Nasir Hussain| ಐಪಿಎಲ್​ಗಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಪಂದ್ಯ ರದ್ದು ಮಾಡಲಾಗಿದೆ; ಬಿಸಿಸಿಐ ವಿರುದ್ಧ ನಾಸೀರ್​ ಹುಸೇನ್ ಕಿಡಿ

ಐಪಿಎಲ್​ ಟೂರ್ನಿಗಾಗಿಯೇ ಬಿಸಿಸಿಐ ಇಂಗ್ಲೆಂಡ್ ವಿರುದ್ದದ ಕೊನೆಯ ಟೆಸ್ಟ್​ ಪಂದ್ಯವನ್ನು ಕೊರೋನಾ ನೆಪವೊಡ್ಡಿ ರದ್ದು ಮಾಡಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ಆರೋಪಿಸಿದ್ದಾರೆ.

ನಾಸೀರ್ ಹುಸೇನ್.

ನಾಸೀರ್ ಹುಸೇನ್.

 • Share this:
  ಮ್ಯಾಂಚೆಸ್ಟರ್​ (ಸೆಪ್ಟೆಂಬರ್​ 11); ಇಂಗ್ಲೆಂಡ್​ ವಿರುದ್ದದ ಟೆಸ್ಟ್​ ಸರಣಿಯಲ್ಲಿ (India vs England test) ಭಾರತ 2-1 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ಹೀಗಾಗಿ ಸೆಪ್ಟೆಂಬರ್​ 10 ರಿಂದ ಆರಂಭವಾಗಬೇಕಿದ್ದ ಕೊನೆಯ ಟೆಸ್ಟ್​ ಆಂಗ್ಲರ ಪಾಲಿಗೆ ನಿರ್ಣಾಕವಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ನಡೆದ ನಾಟಕೀಯ ಬೆಳವಣಿಗೆಗಳ ಕಾರಣದಿಂದಾಗಿ ಭಾರತ ಈ ಪಂದ್ಯದಲ್ಲಿ ಆಡಲು ಹಿಂಜರಿದಿತ್ತು. ಕೊರೋನಾ ಸೋಂಕು (CoronaVirus) ಹರಡುವ ಭಯದಿಂದ ಭಾರತದ ಆಟಗಾರರು ಮೈದಾನಕ್ಕೆ ಇಳಿಯಲು ಸುತಾರಾಂ ಒಪ್ಪಿರಲಿಲ್ಲ. ಇದಕ್ಕೆ ಕಾರಣ ಪಂದ್ಯದ ಮುನ್ನಾ ದಿನ ಸಹಾಯಕ ಫಿಸಿಯೋ ಯೋಗೇಶ್ ಪರ್ಮಾರ್ ಅವರಿಗೂ ಸಹ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಭಾರತದ ಆಟಗಾರರ ತಮ್ಮ ಕುಟುಂಬದ ಸುರಕ್ಷತೆಯ ನೆಪವನ್ನು ಮುಂದಿಟ್ಟು ಈ ಪಂದ್ಯದಲ್ಲಿ ಆಡಲು ಹಿಂಡೇಟು ಹಾಕಿದ್ದರು.

  ಬಿಸಿಸಿಐ ಜೊತೆಗಿನ ಚರ್ಚೆಗಳಲ್ಲಿ ಆಟಗಾರರು ಕೊರೋನಾ ಸೋಂಕಿನ ಬಗ್ಗೆ ತಮಗಿದ್ದ ಭಯದ ಬಗ್ಗೆ ವಿವರಿಸಿದ್ದಾರೆ. ನಂತರ ಎರಡು ಮಂಡಳಿಗಳ ನಡುವಿನ ಚರ್ಚೆಗಳು ಶುಕ್ರವಾರ ಸುಮಾರು ಮೂರು ಗಂಟೆಗಳ ಕಾಲ ವಿಸ್ತರಿಸಲ್ಪಟ್ಟು, ಕೊನೆಗೆ ಅಂತಿಮ ಟೆಸ್ಟ್ ಪಂದ್ಯವನ್ನು ಮುಂದೂಡಲಾಗಿತ್ತು.

  ಭಾರತೀಯರು ಟೆಸ್ಟ್ ಆಡುವುದನ್ನು ವಿರೋಧಿಸಲು ಒಂದು ಪ್ರಮುಖ ಕಾರಣವೆಂದರೆ ಓಲ್ಡ್ ಟ್ರಾಫರ್ಡ್‌ನಲ್ಲಿರುವ ಸುತ್ತುವರಿದ ಡ್ರೆಸ್ಸಿಂಗ್ ರೂಮ್ ಎಂದು ತಿಳಿದುಬಂದಿದೆ. ಅದೂ ಅಲ್ಲದೆ, ಫಿಸಿಯೋ ಥೆರಪಿಸ್ಟ್ ಯೋಗೇಶ್ ಪರ್ಮಾರ್ ಹೆಚ್ಚಿನ ಸಂಖ್ಯೆಯ ಆಟಗಾರ ರಿಗೆ ಚಿಕಿತ್ಸೆ ನೀಡುತ್ತಿದ್ದರಿಂದ, ಅವರ ನಿಕಟ ಸಂಪರ್ಕಗಳು ಯಾರು? ಎಂಬುದನ್ನು ನಿರ್ಧರಿಸುವುದು ಕಷ್ಟಕರವಾಗಿತ್ತು. ಬಿಸಿಸಿಐ ಜೊತೆಗಿನ ಚರ್ಚೆಯಲ್ಲಿ, ಆಟಗಾರರು ಕೊರೋನಾ ಸೋಂಕು ತಮ್ಮ ಕುಟುಂಬದ ಮೇಲೆ ಪರಿಣಾಮ ಬೀರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.

  ಆದರೆ, ಐಪಿಎಲ್​ ಟೂರ್ನಿಗಾಗಿಯೇ ಬಿಸಿಸಿಐ ಇಂಗ್ಲೆಂಡ್ ವಿರುದ್ದದ ಕೊನೆಯ ಟೆಸ್ಟ್​ ಪಂದ್ಯವನ್ನು ಕೊರೋನಾ ನೆಪವೊಡ್ಡಿ ರದ್ದು ಮಾಡಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ಆರೋಪಿಸಿದ್ದಾರೆ. ಇಂದು ಈ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿರುವ ನಾಸೀರ್ ಹುಸೇನ್, "ಹಿಂದಿನ ಯೋಜನೆಯ ಪ್ರಕಾರ, ಪಟೌಡಿ ಟ್ರೋಫಿಯ ಅಂತಿಮ ಟೆಸ್ಟ್‌ನ ನಿಗದಿತ ಮುಕ್ತಾಯದ ಮರುದಿನ ಸೆಪ್ಟೆಂಬರ್ 15 ರಂದು ಆಟಗಾರರು ತಮ್ಮ ಐಪಿಎಲ್ ತಂಡಗಳನ್ನು ಸೇರಬೇಕಿತ್ತು. ಆದರೆ, ಯುಎಇಯಲ್ಲಿ ಒಂದು ವಾರಗಳ ಕಾಲ ಕ್ವಾರಂಟೈನ್​ ಕಡ್ಡಾಯ. ಸೆ.15 ರಂದು ಭಾರತದ ಆಟಗಾರರು ಹೊರಟರೆ ಟೂರ್ನಿಯ ಮೊದಲ ಪಂದ್ಯಗಳಲ್ಲಿ ಪಾಲ್ಗೊಳ್ಳುವುದು ಅಸಾಧ್ಯ.

  ಇದನ್ನೂ ಓದಿ: IPL 2021| ಇಂಗ್ಲೆಂಡ್​ ಟೆಸ್ಟ್​ ಮುಂದೂಡಿಕೆ; ಐಪಿಎಲ್​ ಟೂರ್ನಿಗಾಗಿ ಯುಎಇ ಗೆ ಹಾರಿದ ಭಾರತದ ಆಟಗಾರರು

  ಇದೇ ಕಾರಣಕ್ಕೆ ಬಿಸಿಸಿಐ ಉಪಾಯದಿಂದ ಇಂಗ್ಲೆಂಡ್ ವಿರುದ್ದದ ಕೊನೆಯ ಟೆಸ್ಟ್ ಪಂದ್ಯವನ್ನು ರದ್ದು ಮಾಡಿ, ಎರಡೂ ತಂಡದ ಐಪಿಎಲ್ ಆಟಗಾರರನ್ನು ಆದಷ್ಟು ಶೀಘ್ರದಲ್ಲಿ ದುಬೈಗೆ ಕರೆಸಿಕೊಳ್ಳಲು ಯೋಜನೆ ರೂಪಿಸಿದೆ. ಬಿಸಿಸಿಐ ಏನೇ ಆದರೂ ಐಪಿಎಲ್​ ಟಿ20 ಟೂರ್ನಿಗೆ ತೊಡಕಾಗುವುದನ್ನು ಒಪ್ಪುವುದಿಲ್ಲ. ಆದರೆ, ಬಿಸಿಸಿಐ ನ ಇಂತಹ ಲಾಭಕೋರತನದ ಪರಿಣಾಮ ಇಂದು ಕ್ರಿಕೆಟ್​ ಸತ್ತಂತಾಗಿದೆ" ಎಂದು ನಾಸೀರ್ ಹುಸೇನ್ ಟೀಕಾಪ್ರಹಾರ ನಡೆಸಿದ್ದಾರೆ.

  ಇದನ್ನೂ ಓದಿ: Ajinkya Rahane| ಮುಗಿಯಿತೇ ಅಜಿಂಕ್ಯಾ ರಹಾನೆ ಕ್ರಿಕೆಟ್​ ಭವಿಷ್ಯ, ಏನು ಹೇಳುತ್ತಿವೆ ಅಂಕಿಅಂಶ?

  ಇನ್ನೂ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯ ರದ್ದಾದ ಮರುದಿನವೇ ಎರಡೂ ತಂಡಗಳ ಹಲವಾರು ಆಟಗಾರರು ತಮ್ಮ ಐಪಿಎಲ್ 2021 ತಂಡಗಳೊಂದಿಗೆ ಸೇರಿಕೊಳ್ಳಲು ಯುಎಇ ಗೆ ಹೊರಟಿದ್ದಾರೆ. ರೋಹಿತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅವರು ಮ್ಯಾಂಚೆಸ್ಟರ್‌ನಿಂದ ಅಬುದಾಬಿಗೆ ಚಾರ್ಟರ್ ಫ್ಲೈಟ್‌ನಲ್ಲಿ ಮೊದಲ ನೇಯವರಾಗಿ ತೆರಳಿದ್ದರೆ, ದುಬೈನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಂಪ್ ಅನ್ನು ಸೇರಿಕೊಳ್ಳಲು ವಿರಾಟ್ ಕೊಹ್ಲಿ ಮತ್ತು ಸಿರಾಜ್ ಮೊಹಮ್ಮದ್ ಶಿಘ್ರದಲ್ಲೇ ಪ್ರಯಾಣ ಬೆಳಸಲಿದ್ದಾರೆ ಎನ್ನಲಾಗಿದೆ.
  Published by:MAshok Kumar
  First published: