ಈ ಸಲವೂ ಆರ್​ಸಿಬಿ ಕಪ್​ ಗೆಲ್ಲುವುದು ಡೌಟ್ ಅಂತಿದೆ ಈ ಬೆಳವಣಿಗೆ

ಐಪಿಎಲ್-ವಿಶ್ವಕಪ್ ಇವೆರಡರ ಮಧ್ಯೆ ವಿರಾಟ್ ಕೊಹ್ಲಿ ಯಾವ ಟೂರ್ನಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವಕಪ್ ಭಾರತಕ್ಕೆ ತುಂಬಾನೆ ಮುಖ್ಯ. ಅಂತೆಯೆ ಕೊಹ್ಲಿಗೆ ಐಪಿಎಲ್ ಕೂಡ ಬಹುಮುಖ್ಯ.

Vinay Bhat | news18
Updated:March 17, 2019, 3:13 PM IST
ಈ ಸಲವೂ ಆರ್​ಸಿಬಿ ಕಪ್​ ಗೆಲ್ಲುವುದು ಡೌಟ್ ಅಂತಿದೆ ಈ ಬೆಳವಣಿಗೆ
ಇನ್ನು ಶಿಮ್ರೋನ್ ಹೆಟ್ಮೇರ್, ಕಾಲಿನ್ ಗ್ರ್ಯಾಂಡ್​ಹೋಮ್, ಟಿಮ್ ಸೌಥಿ, ಹೆನ್ರಿಚ್ ಕ್ಲಾಸೆನ್, ಅಕ್ಷದೀಪ್ ನಾಥ್, ನೇಥನ್ ಕೌಲ್ಟರ್ ನೈಲ್, ಪ್ರಯಾಸ್ ರೇ ಬರ್ಮನ್, ಕುಲ್ವಂತ್ ಕೇಜ್ರೋಲಿಯಾ, ಹಿಮ್ಮತ್ ಸಿಂಗ್, ಮಿಲಿಂದ್ ಕುಮಾರ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
  • News18
  • Last Updated: March 17, 2019, 3:13 PM IST
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ 12ನೇ ಆವೃತ್ತಿಗೆ ಬೆರಳಣಿಕೆಯ ದಿನಗಳಷ್ಟೆ ಬಾಕಿ ಉಳಿದಿವೆ. ಮಾರ್ಚ್​​ 23 ರಿಂದ ಐಪಿಎಲ್ ಹೊಡಿಬಡಿ ಆಟಕ್ಕೆ ಚಾಲನೆ ಸಿಗಲಿದ್ದು, ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿ ಆಗಲಿದೆ.

ಅಂತೆಯೆ ಐಪಿಎಲ್ ಮುಗಿದ ತಕ್ಷಣ ಐಸಿಸಿ ವಿಶ್ವಕಪ್ ಆರಂಭವಾಗಲಿದೆ. ಇಂಗ್ಲೆಂಡ್​​ನಲ್ಲಿ ನಡೆಯಲಿರುವ ಈ ಮಹಾಸಮರ ಮೇ 30 ರಿಂದ ಶುರುವಾಗಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 5 ರಂದು ಆಡಲಿದೆ.

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಟೂರ್ನಿ ಭಾರತದ ಪಾಲಿಗೆ ತುಂಬಾನೆ ಮುಖ್ಯವಾಗಿದೆ. ಅದರಲ್ಲು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇದೇ ಮೊದಲ ಬಾರಿಗೆ ಭಾರತ ವಿಶ್ವಕಪ್ ಆಡುತ್ತಿದ್ದು, ಸಾಕಷ್ಟು ನಂಬಿಕೆಯಿಟ್ಟುಕೊಂಡಿದೆ.

ಇದನ್ನೂ ಓದಿ: IPL 2019: ಆರ್​ಸಿಬಿ ಕಪ್ ಗೆಲ್ಲದಿರಲು ವಿರಾಟ್ ಕೊಹ್ಲಿ ನೀಡಿದ ಕಾರಣ ಏನು ಗೊತ್ತಾ?

ಹೀಗಾಗಿ ಐಪಿಎಲ್-ವಿಶ್ವಕಪ್ ಇವೆರಡರ ಮಧ್ಯೆ ವಿರಾಟ್ ಕೊಹ್ಲಿ ಯಾವ ಟೂರ್ನಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಸದ್ಯದ ಬೆಳವಣಿಗೆಯನ್ನು ವೀಕ್ಷಿಸಿದರೆ ಕೊಹ್ಲಿ ವಿಶ್ವಕಪ್​ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂಬುದು ಗೋಚರಿಸುತ್ತಿದೆ. ಈ ಹಿಂದೆಯೆ ಕೊಹ್ಲಿ 'ಐಪಿಎಲ್ ಪ್ರತಿ ವರ್ಷ ಬರುತ್ತದೆ ಆದರೆ, ವಿಶ್ವಕಪ್ ಮೂರು ವರ್ಷಗಳಿಗೊಮ್ಮೆ ಬರುವುದು' ಎಂದು ಹೇಳಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ಕಣ್ಣು ವಿಶ್ವಕಪ್ ಮೇಲಿದೆ ಎಂಬುದು ತಿಳಿದಿದೆ.

ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಕೊಹ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, 'ವಿಶ್ವಕಪ್​ಗೆ ಇನ್ನು ಕೇವಲ 80 ದಿನಗಳಷ್ಟೆ ಬಾಕಿ ಉಳಿದಿವೆ' ಎಂದು ಬರೆದು ಫಿಟ್ ಆಗಿರಲು ಅಭ್ಯಾಸ ನಡೆಸುತ್ತಿರುವ ವಿಡಿಯೋ ಹಾಕಿಕೊಂಡಿದ್ದಾರೆ.

 


ಇತ್ತ ಐಪಿಎಲ್​ನಲ್ಲಿ ಆರ್​ಸಿಬಿ ಈವರೆಗೆ ಕಪ್ ಗೆದ್ದಿಲ್ಲ. ಈಬಾರಿ ಆದರೂ ಆರ್​ಸಿಬಿ ಪ್ರಶಸ್ತಿಗೆ ಮುತ್ತಿಕ್ಕಲಿ ಎಂಬುದೆ ವಿರಾಟ್ ಹಾಗೂ ಆರ್​ಸಿಬಿ ಅಭಿಮಾನಿಗಳ ಆಸೆಯಾಗಿದೆ. ಆದರೆ, ಇದನ್ನೆಲ್ಲ ಗಮನಿಸಿದಾಗ ವಿರಾಟ್ ಕೊಹ್ಲಿ ತನ್ನ ಸಂಪೂರ್ಣ ಗಮನವನ್ನು ವಿಶ್ವಕಪ್​​ ಮೇಲೆ ಇಟ್ಟಿದ್ದಾರೆ ಎಂಬುದು ತಿಳಿಯುತ್ತಿದೆ. ಹೀಗಾಗಿ ಆರ್​ಸಿಬಿ ಈಬಾರಿಯೂ ಕಪ್ ಗೆಲ್ಲುವ ಕನಸು ಕನಸಾಗೆ ಉಳಿಯುತ್ತಾ ಎಂಬುದು ಅಭಿಮಾನಿಗಳ ಮನದಲ್ಲಿ ಮೂಡಿದೆ.

First published: March 17, 2019, 2:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading