• Home
 • »
 • News
 • »
 • sports
 • »
 • ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಹೇಳಿಕೆ; ಅಫ್ರಿದಿಗೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ಕೊಟ್ಟ ಟೀಂ ಇಂಡಿಯಾ ಆಟಗಾರರು

ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಹೇಳಿಕೆ; ಅಫ್ರಿದಿಗೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ಕೊಟ್ಟ ಟೀಂ ಇಂಡಿಯಾ ಆಟಗಾರರು

ಈ ಭರ್ಜರಿ ಗೆಲುವಿನ ಬಗ್ಗೆ ಶಾಹಿದ್ ಅಫ್ರಿದಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಅಂದು ಅಶ್ವಿನ್ ಎಸೆತವನ್ನು ಹೇಗೆ ಎದುರಿಸಿದೆ ಎಂಬ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ಈ ಭರ್ಜರಿ ಗೆಲುವಿನ ಬಗ್ಗೆ ಶಾಹಿದ್ ಅಫ್ರಿದಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಅಂದು ಅಶ್ವಿನ್ ಎಸೆತವನ್ನು ಹೇಗೆ ಎದುರಿಸಿದೆ ಎಂಬ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ಆತ ನನ್ನ ಸ್ನೇಹಿತ ಎಂದು ನಾನು ಭಾವಿಸಿದ್ದಕ್ಕಾಗಿ ನನಗೆ ಬೇಸರವಾಗುತ್ತದೆ. ನನ್ನ ಸ್ನೇಹಿತ ಎಂದು ಹೇಳಿಕೊಳ್ಳುವಂತಹ ಯೋಗ್ಯ ಮನುಷ್ಯನಲ್ಲ. ಇನ್ನು ಮುಂದೆ ಆತನೊಂದಿಗಿನ ಸ್ನೇಹವನ್ನು ಕೊನೆಗೊಳಿಸುತ್ತೇನೆ ಎಂದು ಹರ್ಭಜನ್​ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 • Share this:

  ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್​​ ಅಫ್ರಿದಿ ವಿರುದ್ಧ ಟೀಂ ಇಂಡಿಯಾದ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವರಾಜ್​ ಸಿಂಗ್​, ಹರ್ಭಜನ್​ ಸಿಂಗ್ ಮತ್ತು ಶಿಖರ್​ ಧವನ್​ ಅವರು ಆಫ್ರಿಧಿ ಹೇಳಿಕೆಗೆ ಖಡಕ್ ಉತ್ತರ ನೀಡಿದ್ದಾರೆ.


  ಇತ್ತೀಚೆಗೆ ಶಾಹಿದ್​​ ಅಫ್ರಿದಿ ಪಾಕಿಸ್ತಾನಕ್ಕೆ ಭೇಟಿ ನೀಡಿ​ದ್ದರು. ಆ ವೇಳೆ ಅವರು ಪಿಎಸ್​​ಎಲ್​​ ಲೀಗ್​ನಲ್ಲಿ ಕಾಶ್ಮೀರಿ ತಂಡದೊಂದಿಗೆ ಆಡುತ್ತೇನೆ ಎಂದು ಹೇಳಿದ್ದರು. ನಂತರ ಕಾಶ್ಮೀರದ ಬಗ್ಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ್ದರು. ಮೋದಿ ಭಾರತದಲ್ಲಿ ಧಾರ್ಮಿಕ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.


  ಕೊರೋನಾ ದೇಣಿಗೆಯನ್ನು ನೀಡುವ ನಿಟ್ಟಿನಲ್ಲಿ ಕಳೆದ ತಿಂಗಳು ಯುವರಾಜ್​ ಸಿಂಗ್ ಮತ್ತು ಹರ್ಭಜನ್​ ಸಿಂಗ್​​​ ಅವರು ಶಾಹಿದ್​​​​ ಅಫ್ರಿದಿ ಅವರ ಫೌಂಡೇಶನ್​ಗೆ ದೇಣಿಗೆ ನೀಡಿ ಎಂದು ಮನವಿ ಮಾಡಿದ್ದರು. ಈ ವಿಚಾರ ಭಾರೀ ಟೀಕೆಗೆ ಒಳಗಾಗಿತ್ತು.


  ಆದರೀಗ ಭಾರತದ ಬಗ್ಗೆ ಮತ್ತು ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಅಫ್ರಿದಿ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ. ಶಾಹಿದ್​​ ಅಫ್ರಿದಿ ಮಾನವಿಯತೆ ಮೇರೆಗೆ ನಾನು ಮತ್ತು ಯುವರಾಜ್​ ಸಿಂಗ್​​ ವಿಡಿಯೋ ಮಾಡಿ ಅಫ್ರಿದಿ ಫೌಂಡೇಷನ್​ಗೆ ನೆರವಾಗಲು ಕೋರಿಕೊಂಡಿದ್ದೆವು. ಏಕೆಂದರೆ ವೈರಸ್​​ ಯಾವುದೇ ಧರ್ಮ ಅಥವಾ ಗಡಿ ನೋಡಿ ಬರುವುದಿಲ್ಲ ಎಂಬುದು ನಮ್ಮ ಭಾವನೆಯಾಗಿತ್ತು. ಆದರೀಗ ಅಫ್ರಿದಿ ಭಾರತದ ವಿರುದ್ಧ ಹೇಳಿಕೆ ನೀಡಿರುವುದರಿಂದ ನಮಗೂ ಇನ್ನು ಯಾವುದೇ ರೀತಿಯ ಸ್ನೇಹ ವಿರುವುದಿಲ್ಲ ಎಂದು ಹರ್ಭಜನ್​ ಸಿಂಗ್​​ ಹೇಳಿದ್ದಾರೆ.  ಆತ ನನ್ನ ಸ್ನೇಹಿತ ಎಂದು ನಾನು ಭಾವಿಸಿದ್ದಕ್ಕಾಗಿ ನನಗೆ ಬೇಸರವಾಗುತ್ತದೆ. ನನ್ನ ಸ್ನೇಹಿತ ಎಂದು ಹೇಳಿಕೊಳ್ಳುವಂತಹ ಯೋಗ್ಯ ಮನುಷ್ಯನಲ್ಲ. ಇನ್ನು ಮುಂದೆ ಆತನೊಂದಿಗಿನ ಸ್ನೇಹವನ್ನು ಕೊನೆಗೊಳಿಸುತ್ತೇನೆ ಎಂದು ಹರ್ಭಜನ್​ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


  ನಮ್ಮ ಪ್ರಧಾನಮಂತ್ರಿ ವಿರುದ್ಧ ಶಾಹಿದ್​​ ಅಫ್ರಿದಿ ಹೇಳಿಕೆ ನೀಡಿರುವುದು ನನಗೆ ಬೇಸರ ತಂದಿದೆ. ನಾನೊಬ್ಬ ಜವಬ್ದಾರಿ ನಾಗರಿಕನಾಗಿ ಮತ್ತು ದೇಶಕ್ಕಾಗಿ ಆಡಿರುವ ನಾವು ಇಂತಹ ಹೇಳಿಕೆಯನ್ನು ಸ್ವೀಕರಿಸುವುದಿಲ್ಲ. ನಾವು ಮಾನವೀಯತೆ ದೃಷ್ಠಿಯಿಂದ ನಿಮಗಾಗಿ ಮನವಿ ಮಾಡಿದ್ದೆವು. ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದಿದ್ದಾರೆ ಯುವರಾಜ್​ ಸಿಂಗ್​​.  ಇನ್ನು ಶಿಕಾರ್​ ಧವನ್ ಕೂಡ ಅಫ್ರಿದಿಗೆ ಮಾತಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಪ್ರಪಂಚವೇ ಕೊರೋನಾ ವಿರುದ್ಧ ಹೋರಾಡುತ್ತಿದ್ದರೆ, ನೀವು ಕಾಶ್ಮೀರ ಬಗ್ಗೆ ಆಲೋಚನೆ ಮಾಡುತ್ತಿದ್ದೀರಾ. ಕಾಶ್ಮೀರ ನಮ್ಮದಾಗಿತ್ತು, ನಮ್ಮದಾಗಿದೆ, ಯಾವಾಗಲೂ ನಮ್ಮದಾಗಿರುತ್ತದೆ. ನೀವು 22 ಕೋಟಿ ಎಂದು ತೆಗೆದುಕೊಳ್ಳಿ. ಅದು ನಮ್ಮ 15 ಲಕ್ಷ ಜನರಿಗೆ ಸಮವಾಗಿರುತ್ತದೆ. ಉಳಿದಿರುವುದನ್ನು ನೀವೇ ಲೆಕ್ಕ ಮಾಡಿಕೊಳ್ಳಿ ಎಂದು ಟ್ವೀಟ್​ ಮಾಡಿದ್ದಾರೆ.

  ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್​ ಗಂಭೀರ್​ ಅವರು ‘ಪಾಕಿಸ್ತಾನದ ಬಳಿ 7ಲಕ್ಷ ಸೇನೆ, 20 ಕೋಟಿ ಜನರ ಬೆಂಬಲವಿದೆ ಎಂದು ಶಾಹಿದ್​​ ಅಫ್ರಿದಿ 16 ವರ್ಷದಿಂದ ಹೇಳುತ್ತಲೇ ಬಂದಿದ್ದಾರೆ. ಹಾಗಿದ್ದರೂ ಕಳೆದ 70 ವರ್ಷಗಳಿಂದ ಕಾಶ್ಮೀರಕ್ಕಾಗಿ ಭಿಕ್ಷೆ ಬೇಡುತ್ತಾ ಬಂದಿದ್ದಾರೆ. ಅಫ್ರಿದಿ, ಇಮ್ರಾನ್​ ಖಾನ್​, ಬಜ್ವಾನಂತಹ ಜೋಕರ್​ಗಳು ಭಾರತ ಮತ್ತು ಮೋದಿ ವಿರುಧ್ಧ ಮಾತನಾಡಿ ಪಾಕಿಸ್ತಾನಿದ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಆದರೆ ಜಡ್ಜ್​​ಮ್ಮೆಂಟ್​ ಡೇ ವರೆಗೆ ಕಾಶ್ಮೀರ ಸಿಗುವುದಿಲ್ಲ! ಬಾಂಗ್ಲಾದೇಶ ನೆನಪಿದೆಯೇ?‘ ಎಂದು ಗಂಭೀರ್​​ ಟ್ವೀಟ್​ ಮಾಡಿದ್ದಾರೆ.

  Published by:Harshith AS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು