ಕಿಂಗ್ ಕೊಹ್ಲಿಗೂ ಬಂತು ಕಂಟಕ; ವಿರಾಟ್ ಸ್ಥಾನದ ಮೇಲೆ ಮತ್ತೊಬ್ಬ ಭಾರತೀಯನ ಕಣ್ಣು!

Virat Kohli: ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ 50 ಪ್ಲಸ್​ ರನ್ ಬಾರಿಸಿರುವ ರೋಹಿತ್​ ಶರ್ಮಾ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಭಾರೀ ಸ್ಪರ್ಧೆ ಒಡ್ಡಿದ್ದಾರೆ. ಇದಕ್ಕೆ ಕಾರಣ ಆ ನಂಬರ್ 1 ಪ್ಲೇಸ್

Vinay Bhat | news18
Updated:June 17, 2019, 10:20 PM IST
ಕಿಂಗ್ ಕೊಹ್ಲಿಗೂ ಬಂತು ಕಂಟಕ; ವಿರಾಟ್ ಸ್ಥಾನದ ಮೇಲೆ ಮತ್ತೊಬ್ಬ ಭಾರತೀಯನ ಕಣ್ಣು!
ವಿರಾಟ್ ಕೊಹಲಿ (ಟೀಂ ಇಂಡಿಯಾ ನಾಯಕ)
Vinay Bhat | news18
Updated: June 17, 2019, 10:20 PM IST
ಬೆಂಗಳೂರು (ಜೂ. 17): ವಿಶ್ವ ಕ್ರಿಕೆಟ್​ನಲ್ಲಿ ಸದ್ಯ ಕ್ಲಾಸ್​​ ಹಾಗೂ ಮಾಸ್​​​ ಎರಡೂ ಇರುವ ಆಟಗಾರರು​​​ ಇರುವುದು ಬೆರಳಣಿಕೆಯಷ್ಟು. ಹೀಗಿರುವಾಗ ಏಕದಿನ ಕ್ರಿಕೆಟ್​​ನಲ್ಲಿ ಮಿಂಚುಹರಿಸುತ್ತಿರುವ ಇಬ್ಬರು ಆಟಗಾರರು, ಟೀಂ ಇಂಡಿಯಾದಲ್ಲೇ ಇರುವುದು ಬಲು ವಿಶೇಷ. ಅವರೇ ಟೀಂ ಇಂಡಿಯಾ ನಾಯಕ​ ವಿರಾಟ್​ ಕೊಹ್ಲಿ ಹಾಗೂ ಉಪ- ನಾಯಕ​ ರೋಹಿತ್​ ಶರ್ಮಾ.

ವಿಶ್ವಕಪ್​ನಲ್ಲಿ 10 ತಂಡಗಳ ನಡುವೆ ಕಠಿಣ ಪೈಪೋಟಿ ನಡೆಯುತ್ತಿದೆ. ಟೀಂ ಇಂಡಿಯಾ ಎದುರಾಳಿ ವಿರುದ್ಧ ಭರ್ಜರಿಯಾಗೇ ಆಟವಾಡುತ್ತಿದೆ. ಅದರ ಜೊತೆಗೆ ಟೀಂ ಇಂಡಿಯಾ ಒಳಗೂ ಭರ್ಜರಿಯಾಗೇ ಫೈಟ್ ನಡೆಯುತ್ತಿದೆ. ಅದೂ ಯಾವುದೇ ವೈಯಕ್ತಿಕ ವಿಚಾರಕ್ಕಲ್ಲ, ಬದಲಾಗಿ ಅತ್ಯುತ್ತಮ ಪ್ರದರ್ಶನ ನೀಡುವುದರಲ್ಲಿ.

ವಿಶ್ವಕಪ್​ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಸಿತು. ಮೊದಲ ಪಂದ್ಯದಲ್ಲೇ ಓಪನರ್ ರೋಹಿತ್ ಶರ್ಮಾ ಭರ್ಜರಿ ಸೆಂಚುರಿ ಸಿಡಿಸಿ ತಂಡ 300ರ ಗಡಿ ದಾಟುವಂತೆ ನೋಡಿಕೊಂಡರು.

ಇನ್ನು 2ನೇ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಉತ್ತಮವಾಗೇ ಬ್ಯಾಟ್​ ಬೀಸಿದರು. ಆ ಪಂದ್ಯದಲ್ಲಿ ಶಿಖರ್ ಧವನ್ ಸೆಂಚುರಿ ಸಿಡಿಸಿದರೆ, ರೋಹಿತ್ 57 ರನ್​ಗಳಿಸಿ ಔಟಾದರು. ಆದರೆ ರೋಹಿತ್-ಧವನ್ ಜೊತೆಯಾಟದಿಂದಲೇ ಭಾರತ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.

'ವಿಶ್ವಕಪ್​ನಲ್ಲಿ ಭಾರತ ತಂಡ ಪಾಕ್ ವಿರುದ್ಧ ಆಡಬಾರದು' ಎಂದವರೆಲ್ಲಾ ನಿನ್ನೆಯ ಪಂದ್ಯದಲ್ಲಿ ಹಾಜರು

ಭಾರತ ನಂತರ ಆಡಿದ್ದು ಪಾಕಿಸ್ತಾನ ವಿರುದ್ಧ. ನ್ಯೂಜಿಲೆಂಡ್ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿದ್ದರಿಂದ ಪಾಕ್​ ವಿರುದ್ಧ ಭಾರತ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿತು. ಇದಕ್ಕೆ ಮುಖ್ಯ ಕಾರಣ ಇದೇ ಹಿಟ್​ಮ್ಯಾನ್​. ಸಖತ್ ಸೆಂಚುರಿ ಸಿಡಿಸಿದ ರೋಹಿತ್​, ಏಕದಿನ ಕ್ರಿಕೆಟ್​ನಲ್ಲಿ 24ನೇ ಶತಕ ಸಿಡಿಸಿದರು. ಅಲ್ಲದೆ ಈ ಬಾರಿಯ ವಿಶ್ವಕಪ್​ನಲ್ಲಿ 2ನೇ ಶತಕ ದಾಖಲಿಸಿದರು. ಈ ಮೂಲಕ ಭಾರತ ಪರ ಲೀಡಿಂಗ್​ ರನ್​ ಸ್ಕೋರರ್ ಆಗಿದ್ದಾರೆ ಡಬಲ್ ಸೆಂಚುರಿ ಸ್ಟಾರ್​.
Loading...

ಸದ್ಯ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ 50 ಪ್ಲಸ್​ ರನ್ ಬಾರಿಸಿರುವ ರೋಹಿತ್​ ಶರ್ಮಾ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಭಾರೀ ಸ್ಪರ್ಧೆ ಒಡ್ಡಿದ್ದಾರೆ. ಇದಕ್ಕೆ ಕಾರಣ ಆ ನಂಬರ್ 1 ಪ್ಲೇಸ್​.

ಏಕದಿನ ಕ್ರಿಕೆಟ್​​ನಲ್ಲಿ ಸದ್ಯ ಆಳುತ್ತಿರುವ ಇಬ್ಬರು ಪ್ಲೇಯರ್​ಗಳೆಂದರೆ ಅದು ವಿರಾಟ್ ಕೊಹ್ಲಿ ಹಾಗೂ ರೋಹಿತ್​ ಶರ್ಮಾ. ಏಕದಿನ ರ್ಯಾಂಕಿಂಗ್​​​ನಲ್ಲಿ ನಂಬರ್​ 1 ಹಾಗೂ ನಂಬರ್ 2 ಬ್ಯಾಟ್ಸ್​​ಮನ್​ಗಳು ಈ ಇಬ್ಬರು ಆಟಗಾರರು. ಆದರೆ ಸದ್ಯ ಕೊಹ್ಲಿಗಿಂತಲೂ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ ನಂಬರ್ 1 ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಏಕದಿನ ಕ್ರಿಕೆಟ್​​ನಲ್ಲಿ ಸದ್ಯ 890 ರೇಟಿಂಗ್ ಹೊಂದಿರುವ ವಿರಾಟ್​ ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ. ನಂತರದಲ್ಲೇ ರೋಹಿತ್​ ಶರ್ಮಾ ಇದ್ದು, 839 ರೇಟಿಂಗ್​​ನೊಂದಿಗೆ  2 ಸ್ಥಾನ ಪಡೆದಿದ್ದಾರೆ.

ವಿಶ್ವಕಪ್​ ಟೂರ್ನಿಯಲ್ಲಿ ಬಳಸುವ ಬೇಲ್ಸ್​​ ಬೆಲೆಯೆಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

ಹೀಗೆ ಟಾಪ್​ 2 ಪ್ಲೇಯರ್​​ಗಳು ನಮ್ಮ ಟೀಂ ಇಂಡಿಯಾದಲ್ಲೇ ಇರುವುದು ವಿಶೇಷ. ಆದರೀಗ ವಿಶ್ವಕಪ್​ನಲ್ಲಿ ಸತತ ಸೆಂಚುರಿ ಸಿಡಿಸುತ್ತಿರುವ ಹಿಟ್​ಮ್ಯಾನ್​ ಸದ್ಯದಲ್ಲೇ ವಿರಾಟ್​ ಕೊಹ್ಲಿ ಸೆಡ್ಡೊಡೆಯೋಕೆ ಸಜ್ಜಾಗಿದ್ದಾರೆ. ವಿಶ್ವಕಪ್​​​ನಲ್ಲಿ ಮತ್ತಷ್ಟು ಭರ್ಜರಿ ಪ್ರದರ್ಶನ ನೀಡಿದರೆ, ರೋಹಿತ್ ಕ್ಯಾಪ್ಟನ್ ಕೊಹ್ಲಿಯನ್ನ ಹಿಂದಕ್ಕೆ ಸರಿಸಲಿದ್ದಾರೆ.

First published:June 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...