ಕ್ರಿಕೆಟ್ ತಾರೆಯರಾದ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಕಪಿಲ್ ದೇವ್ ಅವರ ಕುರಿತ ಜೀವನ ಆಧಾರಿತ ಸಿನಿಮಾಗಳು ತೆರೆ ಮೇಲೆ ಮೂಡಿ ಬಂದಿದೆ. ಇದೀಗ ಸುರೇಶ್ ರೈನಾ ಕುರಿತಾಗಿ ಬಯೋಪಿಕ್ ಸಿನಿಮಾ ಬಂದರೆ ಅದರಲ್ಲಿ ಯಾವ ನಟ ನಟಿಸಬೇಕೆಂದು ಅವರೇ ಹೇಳಿದ್ದಾರೆ.
ಕೊರೋನಾ ಲಾಕ್ಡೌನ್ನಿಂದಾಗಿ ಕ್ರಿಕೆಟ್ ಪಂದ್ಯಾದಟಗಳು ರದ್ದಾಗಿವೆ, ಹೀಗಾಗಿ ಕ್ರಿಕೆಟಿಗರು ತಮ್ಮ ಮನೆಯಲ್ಲಿ ಇದ್ದುಕೊಂಡು ಫ್ಯಾಮಿಲಿ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಬಿಡುವಿದ್ದಾಗ ಆನ್ಲೈನ್ನಲ್ಲಿ ಅಭಿಮಾನಿಗಳ ಜೊತೆ ಮಾತನಾಡುತ್ತಾ ಹರಟೆ ಹೊಡೆಯುತ್ತಿದ್ದಾರೆ. ಅದರಂತೆ ಇತ್ತೀಚೆಗೆ ಟೀಂ ಇಂಡಿಯಾದ ಆಟಗಾರ ಸುರೇಶ್ ರೈನಾ ಟ್ವಿಟ್ಟರ್ನಲ್ಲಿ ಕ್ವಶ್ಚನ್- ಆನ್ಸರ್ ಸೆಷನ್ ನಡೆಸಿದ್ದರು.
ಈ ವೇಳೆ ಅಭಿಮಾನಿಗಳು ರೈನಾಗೆ ಸಾಕಷ್ಟು ಪ್ರಶ್ನೆಗೆಗಳನ್ನು ಕೇಳಿದ್ದಾರೆ. ಅದರಲ್ಲಿ ಒಬ್ಬ ಅಭಿಮಾನಿ ನಿಮ್ಮ ಕುರಿತಾಗಿ ಸಿನಿಮಾ ಬಂದರೆ ಆ ಸಿನಿಮಾದಲ್ಲಿ ಯಾವ ನಟ ನಟಿಸಬೇಕು ಎಂದು ಕೇಳಿದ್ದಾನೆ. ಈ ಪ್ರಶ್ನೆಗೆ ರೈನಾ ಮಾಲಿವುಡ್ ನಟ ದುಲ್ಕರ್ ಸಲ್ಮಾನ್ ಅಥವಾ ಬಾಲಿವುಡ್ ನಟ ಶಾಹಿದ್ ಕಪೂರ್ ನಟಿಸಬೇಕು ಎಂದು ಹೇಳಿದ್ದಾರೆ.
![]()
ಮಾಲಿವುಡ್ ನಟ ದುಲ್ಕರ್ ಸಲ್ಮಾನ್ - ಬಾಲಿವುಡ್ ನಟ ಶಾಹಿದ್ ಕಪೂರ್
ಹೀಗೆ ನಾನಾ ತರಹದ ಪ್ರಶ್ನೆಗಳನ್ನು ಅಭಿಮಾನಿಗಳು ರೈನಾಗೆ ಕೇಳಿದ್ದಾರೆ. ಮತ್ತೊಬ್ಬ ಅಭಿಮಾನಿ ಲಾಕ್ಡೌನ್ ಸಮಯದಲ್ಲಿ ಏನೆಲ್ಲಾ ಕಲಿತುಕೊಂಡಿದ್ದೀರಿ ಎಂದು ಕೇಳಿದ್ದಾನೆ. ಅದಕ್ಕೆ ರೈನಾ ಅಡುಗೆ ಮಾಡಲು ಕಲಿಯುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ.
ಗೋಕರ್ಣ ಕಡಲ ತೀರದಲ್ಲಿ ಬ್ಯಾಟ್ ಬೀಸುತ್ತಿರುವ ಯುವಕರು; ದೃಶ್ಯಕಂಡು ಮನಸೋತ ಐಸಿಸಿ
Yuvarathnaa: ಆನ್ಲೈನ್ನಲ್ಲಿ ಯುವರತ್ನ ಸಿನಿಮಾದ ಫೋಟೋ ಲೀಕ್!; ನಿರ್ದೇಶಕ ಸಂತೋಷ್ ಆನಂದ್ ರಾಮ್ ಏನಂದ್ರು ಗೊತ್ತಾ? ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ