#ThankYouMSD: ಕಣ್ಣೀರಿಡುತ್ತಾ ಮೈದಾನದಿಂದ ಭಾರದ ಹೆಜ್ಜೆಯಿಟ್ಟ ಧೋನಿ..! ವಿಡಿಯೋ ವೈರಲ್

zahir | news18
Updated:July 11, 2019, 6:09 PM IST
#ThankYouMSD: ಕಣ್ಣೀರಿಡುತ್ತಾ ಮೈದಾನದಿಂದ ಭಾರದ ಹೆಜ್ಜೆಯಿಟ್ಟ ಧೋನಿ..! ವಿಡಿಯೋ ವೈರಲ್
ಧೋನಿ
zahir | news18
Updated: July 11, 2019, 6:09 PM IST
ಟೀಮ್‌ ಇಂಡಿಯಾದ ಮ್ಯಾಚ್ ಫಿನಿಶರ್​  ಮಹೇಂದ್ರ ಸಿಂಗ್‌ ಧೋನಿ ತಮ್ಮ ಭಾವನೆಗಳನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳುವುದು ತುಂಬಾ ವಿರಳ. ಆದರೆ ಬುಧವಾರ ನಡೆದ ನ್ಯೂಜಿಲೆಂಡ್​ ವಿರುದ್ದದ ಸೆಮಿಫೈನಲ್​ನಲ್ಲಿ ರನೌಟ್​ ಆಗಿ ಧೋನಿ ಕಣ್ಣೀರು ಹಾಕುತ್ತಾ ಹೊರ ನಡೆದ ಘಟನೆ ನಡೆಯಿತು.

ಹಲವು ಬಾರಿ ಸಂಕಷ್ಟದಲ್ಲಿದ್ದ ತಂಡವನ್ನು ಏಕಾಂಗಿಯಾಗಿ ಮೇಲೆಕ್ಕೆತ್ತಿದ್ದ ಧೋನಿ, ಸೆಮಿ ಫೈನಲ್​ನಲ್ಲಿ ಎಡವಿದ್ದರು. ಸ್ಟ್ರೈಕ್​ ಉಳಿಸಿಕೊಂಡು ಪಂದ್ಯದ ಗತಿಯನ್ನೇ ಬದಲಿಸಬೇಕೆಂಬ ಗುರಿ ಹೊಂದಿದ್ದರು. ಅದರಂತೆ ಎರಡು ರನ್​ ಕದಿಯಲು ಟೀಂ ಇಂಡಿಯಾ ಮಾಜಿ ನಾಯಕ ಮುಂದಾಗಿದ್ದರು. ಆದರೆ ಬೌಂಡರಿ ಲೈನ್​ನಿಂದ ವೇಗವಾಗಿ ಓಡಿ ಬಂದ ಕಿವೀಸ್ ಫೀಲ್ಡರ್ ಮಾರ್ಟಿನ್ ಗುಪ್ಟಿಲ್ ಎಸೆದ ಚೆಂಡು ಬೇಲ್ಸ್​ ಅನ್ನು ಎಗರಿಸಿತ್ತು. ಥರ್ಡ್​ ಅಂಪೈರ್ ಧೋನಿ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಧೋನಿ ಪೆಲಿಯನ್ ಕಡೆ ಮುಖ ಮಾಡಿದ್ದರು.

ಆ ಒಂದು ರನೌಟ್​ ಟೀಂ ಇಂಡಿಯಾದ ವಿಶ್ವಕಪ್ ಕನಸು ಕಮರಿ ಹೋಗುವಂತೆ ಮಾಡಿತು. ರವೀಂದ್ರ ಜಡೇಜ ಜೊತೆಗೂಡಿ ಅತ್ಯಮೂಲ್ಯ 116 ರನ್​ ಪಾರ್ಟನರ್​ಶಿಪ್ ಆಡಿದ್ದ ಧೋನಿ ಕೊನೆಗೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಸೋತು ಹೋದರು.

ಕೋಟ್ಯಾಂತರ ಅಭಿಮಾನಿಗಳ ಆಸೆಯನ್ನು ಈಡೇರಿಸಲಾಗದೇ ಕಣ್ಣೀರಿನೊಂದಿಗೆ ಮಹೇಂದ್ರ ಸಿಂಗ್ ಪೆವಿಲಿಯನ್ ಕಡೆ ಭಾರದ ಹೆಜ್ಜೆಯನ್ನಿಟ್ಟಿದ್ದರು. ಈ ಮನ ಮಿಡಿಯುವ ದೃಶ್ಯದ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.





ಅಲ್ಲದೆ ಈ ವಿಡಿಯೋ ಬಳಸಿ ವೃತ್ತಿ ಬದುಕಿನ ಕೊನೆಯ ವಿಶ್ವಕಪ್ ಪಂದ್ಯವಾಡಿದ 38ರ ಹರೆಯದ ಮಹೇಂದ್ರ ಸಿಂಗ್ ಧೋನಿಗೆ ಧನ್ಯವಾದ ತಿಳಿಸಲು ಫ್ಯಾನ್ಸ್​ ಮರೆಯಲಿಲ್ಲ. #ThankYouMSD ಎಂಬ ಹ್ಯಾಶ್​ ಟ್ಯಾಗ್​​ ಮೂಲಕ ಕಣ್ಣೀರಿಡುತ್ತಾ ಮೈದಾನವನ್ನು ತೊರೆಯುತ್ತಿರುವ ವಿಡಿಯೋದೊಂದಿಗೆ ಧೋನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.



ಇದನ್ನೂ ಓದಿ: ಮೊದಲ ಪಂದ್ಯದಲ್ಲಿ ರನೌಟ್-ಕೊನೆಯ ಪಂದ್ಯದಲ್ಲೂ ರನೌಟ್: ಏಕದಿನ ಕ್ರಿಕೆಟ್​ಗೆ​ ಎಂಎಸ್ ಧೋನಿ ವಿದಾಯ?
First published:July 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...