ಭುವನೇಶ್ವರ್​ ಕುಮಾರ್​ ಜೀವನಾಧರಿತ ಸಿನಿಮಾದಲ್ಲಿ ಯಾವ ನಟ ನಟಿಸಬೇಕಂತೆ ಗೊತ್ತಾ?

ಕೊರೋನಾ ಸಮಯದಲ್ಲಿ ಭುವನೆಶ್ವರ್​​ ಕುಮಾರ್​​ ಮೀರತ್​ನಲ್ಲಿ  ಕ್ರಿಕೆಟ್​ ಅಕಾಡೆಮಿಯೊಂದನ್ನು ತೆರೆಯಲು ಮುಂದಾಗಿದ್ದಾರೆ. ಆ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಅವರು ಹೇಳುತ್ತಾರೆ.

news18-kannada
Updated:July 2, 2020, 6:40 PM IST
ಭುವನೇಶ್ವರ್​ ಕುಮಾರ್​ ಜೀವನಾಧರಿತ ಸಿನಿಮಾದಲ್ಲಿ ಯಾವ ನಟ ನಟಿಸಬೇಕಂತೆ ಗೊತ್ತಾ?
ಭುವನೇಶ್ವರ್​ ಕುಮಾರ್​
  • Share this:
ಟೀಂ ಇಂಡಿಯಾದ ವೇಗಿ ಭುವನೇಶ್ವರ್​ ಕುಮಾರ್​ ಕ್ರಿಕೆಟ್​ ರಂಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಅನೇಕ ವಿಕೆಟ್​ಗಳನ್ನು ಪಡೆಯುವ ಮೂಲಕ ಟೀಂ ಇಂಡಿಯಾದ ಉತ್ತಮ ವೇಗಿ ಎನಿಸಿಕೊಂಡಿದ್ದಾರೆ. ಒಂದು ವೇಳೆ ಭುವಿ ಜೀವನ ಚರಿತ್ರೆ ಸಿನಿಮಾವಾದರೆ ಆ ಸಿನಿಮಾದಲ್ಲಿ ಯಾರು ನಟಿಸಲು ಸೂಕ್ತ? ಎಂಬ ಪ್ರಶ್ನೆಗೆ ಅವರು ಏನಂದಿದ್ದಾರೆ ಗೊತ್ತಾ.

ಭುವನೇಶ್ವರ್​​ ಕುಮಾರ್​ ಬಾಲಿವುಡ್​ನ ಖ್ಯಾತ ನಟ ರಾಜ್​ ಕುಮಾರ್​ ರಾವ್​ ತನ್ನ ಜೀವನಾಧರಿತ ಸಿನಿಮಾದಲ್ಲಿ ನಟಿಸಿದರೆ ಉತ್ತಮ ಎಂದು ಹೇಳಿದ್ದಾರೆ. ಭುವಿ ಸ್ವಿಂಗ್​ ಬೌಲಿಂಗ್ ಮಾಡುವ ಮೂಲಕ ಅನೇಕ ಎದುರಾಳಿ ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್​ಗೆ ಅಟ್ಟಿರುವ ಉದಾಹರಣೆಯಿದೆ. ಕಳೆದ ವರ್ಷ ಭುವನೇಶ್ವರ್ ಕುಮಾರ್​​​ ಬೌಲಿಂಗ್​ ವೇಳೆ ಗಾಯ ಮಾಡಿಕೊಂಡಿದ್ದರು. ಅದಕ್ಕಾಗಿ ಎಸ್​ಸಿಎನಲ್ಲಿ ಚಿಕಿತ್ಸೆ ಪಡೆದು ಮರಳಿ ತಂಡವನ್ನು ಸೇರಿಕೊಂಡರು.

ಆದರೆ ಮತ್ತೆ ಭುವಿಗೆ ಸ್ಪೋಟ್ಸ್​​ ಹಾರ್ನಿಯ ಕಾಣಿಸಿಕೊಂಡಿತ್ತು. ಮೂರು ತಿಂಗಳ ಕಾಲ ಸರಿಯಾದ ಚಿಕಿತ್ಸೆ ಪಡೆದು ತಂಡಕ್ಕೆ ಹಾಜರಾದರು. ಆದರೆ ಮಹಾಮಾರಿ ಕೊರೋನಾದಿಂದಾಗಿ ಟೂರ್ನಿ ರದ್ದಾಯಿತು.

ಕೊರೋನಾ ಸಮಯದಲ್ಲಿ ಭುವನೆಶ್ವರ್​​ ಕುಮಾರ್​​ ಮೀರತ್​ನಲ್ಲಿ  ಕ್ರಿಕೆಟ್​ ಅಕಾಡೆಮಿಯೊಂದನ್ನು ತೆರೆಯಲು ಮುಂದಾಗಿದ್ದಾರೆ. ಆ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಅವರು ಹೇಳುತ್ತಾರೆ.

ತಮ್ಮ ಜೀವನಾಧಾರಿತ ಸಿನಿಮಾ ಬಂದರೆ ಯಾವ ನಟ ನಟಿಸಲು ಸೂಕ್ತ ಎಂಬ ಪ್ರಶ್ನೆಗೆ ಭುವನೆಶ್ವರ್​​ ಕುಮಾರ್​​, ನಟ ರಾಜ್​ ಕುಮಾರ್​ ರಾವ್​ ಅವರನ್ನು ಸೂಚಿಸಿದ್ದಾರೆ. ಸಿನಿಮಾ ಬ್ಯಾಗ್ರೌಂಡ್​​​ ಇಲ್ಲದೆ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ಅವರು ನನ್ನ ಬಯೋಪಿಕ್​​ನಲ್ಲಿ ನಟಿಸಬೇಕು ಎಂದು ಹೇಳಿದ್ದಾರೆ.

’ಬೆಲ್​ ಬಾಟಂ’ ಸಿನಿಮಾ ಖ್ಯಾತಿಯ ಕಲಾ ನಿರ್ದೇಶಕ ಲೋಕೇಶ್​ ಆತ್ಮಹತ್ಯೆ!

 
First published: July 2, 2020, 6:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading