T20 World Cup India Squad- ಭಾರತ ತಂಡ, ಆಟಗಾರರ ಫಾರ್ಮ್, ವೇಳಾಪಟ್ಟಿ ಇತ್ಯಾದಿ ವಿವರ

India T20 Cricket Team Details- ಯುಎಇಯಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತವೂ ಒಂದು. ತಂಡದ ಬಹುತೇಕ ಆಟಗಾರರು ಒಳ್ಳೆಯ ಫಾರ್ಮ್​ನಲ್ಲಿದ್ದಾರೆ.

ರೋಹಿತ್ ಶರ್ಮಾ- ವಿರಾಟ್​ ಕೊಹ್ಲಿ .

ರೋಹಿತ್ ಶರ್ಮಾ- ವಿರಾಟ್​ ಕೊಹ್ಲಿ .

 • Share this:
  ದುಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಅಂತ್ಯದ ವೇಳೆಯಲ್ಲಿ ಟಿ20 ವಿಶ್ವಕಪ್​ಗೆ ಭಾರತ ತಂಡವನ್ನ ಪ್ರಕಟಿಸಲಾಯಿತು. ವಿರಾಟ್ ಕೊಹ್ಲಿ ನೇತೃತ್ವದಲ್ಲಿ 15 ಆಟಗಾರರು ಹಾಗೂ 3 ಮೀಸಲು ಆಟಗಾರರಿರುವ ತಂಡವನ್ನು (India T20 World Cup team) ಬಿಸಿಸಿಐ ಘೋಷಿಸಿತು. ಐಪಿಎಲ್ ಮುಗಿದ ಬಳಿಕ ಒಂದು ಬದಲಾವಣೆ ಆಗಿ ಅಕ್ಷರ್ ಪಟೇಲ್ ಬದಲು ಶಾರ್ದೂಲ್ ಠಾಕೂರ್​ಗೆ ಅವಕಾಶ ಕೊಡಲಾಗಿದೆ. ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಚಾಹರ್ ಈ ಮೂವರನ್ನ ಸ್ಟ್ಯಾಂಡ್​​ಬೈ ಆಗಿ ಇಟ್ಟುಕೊಳ್ಳಲಾಗಿದೆ. ನಾಲ್ವರು ಸ್ಪೆಷಲಿಸ್ಟ್ ಬ್ಯಾಟರ್ಸ್ ಇದ್ದಾರೆ. ಇಬ್ಬರು ವಿಕೆಟ್ ಕೀಪಿಂಗ್ ಬ್ಯಾಟರ್ಸ್ ಇದ್ದಾರೆ. ಇಬ್ಬರು ಆಲ್​ರೌಂಡರ್​ಗಳು, ನಾಲ್ವರು ಸ್ಪಿನ್ನರ್ಸ್, ಐವರು ವೇಗಿಗಳು ತಂಡದಲ್ಲಿದ್ಧಾರೆ.

  ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿ.ಕೀ.), ಇಶಾನ್ ಕಿಶನ್ (ವಿ.ಕೀ.), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಾಹರ್, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್​ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ.

  ಸ್ಟ್ಯಾಂಡ್​ಬೈ ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ದೀಪಕ್ ಚಾಹರ್.

  ಭಾರತದ ಪಂದ್ಯಗಳು:

  ಅ. 24: ಪಾಕಿಸ್ತಾನದ ವಿರುದ್ಧ ದುಬೈನಲ್ಲಿ.

  ಅ. 31: ನ್ಯೂಜಿಲೆಂಡ್ ವಿರುದ್ಧ ದುಬೈನಲ್ಲಿ

  ನ. 3: ಅಫ್ಘಾನಿಸ್ತಾನ್ ವಿರುದ್ಧ ಅಬುಧಾಬಿಯಲ್ಲಿ

  ನ. 5: ಎದುರಾಳಿ ಘೋಷಣೆ ಆಗಬೇಕು (ದುಬೈನಲ್ಲಿ ಪಂದ್ಯ)

  ನ. 8: ಎದುರಾಳಿ ಘೋಷಣೆ ಆಗಬೇಕು (ದುಬೈನಲ್ಲಿ ಪಂದ್ಯ)

  ಈ ಎಲ್ಲಾ ಪಂದ್ಯಗಳು ಸಂಜೆ 7:30ಕ್ಕೆ ಪ್ರಾರಂಭವಾಗುತ್ತವೆ.

  ಭಾರತದಲ್ಲಿ ನಡೆಯಬೇಕಿದ್ದ ವಿಶ್ವಕಪ್:

  ಈ ಟಿ20 ವಿಶ್ವಕಪ್ ಕಳೆದ ವರ್ಷ ಭಾರತದಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್ ಕಾರಣಕ್ಕೆ ಮುಂದೂಡಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಟೂರ್ನಿಯನ್ನ ಶಿಫ್ಟ್ ಮಾಡಲು ಯೋಜಿಸಲಾಯಿತಾದರೂ ಈ ಕಾಲಘಟ್ಟದಲ್ಲಿ ಕಾಂಗರೂಗಳ ನೆಲದಲ್ಲಿ ಮಳೆಯ ಸೀಸನ್ ಇರುವುದರಿಂದ ಅಂತಿಮವಾಗಿ ಯುಎಇಯಲ್ಲಿ ಪಂದ್ಯಾವಳಿ ಆಯೋಜಿಸಲು ನಿರ್ಧರಿಸಲಾಯಿತು. ವಿಶ್ವಕಪ್​ಗೆ ಮುನ್ನ ಯುಎಇಯಲ್ಲಿಯೇ ಐಪಿಎಲ್ ಪಂದ್ಯಗಳನ್ನ ನಡೆಸಿದ್ದು ಭಾರತಕ್ಕೆ ಬಹಳ ಅನುಕೂಲವಾಯಿತು.

  ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

  ಟೀಮ್ ಇಂಡಿಯಾ ಆಟಗಾರರ ಫಾರ್ಮ್ ಹೇಗಿದೆ:

  1) ವಿರಾಟ್ ಕೊಹ್ಲಿ: ವಿಶ್ವಕಪ್​ಗೆ ಮುನ್ನ ಯುಎಇಯಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯಿಂದ ಗಮನಾರ್ಹ ಪ್ರದರ್ಶನ ಬರಲಿಲ್ಲ. ಅವರ ನಾಯಕತ್ವದ ಬಗ್ಗೆ ತಜ್ಞರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಟಿ20 ವಿಶ್ವಕಪ್ ಮತ್ತು ಐಪಿಎಲ್ ಬಳಿಕ ಟಿ20 ತಂಡಗಳ ಕ್ಯಾಪ್ಟನ್ಸಿ ಜವಾಬ್ದಾರಿಯನ್ನ ಬಿಟ್ಟುಕೊಡುವುದಾಗಿ ಅವರು ಹೇಳಿದ್ದಾರೆ. ಹೀಗಾಗಿ, ಇದು ನಾಯಕರಾಗಿ ಅವರ ಕೊನೆಯ ಟಿ20 ವಿಶ್ವಕಪ್ ಆಗಿರಲಿದೆ. ಈ ಹಿಂದೆ ತಮ್ಮ ಅಗ್ರೆಸಿವ್ ಕ್ಯಾಪ್ಟನ್ಸಿಯಿಂದ ತಂಡಕ್ಕೆ ಹಲವು ಗೆಲುವು ದಕ್ಕಿಸಿಕೊಟ್ಟಿದ್ಧಾರೆ.

  2) ರೋಹಿತ್ ಶರ್ಮಾ: ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವ ರೋಹಿತ್ ಶರ್ಮಾ ಒಳ್ಳೆಯ ಫಾರ್ಮ್​ನಲ್ಲಿದ್ದಾರೆ. ಹೆಚ್ಚು ರನ್ ಗಳಿಸದಿದ್ದರೂ ಟೂರ್ನಿಯಲ್ಲಿ ಇವರು ಸ್ಥಿರ ಪ್ರದರ್ಶನ ನೀಡಿದ್ಧಾರೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಆಧಾರ ಸ್ತಂಭ ಇವರು. ಓಪನಿಂಗ್ ಬ್ಯಾಟರ್ ಆಗಿದ್ಧಾರೆ.

  3) ಕೆಎಲ್ ರಾಹುಲ್: ಇವರು ಟಿ20 ಕ್ರಿಕೆಟ್​ಗೆ ಹೇಳಿ ಮಾಡಿಸಿದ ಆಟಗಾರ. ಐಪಿಎಲ್ ಆಗಲೀ ಅಂತರರಾಷ್ಟ್ರೀಯ ಟಿ20 ಆಗಲೀ ಇವರು ರನ್ ಹೊಳೆಯನ್ನೇ ಹರಿಸಿದ್ದಾರೆ. ಐಪಿಎಲ್​ನಲ್ಲಿ ಪಂಜಾಬ್ ತಂಡ ಹಿನ್ನಡೆ ಅನುಭವಿಸಿದರೂ ಕೆಎಲ್ ರಾಹುಲ್ ಇಡೀ ಸೀಸನ್​ನಲ್ಲಿ 626 ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್​ನಲ್ಲಿ ಮೂರನೇ ಸ್ಥಾನ ಪಡೆದರು. ಇಂಗ್ಲೆಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಮಿಂಚಿನ ಅರ್ಧಶತಕ ಸಿಡಿಸಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ಧಾರೆ.

  4) ಸೂರ್ಯಕುಮಾರ್ ಯಾದವ್: ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡಿದ ಇವರು ಬಹುತೇಕ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದರು. ಆದರೆ, ಕೊನೆಯ ಎರಡು ಪಂದ್ಯಗಳಲ್ಲಿ ಇವರು ಫಾರ್ಮ್​ಗೆ ಬಂದಿದ್ಧಾರೆ. ಇವರು ಭಾರತ ತಂಡಕ್ಕೆ ಗೇಮ್ ಚೇಂಜರ್ ಆಗಬಲ್ಲರು.

  5) ರಿಷಭ್ ಪಂತ್: ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಅದ ರಿಷಭ್ ಪಂತ್ ಆಕರ್ಷಕ ಶಾಟ್​ಗಳನ್ನ ಹೊಂದಿರುವ ಆಟಗಾರ. ಮಿಡಲ್ ಆರ್ಡರ್​ನಲ್ಲಿ ತಂಡಕ್ಕೆ ಅಗತ್ಯ ಇರುವ ಸ್ಫೋಟಕ ಆಟವನ್ನು ಆಡಬಲ್ಲವರು.

  6) ಇಶಾನ್ ಕಿಶನ್: ಇವರು ವಿಕೆಟ್ ಕೀಪಿಂಗ್ ಮತ್ತು ಫೀಲ್ಡಿಂಗ್ ಎರಡೂ ಮಾಡಬಲ್ಲರು. ಸ್ಫೋಟಕ ಬ್ಯಾಟಿಂಗ್​ನಿಂದ ಹೆಸರುವಾಸಿಯಾಗಿದ್ಧಾರೆ. ಮುಂಬೈ ಇಂಡಿಯನ್ಸ್ ಪರ ಅನೇಕ ಪಂದ್ಯಗಳಲ್ಲಿ ವಿಫಲರಾದರೂ ಕೊನೆಯ ಕೆಲ ಪಂದ್ಯಗಳಲ್ಲಿ ಅವಿಸ್ಮರಣೀಯ ಇನಿಂಗ್ಸ್ ಕೊಟ್ಟಿದ್ದಾರೆ. ವಿಶ್ವಕಪ್ ಅಭ್ಯಾಸ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ತೋರಿದ್ದಾರೆ. ಯುಎಇಯ ಪಿಚ್​ನಲ್ಲಿ ಬ್ಯಾಟರ್ಸ್ ಹೆದರುವಂಥದ್ದು ಏನೂ ಇಲ್ಲ. ಎಲ್ಲವೂ ಮಾನಸಿಕತೆಗೆ ಸಂಬಂಧಿಸಿದ್ದು ಎಂದು ಹೇಳಿ ಅದೇ ರೀತಿ ಆಡಿ ತೋರಿಸಿದ್ಧಾರೆ.

  7) ಹಾರ್ದಿಕ್ ಪಾಂಡ್ಯ: ಭಾರತ ತಂಡಕ್ಕೆ ಟ್ರಂಪ್ ಕಾರ್ಡ್ ಎನಿಸಿದ್ದ ಹಾರ್ದಿಕ್ ಪಾಂಡ್ಯ ಶಸ್ತ್ರ ಚಿಕಿತ್ಸೆ ಬಳಿಕ ಮಂಕಾಗಿದ್ಧಾರೆ. ಐಪಿಎಲ್​ನಲ್ಲಿ ಇವರು ಹೆಚ್ಚು ಪಂದ್ಯ ಆಡಲಿಲ್ಲ. ಆಡಿದರೂ ಇವರ ಆಟ ಅಷ್ಟಕಷ್ಟೇ. ಅಭ್ಯಾಸ ಪಂದ್ಯದಲ್ಲೂ ಇವರಿಗೆ ಲಯ ಕಂಡುಕೊಳ್ಳಲಾಗಿಲ್ಲ. ಪ್ಲೇಯಿಂಗ್ ಇಲವೆನ್​ನಲ್ಲಿ ಇವರು ಇರುತ್ತಾರಾ ಎಂಬುದು ಈಗ ಯಕ್ಷ ಪ್ರಶ್ನೆ.

  8) ರವೀಂದ್ರ ಜಡೇಜಾ: ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ಬುತ ಪ್ರದರ್ಶನ ನೀಡಿದ್ಧಾರೆ. ಸತತ ಸಿಕ್ಸರ್​ಗಳನ್ನ ಭಾರಿಸಿ ಮ್ಯಾಚ್ ಟರ್ನ್ ಮಾಡುವ ಛಾತಿ ಇವರಿಗಿದೆ. ಬೌಲಿಂಗ್​ನಲ್ಲೂ ಇವರು ಹಿಡಿತ ಇರುವವರು. ಯುಎಇ ಪಿಚ್​ಗಳಲ್ಲಿ ಭಾರತಕ್ಕೆ ಅತ್ಯಗತ್ಯ ಇರುವ ಆಲ್​ರೌಂಡರ್ ಇವರಾಗಿದ್ಧಾರೆ.

  9) ರಾಹುಲ್ ಚಾಹರ್: ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್ ಪಂದ್ಯಗಳಲ್ಲಿ ಇವರಿಂದ ಗಮನಾರ್ಹ ಪ್ರದರ್ಶನ ಬರಲಿಲ್ಲ. ಆದರೆ, ಇಲ್ಲಿ ಪಿಚ್​ಗಳಲ್ಲಿ ಇವರ ಬೌಲಿಂಗ್ ಹೆಚ್ಚು ಪರಿಣಾಮಕಾರಿ ಆಗಬಲ್ಲದು ಎಂಬ ಕಾರಣಕ್ಕೆ ತಂಡಕ್ಕೆ ಆಯ್ಕೆಯಾಗಿದ್ದಾರೆ.

  10) ಆರ್ ಅಶ್ವಿನ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆರ್ ಅಶ್ವಿನ್ ಅವರಿಂದ ಹೇಳಿಕೊಳ್ಳುವ ಪ್ರದರ್ಶನ ಬರಲಿಲ್ಲ. ಆದರೆ, ಅನುಭವಿ ಸ್ಪಿನ್ನರ್ ಆಗಿದ್ದಾರೆ.

  11) ಶಾರ್ದೂಲ್ ಠಾಕೂರ್: ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ವಿತೀಯ ಬೌಲಿಂಗ್ ಪ್ರದರ್ಶನ ನೀಡಿದವರು ಇವರು. ಟಿ20 ಟೀಮ್ ಇಂಡಿಯಾದ ಸ್ಟ್ಯಾಂಡ್​ಬೈ ಆಟಗಾರರಾಗಿದ್ದ ಇವರನ್ನ ಕೊನೆಯ ಕ್ಷಣದಲ್ಲಿ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ತಮ್ಮ ವೇರಿಯೇಶನ್​ಗಳಿಂದ ಎದುರಾಳಿ ಬ್ಯಾಟರ್​ಗಳನ್ನ ಇವರು ಕಂಗೆಡಿಸಬಲ್ಲರು.

  12) ವರುಣ್ ಚಕ್ರವರ್ತಿ: ಐಪಿಎಲ್​ನಲ್ಲಿ ಹೆಚ್ಚು ಗಮನ ಸೆಳೆದ ಸ್ಪಿನ್ನರ್​ಗಳಲ್ಲಿ ವರುಣ್ ಚಕ್ರವರ್ತಿ ಒಬ್ಬರು. ತಮ್ಮ ಟರ್ನರ್​ಗಳಿಂದ ಇವರು ಯುಎಇ ಪಿಚ್​ಗಳಲ್ಲಿ ಪರಿಣಾಮಕಾರಿ ಬೌಲರ್ ಎನಿಸಬಲ್ಲರು.

  13) ಜಸ್​ಪ್ರೀತ್ ಬುಮ್ರಾ: ಟೀಮ್ ಇಂಡಿಯಾದ ಬೌಲಿಂಗ್ ಟ್ರಂಪ್ ಕಾರ್ಡ್ ಇವರು. ಐಪಿಎಲ್​ನಲ್ಲಿ ನೆನಪಿಗುಳಿಯುವಂಥ ಪ್ರದರ್ಶನ ಬರದಿದ್ದರೂ ಇವರಿಂದ ಬಹಳಷ್ಟನ್ನು ನಿರೀಕ್ಷಿಸಲು ಅಡ್ಡಿ ಇಲ್ಲ.

  14) ಭುವನೇಶ್ವರ್ ಕುಮಾರ್: ಐಪಿಎಲ್​ನಲ್ಲಿ ಛಾಪು ಮೂಡಿಸದಿದ್ದರೂ ರನ್ ನಿಯಂತ್ರಣದ ಮೂಲಕ ಬ್ಯಾಟ್ಸ್​ಮನ್ ಮೇಲೆ ಒತ್ತಡ ಹೇರಬಲ್ಲ ಅನುಭವಿ ಬೌಲರ್. ಈ ಹಿಂದೆ ಟೀಮ್ ಇಂಡಿಯಾವನ್ನು ಅನೇಕ ಸಂಕಷ್ಟಗಳ ಸಂದರ್ಭದಿಂದ ಪಾರು ಮಾಡಿ ಗೆಲ್ಲಿಸಿದ್ದಾರೆ.

  15) ಮೊಹಮ್ಮದ್ ಶಮಿ: ಐಪಿಎಲ್​ನಲ್ಲಿ ಹೆಚ್ಚು ಗಮನ ಸೆಳೆದ ಫಾಸ್ಟ್ ಬೌಲರ್​ಗಳಲ್ಲಿ ಒಬ್ಬರು. ಟೀಮ್ ಇಂಡಿಯಾ ಪರ ಅನೇಕ ಪಂದ್ಯಗಳನ್ನ ಆಡಿದ ಅನುಭವ ಇದೆ. ಬುಮ್ರಾ ಮತ್ತು ಇವರು ಬಹಳ ಡೇಂಜರ್ ಜೋಡಿ ಎನಿಸಬಲ್ಲರು.
  Published by:Vijayasarthy SN
  First published: