರೇಲಿಯನ್ ತಂಡ ಸರ್ವಪತನ..!
Tasmania-vs-Victoria
  • Share this:
ಕ್ರಿಕೆಟ್ ಮೈದಾನ ಹಲವಾರು ಅನೀರಿಕ್ಷಿತ ತಿರುವುಗಳಿಗೆ ಸಾಕ್ಷಿಯಾಗಿದೆ. ಇದಕ್ಕೆ ದೊಡ್ಡ ಉದಾಹರಣೆ ವಿಶ್ವಕಪ್​ 2019ರ ಇಂಗ್ಲೆಂಡ್​-ನ್ಯೂಜಿಲೆಂಡ್​ ನಡುವಣ ಫೈನಲ್ ಪಂದ್ಯ. ಹಾಗೆಯೇ ತಾಜಾ ಉದಾ ಆಸ್ಟ್ರೇಲಿಯಾದಲ್ಲಿ ನಡೆದ ಮಾರ್ಷ್ ಕಪ್ ಮ್ಯಾಚ್. ಪರ್ತ್​ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ವಿಕ್ಟೋರಿಯಾ ಹಾಗೂ ತಾಸ್ಮೆನಿಯಾ (Victoria vs Tasmania) ಮುಖಾಮುಖಿಯಾಗಿತ್ತು. ರೋಮಾಂಚಕ ಹೋರಾಟಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ವಿಕ್ಟೋರಿಯಾ ತಂಡ ತಾಸ್ಮೆನಿಯಾ ವಿರುದ್ಧ ಕೇವಲ ಒಂದು ರನ್​ಗಳ ರೋಚಕ ಜಯ ದಾಖಲಿಸಿತು

ವಿಕ್ಟೋರಿಯಾಗೆ ರೋಮಾಂಚಕ ಗೆಲುವು:
ಟಾಸ್ ಗೆದ್ದ ವಿಕ್ಟೋರಿಯಾ ತಂಡ ಮೊದಲು ಬ್ಯಾಟಿಂಗ್ ನಡೆಸಿತು. ತಾಸ್ಮೆನಿಯಾ ಬೌಲರುಗಳ ಮಾರಕ ದಾಳಿಗೆ ಸರ್ವಪತನ ಕಂಡ ವಿಕ್ಟೋರಿಯಾ ಆಟಗಾರರು  47.5 ಓವರ್‌ಗಳಲ್ಲಿ 185 ರನ್‌ಗಳಿಸಲಷ್ಟೇ ಶಕ್ತರಾದರು. ಇನ್ನು ವಿಲ್ ಸದರ್ಲ್ಯಾಂಡ್ 53 ರನ್ ಗಳಿಸಿ ಮಿಂಚಿದರೆ, ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 34 ರನ್​ಗಳ ಕೊಡುಗೆ ನೀಡಿದರು.

186 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ್ದ ತಾಸ್ಮೆನಿಯಾಗೆ ಗೆಲುವು ನಿಶ್ಚಿತ ಎಂದೇ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಭಾವಿಸಿದ್ದರು. ಆದರೆ ಕೊನೆಯ ಮೂರು ಓವರುಗಳು ಪಂದ್ಯದ ಚಿತ್ರಣವನ್ನೇ ಬದಲಿಸಿತು.

ಇದನ್ನೂ ಓದಿ: 600 ಕೋಟಿ ಬಜೆಟ್​​ನಲ್ಲಿ ಬೆಳ್ಳಿತೆರೆ ಮೇಲೆ ರಾಮಾಯಣ: ರಾಮ ಮತ್ತು ರಾವಣ ಪಾತ್ರಕ್ಕೆ ಸ್ಟಾರ್ ನಟರು ಫಿಕ್ಸ್..!

4 ವಿಕೆಟ್​ ನಷ್ಟಕ್ಕೆ 172 ರನ್​ಗಳಿಸಿದ ತಾಸ್ಮೆನಿಯಾಗೆ ಗೆಲ್ಲಲು 72 ಎಸೆತಗಳಲ್ಲಿ ಕೇವಲ 14 ರನ್​ಗಳ ಅವಶ್ಯಕತೆಯಿತ್ತು. ಆದರೆ ಮುಂದಿನ ಹದಿನಾರು ಎಸೆತಗಳು ತಂಡದ ಪಾಲಿಗೆ ಸೋಲಿನ ಕಹಿ ಉಣಸಲಿದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ತಾಸ್ಮೆನಿಯಾ ತಂಡದ ಉಳಿದ 6 ವಿಕೆಟ್​ಗಳನ್ನು ಕೇವಲ 16 ಎಸೆತಗಳಲ್ಲಿ ವಿಕ್ಟೋರಿಯಾ ಬೌಲರುಗಳು ಉರುಳಿಸಿದ್ದರು.

ಜಾಕ್ಸನ್ ಕೋಲ್ಮನ್​ ಅವರ ಮಾರಕ ದಾಳಿಗೆ ತರಗೆಲೆಗಳಂತೆ ತಾಸ್ಮೆನಿಯಾ ಬ್ಯಾಟ್ಸ್​ಮನ್​ಗಳು ಉರುಳಿದರು. 40ನೇ ಓವರ್​ನ ಎರಡನೇ ಎಸೆತದಲ್ಲಿ ಜೇಮ್ಸ್ ಫಾಲ್ಕ್ನರ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದ್ದರು. ನಂತರದ ಎಸೆತದಲ್ಲಿ ಮೆಕ್​ಡಮರ್ಟ್​ ಅವರನ್ನು ಔಟ್ ಮಾಡಿದ ಜಾಕ್ಸನ್,  ಕೊನೆಯ ಎಸೆತದಲ್ಲಿ  ಸಂಧುಗೆ ಪೆವಿಲಿಯನ್‌ ಹಾದಿಯನ್ನು ತೋರಿಸಿದರು.


ಬ್ಯಾಕ್​ ಟು ಬ್ಯಾಕ್ ಮೂರು ವಿಕೆಟ್ ಉರುಳಿದರೂ ತಾಸ್ಮೆನಿಯಾಗೆ ಈ ವೇಳೆ ಗೆಲ್ಲಲು ಬೇಕಿದ್ದದು ಕೇವಲ 3 ರನ್​ಗಳು ಮಾತ್ರ. ಆದರೆ ನಂತರದ ಓವರ್​ನಲ್ಲಿ ಟ್ರಿಮಾನ್ ಎರಡು ವಿಕೆಟ್ ಕಬಳಿಸಿ ವಿಕ್ಟೋರಿಯಾಕ್ಕೆ ಒಂದು ರನ್​ಗಳ ರೋಚಕ ಗೆಲುವು ತಂದುಕೊಟ್ಟರು. ಈ ಮೂಲಕ ಅನಿರೀಕ್ಷಿತ ಜಯವನ್ನು ವಿಕ್ಟೋರಿಯಾ ತಂಡ ತನ್ನದಾಗಿಸಿಕೊಂಡಿತು.


First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ