ಅಂಡರ್-19 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ರನ್ ಮೆಷಿನ್ ಪ್ರಿಯಂ ಗರ್ಗ್ ಕ್ಯಾಪ್ಟನ್; ದಾಖಲೆವೀರ ಜೈಸ್ವಾಲ್, ಕರ್ನಾಟಕ ಕುಡಿ ಶುಭಾಂಗ್​ಗೆ ಸ್ಥಾನ

ಕರ್ನಾಟಕದ ಆಲ್​ರೌಂಡರ್ ಶುಭಾಂಗ್ ಹೆಗ್ಡೆ ಅವರು ವಿಶ್ವಕಪ್​ಗೆ ಆಯ್ಕೆಯಾಗಿದ್ದಾರೆ. ಆಫ್ಘಾನಿಸ್ತಾನ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡವನ್ನು ಅವರು ಮುನ್ನಡೆಸಿದ್ದರು. ಕರ್ನಾಟಕ ಪ್ರೀಮಿಯರ್ ಲೀಗ್​ನಲ್ಲಿ ಬೆಳಗಾವಿ ಪ್ಯಾಂಥರ್ಸ್ ಪರ ಇಡೀ ಸೀಸನ್ ಆಡಿದ ಅನುಭವ ಅವರಿಗಿದೆ.

Vijayasarthy SN | news18
Updated:December 2, 2019, 5:33 PM IST
ಅಂಡರ್-19 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ರನ್ ಮೆಷಿನ್ ಪ್ರಿಯಂ ಗರ್ಗ್ ಕ್ಯಾಪ್ಟನ್; ದಾಖಲೆವೀರ ಜೈಸ್ವಾಲ್, ಕರ್ನಾಟಕ ಕುಡಿ ಶುಭಾಂಗ್​ಗೆ ಸ್ಥಾನ
ಭಾರತದ ಕಿರಿಯ ಕ್ರಿಕೆಟ್ ಆಟಗಾರರು
  • News18
  • Last Updated: December 2, 2019, 5:33 PM IST
  • Share this:
ಬೆಂಗಳೂರು(ಡಿ. 02): ಮುಂದಿನ ವರ್ಷ ನಡೆಯಲಿರುವ ಕಿರಿಯರ ಕ್ರಿಕೆಟ್ ವಿಶ್ವಕಪ್​ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಉತ್ತರ ಪ್ರದೇಶದ ಅನುಭವಿ ಆಟಗಾರ ಪ್ರಿಯಂ ಗರ್ಗ್ ನಾಯಕತ್ವದ 15 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. ಜನವರಿ 17ರಿಂದ ಫೆಬ್ರವರಿ 9ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಈ ವಿಶ್ವಕಪ್ ನಡೆಯಲಿದೆ. ವಿಶ್ವಕಪ್​ಗೂ ಮುನ್ನ ಅಭ್ಯಾಸಕ್ಕೆಂದು ದಕ್ಷಿಣ ಆಫ್ರಿಕಾದಲ್ಲಿ ಒಂದೆರಡು ಸರಣಿಗಳನ್ನು ಭಾರತ ತಂಡ ಆಡಲಿದೆ.

ಇದು 13ನೇ ಕಿರಿಯರ ವಿಶ್ವಕಪ್ ಆಗಿದೆ. ಭಾರತ ತಂಡ ಈಗಾಗಲೇ ನಾಲ್ಕು ಬಾರಿ ಚಾಂಪಿಯನ್ಸ್ ಎನಿಸಿದೆ. ಐದನೇ ಬಾರಿ ಚಾಂಪಿಯನ್ ಆಗಲು ಪ್ರಿಯಂ ಗರ್ಗ್ ನಾಯಕತ್ವದ ಭಾರತ ತಂಡ ಫೇವರಿಟ್ ಎನಿಸಿದೆ. ಉತ್ತರ ಪ್ರದೇಶದವರೇ ಆದ ಧ್ರುವ್ ಜುರೆಲ್ ಅವರು ವಿಕೆಟ್ ಕೀಪರ್ ಬ್ಯಾಟ್ಸ್​ಮ್ಯಾನ್ ಅಷ್ಟೇ ಅಲ್ಲದೇ ತಂಡದ ವೈಸ್ ಕ್ಯಾಪ್ಟನ್ ಕೂಡ ಆಗಿದ್ದಾರೆ. ನಾಯಕ ಪ್ರಿಯಂ ಗರ್ಗ್ ಅವರು ರಣಜಿ ಟ್ರೋಫಿ ಸೇರಿದಂತೆ ದೇಶೀಯ ಕ್ರಿಕೆಟ್​ನಲ್ಲಿ ಸಾಕಷ್ಟು ಆಡಿದ ಅನುಭವ ಹೊಂದಿದ್ಧಾರೆ. 2018ರ ರಣಜಿ ಋತುವಿನಲ್ಲಿ ಎರಡನೇ ಗರಿಷ್ಠ ಮೊತ್ತದ ರನ್ ಗಳಿಸಿದ ದಾಖಲೆ ಅವರದ್ದಾಗಿದೆ. ಒಂದು ದ್ವಿಶತಕ ಸೇರಿದಂತೆ ಎರಡು ಶತಕಗಳನ್ನು ಭಾರಿಸಿದ್ದಾರೆ. ದೇವಧರ್ ಟ್ರೋಫಿಯಲ್ಲೂ ಅವರು ಗಮನಾರ್ಹ ಪ್ರದರ್ಶನ ನೀಡಿದ್ಧಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ಸೈಯದ್ ಮುಷ್ತಾಕ್ ಅಲಿ ಕಪ್; ತಮಿಳುನಾಡಿನ ವಿರುದ್ಧ ಗೆಲ್ಲಲು ಕಾರಣವಾಯ್ತು ಆ ಒಂದು ಅಂಶ

ಇನ್ನು, ಇತ್ತೀಚೆಗೆ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಭಾರಿಸಿದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ಬರೆದಿದ್ದ ಯಶಸ್ವಿ ಜೈಸ್ವಾಲ್ ನಿರೀಕ್ಷೆಯಂತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕರ್ನಾಟಕದ ಆಲ್​ರೌಂಡರ್ ಶುಭಾಂಗ್ ಹೆಗ್ಡೆ ಅವರು ವಿಶ್ವಕಪ್​ಗೆ ಆಯ್ಕೆಯಾಗಿದ್ದಾರೆ. ಆಫ್ಘಾನಿಸ್ತಾನ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡವನ್ನು ಅವರು ಮುನ್ನಡೆಸಿದ್ದರು. ಕರ್ನಾಟಕ ಪ್ರೀಮಿಯರ್ ಲೀಗ್​ನಲ್ಲಿ ಬೆಳಗಾವಿ ಪ್ಯಾಂಥರ್ಸ್ ಪರ ಇಡೀ ಸೀಸನ್ ಆಡಿದ ಅನುಭವ ಅವರಿಗಿದೆ.

ಇದನ್ನೂ ಓದಿ: ಲಾರಾ ವಿಶ್ವ ದಾಖಲೆಯನ್ನು ಭಾರತದ ಈ ಆಟಗಾರನಿಂದ ಮಾತ್ರ ಮುರಿಯಲು ಸಾಧ್ಯ: ವಾರ್ನರ್ ಭವಿಷ್ಯ

ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿರುವ ಈ ಮರಿಹುಲಿಗಳು ಭಾರತಕ್ಕೆ ಐದನೇ ಕಿರಿಯರ ವಿಶ್ವಕಪ್ ಮುಕುಟ ದೊರಕಿಸಿಕೊಡಲು ಸಮರ್ಥವಾಗಿದೆ. ಜನವರಿ 17ರಂದು ಪ್ರಾರಂಭವಾಗುವ ಅಂಡರ್-19 ವಿಶ್ವಕಪ್​ನಲ್ಲಿ ಭಾರತ ತಂಡ ಎ ಗುಂಪಿನಲ್ಲಿದೆ. ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಜಪಾನ್ ತಂಡ ಭಾರತದೊಂದಿಗೆ ಈ ಗುಂಪಿನಲ್ಲಿವೆ. ಫೆ. 9ರಂದು ಫೈನಲ್ ಪಂದ್ಯ ನಡೆಯಲಿದೆ.ವಿಶ್ವಕಪ್​ಗೆ ಭಾರತ ಅಂಡರ್-19 ತಂಡ:

ಪ್ರಿಯಂ ಗರ್ಗ್(ನಾಯಕ), ಧ್ರುವ್ ಜುರೆಲ್(ಉಪನಾಯಕ-ವಿಕೆಟ್​ಕೀಪರ್), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ದಿವ್ಯಾಂಶ್ ಸಕ್ಸೇನಾ, ಶಾಶ್ವತ್ ರಾವತ್, ದಿವ್ಯಾಂಶ್ ಜೋಷಿ, ಶುಭಾಂಗ್ ಹೆಗ್ಡೆ, ರವಿ ಬಿಷ್ಣೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲೇಕರ್, ಕುಮಾರ್ ಕುಶಾಗ್ರ(ವಿಕೆಟ್ ಕೀಪರ್), ಸುಶಾಂತ್ ಮಿಶ್ರಾ, ವಿದ್ಯಾಧರ್ ಪಾಟೀಲ್.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading