T20 World Cup- ಬಯೋಬಬಲ್ ಉಲ್ಲಂಘಿಸಿದ್ರೆ ಹೀಗಾಗುತ್ತೆ; ಅಂಪೈರ್ ಮೈಕೇಲ್ ಗಫ್​ಗೆ ನಿಷೇಧ

Umpire Michael Gough Banned- ಅನುಮತಿ ಪಡೆಯದೇ ಹೋಟೆಲ್​ನಿಂದ ಹೊರಹೋಗಿ ಹೊರಗಿನ ವ್ಯಕ್ತಿಗಳನ್ನ ಸಂಪರ್ಕಿಸಿದ ಕಾರಣಕ್ಕೆ ಟಿ20 ವಿಶ್ವಕಪ್ ಅಂಪೈರ್ ಮೈಕೆಲ್ ಗಫ್ ಅವರಿಗೆ ಆರು ದಿನ ಕಾಲ ನಿಷೇಧ ಹೇರಲಾಗಿದೆ.

ಮೈಕೇಲ್ ಗಫ್

ಮೈಕೇಲ್ ಗಫ್

 • Share this:
  ದುಬೈ, ನ. 02: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಆಟಗಾರರು ಮತ್ತು ಸಿಬ್ಬಂದಿ ಮೊದಲಾದವರನ್ನ ರಕ್ಷಿಸಲು ಹಾಗೂ ಅವರನ್ನ ಸುರಕ್ಷಿತವಾಗಿಡಲು ಬಯೋಬಬಲ್ ವ್ಯವಸ್ಥೆ (Bio Bubble System) ಮಾಡಲಾಗಿರುತ್ತದೆ. ಇಲ್ಲಿ ಒಬ್ಬರೇ ವ್ಯಕ್ತಿ ಈ ವ್ಯವಸ್ಥೆ ಮೀರಿ ಅಕಸ್ಮಾತ್ ಆಗಿ ಸೋಂಕು ಅಂಟಿಸಿಕೊಂಡರೆ ಆತನಿಂದ ತನ್ನ ತಂಡದ ಇತರ ಸದಸ್ಯರು ಹಾಗು ಇತರೆ ತಂಡಗಳಿಗೆ ಸೋಂಕು ಹರಡಿಸುವ ಅಪಾಯ ಇರುತ್ತದೆ. ಹಾಗಾಗಿ, ಬಯೋಬಬಲ್ ಎಂಬ ವ್ಯವಸ್ಥೆಯನ್ನ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ. ಈಗ ನಡೆಯುತ್ತಿರುವ ವಿಶ್ವಕಪ್​ನಲ್ಲೂ (T20 World Cup 2021) ಕಟ್ಟುನಿಟ್ಟಾಗಿ ಬಯೋಬಬಲ್ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆಯ ನಿಯಮ ಉಲ್ಲಂಘಿಸಿದ ಕಾರಣ ಅಂಪೈರ್ ಮೈಕೇಲ್ ಗಫ್ (Michael Gough) ಅವರಿಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.

  ಆರು ದಿನ ನಿಷೇಧ: ಮಾಜಿ ಕ್ರಿಕೆಟ್ ಆಟಗಾರರಾಗಿರುವ ಮೈಕೇಲ್ ಗೋಫ್ ಸದ್ಯ ವಿಶ್ವದ ಅತ್ಯುತ್ತಮ ಅಂಪೈರ್​ಗಳ ಪೈಕಿ ಒಬ್ಬರೆನಿಸಿದ್ದಾರೆ. ಆದರೆ, ಬಯೋಬಬಲ್ ನಿಯಮ ಮೀರಿದ್ದಕ್ಕಾಗಿ ಅವರಿ ಆರು ದಿನ ನಿಷೇಧ ಹೇರಲಾಗಿದೆ. ಅಷ್ಟು ದಿನ ಅವರು ಕ್ವಾರಂಟೈನ್​ನಲ್ಲಿ ಇರಬೇಕಾಗಿದೆ. ಐಸಿಸಿ (ICC- ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಯ ಜೈವಿಕ ಭದ್ರತೆ ಸಮಿತಿ (Bio- Security Committee) ಈ ನಿರ್ಧಾರ ಕೈಗೊಂಡಿದೆ.

  ಹೊರಗಿನವರನ್ನ ಭೇಟಿ ಮಾಡಿದ್ದ ಅಂಪೈರ್:

  ಕಳೆದ ಶುಕ್ರವಾರದಂದು ಮೈಕೋಲ್ ಗೋಫ್ ಅವರು ಯಾರ ಅನುಮತಿಯನ್ನೂ ಪಡೆಯದೆ ತಾವಿದ್ದ ಹೋಟೆಲ್​ನಿಂದ ಹೊರಹೋಗಿ ಹೊರಿಗನ ಜನರನ್ನ ಭೇಟಿ ಮಾಡಿದ್ದರು. ಬಯೋಬಬಲ್ ವ್ಯವಸ್ಥೆಯಲ್ಲಿರುವವರು ಅದೇ ವ್ಯವಸ್ಥೆಯಲ್ಲಿರುವ ಜನರ ಜೊತೆ ಮಾತ್ರ ಭೇಟಿ ಮಾಡಿ ಮಾತನಾಡಬಹುದು. ಬಯೋಬಬಲ್ ವ್ಯವಸ್ಥೆಯಲ್ಲಿ ಇರದ ಹೊರಗಿನ ವ್ಯಕ್ತಿಗಳ ಜೊತೆ ಯಾವುದೇ ಕಾರಣಕ್ಕೂ ಮುಖಾಮುಖಿ ಆಗುವಂತಿಲ್ಲ ಎಂಬ ನಿಯಮ ಇದೆ. ಹೀಗಾಗಿ ಅವರಿಗೆ 6 ದಿನ ಕಾಲ ಕ್ವಾರಂಟೈನ್​ನಲ್ಲಿ ಇಡಲು ತೀರ್ಮಾನಿಸಲಾಗಿದೆ.

  ಭಾರತ-ನ್ಯೂಜಿಲೆಂಡ್ ಪಂದ್ಯದಲ್ಲಿ ಅಂಪೈರಿಂಗ್ ಮಾಡಬೇಕಿತ್ತು: 

  ಮೊನ್ನೆ ಭಾನುವಾರದಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಮೈಕೇಲ್ ಗೊಫ್ ಅವರು ಅಂಪೈರಿಂಗ್ ಮಾಡಬೇಕಿತ್ತು. ಅವರು ಬಯೋಬಬಲ್ ನಿಯಮ ಮೀರಿದ್ದರಿಂದ ಅವರಿಗೆ ಆ ಪಂದ್ಯದಲ್ಲಿ ಅಂಪೈರಿಂಗ್ ಅವಕಾಶ ಸಿಗಲಿಲ್ಲ. ಅವರ ಬದಲು ದಕ್ಷಿಣ ಆಫ್ರಿಕಾದ ಮರಾಯಿಸ್ ಎರಾಸ್ಮಸ್ ಅವರಿಗೆ ಅವಕಾಶ ಕೊಡಲಾಯಿತು.

  ಇದನ್ನೂ ಓದಿ: Yuvraj Shock- ದೈವ ನಿರ್ಣಯ; ಯುವರಾಜ್ ಸಿಂಗ್ ಕ್ರಿಕೆಟ್ ಅಖಾಡಕ್ಕೆ ಮರಳಲು ನಿರ್ಧಾರ

  ಇದೀಗ ಅಂಪೈರ್ ಮೈಕೆಲ್ ಗೊಫ್ ಅವರು ಆರು ದಿನ ಕ್ವಾರಂಟೈನ್​ನಲ್ಲಿ ಇದ್ದಾರೆ. ಅಷ್ಟೂ ದಿನ ಅವರು ಹೋಟೆಲ್ ರೂಮ್​ನಲ್ಲಿ ಪ್ರತ್ಯೇಕವಾಸ ಅನುಭವಿಸಬೇಕು. ಎರಡು ದಿನಕ್ಕೊಮ್ಮೆ ಕೋವಿಡ್ ಪರೀಕ್ಷೆಗಳನ್ನ ಮಾಡಲಾಗುತ್ತದೆ. ಇಷ್ಟೂ ಪರೀಕ್ಷೆಗಳಲ್ಲಿ ಅವರದ್ದು ನೆಗಟಿವ್ ರಿಪೋರ್ಟ್ ಬಂದಲ್ಲಿ ಅವರಿಗೆ ಮತ್ತೆ ಅಂಪೈರಿಂಗ್ ಮಾಡುವ ಅವಕಾಶ ಸಿಗುವ ಸಾಧ್ಯತೆ ಇದೆ.

  ಕಟ್ಟುನಿಟ್ಟಿನ ಬಯೋಬಬಲ್ ವ್ಯವಸ್ಥೆ: 

  ಬಯೋಬಬಲ್ ವ್ಯವಸ್ಥೆ ಬಹಳ ಕಟ್ಟುನಿಟ್ಟಾಗಿರುತ್ತದೆ. ಇಲ್ಲಿರುವವರು ಹೊರಗಿನವರ ಮುಖಾಮುಖಿ ಸಂಪರ್ಕ ಸಾಧಿಸುವ ಅನುಮತಿ ಇರುವುದಿಲ್ಲ. ಆಟಗಾರರ ಹಿತ ದೃಷ್ಟಿಯಿಂದ ಹಾಗೂ ಪಂದ್ಯಾವಳಿ ಅಬಾಧಿತವಾಗಿ ನಡೆಯುವ ಉದ್ದೇಶದಿಂದ ಈ ಬಯೋಬಬಲ್ ವ್ಯವಸ್ಥೆ ಮಾಡಲಾಗಿರುತ್ತದೆ.

  ಇದನ್ನೂ ಓದಿ: Rohit Sharma- ಟಿ20, ಓಡಿಐ ಎರಡೂ ತಂಡಕ್ಕೂ ರೋಹಿತ್ ನಾಯಕ? ದ್ರಾವಿಡ್ ಸಮಾಲೋಚನೆ ನಂತರ ನಿರ್ಧಾರ

  ಈ ವ್ಯವಸ್ಥೆಯಿಂದ ಆಟಗಾರರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ ಎಂಬ ಆರೋಪ ಇದೆ. ಅನೇಕ ಆಟಗಾರರು ಈ ಬಯೋಬಬಲ್​ನಿಂದ ಆಗುವ ಮಾನಸಿಕ ಯಾತನೆ ಬಗ್ಗೆ ಹೇಳಿಕೊಂಡಿದ್ದಾರೆ. ಐಪಿಎಲ್ ಟೂರ್ನಿಯ ಮಧ್ಯದಿಂದಲೇ ಹಲವು ಆಟಗಾರರು ಇದೇ ಕಾರಣಕ್ಕೆ ಓಡಿ ಹೋಗಿದ್ದುಂಟು. ಇತ್ತೀಚೆಗೆ ಶ್ರೀಲಂಕಾ ಕೋಚ್ ಮಹೇಲ ಜಯವರ್ದನೆ ಕೂಡ ಯುಎಇಯಿಂದ ತಮ್ಮ ದೇಶಕ್ಕೆ ಮರಳಿ ಅಲ್ಲಿಂದಲೇ ಕೋಚಿಂಗ್ ಸಲಹೆಗಳನ್ನ ನೀಡುತ್ತಿದ್ದಾರೆ.
  Published by:Vijayasarthy SN
  First published: