HOME » NEWS » Sports » CRICKET TEAM INDIA CAPTAIN VIRAT KOHLI AND ROHIT SHARMA HEARTBROKEN BY NEWS OF PREGNANT ELEPHANT DEATH HG

ಇದು ಹೃದಯ ವಿದ್ರಾವಕ ಘಟನೆ; ಗರ್ಭಿಣಿ ಆನೆಯ ಸಾವಿಗೆ ಆಕ್ರೋಶ ಹೊರಹಾಕಿದ ಟೀಂ ಇಂಡಿಯಾ ಆಟಗಾರರು

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಗರ್ಭಿಣಿ ಆನೆಗೆ ಅನಾನಸು ಹಣ್ಣಿನಲ್ಲಿ ಸ್ಪೋಟಕವಿಟ್ಟಿದ್ದಾರೆ. ಹಣ್ಣು ಸೇವಿಸಿದ ಆನೆ ದವಡೆಯಲ್ಲಿ ಅನಾನಸ್​​ ಸ್ಟೋಟವಾಗಿದೆ. ದವಡೆ ಹಾಗೂ ಬಾಯಿ ಸಂಪೂರ್ಣ ಪುಡಿಯಾಗಿದೆ. ನೋವಿನಿಂದ ಬಳಲುತ್ತಿದ್ದ ಆನೆ ನಂತರ ವೆಲ್ಲಿಯಾರ್​ ನದಿಗೆ ಇಳಿದು ನಿಂತ ಸ್ಥಿತಿಯಲ್ಲೇ ಸಾವನ್ನಪ್ಪಿದೆ.

news18-kannada
Updated:June 4, 2020, 9:09 PM IST
ಇದು ಹೃದಯ ವಿದ್ರಾವಕ ಘಟನೆ; ಗರ್ಭಿಣಿ ಆನೆಯ ಸಾವಿಗೆ ಆಕ್ರೋಶ ಹೊರಹಾಕಿದ ಟೀಂ ಇಂಡಿಯಾ ಆಟಗಾರರು
ವಿರಾಟ್​ ಕೊಹ್ಲಿ- ರೋಹಿತ್​ ಶರ್ಮಾ
  • Share this:
ಕೇರಳದಲ್ಲಿ ಗರ್ಭಿಣಿಯನ್ನು ಆನೆಯನ್ನು ಕೊಂದಿದ್ದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಟೀಂ ಇಂಡಿಯಾದ ಕೆಲ ಆಟಗಾರರು ಕೂಡ ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ. ನಾಯಕ ವಿರಾಟ್​ ಕೊಹ್ಲಿ ಮತ್ತು ಉಪನಾಯಕ ರೋಹಿತ್​ ಶರ್ಮಾ  ಗರ್ಭಿಣಿ ಆನೆಯನ್ನು ಕೊಂದವರ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್​​ ಮಾಡಿರುವ ಕೊಹ್ಲಿ ಘಟನೆ ಬಗ್ಗೆ ಕೇಳಲು ಭಯವೆನಿಸುತ್ತದೆ. ನಮ್ಮ ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳೊಣ. ಇಂತಹ ಹೇಯ ಕೃತ್ಯಗಳಿಗೆ ಅಂತ್ಯ ಹಾಡೋಣ ಎಂದಿದ್ದಾರೆ.

ಟೀಂ ಇಂಡಿಯಾದ ಉಪನಾಯಕ ರೋಹಿತ್​ ಶರ್ಮಾ ‘ನಾವು ಅನಾಗರೀಕರು, ನಾವೇನು ಕಲಿಯುತ್ತಿಲ್ಲವೇ? ಕೇರಳದ ಆನೆಗಾದ ಸ್ಥಿತಿ ಹೃದಯ ವಿದ್ರಾವಕ ಘಟನೆಯಾಗಿದೆ. ಯಾವ ಪ್ರಾಣಿಯನ್ನು ಕ್ರೂರವಾಗಿ ಹಿಂಸಿಸುವುದು ಸರಿಯಲ್ಲ. ಎಂದು ಟ್ವೀಟ್​ ಮಾಡಿದ್ದಾರೆ.

ಏನಿದು ಘಟನೆ?

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಗರ್ಭಿಣಿ ಆನೆಗೆ ಅನಾನಸು ಹಣ್ಣಿನಲ್ಲಿ ಸ್ಪೋಟಕವಿಟ್ಟಿದ್ದಾರೆ. ಹಣ್ಣು ಸೇವಿಸಿದ ಆನೆ ದವಡೆಯಲ್ಲಿ ಅನಾನಸ್​​ ಸ್ಟೋಟವಾಗಿದೆ. ದವಡೆ ಹಾಗೂ ಬಾಯಿ ಸಂಪೂರ್ಣ ಪುಡಿಯಾಗಿದೆ. ನೋವಿನಿಂದ ಬಳಲುತ್ತಿದ್ದ ಆನೆ ನಂತರ ವೆಲ್ಲಿಯಾರ್​ ನದಿಗೆ ಇಳಿದು ನಿಂತ ಸ್ಥಿತಿಯಲ್ಲೇ ಸಾವನ್ನಪ್ಪಿದೆ.

ಯಾರಿಗೂ ತೊಂದರೆ ನೀಡದ ಗರ್ಭಿಣಿ ಆನೆಯನ್ನು ದುರುಳರು ಹಣ್ಣಿನಲ್ಲಿ ಸ್ಟೋಟಕವಿಟ್ಟು ಕೊಂದಿರುವುದಕ್ಕಾಗಿ ಅನೇಕರು ಧ್ವನಿ ಎತ್ತಿದ್ದಾರೆ. ಚಿತ್ರರಂಗದ ಅನೇಕ ತಾರೆಯರು ಇಂತ ಕುಚೇಷ್ಟೇ ಮಾಡಿರುವ ದುರುಳರಿಗೆ ಶಿಕ್ಷೆ ಆಗಬೇಕೆಂದು ಹೇಳುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ನಡೆಯುತ್ತಿದೆ. ಆದೋಲನಕ್ಕೆ ಅನೇಕರು ಸಹಿ ಹಾಕುತ್ತಿದ್ದಾರೆ. ಕೇರಳ ಸರ್ಕಾರ ಈ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ನಕಲಿ ಖಾತೆ ತೆರೆದಿದ್ದವರಿಗೆ ಕ್ಲಾಸ್ ತೆಗೆದುಕೊಂಡ ನಟಿ ಅಂಬಿಕಾ!

Mitron App: ಗೂಗಲ್​ ಪ್ಲೇ ಸ್ಟೋರ್​​ಗೆ​ ಮತ್ತೆ ಬರಲಿದೆ ಭಾರತೀಯ ‘ಮಿತ್ರೋ‘ ಆ್ಯಪ್​​!

First published: June 4, 2020, 8:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading