ಉಗ್ರರ ದಾಳಿ ಭೀತಿ; ಪಾಕಿಸ್ತಾನ ಪ್ರವಾಸ ಕೈಗೊಳ್ಳಲ್ಲ ಎಂದ ಲಂಕಾದ 10 ಆಟಗಾರರು

ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ, ಟಿ-20 ತಂಡದ ನಾಯಕ ಲಸಿತ್ ಮಲಿಂಗ, ತಿಸರಾ ಪರೇರಾ ಸೇರಿದಂತೆ 10 ಆಟಗಾರರು ಪಾಕಿಸ್ತಾನ ಪ್ರವಾಸದಿಂದ ಹೊರಗುಳಿಯಲು ನಿರ್ಧಾರ ಮಾಡಿದ್ದಾರೆ.

ಶ್ರೀಲಂಕಾ ತಂಡ: ಲಸಿತ್ ಮಲಿಂಗಾ (ನಾಯಕ), ಧನುಷ್ಕಾ ಗುಣತಿಲಕ, ಆವಿಷ್ಕಾ ಫೆರ್ನಾಂಡೊ, ಕುಶಾಲ್ ಪೆರೇರಾ, ಓಶಾಡ ಫೆರ್ನಾಂಡೊ, ಆ್ಯಂಜಲೊ ಮ್ಯಾಥ್ಯೂಸ್, ಧನಂಜಯ್ ಡಿ ಸಿಲ್ವಾ, ದಾಸುನ್ ಶನಕಾ, ಲಕ್ಷಣ್ ಸಂದಕನ್, ವನಿಂದು ಹಸರಂಗ, ಲಹಿರು ಕುಮಾರ.

ಶ್ರೀಲಂಕಾ ತಂಡ: ಲಸಿತ್ ಮಲಿಂಗಾ (ನಾಯಕ), ಧನುಷ್ಕಾ ಗುಣತಿಲಕ, ಆವಿಷ್ಕಾ ಫೆರ್ನಾಂಡೊ, ಕುಶಾಲ್ ಪೆರೇರಾ, ಓಶಾಡ ಫೆರ್ನಾಂಡೊ, ಆ್ಯಂಜಲೊ ಮ್ಯಾಥ್ಯೂಸ್, ಧನಂಜಯ್ ಡಿ ಸಿಲ್ವಾ, ದಾಸುನ್ ಶನಕಾ, ಲಕ್ಷಣ್ ಸಂದಕನ್, ವನಿಂದು ಹಸರಂಗ, ಲಹಿರು ಕುಮಾರ.

  • Share this:
ಬೆಂಗಳೂರು (ಸೆ. 10): 2009, ಮಾರ್ಚ್​​ 3 ರಂದು ನಡೆದ ಒಂದು ದುರ್ಘಟನೆ ಕ್ರಿಕೆಟ್ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿ ಉಳಿದಿದೆ. ಅಂದು ಶ್ರೀಲಂಕಾ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸದಲ್ಲಿತ್ತು. ಎರಡನೇ ಟೆಸ್ಟ್​ ಪಂದ್ಯದ ಮೂರನೇ ದಿನವದು. ಲಾಹೋರ್​​ನ ಗಡ್ಡಾ ಕ್ರಿಕೆಟ್ ಮೈದಾನಕ್ಕೆ ಶ್ರೀಲಂಕಾ ಆಟಗಾರರು ಬಸ್​​ನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಒಮ್ಮೆಲೆ ಗನ್ ಹಿಡಿದುಕೊಂಡು ಬಂದ ಭಯೋತ್ಪಾದಕ ಶ್ರೀಲಂಕಾ ಆಟಗಾರರಿರುವ ಬಸ್​​ ಮೇಲೆ ಮನಬಂದಂತೆ ಗುಂಡು ಹಾರಿಸಿದ. ಈ ಭೀಕರ ಘಟನೆ ನಡೆದು ಹತ್ತು ವರ್ಷಗಳಾಗಿವೆ.

ಆ ಬಳಿಕ ಯಾವುದೇ ವಿದೇಶಿ ತಂಡ 6 ವರ್ಷದವರೆಗೆ ಪಾಕಿಸ್ತಾನ ತನ್ನ ಮಣ್ಣಿನಲ್ಲಿ ಕ್ರಿಕೆಟ್ ಟೂರ್ನಿ ಆಯೋಜಿಸಿಲ್ಲ. ಆದರೆ, ಇತ್ತೀಚೆಗಷ್ಟೆ ಶ್ರೀಲಂಕಾ ಮತ್ತೊಮ್ಮೆ ಪಾಕ್​ಗೆ ಪ್ರಯಾಣ ಬೆಳೆಸಲು ಸಜ್ಜಾಗಿತ್ತು. ಇದೇ ಸೆ. 27 ರಿಂದ ಅಕ್ಟೋಬರ್ 9 ರವರೆಗೆ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳನ್ನ ಆಡಲು ಉಭಯ ರಾಷ್ಟ್ರಗಳು ನಿರ್ಧರಿಸಿದ್ದವು.

ಹೀಗಾಗಿ ಇದೇ ತಿಂಗಳ 25 ರಂದು ಸಿಂಹಳೀಯರು ಪಾಕ್​ ಪ್ರವಾಸ ಕೈಗೊಳ್ಳಬೇಕಿತ್ತು. ಆದರೀಗ ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ, ಟಿ-20 ತಂಡದ ನಾಯಕ ಲಸಿತ್ ಮಲಿಂಗ, ತಿಸರಾ ಪರೇರಾ ಸೇರಿದಂತೆ 10 ಆಟಗಾರರು ಪಾಕಿಸ್ತಾನ ಪ್ರವಾಸದಿಂದ ಹೊರಗುಳಿಯಲು ನಿರ್ಧಾರ ಮಾಡಿದ್ದಾರೆ.

2016 ರಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡಿದ ಆಟಗಾರ ವಿಂಡೀಸ್ ತಂಡದ ಹೊಸ ನಾಯಕ!

ಪಾಕಿಸ್ತಾನದ ಭದ್ರತಾ ವ್ಯವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಈ ಆಟಗಾರರು​​ ಯಾವುದೇ ಕಾರಣಕ್ಕೂ ನಾವು ಅಲ್ಲದೆ ತೆರಳುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

 ಅಂದು 2009, ಮಾರ್ಚ್​​ 3 ರಂದು ನಡೆದ ದಾಳಿಯಲ್ಲಿ ಆಗಿನ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕರಾಗಿದ್ದ ಮಹೇಲ ಜಯವರ್ಧನೆ, ಉಪನಾಯಕ ಕುಮಾರ್ ಸಂಗಕ್ಕರ, ತಿಲನ್ ಸಮರವೀರ, ಅಜಂತ ಮೆಂಡಿಸ್, ತರಂಗ ಪರ್ಣವಿತನ ಅವರಿಗೆ ಗಾಯಗಳಾಗಿದ್ದವು.

ಅಲ್ಲದೆ ಬಸ್ ಹಿಂದೆಯಿಂದ ಕಾರಿನಲ್ಲಿದ್ದ ಕಾಯ್ದಿಟ್ಟ ಅಂಪೈರ್​ ಎಹಸಾನ್​​ ಅವರ ದೇಹಕ್ಕೆ ಎರಡು ಬುಲೆಟ್​ಗಳು ಹೊಕ್ಕಿದ್ದವು. ಇದರಿಂದ ಕೆಲ ದಿನಗಳ ಕಾಲ ಅವರು ಕೋಮಕ್ಕೂ ಜಾರಿದ್ದರು. ಬಳಿಕ ಚೇತರಿಸಿಕೊಂಡಿದ್ದರು. ಈ ಘಟನೆಯಲ್ಲಿ ಆಟಗಾರರೆಲ್ಲರು ಅಪಾಯದಿಂದ ಪಾರಾಗಿದ್ದರಾದರು, 8 ಜನ ಪೊಲೀಸರು ಹಾಗೂ ಹತ್ತು ಮಂದಿ ನಾಗರೀಕರು ಸಾವನ್ನಪ್ಪಿದ್ದರು. ಹಲವರಿಗೆ ಗಾಯಗಳಾಗಿದ್ದವು.

First published: