ನಾನು ಸಿಂಗಲ್​ ಅಲ್ಲ! ರಾತ್ರಿ 1 ಗಂಟೆಯ ತನಕ…ಯಜುವೇಂದ್ರ ಚಾಹಲ್​!

Yuzvendra Singh Chahal: ಲಾಕ್​ಡೌನ್​ ಅವಧಿಯಲ್ಲಿ ಟೀಂ ಇಂಡಿಯಾದ ಆಟಗಾರರು ತಮ್ಮ ಮನೆಯವರ ಜೊತೆ ಸಮಯ ಕಳೆಯುತ್ತಿದ್ದಾರೆ. ಅದರಂತೆ ಚಾಹಲ್​ ಕೂಡ ಮನೆಯಲ್ಲಿ ಇದ್ದುಕೊಂಡು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬರುತ್ತಿರುತ್ತಾರೆ.

ಯಜುವೇಂದ್ರ ಚಾಹಲ್

ಯಜುವೇಂದ್ರ ಚಾಹಲ್

 • Share this:
  ಅನೇಕರಿಗೆ ಸೆಲೆಬ್ರಿಟಿಗಳ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುತ್ತದೆ. ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳಿಗೆ ಅಭಿಮಾನಿಗಳು ಅವರ ಖಾಸಗಿ ಜೀವನದ ಬಗ್ಗೆ ಬಿಚ್ಚಿಡುವಂತಹ ಪ್ರಶ್ನೆಗಳನ್ನು ಇಡುತ್ತಾರೆ. ಕೆಲವು ಸೆಲೆಬ್ರಿಟಿಗಳ ತಮ್ಮ ವೈಯ್ಯಕ್ತಿಕ ಜೀವನ ಬಗ್ಗೆ ಅಭಿಮಾನಿಗಳ ಜೊತೆ ಶೇರ್​ ಮಾಡುತ್ತಾರೆ. ಇನ್ನು ಕೆಲವರು ನೋ.. ವೆ! ಎಂದು ಸುಮ್ಮನಾಗಿ ಬಿಡುತ್ತಾರೆ. ಅದರಂತೆ ಟೀಂ ಇಂಡಿಯಾದ ಆಟಗಾರ ಚಾಹಲ್​ಗೆ ಅಭಿಮಾನಿಯೊಬ್ಬಳು ನೀವು ಸಿಂಗಲ್​? ಅನ್ನೋ ಪ್ರಶ್ನೆ ಕೇಳಿದ್ದಾಳೆ. ಈ ಪ್ರಶ್ನೆಗೆ ಚಾಹಲ್​​ ಏನು ಹೇಳಿದ್ದಾರೆ ಗೊತ್ತಾ?

  ಚಹಾಲ್​​​ಗೆ ಇನ್​ಸ್ಟಾಗ್ರಾಂ ಲೈವ್​ ವೇಳೆ ಅಭಿಮಾನಿಯೊಬ್ಬಳು ನೀವು ಇನ್ನೂ ಸಿಂಗಲ್​​? ಅನ್ನೋ ಪ್ರಶ್ನೆ ಮುಂದಿಟ್ಟಿದ್ದಾರೆ. ಅಭಿಮಾನಿಯ ಈ ಪ್ರಶ್ನೆಗೆ ಚಾಹಲ್​ ನಾನು ಸಿಂಗಲ್​ ಅಲ್ಲಾ! ರಾತ್ರಿ ಒಂದು ಗಂಟೆಯವರೆಗೆ ಪಬ್​ಜಿ ಆಡುತ್ತೇನೆ ಎಂದು ಜಾಣತನದಿಂದ ಉತ್ತರ ನೀಡಿದ್ದಾರೆ.

  ಲಾಕ್​ಡೌನ್​ ಅವಧಿಯಲ್ಲಿ ಟೀಂ ಇಂಡಿಯಾದ ಆಟಗಾರರು ತಮ್ಮ ಮನೆಯವರ ಜೊತೆ ಸಮಯ ಕಳೆಯುತ್ತಿದ್ದಾರೆ. ಅದರಂತೆ ಚಾಹಲ್​ ಕೂಡ ಮನೆಯಲ್ಲಿ ಇದ್ದುಕೊಂಡು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬರುತ್ತಿರುತ್ತಾರೆ.

   
  @yuzvendrachahalSome funny dancing moment with my baby bro Kuldeep 🤣👀 🇮🇳@tiktok_india ##foryou ##fyp♬ original sound - yuzvendrachahal  @yuzvendrachahal##duet with @krystledsouza one of my fav dance steps 🕺 ##thankyoukrystle ##fyp ##foryou @tiktok_india♬ original sound - yuzvendrachahal
  ಇನ್​ಸ್ಟಾಗ್ರಾಂ ಚಾಹಲ್​ ಸದಾ ಆ್ಯಕ್ಟೀವ್​ ಆಗಿ ಇರುತ್ತಾರೆ. ಇಷ್ಟು ಮಾತ್ರವಲ್ಲ ಚಾಹಲ್​ ಟಿಕ್​ಟಾಕ್​ ಕೂಡ ಬಳಸುತ್ತಾರೆ. ಈಗಾಗಲೇ ಸಾಕಷ್ಟು ಟಿಕ್​ಟಾಕ್​ ವಿಡಿಯೋಗಳನ್ನು ಮಾಡಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್​​ ಆಗುತ್ತಿರುತ್ತದೆ.

  Video: ಮೊಬೈಲ್​​ನಲ್ಲಿ ಯ್ಯೂಟೂಬ್​ ವಿಡಿಯೋ ಬ್ಯಾಗ್​​ರೌಂಡ್​ ಪ್ಲೇ ಮಾಡುವುದು ಹೇಗೆ? ಇಲ್ಲಿದೆ ಟ್ರಿಕ್ಸ್​​​​​!

   
  First published: