• Home
 • »
 • News
 • »
 • sports
 • »
 • ಸಯದ್ ಮುಷ್ತಾಕ್ ಅಲಿ ಟ್ರೋಫಿ: ತಮಿಳುನಾಡು ಚಾಂಪಿಯನ್; ಫೈನಲ್​ನಲ್ಲಿ ಬರೋಡಾ ವಿರುದ್ಧ ಜಯಭೇರಿ

ಸಯದ್ ಮುಷ್ತಾಕ್ ಅಲಿ ಟ್ರೋಫಿ: ತಮಿಳುನಾಡು ಚಾಂಪಿಯನ್; ಫೈನಲ್​ನಲ್ಲಿ ಬರೋಡಾ ವಿರುದ್ಧ ಜಯಭೇರಿ

ತಮಿಳುನಾಡು ಕ್ರಿಕೆಟ್ ತಂಡ

ತಮಿಳುನಾಡು ಕ್ರಿಕೆಟ್ ತಂಡ

ಗೆಲ್ಲಲು ಬರೋಡಾ ಒಡ್ಡಿದ 121 ರನ್ ಗುರಿ ಬೆನ್ನಟ್ಟಿದ ತಮಿಳುನಾಡು ತಂಡ 2 ಓವರ್ ಇರುವಂತೆ 7 ವಿಕೆಟ್​ಗಳಿಂದ ಗೆಲುವು ಸಾಧಿಸಿ ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಚಾಂಪಿಯನ್ ಆಯಿತು.

 • News18
 • Last Updated :
 • Share this:

  ಅಹ್ಮದಾಬಾದ್(ಜ. 31): ತಮಿಳುನಾಡು ರಾಜ್ಯ ಕ್ರಿಕೆಟ್ ತಂಡ ಈ ಬಾರಿಯ ಸಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದುಕೊಂಡಿದೆ. ಇಂದು ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬರೋಡಾ ವಿರುದ್ಧ 7 ವಿಕೆಟ್​ಗಳಿಂದ ನಿರಾಯಾಸವಾಗಿ ಜಯಭೇರಿ ಭಾರಿಸಿತು. ಗೆಲ್ಲಲು ಕೇವಲ 121 ರನ್ ಗುರಿ ಪಡೆದ ತಮಿಳುನಾಡು 2 ಓವರ್ ಬಾಕಿ ಇರುವಂತೆ ಗೆಲುವಿನ ದಡ ಮುಟ್ಟಿತು. ಟಾಸ್ ಜಯಿಸಿ ಬರೋಡಾವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿದ ತಮಿಳುನಾ ತಂಡ ತನ್ನ ಎದುರಾಳಿಗಳನ್ನ ಕೇವಲ 120 ರನ್ನಿಗೆ ಕಟ್ಟಿಹಾಕಿತು. ವಿಷ್ಣು ಸೋಲಂಕಿ 49 ರನ್ ಗಳಿಸಿದ್ದು ಬಿಟ್ಟರೆ ಬರೋಡಾದ ಮಾನ ಉಳಿಸಿದ್ದು ಬಾಲಂಗೋಚಿಗಳಾದ ಅತೀತ್ ಶೇಟ್ ಮತ್ತು ಬಾರ್ಗವ್ ಭಟ್. ಇವರಿಲ್ಲದಿದ್ದರೆ ಬರೋಡಾದ ಸ್ಕೋರು ನೂರು ರನ್ ಗಡಿ ಕೂಡ ಮುಟ್ಟಲು ಸಾಧ್ಯವಾಗುತ್ತಿರಲಿಲ್ಲ. ಎಡಗೈ ಸ್ಪಿನ್ನರ್ ಎಂ ಸಿದ್ಧಾರ್ಥ್ 4 ವಿಕೆಟ್ ಪಡೆದು ಬರೋಡಾ ಬ್ಯಾಟುಗಾರರಿಗೆ ಮಾರಕವಾಗಿ ಪರಿಣಮಿಸಿದರು. ಆರ್ ಸಾಯಿ ಕಿಶೋರ್ ಕೇವಲ 11 ರನ್ನಿತ್ತು ಎದುರಾಳಿಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಪರಿಣಾಮವಾಗಿ ಬರೋಡಾ ನಿಗದಿತ 20 ಓವರ್​ನಲ್ಲಿ 9 ವಿಕೆಟ್​ಗೆ 120 ರನ್ ಮಾತ್ರ ಗಳಿಸಲು ಶಕ್ಯವಾಯಿತು.


  ಸುಲಭ ಗುರಿಯನ್ನು ಬೆನ್ನತ್ತುವಲ್ಲಿ ತಮಿಳುನಾಡು ಬ್ಯಾಟುಗಾರರು ಯಾವ ತಪ್ಪೂ ಎಸಗಲಿಲ್ಲ. ಹರಿ ನಿಶಾಂತ್, ಬಾಬಾ ಅಪರಾಜಿತ್, ದಿನೇಶ್ ಕಾರ್ತಿಕ್, ಶಾರುಖ್ ಖಾನ್ ಅವರು ಚೇಸಿಂಗ್ ಹಾದಿಯನ್ನ ಸುಗಮಗೊಳಿಸಿದರು. ಬರೋಡಾ ಬ್ಯಾಟ್ಸ್​ಮನ್​ಗಳನ್ನ ಕಟ್ಟಿಹಾಕಿದ ಮಣಿಮಾರನ್ ಸಿದ್ಧಾರ್ಥ್ ಅವರು ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.


  ಇದನ್ನೂ ಓದಿ: IPL 2021: ಹರಾಜಿನಲ್ಲಿ ಕೇರಳ ಎಕ್ಸ್​ಪ್ರೆಸ್ ಶ್ರೀಶಾಂತ್ ಮೇಲೆ ಕಣ್ಣಿಟ್ಟಿದೆ ಈ ಎರಡು ದೊಡ್ಡ ಫ್ರಾಂಚೈಸಿ


  ಸ್ಕೋರು ವಿವರ:


  ಬರೋಡಾ 20 ಓವರ್ 120/9
  (ವಿಷ್ಣು ಸೋಲಂಕಿ 49, ಅತೀತ್ ಸೇಟ್ 29, ಕೇದಾರ್ ದೇವಧರ್ 16, ಬಾರ್ಗವ್ ಭಟ್ 12 ರನ್ – ಎಂ ಸಿದ್ಧಾರ್ಥ್ 20/4)


  ತಮಿಳುನಾಡು 18 ಓವರ್ 123/3
  (ಹರಿ ನಿಶಾಂತ್ 35, ಬಾಬಾ ಅಪರಾಜಿತ್ ಅಜೇಯ 29, ದಿನೇಶ್ ಕಾರ್ತಿಕ್ 22, ಶಾರುಖ್ ಖಾನ್ ಅಜೇಯ 18, ಎನ್ ಜಗದೀಸನ್ 14 ರನ್)

  Published by:Vijayasarthy SN
  First published: