ಕಿವೀಸ್ ಸರಣಿಗೆ ಟೀಂ ಇಂಡಿಯಾ ಪ್ರಕಟ; ಬಿಸಿಸಿಐ ವಿರುದ್ಧ ಸಿಡಿದೆದ್ದ ಅಭಿಮಾನಿಗಳು; ಯಾಕೆ ಗೊತ್ತಾ?

ಜನವರಿ 24 ರಂದು ಮೊದಲ ಟಿ-20 ನಡೆಯಲಿದ್ದರೆ, ಜ. 26ಕ್ಕೆ ಎರಡನೇ ಪಂದ್ಯ, ಜ. 29ಕ್ಕೆ ಮೂರನೇ ಟಿ-20, ಜ. 31ಕ್ಕೆ 4ನೇ ಟಿ-20 ಹಾಗೂ ಜನವರಿ 2ಕ್ಕೆ ಅಂತಿಮ ಐದನೇ ಟಿ-20 ಪಂದ್ಯ ಆಯೋಜಿಸಲಾಗಿದೆ.

ಟೀಂ ಇಂಡಿಯಾ ಆಟಗಾರರು

ಟೀಂ ಇಂಡಿಯಾ ಆಟಗಾರರು

 • Share this:
  ಬೆಂಗಳೂರು (ಜ. 13): ಭಾರತ ಕ್ರಿಕೆಟ್ ತಂಡ ಜನವರಿ 20 ರಂದು ನ್ಯೂಜಿಲೆಂಡ್ ಪ್ರವಾಸ ಬೆಳೆಸಲಿದೆ. ಅಲ್ಲಿ ಐದು ಪಂದ್ಯಗಳ ಟಿ-20, ಮೂರು ಪಂದ್ಯಗಳ ಏಕದಿನ ಹಾಗೂ ಎರಡು ಪಂದ್ಯಗಳ ಟಿಸ್ಟ್​ ಸರಣಿ ಆಡಲಿದೆ. ಸದ್ಯ ಬಿಸಿಸಿಐ ಮೂರು ಪಂದ್ಯಗಳ ಟಿ-20 ಸರಣಿಗೆ ಭಾರತ ತಂಡವನ್ನು ಪ್ರಕಟಮಾಡಿದೆ.

  ಕಳೆದ ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ಆಡಿದ ಆಟಗಾರರೇ ಬಹುತೇಕ ಈ ಸರಣಿಗೂ ಆಯ್ಕೆಯಾಗಿದ್ದಾರೆ. ರೋಹಿತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಆದರೆ, ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ.

  ಸ್ಯಾಮ್ಸನ ಕೈಬಿಟ್ಟ ವಿಚಾರವಾಗಿ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಬಿಸಿಸಿಐ ಕಿಡಿ ಕಾರುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಕೊನೆಯ ಟಿ-20 ಪಂದ್ಯದಲ್ಲಿ ರಿಷಭ್ ಪಂತ್​ರನ್ನು ಕೈಬಿಟ್ಟು ಸ್ಯಾಮ್ಸನ್​ಗೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ ಮೊದಲ ಬಾಲ್ ಸಿಕ್ಸ್​ ಸಿಡಿಸಿ ಎರಡನೇ ಬಾಲ್​ಗೆ ಔಟ್ ಆಗಿದ್ದರು.

  ಇನ್ನು ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದ್ದ ಹಾರ್ದಿಕ್ ಪಾಂಡ್ಯಗೆ ಮತ್ತೆ ಹಿನ್ನಡೆಯಾಗಿದೆ. ಫಿಟ್​ನೆಸ್ ಟೆಸ್ಟ್​ನಲ್ಲಿ ಫೇಲ್ ಆದ ಕಾರಣ ಹಾರ್ದಿಕ್ ಹೆಸರನ್ನು ಬಿಸಿಸಿಐ ಪರಿಗಣಿಸಿಲ್ಲ. ಉತ್ತಮ ಫಾರ್ಮ್​ನಲ್ಲಿರುವ ಇಬ್ಬರು ಕನ್ನಡಿಗರಾದ ಕೆ ಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ಸ್ಥಾನ ಪಡೆದುಕೊಂಡಿದ್ದಾರೆ.

  ಜನವರಿ 24 ರಂದು ಮೊದಲ ಟಿ-20 ನಡೆಯಲಿದ್ದರೆ, ಜ. 26ಕ್ಕೆ ಎರಡನೇ ಪಂದ್ಯ, ಜ. 29ಕ್ಕೆ ಮೂರನೇ ಟಿ-20, ಜ. 31ಕ್ಕೆ 4ನೇ ಟಿ-20 ಹಾಗೂ ಜನವರಿ 2ಕ್ಕೆ ಅಂತಿಮ ಐದನೇ ಟಿ-20 ಪಂದ್ಯ ಆಯೋಜಿಸಲಾಗಿದೆ.

  ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಗೆ ಬಿಸಿಸಿಐ ಪ್ರಕಟಿಸಿರುವ 15 ಸದಸ್ಯರ ಪಟ್ಟಿ ಇಲ್ಲಿದೆ.

  ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪ ನಾಯಕ), ಕೆ. ಎಲ್‌. ರಾಹುಲ್‌, ಶಿಖರ್‌ ಧವನ್‌, ಶ್ರೇಯಸ್‌ ಐಯರ್, ಮನೀಷ್‌ ಪಾಂಡೆ, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಶಿವಂ ದುಬೆ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ವಾಷಿಂಗ್ಟನ್‌ ಸುಂದರ್‌, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್‌ ಶಮಿ, ನವದೀಪ್‌ ಸೈನಿ, ರವೀಂದ್ರ ಜಡೇಜಾ ಮತ್ತು ಶಾರ್ದೂಲ್‌ ಠಾಕೂರ್‌.

  Published by:Vinay Bhat
  First published: