ಕೋಚ್ ರವಿ ಶಾಸ್ತ್ರಿಗೆ ಬಿಸಿಸಿಐಯಿಂದ ಬಂಪರ್ ಆಫರ್; ಸಂಭಾವನೆಯಲ್ಲಿ ಭಾರೀ ಏರಿಕೆ, ಎಷ್ಟು ಗೊತ್ತಾ?

ಕೇವಲ ಶಾಸ್ತ್ರಿಗೆ ಮಾತ್ರವಲ್ಲದೆ ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಭರತ್ ಅರುಣ್ ಅವರ ಸಂಬಳದಲ್ಲೂ ಏರಿಕೆ ಆಗಿವೆ.

Vinay Bhat | news18-kannada
Updated:September 10, 2019, 7:50 AM IST
ಕೋಚ್ ರವಿ ಶಾಸ್ತ್ರಿಗೆ ಬಿಸಿಸಿಐಯಿಂದ ಬಂಪರ್ ಆಫರ್; ಸಂಭಾವನೆಯಲ್ಲಿ ಭಾರೀ ಏರಿಕೆ, ಎಷ್ಟು ಗೊತ್ತಾ?
ರವಿಶಾಸ್ತ್ರಿ (ಟೀಂ ಇಂಡಿಯಾ ಕೋಚ್)
  • Share this:
ಬೆಂಗಳೂರು(ಸೆ. 10): ಟೀಂ ಇಂಡಿಯಾಕ್ಕೆ ಎರಡನೇ ಅವಧಿಗೆ ಕೋಚ್ ಆಗಿ ಆಯ್ಕೆಯಾಗಿರುವ ರವಿ ಶಾಸ್ತ್ರಿ ತಂಡವನ್ನು ಮತ್ತಷ್ಟು ಬಲಿಷ್ಠವಾಗಿಸುವ ಯೋಜನೆ ಹಾಕಿಕೊಂಡಿದ್ದಾರೆ. ಕೋಚ್ ಹುದ್ದೆಗೆ ಎರಡು ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದರೂ ಅವರನ್ನೆಲ್ಲ ಹಿಂದೆ ಹಾಕಿ ಶಾಸ್ತ್ರಿ ಮತ್ತೆ ಕೋಚ್ ಆಗಿ ಆಯ್ಕೆ ಆಗಿದ್ದರು.

ಆದರೆ, ಕೋಚ್ ಹುದ್ದೆಯಲ್ಲಿ ಶಾಸ್ತ್ರಿ ಮುಂದುವರೆಯಲು ಎಷ್ಟು ಸಂಭಾವನೆ ಪಡೆಯಲಿದ್ದಾರೆ ಎಂಬುದು ಬಹಿರಂಗಗೊಂಡಿರಲಿಲ್ಲ. ಸದ್ಯ ಬಿಸಿಸಿಐ ಮೂಲಗಳಿಂದ ಈ ಮಾಹಿತಿ ಹೊರ ಬಿದ್ದಿದ್ದು, ಎರಡನೇ ಅವಧಿಯಲ್ಲಿ ಶಾಸ್ತ್ರಿ ಸಂಭಾವನೆ ಶೇ.20ರಷ್ಟು ಏರಿಕೆಯಾಗಿದೆ. ಈ ಮೂಲಕ ವರ್ಷಕ್ಕೆ ಶಾಸ್ತ್ರಿ 10 ಕೋಟಿ ಸಂಬಳ ಪಡೆಯಲಿದ್ದಾರೆ.

ವಿಶ್ವಕಪ್​ನಲ್ಲಿ ಕೊಹ್ಲಿ ಪಡೆಗೆ ಕಂಟಕವಾಗಿದ್ದ ಈ ವಿಚಾರ ಟಿ20 ವರ್ಲ್ಡ್​ಕಪ್​ನಲ್ಲೂ ಮರುಕಳಿಸುತ್ತಾ?

ಕೇವಲ ಶಾಸ್ತ್ರಿಗೆ ಮಾತ್ರವಲ್ಲದೆ ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಭರತ್ ಅರುಣ್ ಅವರ ಸಂಬಳದಲ್ಲೂ ಏರಿಕೆ ಆಗಿವೆ. ಅರುಣ್​ 3.5 ಕೋಟಿ ಪಡೆದರೆ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಸಂಬಳ 2.5 ಕೋಟಿಯಿಂದ 3 ಕೋಟಿ ಇರಲಿದೆಯಂತೆ.

ಕೋಚ್‌ ಸ್ಥಾನದಲ್ಲಿದ್ದು ಗರಿಷ್ಠ ಸಂಭಾವನೆ ಪಡೆಯುತ್ತಿರುವ ಕೀರ್ತಿ ಇತ್ತೀಚೆಗಷ್ಟೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ಆಗಿ ಆಯ್ಕೆ ಆಗಿರುವ ಮಿಸ್ಬಾ ಉಲ್‌ ಹಕ್‌ ಮುಡಿಗೇರಿದೆ. ಇವರು ಪಾಕಿಸ್ತಾನ ಕ್ರಿಕೆಟ್‌ ಸಂಸ್ಥೆಯಿಂದ ಬರೋಬ್ಬರಿ 20 ಕೋಟಿ ರೂ. ಸಂಭಾವನೆ ವರ್ಷಕ್ಕೆ ಪಡೆಯುತ್ತಿದ್ದಾರೆ.

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ