Ind VS Eng Test| ಸುಸ್ಥಿತಿಯಲ್ಲಿ ಭಾರತ, ಅನಿಲ್ ಕುಂಬ್ಳೆ ಬಳಿಕ ಓವಲ್ ಅಂಗಳದಲ್ಲಿ ಹೊಸ ಇತಿಹಾಸ!
ಆಗಲಿ ಈ ಪಂದ್ಯದಲ್ಲಿ ಭಾರತ ಉತ್ತಮವಾಗಿ ಆಡುತ್ತಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಆಂಗ್ಲರಿಗೆ ಕಠಿಣ ಗುರಿ ನೀಡುವ ವಿಶ್ವಾಸವಿದೆ. 300 ಕ್ಕಿಂತ ಹೆಚ್ಚಿನ ರನ್ ಲೀಡ್ ಪಡೆದರೆ ಭಾರತಕ್ಕೆ ಗೆಲ್ಲುವ ಸಾಧ್ಯತೆ ಅಧಿಕವಾಗಿದೆ ಎನ್ನಲಾಗುತ್ತಿದೆ.
ಓವಲ್ (ಸೆಪ್ಟೆಂಬರ್ 05); ಇಂಗ್ಲೆಂಡ್ ಎದುರಿನ 4ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ಹಿನ್ನಡೆ ಅನುಭವಿಸಿದ್ದ ಭಾರತ ಇದೀಗ ಸುಸ್ಥಿತಿಯಲ್ಲಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ಶತಕ (127), ಕೆ.ಎಲ್. ರಾಹುಲ್ 46, ಚೇತೇಶ್ವರ ಪೂಜಾರ 61 ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಉಪಯುಕ್ತ 44 ರನ್ ನೆರವಿನಿಂದ ಎರಡನೇ ಇನ್ನಿಂಗ್ಸ್ನಲ್ಲಿ ಊಟದ ವಿರಾಮದ ವೇಳೆಗೆ 6 ವಿಕೆಟ್ ಕಳೆದುಕೊಂಡು 329 ರನ್ ಬಾರಿಸಿದೆ. ವಿಕೆಟ್ ಕೀಪರ್ ರಿಷಬ್ ಪಂತ್ (16) ಮತ್ತು ಆಲ್ರೌಂಡರ್ ಶರ್ದೂಲ್ ಠಾಕೂರ್ (11) ಉತ್ತಮವಾಗಿಯೇ ಆಟವಾಡುತ್ತಿದ್ದಾರೆ. ಈ ಮೂಲಕ ಸೋಲಿನ ಭೀತಿಯಲ್ಲಿದ್ದ ಭಾರತ ಇದೀಗ 230ರನ್ಗಳ ಮುನ್ನಡೆ ಸಾಧಿಸಿದ್ದು ಆಂಗ್ಲರಿಗೆ ಕಠಿಣ ಪೈಪೋಟಿ ಒಡ್ಡಿದೆ. ಅಲ್ಲದೆ, ವೇಗಿಗಳ ಸ್ನೇಹಿ ಓವಲ್ ಕ್ರೀಡಾಂಗಣದಲ್ಲಿ ವಿಶೇಷವಾದ ದಾಖಲೆಯನ್ನೂ ನಿರ್ಮಿಸಿ ಗಮನ ಸೆಳೆದಿದೆ.
ಓವಲ್ನಲ್ಲಿ ಟೀಂ ಇಂಡಿಯಾ ವಿಶೇಷ ದಾಖಲೆ ಮತ್ತು ಕುಂಬ್ಳೆ;
ಟೀಂ ಇಂಡಿಯಾ ಹಲವಾರು ಭಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಹತ್ತಾರು ಟೆಸ್ಟ್ ಪಂದ್ಯಗಳನ್ನು ಆಡಿದೆ. ಆದರೆ, ಗೆಲುವಿಗಿಂತ ಕಹಿಯೇ ಅಧಿಕ. ಅದರಲ್ಲೂ ಕಳೆದ 50 ವರ್ಷಗಳಲ್ಲಿ ಓವಲ್ ಅಂಗಳದಲ್ಲಿ ಎರಡನೇ ಇನ್ನಿಂಗ್ಸ್ ಕನಿಷ್ಟ 100 ಓವರ್ ಸಹ ಬ್ಯಾಟಿಂಗ್ ಮಾಡಲು ಸಾಧ್ಯವಾಗದೆ, ಇಂಗ್ಲೆಂಡ್ ವೇಗದ ಬೌಲರ್ಗಳಿಗೆ ಶರಣಾದ ಕೆಟ್ಟ ರೆಕಾರ್ಡ್ ಟೀಂ ಇಂಡಿಯಾ ಮೇಲಿದೆ. ಆದರೆ, ಆ ರೆಕಾರ್ಡ್ ಅನ್ನು ಭಾರತದ ಬ್ಯಾಟ್ಸ್ಮನ್ಗಳು ಇಂದು ಮುರಿದಿರುವುದು ವಿಶೇಷ.
1971ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕೊನೆಯ ಭಾರಿಗೆ ಇಂಗ್ಲೆಂಡ್ನ ವೇಗಿಗಳ ಸ್ನೇಹಿ ಓವಲ್ ಅಂಗಳದಲ್ಲಿ ಕೊನೆಯ ಬಾರಿಗೆ ಎರಡನೇ ಇನ್ನಿಂಗ್ಸ್ನಲ್ಲಿ 100 ಓವರ್ ಬ್ಯಾಟಿಂಗ್ ಮಾಡಿತ್ತು. ಆನಂತರ ಈ ಅಂಗಳದಲ್ಲಿ ಭಾರತ 60 ಓವರ್ಗಳಿಗಿಂತ ಹೆಚ್ಚು ಬ್ಯಾಟಿಂಗ್ ಮಾಡಿದ ಇತಿಹಾಸ ಇಲ್ಲ.
ಇನ್ನೂ 2007ರಲ್ಲಿ ಇದೇ ಓವಲ್ ಅಂಗಳದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 664 ರನ್ ಗಳಿಸಿತ್ತು. ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ 58 ಓವರ್ಗಳಿಗೆ ಕೇವಲ 180 ರನ್ ಗಳಿಸಿ 6 ವಿಕೆಟ್ ಕಳೆದುಕೊಳ್ಳುವ ಮೂಲಕ ಆಟವನ್ನು ಡಿಕ್ಲೇರ್ ಮಾಡಿಕೊಂಡಿತ್ತು. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಕನ್ನಡಿದ ಅನಿಲ್ ಕುಂಬ್ಳೆ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು (110) ಪೂರೈಸಿದ್ದು ಇಂದು ಇತಿಹಾಸ. ಈ ಪಂದ್ಯ ಡ್ರಾನಲ್ಲಿ ಮುಕ್ತಾಯವಾಗಿತ್ತು.
ಆದರೆ, ದಶಕಗಳ ನಂತರ ಇದೇ ಅಂಗಳದಲ್ಲಿ ರೋಹಿತ್ ಶರ್ಮಾ ಮತ್ತೆ ಶತಕ ಬಾರಿಸಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಭಾರತ ಓವಲ್ನಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ 100 ಓವರ್ಗಳನ್ನು ದಾಟಿ ಆಡುತ್ತಿರುವುದು, ಈ ಮೂಲಕ ತನ್ನ ಹಳೆಯ ಕೆಟ್ಟ ದಾಖಲೆಯನ್ನು ಮುರಿದಿರುವುದು ವಿಶೇಷ.
ಏನೇ ಆಗಲಿ ಈ ಪಂದ್ಯದಲ್ಲಿ ಭಾರತ ಉತ್ತಮವಾಗಿ ಆಡುತ್ತಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಆಂಗ್ಲರಿಗೆ ಕಠಿಣ ಗುರಿ ನೀಡುವ ವಿಶ್ವಾಸವಿದೆ. 300 ಕ್ಕಿಂತ ಹೆಚ್ಚಿನ ರನ್ ಲೀಡ್ ಪಡೆದರೆ ಭಾರತಕ್ಕೆ ಗೆಲ್ಲುವ ಸಾಧ್ಯತೆ ಅಧಿಕವಾಗಿದೆ ಎನ್ನಲಾಗುತ್ತಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆ ಆದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿ ಯುತವಾಗಿ ನಡೆದುಕೊಳ್ಳ ಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ