8 ವಿಕೆಟ್​ ಪಡೆದ ಕೊಹ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲಿಂಗ್ ಮಾಡುವುದನ್ನು ನಿಲ್ಲಿಸಲು ಕಾರಣವಾಗಿತ್ತು ಆ ಘಟನೆ!

ವಿರಾಟ್​ ಇತ್ತೀಚೆಗೆ ಮೈದಾನದಲ್ಲಿ ಬೌಲಿಂಗ್​ ಅಭ್ಯಾಸ​ ಮಾಡುತ್ತಿದ್ದರು. ಈ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿತ್ತು. ವಿರಾಟ್​ ಬೌಲಿಂಗ್​ ಮಾಡುತ್ತಿರುವುದನ್ನು ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು.

ಮೈದಾನದಲ್ಲಿ ಸ್ಪರ್ಧಾತ್ಮಕವಾಗಿ ಆಡುವುದಷ್ಟೆ ನಮ್ಮ ಗುರಿ ಎಂದಿರುಕ ಕೊಹ್ಲಿ, ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ತಂಡ ಫೈನಲ್ ತಲುಪಿದ್ದು ನಮಗೆ ತುಂಬಾನೇ ಖುಷಿ ಇದೆ ಎಂದರು.

ಮೈದಾನದಲ್ಲಿ ಸ್ಪರ್ಧಾತ್ಮಕವಾಗಿ ಆಡುವುದಷ್ಟೆ ನಮ್ಮ ಗುರಿ ಎಂದಿರುಕ ಕೊಹ್ಲಿ, ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ತಂಡ ಫೈನಲ್ ತಲುಪಿದ್ದು ನಮಗೆ ತುಂಬಾನೇ ಖುಷಿ ಇದೆ ಎಂದರು.

  • News18
  • Last Updated :
  • Share this:
ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಮೂಲಕ ಎಲ್ಲರ ಗಮನ ಸೆಳೆದವರು. ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅವರ ಬ್ಯಾಟ್​​ನಿಂದ ಸಿಡಿದ ಶತಕಗಳ ಸಂಖ್ಯೆ ಬರೋಬ್ಬರಿ 41. ವಿಶೇಷ ಎಂದರೆ ವಿರಾಟ್​ ಬೌಲಿಂಗ್​ನಲ್ಲೂ ಪರಿಣಿತರಂತೆ. ಟಿ-20 ಹಾಗೂ ಏಕದಿನ ಪಂದ್ಯಗಳಲ್ಲಿ ತಲಾ 4 ವಿಕೆಟ್​ ಕಿತ್ತಿದ್ದಾರೆ ಕೊಹ್ಲಿ. ಆದರೆ, ಅವರು ಈಗ ಬೌಲಿಂಗ್​ ಮಾಡುವುದನ್ನು ನಿಲ್ಲಿಸಿದ್ದಾರೆ. ಅದಕ್ಕೆ ಈಗ ಕಾರಣ ಸಿಕ್ಕಿದೆ.

ವಿರಾಟ್​ ಇತ್ತೀಚೆಗೆ ಮೈದಾನದಲ್ಲಿ ಬೌಲಿಂಗ್​ ಅಭ್ಯಾಸ​ ಮಾಡುತ್ತಿದ್ದರು. ಈ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿತ್ತು. ವಿರಾಟ್​ ಬೌಲಿಂಗ್​ ಮಾಡುತ್ತಿರುವುದನ್ನು ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಈ ಬಗ್ಗೆ ವಿರಾಟ್​ ಮಾತನಾಡಿದ್ದಾರೆ. ನನ್ನ ಬೌಲಿಂಗ್​ ಮೇಲೆ ಟೀಂ ಇಂಡಿಯಾದ ಆಟಗಾರರಿಗೆ ನಂಬಿಕೆಯೇ ಇಲ್ಲ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

ಬೌಲಿಂಗ್​ ಮಾಡುವುದರಿಂದ ದೂರವೇ ಉಳಿದ ಬಗ್ಗೆ ವಿರಾಟ್​ ಕಾರಣ ನೀಡಿದ್ದಾರೆ. “2017ರ ಶ್ರೀಲಂಕಾ ವಿರುದ್ಧದ ಪಂದ್ಯ. ನಾವು ಪಂದ್ಯವನ್ನು ಗೆಲ್ಲುವ ಹಂತಕ್ಕೆ ಬಂದಿದ್ದೆವು. ನಾನು ಬೌಲಿಂಗ್​ ಮಾಡಬಹುದೇ ಎಂದು ಧೋನಿ ಬಳಿ ಕೇಳಿದ್ದೆ. ಅವರು ಇದಕ್ಕೆ ಸಮ್ಮತಿಸಿದ್ದರು. ನಾನು ಬೌಲ್​ ಕೈಗೆತ್ತುಕೊಳ್ಳುತ್ತಿದ್ದಂತೆ ಬೌಂಡರಿ ಲೈನ್​ನಿಂದ ಜಸ್ಪ್ರೀತ್​ ಬುಮ್ರಾ, ‘ಇದು ಜೋಕ್​ ಅಲ್ಲ, ಅಂತಾರಾಷ್ಟ್ರೀಯ ಪಂದ್ಯ’ ಎಂದು ಕೂಗಿದರು,” ಎಂದು ಹಳೆಯ ಘಟನೆ ನೆನೆದರು.“ನನ್ನ ಬೌಲಿಂಗ್​ ಮೇಲೆ ಯಾರೊಬ್ಬರಿಗೂ ನಂಬಿಕೆ ಇಲ್ಲ. ಆದರೆ ನನಗಿದೆ. ಈ ಘಟನೆ ನಡೆದ ನಂತರ ನನಗೆ ಬೆನ್ನಿನ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ನಾನು ಬೌಲಿಂಗ್ ಮಾಡುವ ಪ್ರಯತ್ನಕ್ಕೆ ಹೋಗಿಲ್ಲ,” ಎನ್ನುವ ಮೂಲಕ ಕೊಹ್ಲಿ ಬೌಲಿಂಗ್​ ಮಾಡುವುದನ್ನು ತ್ಯಜಿಸಿದ ಬಗ್ಗೆ ಹೇಳಿಕೊಂಡಿದ್ದಾರೆ.

First published: