• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • RCB Match: 'ಟೆಸ್ಲಾ' ಕಂಪೆನಿ ಸಿಇಒ ಎಲಾನ್ ಮಸ್ಕ್ ಆರ್‌ಸಿಬಿ ಆಟ ವೀಕ್ಷಿಸುತ್ತಾರೆಯೇ? ಇಲ್ಲಿದೆ ನೋಡಿ ಉತ್ತರ

RCB Match: 'ಟೆಸ್ಲಾ' ಕಂಪೆನಿ ಸಿಇಒ ಎಲಾನ್ ಮಸ್ಕ್ ಆರ್‌ಸಿಬಿ ಆಟ ವೀಕ್ಷಿಸುತ್ತಾರೆಯೇ? ಇಲ್ಲಿದೆ ನೋಡಿ ಉತ್ತರ

elon Musk-Glenn Maxwell

elon Musk-Glenn Maxwell

Elon Musk: ಎಲಾನ್ ಮಸ್ಕ್ ಅವರ ಒಂದೇ ಒಂದು ಟ್ವೀಟ್‍ನಿಂದ ಆರ್‌ಸಿಬಿ ಅಭಿಮಾನಿಗಳಲ್ಲಿ ಈ ಒಂದು ಅನುಮಾನ ಎದ್ದಿದೆ. ಏಕೆಂದರೆ ಮಾಕ್ಸ್‍ವೆಲ್ (Maxwell) ಅದ್ಭುತ ಎಂಬುದಾಗಿ ಟ್ವೀಟ್ ಮಾಡಿದ್ದರು. ಇದನ್ನು ಓದಿದ ನೆಟ್ಟಿಗರು ಎಲಾನ್ ಮಸ್ಕ್ ಅವರನ್ನು ಕ್ರಿಕೆಟ್‍ಗೆ ಸಂಪರ್ಕ ಕಲ್ಪಿಸಿದ್ದಾರೆ.

ಮುಂದೆ ಓದಿ ...
 • Trending Desk
 • 2-MIN READ
 • Last Updated :
 • Share this:

  Royal Challengers Bangalore: ಪ್ರಪಂಚದ ಶ್ರೀಮಂತ ವ್ಯಕ್ತಿ ಮತ್ತು 'ಟೆಸ್ಲಾ' (Tesla) ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹೂಡಿಕೆದಾರ ಹಾಗೂ ವಿನ್ಯಾಸಗಾರ ಎಲಾನ್ ಮಸ್ಕ್ (Elon musk) ಐಪಿಎಲ್ ನೋಡುತ್ತಾರೆಯೇ? ಅದರಲ್ಲೂ ಆರ್‌ಸಿಬಿ (RCB) ತಂಡದ ಆಟ ವೀಕ್ಷಿಸುತ್ತಾರೆಯೇ?


  ಎಲಾನ್ ಮಸ್ಕ್ ಅವರ ಒಂದೇ ಒಂದು ಟ್ವೀಟ್‍ನಿಂದ ಆರ್‌ಸಿಬಿ ಅಭಿಮಾನಿಗಳಲ್ಲಿ ಈ ಒಂದು ಅನುಮಾನ ಎದ್ದಿದೆ. ಏಕೆಂದರೆ ಮಾಕ್ಸ್‍ವೆಲ್ (Maxwell) ಅದ್ಭುತ ಎಂಬುದಾಗಿ ಟ್ವೀಟ್ ಮಾಡಿದ್ದರು. ಇದನ್ನು ಓದಿದ ನೆಟ್ಟಿಗರು ಎಲಾನ್ ಮಸ್ಕ್ ಅವರನ್ನು ಕ್ರಿಕೆಟ್‍ಗೆ ಸಂಪರ್ಕ ಕಲ್ಪಿಸಿದ್ದಾರೆ.


  ಸೆಪ್ಟೆಂಬರ್ 29ರ ಬುಧವಾರದಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮತ್ತು ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡಗಳ ನಡುವಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ವಿಕೆಟ್‌ಗಳ ಗೆಲುವನ್ನು ಸಾಧಿಸಿತು.


  ಗೆಲ್ಲಲು 150 ರನ್‍ಗಳ ಸವಾಲಿನ ಗುರಿ ಬೆನ್ನತ್ತಿದ ವಿರಾಟ್ ಕೊಹ್ಲಿ ಬಳಗ ಕೇವಲ 3 ವಿಕೆಟ್‍ಗಳ ನಷ್ಟದಲ್ಲಿ 17.1 ಓವರ್‌ಗಳಲ್ಲೇ 153 ರನ್‍ಗಳನ್ನು ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಕಳೆದ ಐಪಿಎಲ್‍ನಲ್ಲಿ ಒಂದು ಸಿಕ್ಸರ್ ಕೂಡ ಬಾರಿಸದೇ ಹೀನಾಯ ಪ್ರದರ್ಶನ ನೀಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿ 30 ಎಸೆತಗಳಲ್ಲಿ 6 ಫೋರ್ ಮತ್ತು 1 ಸಿಕ್ಸರ್ ಸಹಿತ ಅಜೇಯ 50 ರನ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು. ಗ್ಲೆನ್ ಇದೇ ವೇಳೆ ಟಿ20 ಕ್ರಿಕೆಟ್ ವೃತ್ತಿಬದುಕಿನಲ್ಲಿ 7000 ರನ್‍ಗಳ ಗಡಿ ದಾಟಿದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ (25), ದೇವದತ್ ಪಡಿಕ್ಕಲ್ (22) ಮತ್ತು ಶ್ರೀಕರ್ ಭರತ್ (44) ಬಿರುಸಿನ ರನ್‍ಗಳ ಕೊಡುಗೆ ನೀಡಿದ್ದರು.


  ಇಂತಹ ಸಮಯದಲ್ಲಿ ಎಲಾನ್ ಮಸ್ಕ್ ಮ್ಯಾಕ್ಸ್‌ವೆಲ್ ನಂಬಲು ಅಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ. ಇವರು ವಿಜ್ಞಾನಿಯಾದ ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‌ವೆಲ್ ಅವರು ಬರೆದು ಒಂದು ಲೇಖನಕ್ಕೆ ಮಾಕ್ಸ್‌ವೆಲ್ ನಂಬಲು ಅಸಾಧ್ಯ ಎಂದು ಪ್ರತಿಕ್ರಿಯಿಸಿದ್ದರು. ಕ್ಲಾರ್ಕ್ ಮ್ಯಾಕ್ಸ್‌ವೆಲ್ ಕಾರಿನ ಹಿಂದೆ ಇರುವ ರೇಡಿಯೋದ ಅದ್ಭುತ ಶಕ್ತಿಯನ್ನು ವಿವರಿಸುವ ಲೇಖನವನ್ನು ಬರೆದಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದರು.ಆದರೆ ಆರ್‌ಸಿಬಿ ಅಭಿಮಾನಿಗಳು ಮ್ಯಾಕ್ಸ್‌ವೆಲ್ ಎಂಬ ಪದ ನೋಡಿದ್ದೆ ತಡ ಕ್ರಿಕೆಟಿಗ ಮ್ಯಾಕ್ಸ್‌ವೆಲ್ ಬಗ್ಗೆ ಎಲನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

  ಒಬ್ಬ ಕಮೆಂಟ್ ಮಾಡಿ, ಹೌದು ಸರ್, ನಾವು ಕೂಡ ಆರ್‌ಸಿಬಿ ಎಂದು ಕಮೆಂಟ್ ಮಾಡಿದರೆ, ಮತ್ತೊಬ್ಬರು ನಮ್ಮ ಆರ್‌ಸಿಬಿ ಬೆಂಬಲಿಸಲು ಹೊಸ ಬೆಂಬಲಿಗರೊಬ್ಬರು ದೊರೆತಿದ್ದಾರೆ ಅದುವೇ ಎಲನ್ ಮಸ್ಕ್. ಮುಂಬೈ ಇಂಡಿಯನ್ಸ್‌ಗೆ ಅಂಬಾನಿ ಬೆಂಬಲಿಸುತ್ತಾರೆಯೇ ಎಂದು ಕೇಳಿದ್ದಾರೆ. ಮತ್ತೊಬ್ಬರು, ಒಟ್ಟಾರೆಯಾಗಿ, ಆರ್‌ಸಿಬಿಗೆ ಬಂದ ನಂತರ ಅವರ ಅದೃಷ್ಟ ಹೇಗೆ ಬದಲಾಗಿದೆ ಎಂಬುದನ್ನು ವಿವರಿಸಲಾಗುತ್ತಿಲ್ಲ. ಎಲಾನ್ ಮಸ್ಕ್ , ಈ ಬಾರಿ ಆರ್‌ಸಿಬಿಗೆ ಐಪಿಎಲ್ ಟ್ರೋಫಿಯನ್ನು ಪಡೆಯಲು ಸಹಾಯ ಮಾಡುತ್ತಾರೆ ಎಂದು ಭಾವಿಸುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.


  Read Also: Radford Family: 3ನೇ ಬಾರಿಗೆ ಅಜ್ಜಿಯಾದ 22 ಮಕ್ಕಳ ತಾಯಿ! ಮನೆಯಲ್ಲಿ ಸಂಭ್ರಮವೋ ಸಂಭ್ರಮ


  ಇತ್ತೀಚೆಗೆ, ಬ್ಲೂಮ್‍ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅಮೆರಿಕದ ಡಾಲರ್ 213 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ, ಸ್ಪೇಸ್ ಎಕ್ಸ್ ಸಿಇಒ ಮತ್ತು ಟೆಸ್ಲಾ ಮುಖ್ಯಸ್ಥ ಮಸ್ಕ್ ಸೋಮವಾರ ಅಮೆಜಾನ್ ಸಿಇಒ ಜೆಫ್ ಬೆಜೋಸ್ (jeff Bezos) ಅವರನ್ನು ಹಿಂದಿಕ್ಕಿದರು.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು