Virat Kohli Trolled By Cricket Fans ಟಿ20 ವಿಶ್ವಕಪ್ ಮೊದಲ ಪಂದ್ಯದ ಮುನ್ನ ದೀಪಾವಳಿ ಟಿಪ್ಸ್ ನೀಡಿದ ಕೊಹ್ಲಿ - ಕೋಪಗೊಂಡ ಅಭಿಮಾನಿಗಳಿಂದ ಟ್ರೋಲ್
#ಸುನೋಕೊಹ್ಲಿ (#SunoKohli) ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಈ ಟ್ಯಾಗ್ ಬಳಸಿ ಬಗೆ ಬಗೆಯ ಮೀಮ್ಸ್ ಮಾಡಲಾಗುತ್ತಿದೆ. ಕಳೆದ ವರ್ಷವೂ ದೀಪಾವಳಿ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತೀವ್ರವಾಗಿ ಟ್ರೋಲ್ ಆಗಿದ್ದರು
ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ ನಲ್ಲಿ ದೀಪಾವಳಿ (Diwali 2021) ಕುರಿತು ವಿಡಿಯೋ ಹಂಚಿಕೊಂಡಿದ್ದರು. ಈ ವರ್ಷ ಭಾರತ ಮತ್ತು ಇಡೀ ವಿಶ್ವ ಕಷ್ಟದ ದಿನಗಳನ್ನು ನೋಡಿದೆ. ಜನರು ಸಹ ಅನೇಕ ಕಷ್ಟಗಳನ್ನು ಎದುರಿಸುವ ಪ್ರಸಂಗ ಎದುರಾಗಿತ್ತು. ಎಲ್ಲರೂ ದೀಪಾವಳಿ ಆಚರಿಸಲು ಕಾತುರದಿಂದ ಕಾಯುತ್ತಿದ್ದಾರೆ. ಹಬ್ಬಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ನಾನು ನಿಮ್ಮ ಕುಟುಂಬ ಹಾಗೂ ಗೆಳೆಯರಿಗೆ ಸಾರ್ಥಕವಾಗಿ ದೀಪಾವಳಿ ಆಚರಿಸುವ ಕೆಲವು ಟಿಪ್ಸ್ ನೀಡುತ್ತಿದ್ದೇನೆ. ಆದ್ರೆ ಕೊಹ್ಲಿ ಅವರ ಈ ಟ್ವೀಟ್ ಒಂದು ವರ್ಗದ ಜನಕ್ಕೆ ಇಷ್ಟವಾಗಿಲ್ಲ. ಆದ್ದರಿಂದ ಅವರು ಸೋಶಿಯಲ್ ಮೀಡಿಯಾ(Social Media)ದಲ್ಲಿ ವ್ಯಾಪಕವಾಗಿ ಟ್ರೋಲ್ (Troll) ಮಾಡುವ ಮೂಲಕ ಬೇಸರ ಹೊರ ಹಾಕುತ್ತಿದ್ದಾರೆ.
#SunoKohli ಹ್ಯಾಶ್ ಟ್ಯಾಗ್
ಈ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ #ಸುನೋಕೊಹ್ಲಿ (#SunoKohli) ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಈ ಟ್ಯಾಗ್ ಬಳಸಿ ಬಗೆ ಬಗೆಯ ಮೀಮ್ಸ್ ಮಾಡಲಾಗುತ್ತಿದೆ. ಕಳೆದ ವರ್ಷವೂ ದೀಪಾವಳಿ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತೀವ್ರವಾಗಿ ಟ್ರೋಲ್ ಆಗಿದ್ದರು. ಕಳೆದ ವರ್ಷ ಜನತೆಗೆ ಶುಭಾಶಯ ತಿಳಿಸಿದ್ದ ವಿರಾಟ್ ಕೊಹ್ಲಿ ಪಟಾಕಿ ಹಚ್ಚದಂತೆ ಸಂದೇಶ ನೀಡಿದ್ದರು. ಇದೀಗ ವಿರಾಟ್ ಕೊಹ್ಲಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಒಂದು ವರ್ಗದ ಜನರು ದೀಪಾವಳಿ ಹೇಗೆ ಆಚರಿಸಬೇಕು ಎಂಬುವುದು ನಮಗೆ ಗೊತ್ತಿದೆ. ಈ ಉಚಿತ ಉಪದೇಶ ನೀಡುವ ಬದಲು ಟಿ20 ವಿಶ್ವಕಪ್ (T20 world cup) ಆಡುವದರತ್ತ ಗಮನ ನೀಡಿ ಎಂದು ಟ್ರೋಲ್ ಮಾಡುತ್ತಿದ್ದಾರೆ.
Over the next few weeks, I'll be sharing a series of my personal tips for celebrating a meaningful Diwali with loved ones and family. Stay tuned by following my Pinterest profile 'viratkohli' - link in bio 🪔@Pinterest#diwali2021#ADpic.twitter.com/KKFxyK3UTG
ಟಿ20 ವಿಶ್ವಕಪ್ ಹಿನ್ನೆಲೆ ಟೀಂ ಇಂಡಿಯಾ ಆಟಗಾರರು ದುಬೈನಲ್ಲಿದ್ದಾರೆ. ಟೀಂ ಇಂಡಿಯಾ ಇವತ್ತು ಮೊದಲ ವಾರ್ಮ್ ಪಂದ್ಯ ಇಂಗ್ಲೆಂಡ್ ಜೊತೆಯಲ್ಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಆಡುತ್ತಿದೆ. ಇಡೀ ದೇಶ ಪಂದ್ಯಕ್ಕಾಗಿ ಕಾಯುತ್ತಿದ್ದು, ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲ್ಲಲಬೇಕಾದ ಅನಿವಾರ್ಯ ಎದುರಾಗಿದೆ.
ಗಬ್ಬರ್ ಸಿಂಗ್ ಕಾಲೆಳೆದ ಕೊಹ್ಲಿ
ಇಂದಿನ ಅಭ್ಯಾಸ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಆಟಗಾರ ಶಿಖರ್ ಧವನ್ ಮಿಮಿಕ್ರಿ ಮಾಡಿದ್ದರು. ಈ ವಿಡಿಯೋದಲ್ಲಿ ಶಿಖರ್ ಧವನ್ ಬ್ಯಾಟಿಂಗ್ ಶೈಲಿಯನ್ನು ನಕಲು ಮಾಡಿ ಗಬ್ಬರ್ ಕಾಲೆಳೆದಿದ್ದರು. ಶಿಖರ್ ಧವನ್ ಅವರಂತೆ ಬ್ಯಾಟ್ ಬೀಸಿದ್ದನ್ನು ಕಂಡು ಇಬ್ಬರ ಅಭಿಮಾನಿಗಳು ಖುಷಿಯಾಗಿದ್ದರು.
ಅನುಭವಿ ಆಟಗಾರ ಶಿಖರ್ ಧವನ್ ಈ ಟಿ20 ವಿಶ್ವಕಪ್ ನಲ್ಲಿಲ್ಲ. ಐಪಿಎಲ್ ದೆಹಲಿ ಕ್ಯಾಪ್ಟಿಲ್ಸ್ ತಂಡದಲ್ಲಿ ಶಿಖರ್ ಧವನ್ ಆಡಿದ್ದರು. ದೆಹಲಿಯಲ್ಲಿ ಅಧಿಕ ರನ್ ಗಳಿಸಿದ ಆಟಗಾರರಾಗಿರುವ ಶಿಖರ್ ಧವನ್ ಐಪಿಎಲ್-14ರ 16 ಪಂದ್ಯಗಳಲ್ಲಿ 39.13 ಸರಾಸರಿಯೊಂದಿಗೆ 587 ರನ್ ಕಲೆಹಾಕಿದ್ದಾರೆ.
ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲುವ ಹಾರುವ ಪೇವರೇಟ್ ತಂಡಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಕೊಹ್ಲಿ ಬಳಗ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು ಅಕ್ಟೋಬರ್ 24ರಂದು ಎದುರಿಸಲಿದೆ. ತದನಂತರ ಅಕ್ಟೋಬರ್ 31ರಂದು ನ್ಯೂಜಿಲೆಂಡ್ ಮತ್ತು ನವೆಂಬರ್ 3ರಂದು ಅಫ್ಘಾನಿಸ್ತಾನದ ವಿರುದ್ಧ ಭಾರತ ಆಡಲಿದೆ. ನವೆಂಬರ್ 5ರಂದು ಬಿ1 ಮತ್ತು ನವೆಂಬರ್ 8ರಂದು ಎ2 ಜೊತೆ ಟೀಂ ಇಂಡಿಯಾ ಆಡಲಿದೆ.
ಕೊರೊನಾ ಹಿನ್ನೆಲೆ ಅನುಷ್ಕಾ ಶರ್ಮಾ(Anushka Sharma) ದುಬೈ ಹೋಟೆಲ್ ನಲ್ಲಿ ಕ್ವಾರಂಟೈನ್ (Quarantine) ಆಗಿದ್ದಾರೆ. ಹಾಗಾಗಿ ಹೋಟೆಲ್ ನಲ್ಲಿದ್ರೂ ಕೊರೊನಾ ನಿಯಮ (Corona Rules) ಹಿನ್ನೆಲೆ ಕಡ್ಡಾಯ ಕೊರೊನಾ ನಿಯಮಗಳನ್ನು ಫಾಲೋ ಮಾಡಬೇಕಿದೆ. ಬಾಲ್ಕನಿ ಮತ್ತ ಲಾನ್ ನಲಿಯೇ ನಿಂತು ಪತ್ನಿಗೆ ವಿರಾಟ್ ಕೊಹ್ಲಿ ಕೈ ಬೀಸುತ್ತಿದ್ದಾರೆ. ಈ ಎರಡರಲ್ಲಿ ಯಾವುದು ಆಯ್ಕೆ ಮಾಡಿಕೊಳ್ಳೋದು ನನಗೆ ಗೊತ್ತಾಗುತ್ತಿಲ್ಲ. ಕ್ವಾರಂಟೈನ್ ನಿಮ್ಮ ಹೃದಯ ಪ್ರೀತಿಯಿಂದ ತುಂಬುತ್ತದೆ ಮತ್ತು ಬಬಲ್ ಜೀವನದ ಪ್ರೀತಿ ಎಂದು ಅನುಷ್ಕಾ ಶರ್ಮಾ ಬರೆದುಕೊಂಡಿದ್ದಾರೆ. ಅನುಷ್ಕಾ ಶರ್ಮಾ ಫೋಟೋಗೆ ಮೆಚ್ಚುಗೆ ವ್ಯಕ್ತವಾಗಿದೆ. ರಣ್ವೀರ್ ಸಿಂಗ್, ಸಾನಿಯಾ ಮಿರ್ಜಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕಮೆಂಟ್ ಮಾಡುತ್ತಿದ್ದಾರೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ