ಬೀದಿಯಲ್ಲಿ ಹಸಿದ ಗೋವುಗಳಿಗೆ ಆಹಾರ ಉಣಿಸಿದ ಶಿಖರ್ ಧವನ್; ಹ್ಯಾಟ್ಸ್​ ಆಫ್ ಹೇಳಲೇ ಬೇಕು

ಕೊರೊನಾ ಲಾಕ್​ಡೌನ್​ನಿಂದಾಗಿ ಅನೇಕ ಜನರಿಗೆ, ತಿನ್ನಲು ಆಹಾರವೇ ಸಿಗ್ತಿಲ್ಲ. ಮನುಷ್ಯರಷ್ಟೇ ಅಲ್ಲ, ಮೂಕಪ್ರಾಣಿಗಳು ಸಹ ಆಹಾರ ಸಿಗದೇ ಪರಿತಪಿಸುತ್ತಿವೆ. ಇಂತಹ ಪ್ರಾಣಿಗಳಿಗೆ ಧವನ್​ ಆಹಾರ ನೀಡಿ, ಮಾನವೀಯತೆ ಮೆರೆದಿದ್ದಾರೆ.

news18-kannada
Updated:June 13, 2020, 12:19 PM IST
ಬೀದಿಯಲ್ಲಿ ಹಸಿದ ಗೋವುಗಳಿಗೆ ಆಹಾರ ಉಣಿಸಿದ ಶಿಖರ್ ಧವನ್; ಹ್ಯಾಟ್ಸ್​ ಆಫ್ ಹೇಳಲೇ ಬೇಕು
ಶಿಖರ್ ಧವನ್
  • Share this:
ಟೀ ಇಂಡಿಯಾದ ಆರಂಭಿಕ ಆಟಗಾರ​ ಶಿಖರ್​ ಧವನ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಭಾರೀ ವೈರಲ್ ಆಗುತ್ತದೆ. ಜೊತೆಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತದೆ. ಈ ವೀಡಿಯೊ ನೋಡಿ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ ಆಟಗಾರರು ಕೂಡ ಹ್ಯಾಟ್ಸ್​ ಆಫ್ ಹೇಳಿದ್ದಾರೆ.

ಧವನ್ ತನ್ನ ಮಗ ಜೋರಾವರ್​ ಹಾಗೂ ಪತ್ನಿ ಆಯೇಷಾ ಜೊತೆ ಸೇರಿ ಬಿದಿ ಬದಿಯ ಹಸಿದ ಗೋವುಗಳಿಗೆ ಆಹಾರ ಹಾಕಿದ್ದು, ಆ ವಿಡಿಯೋವನ್ನ ಇನ್​​ಸ್ಟಾಗ್ರಾಂ​ನಲ್ಲಿ ಶೇರ್​ ಮಾಡಿದ್ದಾರೆ. ಕಾರಿನಲ್ಲಿ ತೆರಳುತ್ತಿದ್ದ ಧವನ್‌ ಕೆಲವು ಹಸುಗಳನ್ನು ನೋಡಿದರು. ಕೂಡಲೇ ಕಾರು ನಿಲ್ಲಿಸಿ ಅವುಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ಆಸ್ಟ್ರೇಲಿಯಾದ ಬೀದಿಗಳಿಗೆ ಕ್ರಿಕೆಟ್ ದೇವರು- ಕೊಹ್ಲಿ ಹೆಸರು!; ಯಾಕೆ ಗೊತ್ತಾ?

ಕೊರೊನಾ ಲಾಕ್​ಡೌನ್​ನಿಂದಾಗಿ ಭಾರತದಲ್ಲಿ ಸಾವಿರಾರು ಜನರು, ಕೆಲಸ ಕಳೆದುಕೊಂಡಿದ್ದಾರೆ. ಇನ್ನು ಅನೇಕ ಜನರಿಗೆ, ತಿನ್ನಲು ಆಹಾರವೇ ಸಿಗ್ತಿಲ್ಲ. ಮನುಷ್ಯರಷ್ಟೇ ಅಲ್ಲ, ಮೂಕಪ್ರಾಣಿಗಳು ಸಹ ಆಹಾರ ಸಿಗದೇ ಪರಿತಪಿಸುತ್ತಿವೆ. ಇಂತಹ ಪ್ರಾಣಿಗಳಿಗೆ ಧವನ್​ ಆಹಾರ ನೀಡಿ, ಮಾನವೀಯತೆ ಮೆರೆದಿದ್ದಾರೆ.

 
'ಮಗನಿಗೆ ನಿಜವಾದ ಜೀವನದ ಪಾಠ ಕಲಿಸಿ ಕೊಡುತ್ತಿದ್ದೇನೆ. ನೀವೂ ಕೂಡ ಈ ರೀತಿಯಾಗಿ ಮಾಡಿ' ಎಂದು ಧವನ್ ಅಡಿಬರಹ ನೀಡಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ 'ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹಸಿದ ಪ್ರಾಣಿಗಳಿಗೆ ಆಹಾರ ನೀಡುವುದು ನಿಜಕ್ಕೂ ನಿಮಗೆ ಹೆಮ್ಮೆ ಅನಿಸುತ್ತದೆ' ಎಂದು ಬರೆದುಕೊಂಡಿದ್ದಾರೆ.

IPL 2020: ಟೂರ್ನಿ ನಡೆಯುತ್ತಾ, ಇಲ್ವಾ? ಕೊನೆಗೂ ಮೌನ ಮುರಿದ ಐಪಿಎಲ್ ಚೇರ್ಮನ್..!

ಧವನ್​ರ ಈ ಮಹಾತ್ಕಾರ್ಯಕ್ಕೆ ಟೀಂ​ ಇಂಡಿಯಾ ಆಟಗಾರರಾದ ಹರ್ಭಜನ್​ ಸಿಂಗ್​ ಶಹಬ್ಬಾಶ್​ ಜಟ್ಟಾ ಎಂದು ಕಾಮೆಂಟ್​ ಮಾಡಿದ್ದಾರೆ. ಕುಲ್​ದೀಪ್ ಯಾದವ್​ ಲವ್​ ಹಾಗೂ ಸೂಪರ್ ಸಿಂಬಲ್​ ಹಾಕಿದ್ದಾರೆ.
First published: June 13, 2020, 12:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading