• Home
  • »
  • News
  • »
  • sports
  • »
  • Rohit Sharma: ಅಸ್ಸಾಂ ಪೊಲೀಸ್​ ರೋಹಿತ್​ ಶರ್ಮಾ ಅವರನ್ನು ನಿಜವಾಗಿಯೂ ಬಂಧಿಸಿದ್ರಾ? ಈ ಫೋಟೋ ವೈರಲ್​ ಆಗಲು ಕಾರಣವೇನು?

Rohit Sharma: ಅಸ್ಸಾಂ ಪೊಲೀಸ್​ ರೋಹಿತ್​ ಶರ್ಮಾ ಅವರನ್ನು ನಿಜವಾಗಿಯೂ ಬಂಧಿಸಿದ್ರಾ? ಈ ಫೋಟೋ ವೈರಲ್​ ಆಗಲು ಕಾರಣವೇನು?

ಪೊಂಜಿತ್ ದೋವಾರಾ - ರೋಹಿತ್ ಶರ್ಮಾ

ಪೊಂಜಿತ್ ದೋವಾರಾ - ರೋಹಿತ್ ಶರ್ಮಾ

ಅಂದಹಾಗೆಯೇ ಅಸ್ಸಾಂ ಪೊಲೀಸ್​ ಉಪ ಆಯುಕ್ತ ಪೊಂಜಿತ್​ ದೋವಾರಾ ಅವರು ರೋಹಿತ್​ ಶರ್ಮಾ ಅವರ ಬಳಿ ನಿಂತುಕೊಂಡು ಫೋಟೋ ತೆಗೆದುಕೊಂಡಿದ್ದರು. ಪಂದ್ಯ ಪ್ರಾರಂಭಕ್ಕೂ ಮುನ್ನ ಫೋಟೋ ತೆಗೆಸಿಕೊಂಡಿದ್ದರು.

  • Share this:

    ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾ (Rohit Sharma) ಪೊಲೀಸರು ಅವರನ್ನು ಬಂಧಿಸಿದ್ದರಾ? ಸಾಮಾಜಿಕ ಜಾಲತಾಣದಲ್ಲಿ ಇಂತಹದೊಂದು ಸುದ್ದಿ ವೈರಲ್ (Viral)​ ಆಗಿದ್ದು, ಬಹುತೇಕರು ರೋಹಿತ್​ ಶರ್ಮಾ ಅವರನ್ನು ಪೊಲೀಸರು (Police) ಬಂಧಿಸಿರುವುದು ಯಾಕ? ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಬಹುತೇಕರಿಗೆ ನಿಜ ಸಂಗತಿ ಗೊತ್ತಿಲ್ಲ. ನಿಜವಾಗಿಯೂ ಇಲ್ಲಿ ನಡೆದಿರುವುದು ಏನು? ಇಂತಹ ತಪ್ಪು ಸಂದೇಶ ವೈರಲ್​ ಆಗಿದ್ದು ಹೇಗೆ? ಎಂಬ ಬಗ್ಗೆ ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ (Story) ಓದಿ.


    ಅಕ್ಟೋಬರ್​ 2 ರಂದು ಗುವಾಹಟಿಯ ಸಿಟಿ ಬರ್ಶಪಾರಾ ಕ್ರೀಡಾಂಗಣದಲ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್​ ಪಂದ್ಯವನ್ನು ಆಯೋಜಿಸಿತ್ತು. ಅನೇಕರು ಟೀಂ ಇಂಡಿಯಾದ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂಧಿದ್ದರು. ಪೊಲೀಸರ ಸಮ್ಮುಖದಲ್ಲಿ ಕ್ರಿಕೆಟಿಗರಿಗೆ ರಕ್ಷಣೆ ಒದಗಿಸಲಾಗಿತ್ತು. ಈ ವೇಳೆ ಪೊಲೀಸ್​ ಒಬ್ಬರು ರೋಹಿತ್​ ಶರ್ಮಾ ಅವರೊಂದಿಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದರು. ಅದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯಿತು. ಮಾತ್ರವಲ್ಲದೆ ರೋಹಿತ್ ಶರ್ಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುಳ್ಳು ಮಾಹಿತಿ ಹರೊದಾಡಿತು.


    ಅಂದಹಾಗೆಯೇ ಅಸ್ಸಾಂ ಪೊಲೀಸ್​ ಉಪ ಆಯುಕ್ತ ಪೊಂಜಿತ್​ ದೋವಾರಾ ಅವರು ರೋಹಿತ್​ ಶರ್ಮಾ ಅವರ ಬಳಿ ನಿಂತುಕೊಂಡು ಫೋಟೋ ತೆಗೆದುಕೊಂಡಿದ್ದರು. ಪಂದ್ಯ ಪ್ರಾರಂಭಕ್ಕೂ ಮುನ್ನ ಫೋಟೋ ತೆಗೆಸಿಕೊಂಡಿದ್ದರು. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದರು.


    ಪೊಂಜಿತ್​ ದೋವಾರಾ ಅವರು ಪೋಸ್ಟ್‌ನ ಶೀರ್ಷಿಕೆಯಲ್ಲಿ "ಶುಭವಾಗಲಿ. ಒಂದು ಸೆಂಚುರಿ ಬಾರಿಸಿ " ಬರೆದಿದ್ದರು.  ಮೊದಲೇ ಹೇಳಿದಂತೆ ಈ ರೋಹಿತ್​ ಬಳಿ ನಿಂತುಕೊಂಡು ಈ ಫೋಟೋ ತೆಗೆಸಿಕೊಂಡಿದ್ದಾರೆ ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವರುಈ ಫೋಟೋ ಕಂಡು, ತಪ್ಪಾಗಿ ಗ್ರಹಿಸಿ ರೋಹಿತ್ ಶರ್ಮಾ ಅವರನ್ನು ಬಂಧಿಸಿದ್ದಾರೆ ಎಂದು ಭಾವಿಸಿದ್ದಾರೆ.


    ಡೆಪ್ಯುಟಿ ಕಮಿಷನರ್ ಪೊಂಜಿತ್ ದೋವಾರಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ, ಫೋಟೋ ಇಂಟರ್ನೆಟ್ನಲ್ಲಿ ವೈರಲ್​ ಆಗಿದೆ. ಪೋಸ್ಟ್ 600 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಮತ್ತು 11,000 ಕ್ಕೂ ಹೆಚ್ಚು ಲೈಕ್‌ಗಳನ್ನು ಸ್ವೀಕರಿಸಿದೆ. ಕೆಲವರು ರೋಹಿತ್ ಶರ್ಮಾ ಬಂಧನವಾಗಿದೆ ಎಂದು ಭಾವಿಸಿದರೆ, ಇನ್ನು ಕೆಲವರು ಅವರಿಗೆ ಶುಭ ಹಾರೈಸಿದ್ದಾರೆ.


    ಇದನ್ನೂ ಓದಿ: New Discover: ಭೂಮಿಯೊಳಗಿನ ರಹಸ್ಯ ಸಾಗರ ಪತ್ತೆ; ಏನು ಹೇಳುತ್ತಾರೆ ವಿಜ್ಞಾನಿಗಳು?


    ಸಾಮಾಜಿಕ ಜಾಲತಾಣ ಬಳಕೆದಾರನೊಬ್ಬ, "ಮೊದಲಿಗೆ, ನೀವು ರೋಹಿತ್​ ಅವರನ್ನು ಬಂಧಿಸುತ್ತಿದ್ದೀರಿ ಎಂದು ನಾನು ಭಾವಿಸಿದೆ. ಈ ಚಿತ್ರದಲ್ಲಿ ಯಾರೂ ಏಕೆ ನಗುತ್ತಿಲ್ಲ? " ಎಂದು ಕಾಮೆಂಡ್​ ಬರೆದಿದ್ದಾನೆ.



    ಮತ್ತೊಬ್ಬ ಬಳಕೆದಾರ, "ಸರ್, ನೀವು ಒಬ್ಬ ಕ್ರಿಮಿನಲ್‌ನನ್ನು ಬಂಧಿಸಿರುವಂತೆ ತೋರುತ್ತಿದೆ. ಕನಿಷ್ಠ ನೀವು ಕುಳಿತಿರುವಾಗ ಪೋಸ್ ನೀಡಬಹುದಿತ್ತು."ಎಂದು ಕಾಮೆಂಟ್​ ಮಾಡಿದ್ದಾನೆ.


    ಇದನ್ನೂ ಓದಿ:  BBK Season 09: ಬಿಗ್ ಬಾಸ್ ಮನೆಯಲ್ಲಿ ಕಣ್ಣೀರ ಕಹಾನಿ! ದರ್ಶ್ ಚಂದ್ರಪ್ಪ, ವಿನೋದ್ ಗೊಬ್ಬರಗಾಲಾ ಭಾವುಕ


    "ನೀವು ಅವನನ್ನು ಬಂಧಿಸುತ್ತಿರುವಂತೆ ತೋರುತ್ತಿದೆ" ಎಂದು ಮಗದೊಬ್ಬ ಬಳಕೆದಾರ ಕಾಮೆಂಟ್​ ಬರೆದಿದ್ದಾನೆ. ಹೀಗೆ ಬಳಕೆದಾರರ ಕಾಮೆಂಟ್​ ಕೂಡ ವೈರಲ್​ ಆಗಿದೆ. ಆದರೆ ವಾಸ್ತವ ಸಂಗತಿ ಅಸ್ಸಾಂ ಪೊಲೀಸ್​ ಉಪ ಆಯುಕ್ತ ಪೊಂಜಿತ್​ ದೋವಾರಾ ಅವರು ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾ ಅವರ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    Published by:Harshith AS
    First published: