IND vs NZ- ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಪ್ರಕಟ; ಕರ್ನಾಟಕದ ಮೂವರಿಗೆ ಸ್ಥಾನ

Team India for IND vs NZ Test Series- ನ. 25 ಮತ್ತು ಡಿ. 3ರಂದು ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ರಹಾನೆ ಸಾರಥಿ ಆಗಿದ್ದಾರೆ.

ಭಾರತ ಟೆಸ್ಟ್ ಕ್ರಿಕೆಟ್ ಆಟಗಾರರು

ಭಾರತ ಟೆಸ್ಟ್ ಕ್ರಿಕೆಟ್ ಆಟಗಾರರು

 • Share this:
  ನವದೆಹಲಿ, ನ. 12: ನವೆಂಬರ್-ಡಿಸೆಂಬರ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ 16 ಆಟಗಾರರ ಟೀಮ್ ಇಂಡಿಯಾವನ್ನು (India Squad for Test Series against New Zealand) ಪ್ರಕಟಿಸಲಾಗಿದೆ. ಮೊದಲೇ ವರದಿಗಳು ಬಂದಂತೆ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli unavailable for first test) ಅಲಭ್ಯರಿರುವುದರಿಂದ ಭಾರತ ತಂಡಕ್ಕೆ ಅಜಿಂಕ್ಯ ರಹಾನೆ (Ajinkya Rahane) ಅವರಿಗೆ ನಾಯಕತ್ವ ವಹಿಸಲಾಗಿದೆ. ವಿರಾಟ್ ಕೊಹ್ಲಿ ಎರಡನೇ ಟೆಸ್ಟ್​ನಲ್ಲಿ ಆಡಲಿದ್ದು ಅವರೇ ಕ್ಯಾಪ್ಟನ್ ಆಗಲಿದ್ದಾರೆ. ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕರಾಗಿರುವ ರೋಹಿತ್ ಶರ್ಮಾ ಅವರು ಟೆಸ್ಟ್ ಸರಣಿಗೆ ವಿಶ್ರಾಂತಿ ಪಡೆದಿದ್ದಾರೆ.

  ಕರ್ನಾಟದ ಮೂವರು ಆಟಗಾರರು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬ್ಯಾಟುಗಾರರಾದ ಕೆ ಎಲ್ ರಾಹುಲ್ (KL Rahul) ಮತ್ತು ಮಯಂಕ್ ಅಗರ್ವಾಲ್ (Mayank Agarwal) ಹಾಗು ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ (Prasiddh Krishna) ಟೀಮ್ ಇಂಡಿಯಾದಲ್ಲಿ ಆಡಲಿರುವ ಕರ್ನಾಟಕದ ಆಟಗಾರರು. ಆರ್​ಸಿಬಿಯಲ್ಲಿ ಈ ಬಾರಿಯ ಐಪಿಎಲ್​ನಲ್ಲಿ ಸಖತ್ತಾಗಿ ಮಿಂಚಿದ್ದ ಆಂಧ್ರದ ವಿಕೆಟ್ ಕೀಪರ್ ಕೆ ಎಸ್ ಭರತ್ (KS Bharat) ಅವರಿಗೆ ಅವಕಾಶ ಕೊಡಲಾಗಿದೆ. ಮತ್ತೊಬ್ಬ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಜೊತೆ ಭರತ್ ಅವರನ್ನೂ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ತಂಡದ ಪ್ರಧಾನ ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ವಿಶ್ರಾಂತಿ ಕೊಡಲಾಗಿದೆ.

  ಈಗ ಪ್ರಕಟವಾಗಿರುವ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಅವರ ಹೆಸರು ಇಲ್ಲ. ಮೊದಲ ಟೆಸ್ಟ್ ಪಂದ್ಯಕ್ಕೆ ಮಾತ್ರ ಈ ತಂಡ ಇರಬಹುದು. ಎರಡನೇ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ನಾಯಕ ಎಂದು ಬಿಸಿಸಿಐ ಘೋಷಿಸಿದೆ. ಹೀಗಾಗಿ, ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಅವರಿಗೆ ಯಾರು ಸ್ಥಾನ ಬಿಟ್ಟುಕೊಡುತ್ತಾರೆ ಗೊತ್ತಿಲ್ಲ. ಮೂಲಗಳ ಪ್ರಕಾರ, ಚೇತೇಶ್ವರ್ ಪೂಜಾರ ಅವರು ಹೊರಗುಳಿಯಬಹುದು ಎನ್ನಲಾಗಿದೆ.

  ವಿಶ್ರಾಂತಿ ಪಡೆದಿರುವ ಆಟಗಾರರು: ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರಿಷಭ್ ಪಂತ್.

  ಕೆಎಸ್ ಭರತ್​ಗೆ ಮೊದಲ ಅಂತರರಾಷ್ಟ್ರೀಯ ಪಂದ್ಯ:

  28 ವರ್ಷದ ಕೆಎಸ್ ಭರತ್ ಅವರಿಗೆ ಇದು ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವಾಗಲಿದೆ. ಇದಕ್ಕೂ ಮೊದಲು ಅವರು ಭಾರತ ಎ ತಂಡಕ್ಕೆ ಆಡಿದ ಅನುಭವ ಇದೆ. ಇನ್ನು, 25 ವರ್ಷದ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರಿಗೆ ಇದು ಮೊದಲ ಟೆಸ್ಟ್ ಪಂದ್ಯವಾಗಲಿದೆ. ಈ ಮೊದಲು ಅವರು ಟೀಮ್ ಇಂಡಿಯಾ ಪರ 3 ಏಕದಿನ ಪಂದ್ಯಗಳನ್ನ ಆಡಿದ್ದಾರೆ.

  4 ವರ್ಷಗಳ ಬಳಿಕ ಜಯಂತ್ ಪುನರಾಗಮನ:

  ಜಯಂತ್ ಯಾದವ್ ಅವರು ನಾಲ್ಕು ವರ್ಷಗಳ ಬಳಿಕ ಟೆಸ್ಟ್ ತಂಡಕ್ಕೆ ಕಂಬ್ಯಾಕ್ ಮಾಡಿದ್ಧಾರೆ. ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಜಯಂತ್ ಯಾದವ್ ಈ ನಾಲ್ವರು ಸ್ಪಿನ್ನರ್ಸ್ ಟೀಮ್ ಇಂಡಿಯಾದಲ್ಲಿ ಇದ್ದಾರೆ.

  ಇದನ್ನೂ ಓದಿ: ಭಾರತ ಟಿ20 ಮತ್ತು ಎ ತಂಡಗಳ ಪ್ರಕಟ; ಕೆಕೆಆರ್ ಸ್ಟಾರ್​ಗೆ ಚಾನ್ಸ್; ಟೀಮ್​ನಲ್ಲಿಲ್ಲ ಕೊಹ್ಲಿ ಸೇರಿ ಹಲವರು

  ಬ್ಯಾಟುಗಾರರಲ್ಲಿ ರಹಾನ್, ರಾಹುಲ್, ಮಯಂಕ್ ಪೂಜಾರ ಜೊತೆಗೆ ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್ ಅವರಿದ್ದಾರೆ. ವೇಗದ ಬೌಲರ್​ಗಳಾಗಿ ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಅವರಿದ್ದಾರೆ.

  ಆರು ಸ್ಪೆಷಲಿಸ್ಟ್ ಬ್ಯಾಟುಗಾರರು, ಇಬ್ಬರು ವಿಕೆಟ್ ಕೀಪರ್​ಗಳು, ನಾಲ್ವರು ವೇಗದ ಬೌಲರ್ಸ್, ನಾಲ್ವರು ಸ್ಪಿನ್ ಬೌಲರ್ಸ್​ಗಳು ಟೀಮ್ ಇಂಡಿಯಾದಲ್ಲಿದ್ದಾರೆ. ಇವರಲ್ಲಿ ಜಡೇಜಾ, ಅಕ್ಷರ್ ಪಟೇಲ್, ಆರ್ ಅಶ್ವಿನ್ ಅವರು ಆಲ್​ರೌಂಡರ್​ಗಳೆಂದು ಪರಿಗಣಿಸಬಹುದು.

  ಟೆಸ್ಟ್ ಸರಣಿ ವೇಳಾಪಟ್ಟಿ:

  ವಿಶ್ವಕಪ್ ಮುಗಿದ ಬಳಿಕ ನ್ಯೂಜಿಲೆಂಡ್ ತಂಡ ಭಾರತಕ್ಕೆ ಕ್ರಿಕೆಟ್ ಪ್ರವಾಸ ಬರುತ್ತಿದೆ. ನ. 17ರಿಂದ ಮೂರು ಪಂದ್ಯಗಳ ಟಿ20 ಸರಣಿ ಇದೆ. ಅದಾದ ಬಳಿಕ ಎರಡು ಟೆಸ್ಟ್ ಪಂದ್ಯಗಳ ಸರಣಿ ಇದೆ. ನ. 25ರಂದು ಕಾನ್​ಪುರ್​ನ ಗ್ರೀನ್ ಪಾರ್ಕ್​ನಲ್ಲಿ ಮೊದಲ ಪಂದ್ಯ ಆರಂಭವಾಗುತ್ತದೆ. ಡಿಸೆಂಬರ್ 3ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಎರಡನೇ ಟೆಸ್ಟ್ ಪಂದ್ಯ ಶುರುವಾಗುತ್ತದೆ.

  ಇದನ್ನೂ ಓದಿ: Virat Kohli- ವಿರಾಟ್ ಕೊಹ್ಲಿ ರಿಟೈರ್ ಆಗ್ತಾರೆ ನೋಡ್ತಾ ಇರಿ: ಮಾಜಿ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ

  ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ:

  ಅಜಿಂಕ್ಯ ರಹಾನೆ (ನಾಯಕ), ಕೆಎಲ್ ರಾಹುಲ್, ಮಯಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ (ಉಪನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಾಹಾ (ವಿ.ಕೀ.), ಕೆ ಎಸ್ ಭರತ್ (ವಿ.ಕೀ.), ರವೀಂದ್ರ ಜಡೇಜಾ, ಆರ್ ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
  Published by:Vijayasarthy SN
  First published: