ಕೊಹ್ಲಿ ತ್ರಿಶತಕ; ಕನ್ನಡಿಗ ಪವನ್ ಶತಕ: ಮಿಝೋರಾಮ್​ನ 620 ರನ್ ಇನ್ನಿಂಗ್ಸ್ ಹೈಲೈಟ್ಸ್

ತರುವರ್ ಕೊಹ್ಲಿ ಅವರು ವಿರಾಟ್ ಕೊಹ್ಲಿಗೆ ಸಮಕಾಲೀನರು. ಅಂಡರ್-19 ವಿಶ್ವಕಪ್​ನಲ್ಲಿ ಇಬ್ಬರೂ ಒಂದೇ ತಂಡದಲ್ಲಿದ್ದವರು. ವಿರಾಟ್ ಕೊಹ್ಲಿಯಂತೆ ತರುವರ್ ಕೊಹ್ಲಿ ಕೂಡ ಆ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

Vijayasarthy SN | news18
Updated:December 19, 2019, 5:33 PM IST
ಕೊಹ್ಲಿ ತ್ರಿಶತಕ; ಕನ್ನಡಿಗ ಪವನ್ ಶತಕ: ಮಿಝೋರಾಮ್​ನ 620 ರನ್ ಇನ್ನಿಂಗ್ಸ್ ಹೈಲೈಟ್ಸ್
ತರುವರ್ ಕೊಹ್ಲಿ
  • News18
  • Last Updated: December 19, 2019, 5:33 PM IST
  • Share this:
ಪುದುಚೇರಿ(ಡಿ. 19): ರಣಜಿ ಟ್ರೋಫಿ ಟೂರ್ನಿಯಲ್ಲಿ ಮಿಝೋರಾಮ್ ತಂಡ ತನ್ನ ಮೊದಲ ಇನ್ನಿಂಗ್ಸಲ್ಲಿ ಬರೋಬ್ಬರಿ 620 ರನ್ ಪೇರಿಸಿದೆ. ಕೊಹ್ಲಿ ಅವರ ಅಮೋಘ ತ್ರಿಶತಕ ಈ ತಂಡದ ಇನ್ನಿಂಗ್ಸ್​ನ ಮುಖ್ಯಾಂಶವಾಗಿದೆ. ಇಲ್ಲಿ ಕೊಹ್ಲಿ ಅಂದರೆ ವಿರಾಟ್ ಕೊಹ್ಲಿಯಲ್ಲ, ತರುವರ್ ಕೊಹ್ಲಿ. ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಬಂದಿದೆ. ಅರುಣಾಚಲದ 343 ರನ್​ಗಳ ಮೊದಲ ಇನ್ನಿಂಗ್ಸ್​ಗೆ ಪ್ರತಿಯಾಗಿ ಮಿಝೋರಾಮ್ ಬೃಹತ್ ಮೊತ್ತ ಕಲೆಹಾಕಿ 1 ವಿಕೆಟ್ ಕೈಲಿರುವಂತೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ತರುವರ್ ಕೊಹ್ಲಿ ಕೇವಲ 408 ಬಾಲ್​ನಲ್ಲಿ ಇವರು 307 ರನ್ ಗಳಿಸಿ ಅಜೇಯರಾಗಿ ಉಳಿದರು. ಇದು ಅವರಿಗೆ ಎರಡನೇ ರಣಜಿ ತ್ರಿಶತಕವಾಗಿದೆ. ತಂಡದ ನಾಯಕ ಹಾಗೂ ಕನ್ನಡಿಗ ಕೆ.ಬಿ. ಪವನ್ ಮತ್ತು ಲಾಲ್ರೂಜೆಲಾ ಕೂಡ ಶತಕಗಳನ್ನು ಭಾರಿಸಿದರು. ತರುವರ್ ಕೊಹ್ಲಿ ಎರಡು ಪ್ರಮುಖ ಜೊತೆಯಾಟದಲ್ಲಿ ಭಾಗಿಯಾದರು. ಲಾಲ್ರೂಜೆಲಾ ಮತ್ತು ತರುವರ್ ಕೊಹ್ಲಿ 2ನೇ ವಿಕೆಟ್​ಗೆ 197 ರನ್ ಜೊತೆಯಾಟ ಆಡಿದರು. ಹಾಗಿಯೇ, ತರುವರ್ ಕೊಹ್ಲಿ ಮತ್ತು ಕೆಬಿ ಪವನ್ 3ನೇ ವಿಕೆಟ್​ಗೆ 184 ರನ್ ಜೊತೆಯಾಟದಲ್ಲಿ ಭಾಗಿಯಾದರು.

ಇದನ್ನೂ ಓದಿ: 6,6, 4, 6, 6: ಭಾರತ ಪರ ನೂತನ ದಾಖಲೆ ಬರೆದ ರಿಷಭ್ ಪಂತ್- ಶ್ರೇಯಸ್ ಐಯರ್!

ಅತ್ತ, ಅರುಣಾಚಲ ಪ್ರದೇಶದ ಮೊದಲ ಇನ್ನಿಂಗ್ಸಲ್ಲಿ ರಾಹುಲ್ ದಲಾಲ್ 178 ರನ್ ಗಳಿಸಿದ್ದು ಹೈಲೈಟ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ತ್ರಿಶತಕ ಗಳಿಸಿದ್ದ ತರುವರ್ ಕೊಹ್ಲಿ ಅವರು ವಿರಾಟ್ ಕೊಹ್ಲಿಗೆ ಸಮಕಾಲೀನರು. ಅಂಡರ್-19 ವಿಶ್ವಕಪ್​ನಲ್ಲಿ ಇಬ್ಬರೂ ಒಂದೇ ತಂಡದಲ್ಲಿದ್ದವರು. ವಿರಾಟ್ ಕೊಹ್ಲಿಯಂತೆ ತರುವರ್ ಕೊಹ್ಲಿ ಕೂಡ ಆ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆಲ್​ರೌಂಡರ್ ಆಗಿರುವ ತರುವರ್ ಕೊಹ್ಲಿ ಕಿರಿಯರ ವಿಶ್ವಕಪ್ ಬಳಿಕ ಹೆಚ್ಚು ಅದೃಷ್ಟ ಕಾಣಲಿಲ್ಲ. ಆದರೆ, ದೇಶೀಯ ಕ್ರಿಕೆಟ್​ನಲ್ಲಿ ಸಾಕಷ್ಟು ಮಿಂಚಿದ್ದಾರೆ. ಪಂಜಾಬ್ ಸಂಜಾತರಾದ ತರುವರ್ ಕೊಹ್ಲಿ ಈಗ ಮಿಝೋರಾಮ್ ಪರ ಆಡುತ್ತಿದ್ದಾರೆ. 39ನೇ ಪ್ರಥಮ ದರ್ಜೆ ಪಂದ್ಯ ಆಡುತ್ತಿರುವ ಅವರು 2 ತ್ರಿಶತಕ ಸೇರಿದಂತೆ 6 ಶತಕ ಭಾರಿಸಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ