'ಮೈದಾನ ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದೆ'; ಧವನ್​ಗೆ ಪ್ರಧಾನಿ ಮೋದಿ ವಿಶೇಷ ಸಂದೇಶ

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ವೇಗಿ ಪ್ಯಾಟ್ ಕಮಿನ್ಸ್​ ಬೌಲಿಂಗ್ ಮಾಡುವಾಗ ಆಕಸ್ಮಿಕವಾಗಿ ಚೆಂಡು ಧವನ್ ಕೈಬೆರಳಿಗೆ ಬಡಿದು ಗಾಯಗೊಂಡಿದ್ದರು. ಗದಿತ ಅವಧಿಯೊಳಗೆ ಧವನ್ ಚೇತರಿಸಿಕೊಳ್ಳುವುದು ಅನುಮಾನ ಆಗಿರುವುದರಿಂದ ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ.

ನರೇಂದ್ರ ಮೋದಿ ಹಾಗೂ ಶಿಖರ್ ಧವನ್

ನರೇಂದ್ರ ಮೋದಿ ಹಾಗೂ ಶಿಖರ್ ಧವನ್

  • News18
  • Last Updated :
  • Share this:
ಬೆಂಗಳೂರು (ಜೂ. 20): ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಎಡಗೈ ಹೆಬ್ಬರಳಿಗೆ ಗಾಯ ಮಾಡಿಕೊಂಡಿದ್ದ ಶಿಖರ್ ಧವನ್ ವಿಶ್ವಕಪ್​ನಿಂದಲೇ ಹೊರಗುಳಿದಿದ್ದಾರೆ. ಈ ಮೂಲಕ ಧವನ್​ಗೆ ವಿಶ್ವಕಪ್ ಹಾದಿ ಕೊನೆಗೊಂಡಿದೆ.

ಧವನ್ ಬದಲು ಭಾರತದ ವಿಶ್ವಕಪ್ ತಂಡದ 15 ಆಟಗಾರರ ಜಾಗದಲ್ಲಿ ರಿಷಭ್ ಪಂತ್ ಸ್ಥಾನ ಪಡೆದುಕೊಂಡಿದ್ದಾರೆ.

ಈ ಮಧ್ಯೆ ಧವನ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಾರೈಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, 'ಮೈದಾನ ನಿಮ್ಮನ್ನು ತುಂಬಾನೆ ಮಿಸ್ ಮಾಡಿಕೊಳ್ಳಲಿದೆ. ಆದಷ್ಟು ಬೇಗ ಚೇತರಿಸಿಕೊಳ್ಳುತ್ತೀರಾ ಎಂಬ ನಂಬಿಕೆಯಿದೆ. ನೀವು ಮತ್ತೆ ಮೈದಾನಕ್ಕೆ ಮರಳಿ ದೇಶದ ಗೆಲುವಿಗೆ ಹೆಚ್ಚಿನ ಕೊಡುಗೆ ನೀಡಿ ಎಂದು ಆಶೀಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

ಕೇಸರಿ ಉಡುಪು ಧರಿಸಿ ಟೀಂ ಇಂಡಿಯಾ ಕಣಕ್ಕೆ: ಹೊಸ ಜೆರ್ಸಿ ಹೇಗಿದೆ?

 ಧವನ್ ಅವರು ವಿಶ್ವಕಪ್​ನಿಂದ ಹೊರಗುಳಿದ ಬಳಿಕ ಅಭಿಮಾನಿಗಳಿಗೆ ಭಾವನಾತ್ಮಕ ವಿಡಿಯೋ ಮಾಡಿದ್ದರು. 'ಗಾಯಗೊಂಡ ಹೆಬ್ಬೆರಳು ಚೇತರಿಕೆ ಕಾಣದ ಕಾರಣ ಈ ಬಾರಿಯ ವಿಶ್ವಕಪ್​ನಲ್ಲಿ ನಾನು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಈ ಶೋ ಸಾಗಲೇಬೇಕು. ಇಡೀ ದೇಶದ ಕ್ರೀಡಾಭಿಮಾನಿಗಳು ಹಾಗೂ ತಂಡದಿಂದ ಸಿಕ್ಕ ಪ್ರೀತಿಗೆ ನಾನು ಚಿರಋಣಿ,” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ. ಧವನ್ ಅವರ ಈ ಸಂದೇಶಕ್ಕೆ ಮೋದಿ ಅವರು ವಿಶೇಷ ಸಂದೇಶ ರವಾನಿಸಿದ್ದಾರೆ.

 ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ವೇಗಿ ಪ್ಯಾಟ್ ಕಮಿನ್ಸ್​ ಬೌಲಿಂಗ್ ಮಾಡುವಾಗ ಆಕಸ್ಮಿಕವಾಗಿ ಚೆಂಡು ಧವನ್ ಕೈಬೆರಳಿಗೆ ಬಡಿದು ಗಾಯಗೊಂಡಿದ್ದರು. ಹೀಗಾಗಿ ಬಿಸಿಸಿಐ ವೈದ್ಯಕೀಯ ತಂಡ ಒಂದು ವಾರದ ವರೆಗೆ ಧವನ್ ಮೇಲೆ ನಿಗಾ ಇಟ್ಟು, ಇಂಗ್ಲೆಂಡ್​ನಲ್ಲೇ ತಂಡದ ಜೊತೆ ಉಳಿದುಕೊಳ್ಳಲು ಸೂಚಿಸಿತ್ತು. ಆದರೆ ನಿಗದಿತ ಅವಧಿಯೊಳಗೆ ಧವನ್ ಚೇತರಿಸಿಕೊಳ್ಳುವುದು ಅನುಮಾನ ಆಗಿರುವುದರಿಂದ ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ.
First published: