HOME » NEWS » Sports » CRICKET TEAM INDIA SPECIAL FAN 87 YEAR OLD CHARULATHA BECOMES INTERNET SENSATION

World cup 2019: 87ರ ಇಳಿ ವಯಸ್ಸಿನಲ್ಲಿ ಕ್ರಿಕೆಟ್​ ಪ್ರೀತಿ; ಸಾಮಾಜಿಕ ಜಾಲತಾಣದಲ್ಲಿ ಹೊಸ ಸ್ಟಾರ್ ಆದ ಈ ಅಜ್ಜಿ ಯಾರು ಗೊತ್ತೇ?

World Cup 2019: 87ರ ಇಳಿವಯಸ್ಸಿನಲ್ಲಿಯೂ ವೀಲ್​ಚ್ಹೇರ್​ನಲ್ಲಿ ಬಂದು ಭಾರತೀಯ ಕ್ರಿಕೆಟಿಗರಿಗೆ ಈಕೆ ನೀಡಿದ ಸ್ಪೂರ್ತಿಗೆ ಇಡೀ ವಿಶ್ವವೇ ದಂಗಾಗಿದೆ. ಅಭಿಮಾನಕ್ಕೆ… ಪ್ಯಾಷನ್​ಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ತೋರಿಸಿದ ಈ ಚಾರುಲತಾಗೆ  ಕ್ರೀಡಾಪಟುಗಳೇ ಸಲಾಂ ಹೇಳಿದ್ದಾರೆ.

Seema.R | news18
Updated:July 3, 2019, 1:10 PM IST
World cup 2019: 87ರ ಇಳಿ ವಯಸ್ಸಿನಲ್ಲಿ ಕ್ರಿಕೆಟ್​ ಪ್ರೀತಿ; ಸಾಮಾಜಿಕ ಜಾಲತಾಣದಲ್ಲಿ ಹೊಸ ಸ್ಟಾರ್ ಆದ ಈ ಅಜ್ಜಿ ಯಾರು ಗೊತ್ತೇ?
ಟೀಂ ಇಂಡಿಯಾಗೆ ಪ್ರೊತ್ಸಾಹ ನೀಡುತ್ತಿದ್ದ ಅಜ್ಜಿ
  • News18
  • Last Updated: July 3, 2019, 1:10 PM IST
  • Share this:
ಐಪಿಎಲ್​ ಇರಲಿ… ಒನ್​ ಡೇ ಇರಲಿ… ಕ್ರಿಕೆಟ್​ ಎಂದರೇ ಅಭಿಮಾನಿಗಳಿಗೆ ರಸದೌತಣ. ತಮ್ಮ ನೆಚ್ಚಿನ ಕ್ರೀಡಾಪಟುಗಳು ಮೈದಾನದಲ್ಲಿ ಆಡುವುದನ್ನು ನೋಡಲು ಅಭಿಮಾನಿಗಳ ದಂಡು ಕಾದಿರುತ್ತದೆ. ಅದರಲ್ಲಿಯೂ ವಿಶ್ವಕಪ್ ಕ್ರಿಕೆಟ್ ಆರಂಭವಾದರೆ, ಅದನ್ನು ಹಬ್ಬದಂತೆ ಸಂಭ್ರಮಿಸುತ್ತಾರೆ ಕ್ರಿಕೆಟ್​ ಪ್ರೇಮಿಗಳು. ಇಂತಹ​​​ ಹಬ್ಬದ ರಸದೌತಣವನ್ನು ಸವಿಯಲು ಬರುವ ಅಭಿಮಾನಿಗಳನ್ನು ನೋಡಿದರೆ ಕ್ರಿಕೆಟಿಗರಿಗೆ ಒಂದು ರೀತಿಯ ಸಂಭ್ರಮ ಹಾಗೂ ಸ್ಫೂರ್ತಿ.

ಹೌದು, ಭಾರತೀಯ ಕ್ರಿಕೆಟ್ ಆಟಗಾರರಿಗೆ ಹುರಿದುಂಬಿಸಲು ಬಂದಿದ್ದ ಕ್ರಿಕೆಟ್​ ಪ್ರೇಮಿಯೊಬ್ಬರು ಸದ್ಯದ ಇಂಟರ್​ನೆಟ್​ ಸೆನ್ಸೇಷನ್​. ನಿನ್ನೆ ನಡೆದ  ಭಾರತ-ಬಾಂಗ್ಲಾದೇಶ ಪಂದ್ಯದ ವೇಳೆ ನಮ್ಮ ದೇಶದ ಕ್ರಿಕೆಟಿಗರನ್ನು ಹುರಿದುಂಬಿಸಿದ ಅಭಿಮಾನಿ ಈಗ ಸೆಲೆಬ್ರಿಟಿ.

ಮಂಗಳವಾರ ನಡೆದ ವಿಶ್ವಕಪ್​ ಸೆಮಿಫೈನಲ್​ ಅರ್ಹತಾ ಪಂದ್ಯದ ವೇಳೆ ‘ಮ್ಯಾನ್ ಆಫ್​ ದಿ ಮ್ಯಾಚ್’​ ಆಗಿರುವುದು 87ರ ವಯೋವೃದ್ಧೆ 'ಚಾರುಲತಾ ಪಟೇಲ್​'.
87ರ ಇಳಿವಯಸ್ಸಿನಲ್ಲಿಯೂ ವೀಲ್​ಚ್ಹೇರ್​ನಲ್ಲಿ ಬಂದು ಭಾರತೀಯ ಕ್ರಿಕೆಟಿಗರಿಗೆ ಈಕೆ ನೀಡಿದ ಸ್ಪೂರ್ತಿಗೆ ಇಡೀ ವಿಶ್ವವೇ ದಂಗಾಗಿದೆ. ಅಭಿಮಾನಕ್ಕೆ… ಪ್ಯಾಷನ್​...ಗೆ ವಯಸ್ಸಿನ ಭೇದವಿಲ್ಲ ಎಂದು ತೋರಿಸಿದ ಈ ಚಾರುಲತಾ ಅವರಿಗೆ  ನಮ್ಮ ಸ್ಟಾರ್​ ಕ್ರಿಕೆಟರ್​ಗಳೇ ಸಲಾಂ ಹೇಳಿದ್ದಾರೆ.

'ಈ ಚಾರುಲತಾ ಅಜ್ಜಿ ಪೂರ್ವ ಆಫ್ರಿಕಾ ಖಂಡದ ತಾಂಜಾನಿಯ ದೇಶದವರು. ಭಾರತದಲ್ಲಿ ಹುಟ್ಟಿ ಬೆಳೆಯದಿದ್ದರೂ, ಈಕೆಯ ಪೋಷಕರು ಮಾತ್ರ ಭಾರತೀಯರು. ಇನ್ನು ಮೊಮ್ಮಕ್ಕಳು ಕೂಡ ಕ್ರಿಕೆಟ್​ ಆಟಗಾರರಾಗಿದ್ದು, ಅವರು ಆಗ್ನೇಯ ಇಂಗ್ಲೇಡ್​ನ ಸುರ್ರೆ ದೇಶಕ್ಕೆ ಆಡುತ್ತಿದ್ದಾರೆ' ಎಂದು ಐಸಿಸಿ ಡಿಜಿಡಲ್​ ಇನ್​ಸೈಡರ್​ಗೆ ಕೊಟ್ಟ ಸಂದರ್ಶನದಲ್ಲಿ ಚಾರುಲತಾ ಹೇಳಿದ್ದಾರೆ.

'ಪೂರ್ವಜರ ನಂಟಿರುವುದರಿಂದಲೇ ಭಾರತದೊಂದಿಗೆ ಬಿಡಿಸಲಾಗದ ಬಾಂಧವ್ಯ ನನಗೆ.  1983ರಲ್ಲಿ ಭಾರತ ವಿಶ್ವಕಪ್​ ಗೆದ್ದಾಗ ನಾನು ಇಂಗ್ಲೆಡ್​ನಲ್ಲಿದ್ದೆ. ಪ್ರತಿ ಬಾರಿ ಭಾರತ ಕ್ರಿಕೆಟ್​ ಆಡುವಾಗ ಟಿವಿಯಲ್ಲಿ ತಪ್ಪದೆ ನೋಡುತ್ತೇನೆ. ಈಗ ನನ್ನ ಜವಾಬ್ದಾರಿಯಿಂದ ಮುಕ್ತಿಯೊಂದಿದ್ದು, ಫ್ರೀ ಆಗಿದ್ದೇನೆ. ಅದಕ್ಕೆ ಭಾರತದ ಪಂದ್ಯ​ ನೋಡಬೇಕೆಂದು ಸ್ಟೇಡಿಯಂಗೆ ಬಂದಿದ್ದೇನೆ. ಈ ಬಾರಿ ವಿಶ್ವಕಪ್​ಅನ್ನು ಭಾರತ ಗೆಲ್ಲಬೇಕೆಂಬುದು ನನ್ನ ಆಸೆ' ಎಂದಿದ್ದಾರೆ 87ರ ಹರೆಯದ ಅಭಿಮಾನಿ.ಈ ಅಜ್ಜಿಯ ಹುಮ್ಮಸ್ಸು ಕಂಡು ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ  ಹಾಗೂ ರೋಹಿತ್​ ಶರ್ಮಾ ಕೂಡ ಫಿದಾ ಆಗಿದ್ದಾರೆ. ಮ್ಯಾಚ್​ ಮುಗಿದ ಬಳಿಕ ನೇರವಾಗಿ ಚಾರುಲತಾರ ಬಳಿ ಬಂದ ಅವರು, ಇಳಿ ವಯಸ್ಸಿನಲ್ಲಿ ಈ ರೀತಿ ಉತ್ಸಾಹದಿಂದ ಪ್ರೋತ್ಸಾಹ ನೀಡಿದ್ದಕ್ಕೆ ಧನ್ಯವಾದ ತಿಳಿಸಿ, ಆಶೀರ್ವಾದ ಪಡೆದಿದ್ದಾರೆ.

ರಾತ್ರೋ ರಾತ್ರಿ ಸ್ಟಾರ್​ ಆದ ಈ ಅಜ್ಜಿಗೆ ನೆಟ್ಟಿಗರಿಂದಲೂ ಅಭಿಮಾನದ ಶ್ಲಾಘನೆ ಸಿಗುತ್ತಿದೆ.

ಇದನ್ನು ಓದಿ: ಟೀಮ್​ ಇಂಡಿಯಾ ಆಟಕ್ಕೆ ಕುಣಿದು ಕುಪ್ಪಳಿಸಿದ ಅಜ್ಜಿ; ವಿಡಿಯೋ ವೈರಲ್

ವಿಶ್ವಕಪ್​ಗಿಂತ ಮುಂಚೆ ನಡೆದ ಐಪಿಎಲ್​ ಮ್ಯಾಚ್​ ವೇಳೆ ಕ್ರಿಕೆಟ್​ ಸೆರೆ ಹಿಡಿಯುವ ಕ್ಯಾಮೆರಾ ಕಣ್ಣು ಗ್ಯಾಲರಿಯಲ್ಲಿ ಕುಳಿತ ಅಭಿಮಾನಿಗಳನ್ನು ಸೆರೆಹಿಡಿದು ಅವರು ಕೂಡ ಸ್ಟಾರ್ ಪಟ್ಟಕ್ಕೇರಿದ್ದಾರೆ. ಅದರಲ್ಲಿ 'ರೆಡ್​ ಡ್ರೆಸ್​ ಗರ್ಲ್'​ ಎಂದೇ ಸಾಮಾಜಿಕ ಜಾಲತಾಣದಲ್ಲಿ ಹೆಸರಾದ ದೀಪಿಕಾ ಕೂಡ ಒಬ್ಬರು.

ಸನ್​ರೈಸರ್ಸ್​ ಹೈದ್ರಾಬಾದ್​ ಮತ್ತು ರಾಯಲ್​ ಚಾಲೆಂಜ್​ ಬೆಂಗಳೂರು ಪಂದ್ಯದ ವೇಳೆ ಹಾಫ್​ ಶೋಲ್ಡರ್​ ಬಟ್ಟೆ ತೊಟ್ಟು ಮಿಂಚಿದ್ದ ಕೆಂಪು ಬಟ್ಟೆ ಹುಡುಗಿ ನೆಟ್ಟಿಗರ ಹಾಟ್​ ಫೇವರೆಟ್​ ಗರ್ಲ್​ ಆಗಿದ್ದರು.

ಆರ್​ಸಿಬಿ ಅಭಿಮಾನಿ


ದೀಪಿಕಾ ಘೋಷ್​ ಎಂಬ ಈ ಬೆಡಗಿಗಾಗಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ತಡಕಾಡಿದ್ದು, ರಾತ್ರೋ ರಾತ್ರಿ ಆಕೆಯ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳ ಸಂಖ್ಯೆ​ 270 ಸಾವಿರ ಗಡಿ ದಾಟಿತ್ತು.

First published: July 3, 2019, 12:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories