Ravindrasinh Jadeja: ಸಿಂಹದ ಜೊತೆಗೆ ಆಲ್ರೌಂಡರ್ ರವೀಂದ್ರ ಜಡೇಜಾ! ಫೋಟೋ, ವಿಡಿಯೋ ವೈರಲ್

ರವೀಂದ್ರ ಜಡೇಜಾ ಅವರು ಹಂಚಿಕೊಂಡ ವಿಡಿಯೋದ ಆರಂಭದಲ್ಲಿ ಮೂರು ಸಿಂಹಗಳು ಕಾಣಿಸಿಕೊಳ್ಳುತ್ತವೆ. ಸಿಂಹಗಳು ಮೊದಲಿಗೆ ದಿಟ್ಟ ಹೆಜ್ಜೆಗಳನ್ನಿಟ್ಟು ಗಾಂಭೀರ್ಯವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತವೆ.

Ravindra Jadeja

Ravindra Jadeja

  • Share this:
    ಕಳೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಇಂಜುರಿಗೆ ತುತ್ತಾದ ಪರಿಣಾಮ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಗುಳಿದಿರುವ ಭಾರತ ಕ್ರಿಕೆಟ್ ತಂಡದ ಆಲ್ರೌಂಡ್ ಆಟಗಾರ ರವೀಂದ್ರ ಜಡೇಜಾ ಇದೀಗ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಆನಂದವಾಗಿ ಕಾಲ ಕಳೆಯುತ್ತಿದ್ದಾರೆ. ಫೆಬ್ರವರಿ 8 ರಂದು ಗಿರ್ ಉದ್ಯಾನವನದಲ್ಲಿ ಪ್ರವಾಸ ಕೈಗೊಂಡ ಅವರು ಮೂರು ಸಿಂಹಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯವನ್ನು ಹಂಚಿಕೊಳ್ಳುತ್ತಾ ಇದು ಅತ್ಯುತ್ತಮ ಅನುಭವ ಎಂದು ಹೇಳಿಕೊಂಡಿದ್ದಾರೆ.

    ಈ ರೋಡ್ ಟ್ರಿಪ್ ಅತ್ಯುತ್ತಮ ಅನುಭವ ಎಂದು ಜಡೇಜಾ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ. ಆದರೆ, ವನ್ಯಜೀವಿ ಪ್ರಾಣಿಗಳೊಂದಿಗೆ ಫೋಟೋ ತೆಗೆದುಕೊಳ್ಳುವುದನ್ನು ನಿಷೇಧಿಸಿರುವ ವನ್ಯಜೀವಿ ಸಂರಕ್ಷಣಾ ಕಾಯ್ಕೆಯನ್ನು ಅವರು ಮತ್ತೊಮ್ಮೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿವೆ.

    India vs England: ಮೊದಲ ಟೆಸ್ಟ್​ನಲ್ಲಿ ಈ ಆಟಗಾರ ಯಾಕೆ ಆಡಿಲ್ಲವೆಂದು ಕಾರಣ ತಿಳಿಸಿದ ವಿರಾಟ್ ಕೊಹ್ಲಿ

    ವಿಡಿಯೋದಲ್ಲಿ ಏನಿದೆ?

    ರವೀಂದ್ರ ಜಡೇಜಾ ಅವರು ಹಂಚಿಕೊಂಡ ವಿಡಿಯೋದ ಆರಂಭದಲ್ಲಿ ಮೂರು ಸಿಂಹಗಳು ಕಾಣಿಸಿಕೊಳ್ಳುತ್ತವೆ. ಸಿಂಹಗಳು ಮೊದಲಿಗೆ ದಿಟ್ಟ ಹೆಜ್ಜೆಗಳನ್ನಿಟ್ಟು ಗಾಂಭೀರ್ಯವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತವೆ. ಈ ದೃಶ್ಯವನ್ನು ಅದ್ಭುತವಾಗಿ ಸೆರೆಹಿಡಿದಿರುವ ಜಡೇಜಾ ಅವರು ಇದು ಅತ್ಯುತ್ತಮ ಅನುಭವ ಎಂದು ಟ್ವಿಟ್ಟರ್​ನಲ್ಲಿ ಶಿರ್ಷಿಕೆ ಕೊಟ್ಟು ಬರೆದುಕೊಂಡಿದ್ದಾರೆ. ವಿಡಿಯೋ ಜೊತೆಗೆ ಸಿಂಹಗಳ ಜೊತೆಗೆ ಫೋಟೋಗಳನ್ನು ತೆಗೆದುಕೊಂಡು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ಈ ಫೋಟೋ ವೈರಲ್ ಆಗುತ್ತಿದೆ.





    ಇನ್ನು, ದಕ್ಷಿಣ ಆಫ್ರಿಕಾದಲ್ಲಿ 2018ರಲ್ಲಿ ಪ್ರಾಣಿಯೊಂದಿಗೆ ತೆಗೆದುಕೊಂಡ ಫೋಟೋವನ್ನು ಜಡೇಜಾ ಅವರು ಪೋಸ್ಟ್ ಮಾಡಿದ್ದರು. 2016ರಲ್ಲಿ ಸಿಂಹಗಳೊಂದಿಗೆ ರವೀಂದ್ರ ಜಡೇಜಾ ಅವರು ಫೋಟೋಗಳನ್ನು ತೆಗೆದುಕೊಂಡ ಕಾರಣಕ್ಕಾಗಿ ದಂಡ ವಿಧಿಸಲಾಗಿತ್ತು. ಇನ್ನು, ಜಡೇಜಾ ಅವರು ಗುಜರಾತ್‌ನ ಸೌರಾಷ್ಟ್ರ ನಗರದಲ್ಲಿ ವಾಸಿಸುತ್ತಾರೆ. ಅವರು ವಾಸಿಸುವ ಸ್ಥಳದ ಸಮೀಪವೇ ಗಿರ್ ರಾಷ್ಟ್ರೀಯ ಉದ್ಯಾನವನವಿದೆ.

    Kevin Pietersen: ನಾ ಅವತ್ತೇ ಹೇಳಿದ್ದೆ ಜಾಸ್ತಿ ಸಂಭ್ರಮಿಸಬೇಡಿ ಎಂದು: ಸೋಲಿನ ಬೆನ್ನಲ್ಲೇ ಭಾರತೀಯರ ಕಾಲೆಳೆದ ಪೀಟರ್ಸನ್

    ಬಾರ್ಡರ್-ಗವಾಸ್ಕರ್ ಟ್ರೋಫಿಯ 3ನೇ ಟೆಸ್ಟ್ ವೇಳೆ ಜಡೇಜಾ ಅವರು ಹೆಬ್ಬೆರಳಿಗೆ ಗಾಯಮಾಡಿಕೊಂಡಿದ್ದರು. ಹೀಗಾಗಿ ಸರಣಿಯ ಅಂತಿಮ ಟೆಸ್ಟ್ ಮುನ್ನವೇ ಮನೆಗೆ ಮರಳಿದರು.
    Published by:Vinay Bhat
    First published: