Video: ಅದ್ಭುತ...ಅತ್ಯಾದ್ಭುತ, ಮಹಿಳಾ ಆಟಗಾರ್ತಿಯ ಫೀಲ್ಡಿಂಗ್​ ವಿಡಿಯೋ ಭಾರೀ ವೈರಲ್

ಟ್ರೈಲ್ ಬ್ಲೇಜರ್ಸ್ ಪರ ಏಕಾಂಗಿಯಾಗಿ 49 ಎಸೆತಗಳಲ್ಲಿ 68 ರನ್ ಬಾರಿಸಿ ಸ್ಮೃತಿ ತಂಡದ ಮೊತ್ತ 118 ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಸೂಪರ್ ನೋವಾಸ್​ಗೆ ಇದು ಸಾಧಾರಣ ಮೊತ್ತವಾಗಿತ್ತು.

Nattakan Chantam

Nattakan Chantam

  • Share this:
    ಮಹಿಳಾ ಟಿ20 ಚಾಲೆಂಜ್​ನಲ್ಲಿ ಬಲಿಷ್ಠ ಸೂಪರ್ ನೋವಾಸ್ ತಂಡವನ್ನು ಮಣಿಸಿ ಸ್ಮೃತಿ ಮಂದನಾ ನೇತೃರ್ವದ ಟ್ರೈಲ್ ಬ್ಲೇಜರ್ಸ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೇವಲ 118 ರನ್ ಬಾರಿಸಿ ಅದನ್ನು ಡಿಫೆಂಡ್ ಮಾಡಿಕೊಳ್ಳುವ ಮೂಲಕ ಟ್ರೈಲ್ ಬ್ಲೇಜರ್ಸ್ ಭರ್ಜರಿ ಜಯ ತನ್ನದಾಗಿಸಿಕೊಂಡಿತು. ಬೌಲಿಂಗ್ ಮತ್ತು ಫೀಲ್ಡಿಂಗ್​ನಲ್ಲಿ ಶ್ರೇಷ್ಠ ಪ್ರರ್ದಶನ ನೀಡಿದ ಮಂದಾನಾ ಬಳಗ ಯಾವುದೇ ಹಂತದಲ್ಲೂ ಹರ್ಮನ್​ಪ್ರೀತ್ ಕೌರ್ ಮುಂದಾಳತ್ವದ ತಂಡ ಮೇಲುಗೈ ಸಾಧಿಸದಂತೆ ನೋಡಿಕೊಂಡರು. ಪರಿಣಾಮ 16 ರನ್​ಗಳಿಂದ ಹಾಲಿ ಚಾಂಪಿಯನ್​ನ್ನು ಸೋಲಿಸಿ ಮೊದಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿತು.

    ಈ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಸ್ಮೃತಿ ಮಂದನಾ ಅವರ ಬಿರುಸಿನ ಬ್ಯಾಟಿಂಗ್ ಹಾಗೂ ನಟಕಾನ್ ಚಂತಮ್ ಅವರ ಫೀಲ್ಡಿಂಗ್. ಟ್ರೈಲ್ ಬ್ಲೇಜರ್ಸ್ ಪರ ಏಕಾಂಗಿಯಾಗಿ 49 ಎಸೆತಗಳಲ್ಲಿ 68 ರನ್ ಬಾರಿಸಿ ಸ್ಮೃತಿ ತಂಡದ ಮೊತ್ತ 118 ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಸೂಪರ್ ನೋವಾಸ್​ಗೆ ಇದು ಸಾಧಾರಣ ಮೊತ್ತವಾಗಿತ್ತು. ಹೀಗಾಗಿ ಈ ಸಣ್ಣ ಮೊತ್ತದೊಳಗೆ ಹರ್ಮನ್​ಪ್ರೀತ್ ಕೌರ್ ತಂಡವನ್ನು ನಿಯಂತ್ರಿಸುವುದು ನಾಯಕಿ ಸ್ಮೃತಿ ಮಂದನಾ ಸವಾಲಾಗಿತ್ತು. ಆದರೆ ತಂಡದಲ್ಲಿ ಥಾಯ್ಲೆಂಡ್ ಆಟಗಾರ್ತಿ ಚಂತಮ್ ಫೀಲ್ಡಿಂಗ್ ಮುಂದೆ ಇದು ಅಸಾಧ್ಯ ಆಗಿರಲಿಲ್ಲ.

    ಏಕೆಂದರೆ ನಟಕಾನ್ ಚಂತಮ್ ಬೌಂಡರಿ ಲೈನ್​ನಲ್ಲಿ ಮಿಂಚಿನಂತೆ ಎರಗಿ ಫೋರ್ ಹೋಗುವುದನ್ನು ತಡೆದಿರುವ ರೀತಿ ಇತರೆ ಆಟಗಾರ್ತಿಯರಿಗೂ ಹೊಸ ಹುರುಪು ನೀಡಿತ್ತು. ಸೂಫಿ ಎಕ್ಲೆಸ್ಟನ್​ ಎಸೆದ ಎರಡನೇ ಓವರ್‌ನ ಮೊದಲ ಎಸೆತದಲ್ಲಿಯ ಜೆಮಿಮಾ ರೋಡ್ರಿಗಸ್ ಚೆಂಡನ್ನು ಬೌಂಡರಿಯತ್ತ ಬಾರಿಸಿದರು. ಇನ್ನೇನು ಬಾಲ್​ ಬೌಂಡರಿ ಗೆರೆ ದಾಟಿತು ಎನ್ನುವಷ್ಟರಲ್ಲಿ ಚಂಥಮ್ ಓಡಿ ಬಂದು ಅದ್ಭುತವಾಗಿ ತಡೆದರು. ಈ ಅತ್ಯಾದ್ಭುತ ಫೀಲ್ಡಿಂಗ್ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.


    ಅಲ್ಲದೆ ದೀಪ್ತಿ ಶರ್ಮಾ ಎಸೆದ 9ನೇ ಓವರ್​ನಲ್ಲಿ ಜೆಮಿಮಾ ರೋಡಿಗ್ರಸ್ ಬಾರಿಸಿದ ಚೆಂಡನ್ನು ಅದ್ಭುತ ಡೈವ್ ಮೂಲಕ ಕ್ಯಾಚ್ ಹಿಡಿದ ಚಂತಮ್ ಎಲ್ಲರನ್ನು ನಿಬ್ಬೆರಗಾಗಿಸಿದರು. ಈ ಅದ್ಭುತ ಫೀಲ್ಡಿಂಗ್ ಹಾಗೂ ತಂಡದ ಸಾಂಘಿಕ ಪ್ರದರ್ಶನದ ನೆರವಿನಿಂದ ಟ್ರೈಲ್ ಬ್ಲೇಜರ್ಸ್​ ತಂಡವು 16 ರನ್​ಗಳಿಂದ ಜಯ ಸಾಧಿಸುವಂತಾಯಿತು. ಇದೀಗ ಮೈದಾನದಲ್ಲಿ ತಮ್ಮ ಚುರುಕಿನ ಫೀಲ್ಡಿಂಗ್ ಮೂಲಕ ನಟಕಾನ್ ಚಂತಮ್ ಹೊಸ ಸೆನ್ಸೇಷನ್ ಸೃಷ್ಟಿಸಿದ್ದು, ಒಂದೇ ದಿನಕ್ಕೆ ಥಾಯ್ಲೆಂಡ್ ಆಟಗಾರ್ತಿ ವಿಶ್ವ ಪ್ರಸಿದ್ಧಿ ಪಡೆದುಕೊಂಡಿದ್ದಾರೆ.

    ಇದನ್ನೂ ಓದಿ: IPL 2020: ಆತನ ಭವಿಷ್ಯವಾಣಿ ಸುಳ್ಳಾಗಿರಬಹುದು, ಆದರೆ ಡೆಲ್ಲಿ ಬಗ್ಗೆ ಆತ ಹೇಳಿದ ಭವಿಷ್ಯ ನಿಜವಾಗಿದೆ..!
    Published by:zahir
    First published: