ಪಬ್​​ಜಿ ಬ್ಯಾನ್ ಆದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಆಡುತ್ತಿರುವ ಆನ್​ಲೈನ್​ ಗೇಮ್ ಯಾವುದು ಗೊತ್ತಾ?

Hardik Pandya: ಪಬ್​ಜಿ ಬ್ಯಾನ್​ ಆದ ನಂತರ ಭಾರತ FAU-G ಹೆಸರಿನ ಗೇಮ್​ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಅದರ ಜೊತೆಗೆ ಹಲವಾರು ಕಂಪನಿಗಳು ಹೊಸ ಆ್ಯಕ್ಷನ್​ ಗೇಮ್​ಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇದೀಗ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ ಪಬ್​ಜಿ ನಿಷೇಧಗೊಂಡ ನಂತರ ಭಾರತ ಮೂಲಕ ಹೊಸ ಗೇಮ್​ವೊಂದನ್ನು ಆಡುತ್ತಿದ್ದಾರೆ.

news18-kannada
Updated:September 13, 2020, 2:21 PM IST
ಪಬ್​​ಜಿ ಬ್ಯಾನ್ ಆದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಆಡುತ್ತಿರುವ ಆನ್​ಲೈನ್​ ಗೇಮ್ ಯಾವುದು ಗೊತ್ತಾ?
ಮಾಸ್ಕ್​ಗನ್
  • Share this:
ಇತ್ತೀಚೆಗೆ ಪಬ್​ಜಿ ಗೇಮ್ ಅನ್ನು​ ಭಾರತದಲ್ಲಿ ಬ್ಯಾನ್​​ ಮಾಡಲಾಗಿದೆ. ದಕ್ಷಿಣ ಕೊರಿಯಾದ ಈ ಗೇಮ್​ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿತ್ತಲ್ಲದೆ,  ಅಧಿಕ ಬಳಕೆದಾರರನ್ನು ಹೊಂದಿತ್ತು. ಆದರೆ ಪಬ್​ಜಿ ಗೇಮಿಂಗ್​  ಸಂಸ್ಥೆ ಚೀನಾದೊಂದಿಗೆ ಷೇರು ಹೊಂದಿತ್ತು ಎಂಬ ಕಾರಣಕ್ಕೆ ಬ್ಯಾನ್​ ಮಾಡಲಾಯಿತು. ಭಾರತದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು. ವಯಸ್ಕರು ಕೂಡ ಪಬ್​ ಗೇಮ್​ ಪ್ರಿಯರಾಗಿದ್ದರು. ಅಷ್ಟೇ ಏಕೆ ಟೀಂ ಇಂಡಿಯಾದ ಆಟಗಾರರಾದ ಮಹೇಂದ್ರ ಸಿಂಗ್​ ಧೋನಿ, ಮಹಮ್ಮದ್​ ಶಮಿ, ಹಾರ್ದಿಕ್​ ಪಾಂಡ್ಯ, ಯಜುವೇಂದ್ರ ಚಾಹಲ್​ ಕೂಡ ಬಿಡುವಿನ ವೇಳೆ ಪಬ್​ಜಿ ಆಡುತ್ತಿದ್ದರು.

ಪಬ್​ಜಿ ಬ್ಯಾನ್​ ಆದ ನಂತರ ಭಾರತ FAU-G ಹೆಸರಿನ ಗೇಮ್​ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಅದರ ಜೊತೆಗೆ ಹಲವಾರು ಕಂಪನಿಗಳು ಹೊಸ ಆ್ಯಕ್ಷನ್​ ಗೇಮ್​ಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇದೀಗ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ ಪಬ್​ಜಿ ನಿಷೇಧಗೊಂಡ ನಂತರ ಭಾರತ ಮೂಲಕ ಹೊಸ ಗೇಮ್​ವೊಂದನ್ನು ಆಡುತ್ತಿದ್ದಾರೆ.

ಮಾಸ್ಕ್​​​ಗನ್​​- ಶೂಟಿಂಗ್​ ಗೇಮ್​ ಅನ್ನು ಹಾರ್ದಿಕ್ ಪಾಂಡ್ಯ ಆಡುತ್ತಿದ್ದಾರೆ. ಅಷ್ಟು ಮಾತ್ರವಲ್ಲ. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ  ಹಂಚಿಕೊಂಡಿದ್ದಾರೆ. ಜೊತೆಗೆ ಗೂಗಲ್​ ಪ್ಲೇ ಸ್ಟೋರ್​ನಿಂದ ಮಾಸ್ಕ್​​ಗನ್​ ಗೇಮ್​ ಡೌನ್​ಲೋಡ್​​​ ಮಾಡಿ ಆಟವಾಡಿ ಎಂದು ಬರೆದಿದ್ದಾರೆ.






ಮಾಸ್ಕ್​ಗನ್​:  ಮಲ್ಟಿಪ್ಲೇಯರ್​ ಫಸ್ಟ್​ ಪರ್ಸನ್​ ಶೂಟರ್​ ಗೇಮ್​​ ಇದಾಗಿದೆ.  ಸದ್ಯ ಈ ಗೇಮ್​ ಭಾರತದಲ್ಲಿ ಜನಪ್ರಿಯತೆ ಕಾಣುತ್ತಿದ್ದು, ಗೂಗಲ್​ ಪ್ಲೇ ಸ್ಟೋರ್​​ನಲ್ಲಿ 4.2 ರೇಟಿಂಗ್​​ ಪಡೆದಿದೆ. ಆ್ಯಪ್​ ಸ್ಟೋರ್​ನಲ್ಲಿ 4.6 ರೇಟಿಂಗ್​ ಪಡೆದಿದೆ.
Published by: Harshith AS
First published: September 13, 2020, 2:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading