ನಾಳಿನ ಪಂದ್ಯದಲ್ಲಿ ಭಾರತಕ್ಕೆ ಮಾರಕವಾಗಬಹುದು ಈ ವಿಚಾರ; ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆ

ಟೀಂ ಇಂಡಿಯಾ ಏಕದಿನ ರ್ಯಾಂಕಿಂಗ್​ನಲ್ಲಿ 2ನೇ ಸ್ಥಾನದಲ್ಲಿದೆ. ವೆಸ್ಟ್​ ಇಂಡೀಸ್​ ಇರುವುದು ಏಳನೇ ಸ್ಥಾನದಲ್ಲಿ. ಆದಾಗ್ಯೂ, ತನ್ನದೇ ನಾಡಿನಲ್ಲಿ ವಿರಾಟ್​ ಕೊಹ್ಲಿಗೆ ಸರಣಿ ಸೋಲುವ ಭಯ ಎದುರಾಗಿದೆ.

Rajesh Duggumane | news18-kannada
Updated:December 17, 2019, 2:04 PM IST
ನಾಳಿನ ಪಂದ್ಯದಲ್ಲಿ ಭಾರತಕ್ಕೆ ಮಾರಕವಾಗಬಹುದು ಈ ವಿಚಾರ; ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆ
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ
  • Share this:
ವೆಸ್ಟ್​​ ಇಂಡೀಸ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿತ್ತು. ವಿರಾಟ್​ ಕೊಹ್ಲಿ ಪಡೆ ನೀಡಿದ್ದ 288ರನ್​ಗಳ ಮೊತ್ತವನ್ನು ವೆಸ್ಟ್​​ ಇಂಡೀಸ್​  ಕೇವಲ ಎರಡು ವಿಕೆಟ್​ಗಳಲ್ಲಿ ಹೊಡೆದು ಮುಗಿಸಿತ್ತು. ಈಗ ಎರಡನೇ ಏಕದಿನ ಪಂದ್ಯದಲ್ಲಿ ಗೆಲ್ಲಲು ಭಾರತ ಎಲ್ಲಿಲ್ಲದ ತಯಾರಿ ನಡೆಸುತ್ತಿದೆ.

ಬೌಲರ್​ ಭುವನೇಶ್ವರ್​ ಕುಮಾರ್​ ಈ ಸರಣಿಗೆ ಅಲಭ್ಯವಾಗಿದ್ದಾರೆ. ಹೀಗಾಗಿ, ಬೌಲರ್​ಗಳ ಅಗತ್ಯತೆ ಟೀಂ ಇಂಡಿಯಾಗೆ ಅತ್ಯಧಿಕವಾಗಿದ್ದು, ಶಿವಮ್​ ಡುಬೆ ನಾಳೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಹೀಗಾದಲ್ಲಿ ಬೌಲಿಂಗ್​ ಹಾಗೂ ಬ್ಯಾಟಿಂಗ್​ನಲ್ಲಿ ಭಾರತಕ್ಕೆ ಬಲ ಸಿಗಲಿದೆ.

ಟೀಂ ಇಂಡಿಯಾ ಏಕದಿನ ರ್ಯಾಂಕಿಂಗ್​ನಲ್ಲಿ 2ನೇ ಸ್ಥಾನದಲ್ಲಿದೆ. ವೆಸ್ಟ್​ ಇಂಡೀಸ್​ ಇರುವುದು ಏಳನೇ ಸ್ಥಾನದಲ್ಲಿ. ಆದಾಗ್ಯೂ, ತನ್ನದೇ ನಾಡಿನಲ್ಲಿ ವಿರಾಟ್​ ಕೊಹ್ಲಿಗೆ ಸರಣಿ ಸೋಲುವ ಭಯ ಎದುರಾಗಿದೆ. ಈ ಕಾರಣಕ್ಕೆ ಮುಂದಿನ ಎರಡೂ ಪಂದ್ಯವನ್ನು ಗೆಲ್ಲಲೇಬೇಕು ಎನ್ನುವ ಛಲಕ್ಕೆ ಭಾರತ ಬಿದ್ದಿದೆ.

ಇದನ್ನೂ ಓದಿ: ಕ್ರಿಕೆಟ್​ನಲ್ಲಿ ಈರೀತಿ ಎಂದೂ ನೋಡಿರಲಿಲ್ಲ; ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಕೆಂಡಾಮಂಡಲ ಆಗಿದ್ದೇಕೆ?

ನಾಳಿನ ಪಂದ್ಯಕ್ಕೆ ಹವಾಮಾನವೇ ಮುಳುವಾಗುವ ಸಾಧ್ಯತೆ ಇದೆ. ಪಂದ್ಯ ನಡೆಯುತ್ತಿರುವುದು ವಿಶಾಖಪಟ್ಟಣದಲ್ಲಿ. ನಾಳೆ ವಿಶಾಖಪಟ್ಟಣದಲ್ಲಿ ಹ್ಯುಮಿಡಿಟಿ ಅತಿಯಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಎರಡೂ ತಂಡದವರಿಗೆ ಜಾಸ್ತಿ ಹೊತ್ತು ಕ್ರೀಜ್​ನಲ್ಲಿ ನಿಲ್ಲುವುದು ಕಷ್ಟವಾಗಬಹುದು.

ನಾಳಿನ ಪಂದ್ಯದಲ್ಲಿ ಆರಂಭಿಕರಾದ ಕೆ.ಎಲ್​.ರಾಹುಲ್​ ಹಾಗೂ ರೋಹಿತ್​ ಶರ್ಮ ಎಚ್ಚರಿಕೆಯ ಆಟವಾಡುವ ಅಗತ್ಯತೆ ಇದೆ. ಇಲ್ಲವಾದಲ್ಲಿ ಕೊಹ್ಲಿ ಪಡೆಗೆ ಸಂಕಷ್ಟ ಎದುರಾಗಬಹುದು. ವಿಶಾಖಪಟ್ಟಣಂ ಬ್ಯಾಟಿಂಗ್​ ಪಿಚ್​ ಆಗಿದ್ದು, ಮೊದಲು ಬ್ಯಾಟ್​ ಬೀಸಿದವರು ದೊಡ್ಡ ಮೊತ್ತದ ರನ್​ ಕಲೆ ಹಾಕಬಹುದು.

ಭಾರತ ಆಡುವ ಸಂಭಾವ್ಯ XI ಪಟ್ಟಿ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಕೆ ಎಲ್ ರಾಹುಲ್, ಶ್ರೇಯಸ್‌ ಐಯ್ಯರ್‌, ಕೇದರ್‌ ಜಾಧವ್‌, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಶಿವಂ ದುಬೆ, ಶಾರ್ದೂಲ್​ ಠಾಕೂರ್​, ದೀಪಕ್‌ ಚಹರ್‌, ಮೊಹಮ್ಮದ್‌ ಶಮಿ.

 
First published:December 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ