ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ಮನ್, ದಿ ವಾಲ್ ರಾಹುಲ್ ದ್ರಾವಿಡ್ ಅವರು ಆಸ್ಟ್ರೇಲಿಯಾ ವಿರುದ್ಧ ಕೋಲ್ಕತ್ತಾದಲ್ಲಿ 2001 ರಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದ ಗೆಲುವನ್ನು ಮೆಲುಕುಹಾಕಿದ್ದಾರೆ. ಈ ಪಂದ್ಯದಲ್ಲಿ ನಾವು ಗೆಲ್ಲಲು ಈಡನ್ ಗಾರ್ಡನ್ಸ್ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳೇ ಕಾರಣ ಎಂದು ದ್ರಾವಿಡ್ ಹೇಳಿದ್ದಾರೆ.
ದ್ರಾವಿಡ್ ಈ ಪಂದ್ಯದಲ್ಲಿ 180 ರನ್ ಕಲೆಹಾಕಿದ್ದರು. ಅಲ್ಲದೆ ಎರಡನೇ ಇನ್ನಿಂಗ್ಸ್ನಲ್ಲಿ 5ನೇ ವಿಕೆಟ್ಗೆ ವಿವಿಎಸ್ ಲಕ್ಷ್ಮಣ್ ಜೊತೆಗೂಡಿ ಬರೋಬ್ಬರಿ 331 ರನ್ಗಳ ಅಮೋಘ ಜೊತೆಯಾಟ ಆಡಿದ್ದರು. ಈ ಪಂದ್ಯದಲ್ಲಿ ಭಾರತ ಉತ್ತಮ ಮುನ್ನಡೆ ಪಡೆದು 657 ರನ್ಗೆ ಡಿಕ್ಲೇರ್ ಘೋಷಿಸಿತು. ಆಸ್ಟ್ರೇಲಿಯಾಕ್ಕೆ ಗೆಲ್ಲಲು ಅಂತಿಮ ದಿನದಲ್ಲಿ 384 ರನ್ಗಳ ಟಾರ್ಗೆಟ್ ನೀಡಿತ್ತು.
Team India: ಟೀಂ ಇಂಡಿಯಾ ಆಟಗಾರರಿಗೆ ವರ್ಕ್ ಫ್ರಂ ಹೋಂ; ಬಿಸಿಸಿಐಯಿಂದ ಹೊಸ ಆ್ಯಪ್
ಟೀ ವಿರಾಮದ ವೇಳೆಗೆ ಆಸ್ಟ್ರೇಲಿಯಾ 161 ರನ್ಗೆ 3 ವಿಕೆಟ್ ಕಳೆದುಕೊಂಡು ಪಂದ್ಯವನ್ನು ಡ್ರಾ ಮಾಡುವ ಅಂದಾಜಿನಲ್ಲಿತ್ತು. ಆದರೆ, ಅಂತಿಮ ಸೆಷನ್ನಲ್ಲಿ ಭಾರತೀಯ ಬೌಲರ್ಗಳ ಮಾರಕ ದಾಳಿಗೆ ದಿಢೀರ್ ಕುಸಿತ ಕಂಡ ಕಾಂಗರೂ ಪಡೆ ಕೇವಲ 46 ರನ್ಗೆ 7 ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು.
ಈ ಅದ್ಭುತ ಘಳಿಗೆಯನ್ನು ನೆನಪಿಸಿಕೊಂಡಿರುವ ದ್ರಾವಿಡ್, 'ಅಂತಿಮ ದಿನದ ಟೀ ವಿರಾಮದ ಬಳಿಕ ಆಸ್ಟ್ರೇಲಿಯಾದ ವಿಕೆಟ್ ಕೀಳಲು ನಾವು ಪ್ರಯತ್ನಿಸಿದೆವು. ಅದರಂತೆ ಇತ್ತ ಹರ್ಭಜನ್ ಸಿಂಗ್ ಬೌಲಿಂಗ್ ಮಾಡುತ್ತಿದ್ದರು. ಅತ್ತ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಕಡೆ ಹೆಜ್ಜೆ ಹಾಕತೊಡಗಿದರು'.
'ಈ ಪಂದ್ಯದಲ್ಲಿ ನಮ್ಮನ್ನು ಹುರಿತುಂಬಿಸಿದ್ದು ಅಲ್ಲಿ ನೆರೆದಿದ್ದ ಅಭಿಮಾನಿಗಳು. 2001ರ ಕೋಲ್ಕತ್ತಾ ಟೆಸ್ಟ್ನಲ್ಲಿ ನಾವು ಜಯ ಸಾಧಿಸಲು ಪ್ರಮಖ ಕಾರಣವೇ ಮೈದಾನದಲ್ಲಿ ಅಭಿಮಾನಿಗಳು ನೀಡಿದ ಸಪೂರ್ಟ್ ಎಂದು ದ್ರಾವಿಡ್ ಹೇಳಿದ್ದಾರೆ'.
ಪಾಕ್ ಹಿಂದೂಗಳ ನೆರವಿಗೆ ನಿಂತ ಖ್ಯಾತ ಕ್ರಿಕೆಟಿಗ..!
'ತುಂಬಿದ ಸ್ಟೇಡಿಯಂ, ನಮ್ಮ ತಂಡಕ್ಕೆ ಸಿಕ್ಕ ಬೆಂಬಲ, ಭಾರತದ ಜೈಕಾರ ಇದೊಂದು ಅದ್ಭುತ ಅನುಭವ. ಎಲ್ಲ ಕ್ರಿಕೆಟ್ ಆಟಗಾರರು ಇಂತಹ ಅನುಭವವನ್ನು ಪಡೆಯಬೇಕು. ನನ್ನ ಕ್ರಿಕೆಟ್ ಬದುಕಿನ ಬಗ್ಗೆ ನನಗೆ ಹೆಚ್ಚು ವಿಚಾರಗಳು ನೆನಪಿಲ್ಲ. ಆದರೆ, ಈ ಪಂದ್ಯವನ್ನು ಮಾತ್ರ ಎಂದಿಗೂ ಮರೆಯಲು ಸಾಧ್ಯವಿಲ್ಲ' ಎಂಬುದು ದ್ರಾವಿಡ್ ಮಾತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ