Aus vs SA- ಏಕದಿನ ಕ್ರಿಕೆಟ್ ಸಾಮ್ರಾಟರ ಟಿ20 ಕದನ; ಯಾರು ಗೆಲ್ಲಲಿದ್ದಾರೆ ಈ ಸೂಪರ್ ಫೈಟ್?

T20 World Cup: Super-12 Matches today- Aus vs SA at Abu Dhabi: ಹಲವು ಸಮಸ್ಯೆಗಳಿಂದ ಕೂಡಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಬಲಾಬಲ, ಯಾರು ಫೇವರಿಟ್ ಇತ್ಯಾದಿ ವಿವರ ಇಲ್ಲಿದೆ:

ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರು

ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರು

 • Share this:
  ಅಬುಧಾಬಿ, ಅ. 23: ವಿಶ್ವಕಪ್​ನ ಸೂಪರ್-12 ಸುತ್ತನ್ನು ಪ್ರಧಾನ ಹಂತ ಎಂದು ಕರೆಯಲು ಅಡ್ಡಿ ಇಲ್ಲ. ಮೊದಲ ಸುತ್ತಿನಲ್ಲಿದ್ದ ಎಂಟು ತಂಡಗಳ ಪೈಕಿ ನಾಲ್ಕು ತಂಡಗಳು ಸೂಪರ್-12 ಪ್ರವೇಶಿಸಿವೆ. ಇದರೊಂದಿಗೆ ಈ ಸೂಪರ್ ಹಂತದಲ್ಲಿ 12 ತಂಡಗಳು ಎರಡು ಗುಂಪುಗಳಾಗಿ ಸೆಮಿಫೈನಲ್ ಪ್ರವೇಶಕ್ಕೆ ಹೋರಾಡಲಿವೆ. ಇವತ್ತಿನಿಂದಲೇ ಸೂಪರ್-12 ಪಂದ್ಯಗಳು ಶುರುವಾಗಲಿದ್ದು, ಇಂದು ಎರಡು ಬಿಗ್ ಫೈಟ್ ಇದೆ. ಅಬುಧಾಬಿಯಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಮಧ್ಯಾಹ್ನ 3:30ಕ್ಕೆ ಈ ಪಂದ್ಯ ಪ್ರಾರಂಭವಾಗುತ್ತದೆ. ಇನ್ನು, ಸಂಜೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಹಣಾಹಣಿ ನಡೆಸಲಿವೆ. ದುಬೈನಲ್ಲಿ ಸಂಜೆ 7:30ಕ್ಕೆ ಈ ಪಂದ್ಯ ಅರಂಭವಾಗುತ್ತದೆ.

  Aus vs SA- ಏಕದಿನ ಕ್ರಿಕೆಟ್ ಸಾಮ್ರಾಟರ ಟಿ20 ಕದನ: ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿಶ್ವ ಕ್ರಿಕೆಟ್​ನ ಅತಿ ಬಲಿಷ್ಠ ತಂಡಗಳಲ್ಲೊಂದೆನಿಸಿವೆ. ಆದರೆ, ಟಿ20 ಕ್ರಿಕೆಟ್​ಗೆ ಬಂದರೆ ಅದರ ಭಾಷ್ಯವೇ ಬೇರೆ. ಆಸ್ಟ್ರೇಲಿಯಾ ಮತ್ತು ಸೌಥ್ ಆಫ್ರಿಕಾ ಏಕದಿನ ಕ್ರಿಕೆಟ್​ನಲ್ಲಿ ಗೆಲುವಿನ ಸೂತ್ರ ಹೊಂದಿವೆ. ಟಿ20 ವಿಷಯಕ್ಕೆ ಬಂದರೆ ಈ ತಂಡಗಳ ಬಳಿ ಅದೃಷ್ಟ ಇದ್ದಂತಿಲ್ಲ. ವಿಚಿತ್ರ ಎಂದರೆ ವಿಶ್ವದ ಪ್ರಮುಖ ಟಿ20 ಸ್ಪೆಷಲಿಸ್ಟ್ ಆಟಗಾರರು ಈ ತಂಡಗಳಲ್ಲೇ ಇದ್ದರೂ ಟಿ20 ಕ್ರಿಕೆಟ್​ನಲ್ಲಿ ಅಷ್ಟೇನೂ ಯಶಸ್ಸು ಈ ತಂಡಗಳಿಗೆ ಲಭಿಸಿಲ್ಲ ಎಂಬುದು ವಾಸ್ತವ.

  ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಅವರಿಬ್ಬರೇ ಟಿ20 ಕ್ರಿಕೆಟ್​ಗೆ ಹೇಳಿಮಾಡಿಸಿದ ಬ್ಯಾಟರ್ಸ್ ಎನ್ನಲಾಗುತ್ತದೆ. ಆದರೆ, ವಾರ್ನರ್ ಅಚ್ಚರಿ ಎಂಬಂತೆ ಕಳಪೆ ಫಾರ್ಮ್​ನಲ್ಲಿದ್ದಾರೆ. ಐಪಿಎಲ್​ನಲ್ಲಿ ಕಳೆದುಕೊಂಡಿದ್ದ ಫಾರ್ಮ್ ಅನ್ನು ಅವರು ವಾರ್ಮಪ್ ಮ್ಯಾಚ್​ಗಳಲ್ಲೂ ಕಂಡುಕೊಳ್ಳಲು ಆಗಿಲ್ಲ. ಆದರೆ, ಆರೋನ್ ಫಿಂಚ್, ಸ್ಟೀವನ್ ಸ್ಮಿತ್, ಸ್ಟಾಯ್ನಿಸ್, ಮ್ಯಾಥ್ಯೂ ಹೇಡ್ ಅವರೆಲ್ಲಾ ಮ್ಯಾಚ್ ವಿನ್ನರ್​ಗಳೇ ಅವರ ಹೆಚ್ಚಿನ ಬಲ ಹೆಚ್ಚಾಗಿ ಏಕದಿನ ಕ್ರಿಕೆಟ್​ಗೆ ಸೀಮಿತವಾದಂತಿದೆ.

  ಇದನ್ನೂ ಓದಿ: Super-12 Schedule- ನಾಲ್ಕು ತಂಡಗಳ ಪ್ರವೇಶದೊಂದಿಗೆ ಸೂಪರ್-12 ಭರ್ತಿ; ಇಲ್ಲಿದೆ ವೇಳಾಪಟ್ಟಿ

  ಆಸ್ಟ್ರೇಲಿಯಾದ ಬೌಲಿಂಗ್ ಕೂಡ ಹೇಳಿಕೊಳ್ಳುವಷ್ಟು ಮಾರಕವೆನಿಸುವುದಿಲ್ಲ. ಸ್ಪಿನ್ನರ್ಸ್ ಆಷ್ಟಾನ್ ಅಗರ್ ಮತ್ತು ಅಡಂ ಜಂಪಾ ಅವರು ಯುಎಇ ಪಿಚ್​ಗಳಲ್ಲಿ ಎಷ್ಟರಮಟ್ಟಿಗೆ ಕರಾಮತ್ತು ತೋರಬಲ್ಲರು ಎಂಬುದು ಖಚಿತವಿಲ್ಲ.

  ದಕ್ಷಿಣ ಆಫ್ರಿಕಾದ ಬಲಾಬಲ:

  ಇನ್ನು, ಸೌಥ್ ಆಫ್ರಿಕಾ ತಂಡದಲ್ಲೂ ಕೆಲವಿಷ್ಟು ಕೊರತೆಗಳು ಕಾಣುತ್ತಿವೆ. ಐಪಿಎಲ್​ನಲ್ಲಿ ಭರ್ಜರಿ ಫಾರ್ಮ್​ನಲ್ಲಿದ್ದ ಫ್ಯಾಫ್ ಡುಪ್ಲೆಸಿ ಅವರನ್ನ ಕೈಬಿಟ್ಟು ಸೌಥ್ ಆಫ್ರಿಕಾ ಕೈಸುಟ್ಟಿಕೊಳ್ಳುತ್ತಿದೆಯೇ ಎಂದು ಭಾಸವಾಗುತ್ತಿದೆ. ವ್ಯಾನ್ ಡರ್ ಡಸ್ಸೆನ್ ಅವರು ಈ ವಿಶ್ವಕಪ್​ನಲ್ಲಿ ಕಣ್ಣಿಡಬೇಕಾದ ಬ್ಯಾಟರ್. ಡೀಕಾಕ್, ಡೇವಿಡ್ ಮಿಲ್ಲರ್ ಸೇರಿದಂತೆ ಉಳಿದ ಬ್ಯಾಟ್ಸ್​ಮನ್​ಗಳಲ್ಲಿ ಸ್ಥಿರತೆ ಇಲ್ಲ. ಆದರೆ, ವೆಸ್ಟ್ ಇಂಡೀಸ್, ಐರ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಸರಣಿಗಳನ್ನ ಸತತವಾಗಿ ಗೆದ್ದಿರುವ ಹರಿಣಗಳ ಪಡೆ ಈ ವಿಶ್ವಕಪ್​ನ ಪ್ರಾಕ್ಟೀಸ್ ಮ್ಯಾಚ್​ಗಳೆರಡನ್ನೂ ಗೆದ್ದಿದೆ. ತಂಡದ ಸ್ಪಿನ್ನರ್ ತಬ್ರೇಜ್ ಶಮ್ಸಿ ಮ್ಯಾಚ್ ವಿನ್ನರ್ ಆಗಬಲ್ಲರು. ಆನ್ರಿಕ್ ನೋರ್ಟಿಯಾ ಐಪಿಎಲ್​ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.

  ಫೇವರಿಟ್: ಸದ್ಯದ ಫಾರ್ಮ್ ಪರಿಗಣಿಸಿದರೆ ಈ ಪಂದ್ಯದಲ್ಲಿ ಸೌಥ್ ಆಫ್ರಿಕಾ ಗೆಲ್ಲುವ ಫೇವರಿಟ್ ಎಂಬಂತೆ ತೋರುತ್ತದೆ. ಆದರೆ, ಟಿ20 ಕ್ರಿಕೆಟ್ ಎಂಬುದು ಹುಚ್ಚು ಕುದುರೆ. ಆ ಕ್ಷಣಕ್ಕೆ ಯಾರು ಯಾವ ಕುದುರೆ ಏರಿ ವಾಯುವೇಗದಲ್ಲಿ ಹಾದು ಹೋಗುತ್ತಾರೋ ತಿಳಿಯುವುದಿಲ್ಲ. ಒಬ್ಬನೇ ಆಟಗಾರ ಇಡೀ ಪಂದ್ಯವನ್ನು ಟರ್ನ್ ಮಾಡಬಲ್ಲ.

  ಇದನ್ನೂ ಓದಿ: T20 World Cup- ಕೇವಲ 44 ರನ್​​ಗೆ ನೆದರ್​ಲೆಂಡ್ಸ್ ಆಲೌಟ್; ಇಲ್ಲಿದೆ ಅತಿ ಕಡಿಮೆ ಸ್ಕೋರ್​ಗಳ ಲಿಸ್ಟ್

  ತಂಡಗಳು:

  ಆಸ್ಟ್ರೇಲಿಯಾ ಸಂಭಾವ್ಯ ತಂಡ: ಆರೋನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಶೆಲ್ ವಾರ್ಷ್, ಗ್ಲೆನ್ ಮ್ಯಾಕ್ಸ್​ವೆಲ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟಾಯ್ನಿಸ್, ಮ್ಯಾಥ್ಯೂ ಹೇಡ್, ಆಷ್ಟಾನ್ ಅಗರ್, ಮಿಶೆಲ್ ಸ್ಟಾರ್ಕ್, ಅಡಂ ಝಂಪಾ, ಜೋಶ್ ಹೇಜಲ್ವುಡ್.

  ಸೌಥ್ ಆಫ್ರಿಕಾ ಸಂಭಾವ್ಯ ತಂಡ: ಕ್ವಿಂಟನ್ ಡೀಕಾಕ್, ಟೆಂಬಾ ಬವುಮಾ, ಏಡನ್ ಮರ್ಕ್ರಂ, ರಾಸೀ ವ್ಯಾನ್ ಡರ್ ಡಸ್ಸೆನ್, ಡೇವಿಡ್ ಮಿಲ್ಲರ್, ಹೇನ್ರಿಕ್ ಕ್ಲಾಸನ್, ವಿಯಾನ್ ಮುಲ್ಡರ್, ಕಗಿಸೋ ರಬಡ, ಕೇಶವ್ ಮಹಾರಾಜ್, ಆನ್ರಿಕ್ ನೋರ್ಟಿಯಾ/ಲುಂಗಿ ಎನ್​ಗಿಡಿ, ತಬ್ರೇಜ್ ಶಮ್ಸಿ.
  Published by:Vijayasarthy SN
  First published: