• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣವಾದ 5 ಅಂಶಗಳು ಇಲ್ಲಿದೆ ನೋಡಿ..

ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣವಾದ 5 ಅಂಶಗಳು ಇಲ್ಲಿದೆ ನೋಡಿ..

ಟೀಂ ಇಂಡಿಯಾ

ಟೀಂ ಇಂಡಿಯಾ

ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗೆ 317 ರನ್ ಗಳಿಸಿದ್ದು, ಈ ಪೈಕಿ ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಮತ್ತು ಕ್ರುನಾಲ್ ಪಾಂಡ್ಯ ಅರ್ಧಶತಕ ಬಾರಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ ತಂಡ 42.1 ಓವರ್‌ಗಳಲ್ಲಿ 251 ರನ್‌ಗಳಿಗೆ ಆಲೌಟಾಗಿದೆ.

ಮುಂದೆ ಓದಿ ...
  • Share this:

ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಹಾಗೂ ಟಿ-20 ಸರಣಿ ಎರಡರಲ್ಲೂ ಗೆಲುವು ಸಾಧಿಸಿದ ಬಳಿಕ ವಿರಾಟ್‌ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಏಕದಿನ ಸರಣಿಯಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿದೆ. 50 ಓವರ್‌ಗಳ ಪಂದ್ಯಾವಳಿಯ ಮೊದಲ ಮ್ಯಾಚ್‌ನಲ್ಲಿ ಇಂಗ್ಲೀಷರನ್ನು 66 ರನ್‌ಗಳಿಂದ ಬಗ್ಗು ಬಡಿದಿದೆ ವಿರಾಟ್‌ ಕೊಹ್ಲಿ ಪಡೆ. ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗೆ 317 ರನ್ ಗಳಿಸಿದ್ದು, ಈ ಪೈಕಿ ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಮತ್ತು ಕ್ರುನಾಲ್ ಪಾಂಡ್ಯ ಅರ್ಧಶತಕ ಬಾರಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ ತಂಡ 42.1 ಓವರ್‌ಗಳಲ್ಲಿ 251 ರನ್‌ಗಳಿಗೆ ಆಲೌಟಾಗಿದೆ. ಈ ಪೈಕಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ನಾಲ್ಕು ವಿಕೆಟ್‌ ಪಡೆದರೆ, ಶಾರ್ದುಲ್ ಠಾಕೂರ್ 3 ವಿಕೆಟ್‌ ಉರುಳಿಸಿದರು.


ಇನ್ನು, ಟೀಂ ಇಂಡಿಯಾದ ಗೆಲುವಿಗೆ ಐದು ಕಾರಣಗಳು ಹೀಗಿವೆ ನೋಡಿ..


1) ಟೀಮ್ ಇಂಡಿಯಾ ನಿಧಾನಗತಿಯಲ್ಲಿ ಆಟ ಆರಂಭಿಸಿತು. ಮೊದಲ 10 ಓವರ್‌ಗಳಲ್ಲಿ ಕೇವಲ 39 ರನ್ ಗಳಿಸಿತ್ತು. ಆದರೆ, ಶಿಖರ್‌ ಧವನ್‌ ಔಟಾಗದೆ 94 ರನ್‌ಗಳ ಇನ್ನಿಂಗ್ಸ್ ಕಟ್ಟಿದರು. ಈ ಮೂಲಕ ತಂಡ 200 ರನ್‌ ಗಳಿಸುವಂತೆ ಮಾಡಿದರು. ಅಲ್ಲದೆ, ಮಧ್ಯಮ ಓವರ್‌ಗಳಲ್ಲಿ ನಾಯಕ ವಿರಾಟ್‌ ಕೊಹ್ಲಿ ಉತ್ತಮವಾಗಿ ಆಟ ಆಡಿದರು.


2) 40 ಓವರ್‌ಗಳ ನಂತರ ಟೀಂ ಇಂಡಿಯಾದ ಸ್ಕೋರ್ 4 ವಿಕೆಟ್‌ಗೆ 205 ಆಗಿತ್ತು. ಇದರ ನಂತರ ಹಾರ್ದಿಕ್ ಪಾಂಡ್ಯ ಶೀಘ್ರದಲ್ಲೇ ಔಟ್‌ ಆದರು. ಆದರೂ, ಕೆ.ಎಲ್.ರಾಹುಲ್ ಮತ್ತು ಮೊದಲ ಏಕದಿನ ಪಂದ್ಯ ಆಡಿದ ಕ್ರುನಾಲ್ ಪಾಂಡ್ಯ - ಇಬ್ಬರೂ ಅರ್ಧಶತಕ ಸಿಡಿಸಿ ತಂಡದ ಸ್ಕೋರ್ 300 ಗಡಿ ದಾಟುವಂತೆ ಮಾಡಿದರು. ಅಂತಿಮ 5 ಓವರ್‌ಗಳಲ್ಲಿ ಟೀಂ ಇಂಡಿಯಾ 67 ರನ್ ಗಳಿಸಿ ಸ್ಕೋರ್ 317 ಕ್ಕೆ ತಲುಪುವಂತೆ ನೊಡಿಕೊಂಡಿತು.


3) ಟೀಂ ಇಂಡಿಯಾ ನೀಡಿದ ಸವಾಲು ಎದುರಿಸಲು ಇಂಗ್ಲೆಂಡ್‌ ಉತ್ತಮ ಆರಂಭವನ್ನೇ ನೀಡಿತು. ಜಾನಿ ಬೈರ್‌ಸ್ಟೋವ್ ಮತ್ತು ಜೇಸನ್ ರಾಯ್ 135 ರನ್‌ಗಳ ದೊಡ್ಡ ಜೊತೆಯಾಟದ ಕೊಡುಗೆ ಹಂಚಿಕೊಂಡರು. ಇದರ ನಂತರ ಟೀಮ್ ಇಂಡಿಯಾದ ವೇಗದ ಬೌಲರ್‌ಗಳು ಮಧ್ಯಮ ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ಮಾಡಿ 30 ಓವರ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿ ಗೆಲುವು ಕಸಿದುಕೊಂಡರು. ಭಾರತದ ವೇಗದ ಬೌಲರ್‌ಗಳು ಪಂದ್ಯದಲ್ಲಿ
10 ರ ಪೈಕಿ 9 ವಿಕೆಟ್ ಪಡೆದರು.


4) ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವಾಡಿದ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಉತ್ತಮ ಕಮ್‌ ಬ್ಯಾಕ್‌ ಮಾಡಿದರು. ಮೊದಲ 3 ಓವರ್‌ಗಳಲ್ಲಿ 37 ರನ್ ನೀಡಿ ಅವರು ತುಂಬಾ ದುಬಾರಿ ಎನಿಸಿದರೂ, ಅಂತಿಮವಾಗಿ 4 ವಿಕೆಟ್‌ಗಳೊಂದಿಗೆ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದಲ್ಲದೆ, ಮೊದಲ ಏಕದಿನ ಪಂದ್ಯವನ್ನು ಆಡುತ್ತಿರುವ ಕ್ರುನಾಲ್ ಪಾಂಡ್ಯ ಅರ್ಧಶತಕ ಪಡೆದಿದ್ದಲ್ಲದೆ ಬೌಲಿಂಗ್‌ನಲ್ಲೂ ಒಂದು ವಿಕೆಟ್‌ ಪಡೆದರು.


5) ಏಕದಿನ ಕ್ರಿಕೆಟ್‌ನಲ್ಲಿ ಮಧ್ಯಮ ಓವರ್‌ಗಳು ಮುಖ್ಯ. ಟೀಮ್ ಇಂಡಿಯಾ ಮೊದಲ 10 ಓವರ್‌ಗಳಲ್ಲಿ ಕೇವಲ 39 ರನ್ ಗಳಿಸಿದ್ದರೆ, ಇಂಗ್ಲೆಂಡ್ ಮೊದಲ 10 ಓವರ್‌ಗಳಲ್ಲಿ 89 ರನ್ ಗಳಿಸಿದೆ. ಅಂದರೆ, ಇಂಗ್ಲೆಂಡ್ ತಂಡವು ಮೊದಲ 10 ಓವರ್‌ಗಳಲ್ಲಿ ಟೀಂ ಇಂಡಿಯಾಗಿಂತ 50 ರನ್ ಹೆಚ್ಚು ಗಳಿಸಿದರೂ ಪಂದ್ಯವನ್ನು ಕಳೆದುಕೊಂಡಿತು. ಏಕೆಂದರೆ ಬ್ಯಾಟ್ಸ್‌ಮನ್‌ಗಳಿಗೆ ಮಧ್ಯಮ ಓವರ್‌ನಲ್ಲಿ ಉತ್ತಮ ಆಟವನ್ನು ತೋರಿಸಲು ಸಾಧ್ಯವಾಗಲಿಲ್ಲ.


5- ಏಕದಿನ ಕ್ರಿಕೆಟ್‌ನಲ್ಲಿ ಮಧ್ಯಮ ಓವರ್‌ಗಳು ಮುಖ್ಯ. ಟೀಮ್ ಇಂಡಿಯಾ ಮೊದಲ 10 ಓವರ್‌ಗಳಲ್ಲಿ ಕೇವಲ 39 ರನ್ ಗಳಿಸಿದೆ. ಇಂಗ್ಲೆಂಡ್ ಮೊದಲ 10 ಓವರ್‌ಗಳಲ್ಲಿ 89 ರನ್ ಗಳಿಸಿದೆ. ಅಂದರೆ, ಇಂಗ್ಲೆಂಡ್ ತಂಡವು ಮೊದಲ 10 ಓವರ್‌ಗಳಲ್ಲಿ ನಮಗಿಂತ 50 ರನ್ ಹೆಚ್ಚು ಗಳಿಸುವ ಮೂಲಕ ಪಂದ್ಯವನ್ನು ಕಳೆದುಕೊಂಡಿತು, ಏಕೆಂದರೆ ಇಂಗ್ಲಿಷ್‌ ಬ್ಯಾಟ್ಸ್‌ಮನ್‌ಗಳು ಮಧ್ಯಮ ಓವರ್‌ಗಳಲ್ಲಿ ಉತ್ತಮ ಆಟವನ್ನು ತೋರಿಸಲು ಸಾಧ್ಯವಾಗಲಿಲ್ಲ.

First published: