ಕೊರೆಯವ ಚಳಿಯಲ್ಲಿ ಯೋಧನ ಹುಟ್ಟುಹಬ್ಬಕ್ಕೆ ಮಂಜುಗಡ್ಡೆಯೇ ಕೇಕ್: ಸೆಹ್ವಾಗ್​ರಿಂದ ಸೆಲ್ಯೂಟ್!

Virender Sehwag: ವೀರ ಸೈನಿಕರ ಗುಂಪೊಂದು ತಮ್ಮ ಸ್ನೇಹಿತನ ಹುಟ್ಟುಹಬ್ಬ ಆಚರಿಸಿ, ಖುಷಿಯಿಂದ ಚಪ್ಪಾಳೆ ತಟ್ಟುತ್ತ ಸಂಭ್ರಮಿಸುತ್ತಿದ್ದಾರೆ. ಯೋಧ ಮಂಜುಗಡ್ಡೆಯನ್ನೇ ಕೇಕ್​ನಂತೆ​ ಕಟ್​ ಮಾಡುವ ವಿಡಿಯೋ ಇಲ್ಲಿದೆ.

ಯೋಧನ ಹುಟ್ಟುಹಬ್ಬಕ್ಕೆ ಮಂಜುಗಡ್ಡೆಯೇ ಕೇಕ್

ಯೋಧನ ಹುಟ್ಟುಹಬ್ಬಕ್ಕೆ ಮಂಜುಗಡ್ಡೆಯೇ ಕೇಕ್

 • Share this:
  ನಮ್ಮ ದೇಶದ ಗಡಿಯಲ್ಲಿ ಅದರಲ್ಲೂ ವಿಶೇಷವಾಗಿ ಸದಾ ಹಿಮಚ್ಛಾದಿತವಾದ ಪ್ರದೇಶದಲ್ಲಿ ನಮಗೆ ಕಾವಲಾಗಿ ನಿಂತಿರುವ ಯೋಧರ ಪಾಡು ಯಾವ ಶತ್ರುವಿಗೂ ಬೇಡ ಎನಿಸಿಬಿಡುತ್ತದೆ. ಸಿಯಾಚಿನ್​​​ನಂಥ ಮೈ ಹೆಪ್ಪುಗಟ್ಟಿಸುವ ಚಳಿಯ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವುದು ಸುಲಭದ ಕೆಲಸ ಅಲ್ಲವೇ ಅಲ್ಲ. ಇಂಥ ಕಷ್ಟದ ನಡುವೆಯೂ ಅವರು ಆಗಾಗ ತಮ್ಮ ಸಹೋದ್ಯೋಗಿಗಳ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಸಮಾರಂಭವನ್ನು ಮಂಜಿನಲ್ಲೇ ಆಯೋಜಿಸಿ, ಮಂಜನ್ನೇ ಕೇಕ್​ ರೀತಿಯಲ್ಲಿ ಕತ್ತರಿಸಿ ಸಂಭ್ರಮಿಸುತ್ತಾರೆ.

  ಸದ್ಯ ಅದೇರೀತಿ ಯೋಧರೊಬ್ಬರು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಈ 14 ಸೆಕೆಂಡ್ ‌ಗಳ ವಿಡಿಯೋ ಕ್ಲಿಪ್‌ ಭಾರೀ ವೈರಲ್ ಆಗುತ್ತಿದೆ. ಇಂಥ ಒಂದು ಸಂಭ್ರಮಾಚರಣೆಯ ದೃಶ್ಯವನ್ನು ಟೀಂ​ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್​ ಟ್ವೀಟ್​ ಮಾಡಿದ್ದಾರೆ.

  Ambati Rayudu: ರಾಯುಡು ಮನೆಗೆ ಕಾಲಿಟ್ಟ ಹೊಸ ಅತಿಥಿ; ತಂದೆಯಾದ ಖುಷಿಯಲ್ಲಿ ಅಂಬಟಿ

  “ಯೋಧರೊಬ್ಬರು ತಮ್ಮ ಹುಟ್ಟುಹಬ್ಬವನ್ನು ಈ ರೀತಿ ವಿಶೇಷವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಚೀಸ್ ‌ಕೇಕ್‌ ಮರೆತುಬಿಡಿ, ಮಂಜಿನ ಕೇಕ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಹೇಗೆಂದು ನಮ್ಮ ಸೈನಿಕನಿಗೆ ಗೊತ್ತಿದೆ. ಯೋಧರ ತ್ಯಾಗ ಹಾಗೂ ಕೆಚ್ಚೆದೆಯನ್ನು ವರ್ಣಿಸಲು ಯಾವುದೇ ಪದಗಳು ಸಾಲವು” ಎಂದು ಸೆಹ್ವಾಗ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  ವೀರ ಸೈನಿಕರ ಗುಂಪೊಂದು ತಮ್ಮ ಸ್ನೇಹಿತನ ಹುಟ್ಟುಹಬ್ಬ ಆಚರಿಸಿ, ಖುಷಿಯಿಂದ ಚಪ್ಪಾಳೆ ತಟ್ಟುತ್ತ ಸಂಭ್ರಮಿಸುತ್ತಿದ್ದಾರೆ. ಯೋಧ ಮಂಜುಗಡ್ಡೆಯನ್ನೇ ಕೇಕ್​ನಂತೆ​ ಕಟ್​ ಮಾಡುವ ವಿಡಿಯೋ ಇಲ್ಲಿದೆ.

  ಕಳೆದ ಕೆಲವು ದಿನಗಳ ಹಿಂದೆ ಭಾರತ– ಚೀನಾ ಗಡಿ ಸಂಘರ್ಷ ಉದ್ವಿಗ್ನಗೊಂಡಿತ್ತು. ವಾಸ್ತವ ಗಡಿ ನಿಯಂತ್ರಣ ರೇಖೆಯ ಸಂಘರ್ಷದ ನೆಲೆಗಳಿಂದ ಚೀನಾ-ಭಾರತ ಪಡೆಗಳ ವಾಪಸಾತಿ ಕಾರ್ಯ ಸಂಪೂರ್ಣಗೊಂಡಿದೆ.

  ಬರೋಬ್ಬರಿ 4 ಲಕ್ಷ ಬೆಲೆಯ ಮಾಸ್ಕ್​​!; ಅಷ್ಟಕ್ಕೂ ಇದರಲ್ಲೇನಿದೆ

  ಉಭಯ ಪಡೆಗಳ ತೀವ್ರ ಮಾರಾಮಾರಿಗೆ ಕಾರಣವಾಗಿದ್ದ ಪೂರ್ವ ಲಡಾಖ್‌ನ ನಾಲ್ಕು ಪೆಟ್ರೋಲಿಂಗ್‌ ಪಾಯಿಂಟ್‌ಗಳಿಂದ ಸದ್ಯಕ್ಕೆ ಸೇನಾ ತುಕಡಿಗಳು ಹಿಂದಕ್ಕೆ ಸರಿದಿವೆ. ಚೀನಾ ಸೇನೆ ಸುಮಾರು 600 ಮೀಟರ್‌ ತನ್ನ ಗಡಿಯೊಳಕ್ಕೆ ಹಿಂದೆ ಸರಿದಿದ್ದರೆ, ಭಾರತೀಯ ಯೋಧರು ಕೂಡ ಅಷ್ಟೇ ಅಂತರ ಹಿಂದಕ್ಕೆ ಬಂದಿದ್ದಾರೆ.
  Published by:Vinay Bhat
  First published: