news18-kannada Updated:January 19, 2021, 8:32 PM IST
Team India
ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ ಟೀಮ್ ಇಂಡಿಯಾ ಹೊಸ ಇತಿಹಾಸ ಬರೆದಿದೆ. ಆಸ್ಟ್ರೇಲಿಯಾ ನೀಡಿದ ಬೃಹತ್ ಟಾರ್ಗೆಟ್ನ್ನು ಕೊನೆಯ ದಿನ ಬೆನ್ನತ್ತುವ ಮೂಲಕ ಭಾರತ ತಂಡ 3 ವಿಕೆಟ್ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿತು.
ಇತ್ತ ಗೆಲುವಿನ ಸಂಭ್ರಮದಲ್ಲಿದ್ದ ಟೀಮ್ ಇಂಡಿಯಾ ಆಟಗಾರರು ಎದುರಾಳಿ ತಂಡದ ಶ್ರೇಷ್ಠ ಆಟಗಾರನನ್ನು ಗೌರವಿಸುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಅಜಿಂಕ್ಯ ರಹಾನೆ, ಈ ಗೆಲುವನ್ನು ನಾನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನನ್ನ ತಂಡದ ಪ್ರತಿಯೊಬ್ಬ ಆಟಗಾರನ ಬಗ್ಗೆ ನನಗೆ ನಿಜಕ್ಕೂ ಹೆಮ್ಮೆ ಇದೆ ಎಂದರು.
ಇದಾದ ಬಳಿಕ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ಅವರನ್ನು ಕರೆದ ಅಜಿಂಕ್ಯ ರಹಾನೆ, ವಿಶೇಷ ಉಡುಗೊರೆ ನೀಡಿ ಗೌರವಿಸಿದರು. ಹೌದು, ಗಬ್ಬಾ
ಟೆಸ್ಟ್ ಮೂಲಕ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ 100ನೇ ಟೆಸ್ಟ್ ಪಂದ್ಯ ಪೂರೈಸಿದ್ದರು. ಈ ಪಂದ್ಯವನ್ನು ಅವಿಸ್ಮರಣೀಯವಾಗಿಸಲು ಭಾರತದ ಆಟಗಾರರು ಸಹಿ ಹಾಕಿರುವ ಜೆರ್ಸಿಯನ್ನು ಉಡುಗೊರೆಯಾಗಿ ನೀಡಲಾಯಿತು. ಟೀಮ್ ಇಂಡಿಯಾದ ಈ ಅನಿರೀಕ್ಷಿತ ನಡೆಗೆ ನಾಥನ್ ಲಿಯಾನ್ ಕೂಡ ಸಂತಸ ವ್ಯಕ್ತಪಡಿಸಿದರು.
ಗೆಲುವಿನ ನಡುವೆ ಆಸ್ಟ್ರೇಲಿಯಾ ತಂಡದ ಆಟಗಾರನನ್ನು ಗೌರವಿಸಲು ಮುಂದಾದ ಟೀಮ್ ಇಂಡಿಯಾ ಆಟಗಾರರ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
Published by:
zahir
First published:
January 19, 2021, 8:32 PM IST