England beat WI- ಮೊಯೀನ್, ರಷೀದ್ ಅಮೋಘ ಆಟ; ವಿಂಡೀಸ್ ವಿರುದ್ಧ ಇಂಗ್ಲೆಂಡ್ ಜಯಭೇರಿ

T20 World Cup: England beat West Indies- ವೆಸ್ಟ್ ಇಂಡೀಸ್ ತಂಡ 14.2 ಓವರ್​ನಲ್ಲಿ 55 ರನ್​ಗೆ ಆಲೌಟ್ ಆಯಿತು. ಸ್ಪಿನ್ನರ್ ಅದಿಲ್ ರಷೀದ್ ಕೇವಲ 2 ರನ್ನಿತ್ತು 4 ವಿಕೆಟ್ ಪಡೆದರು. ಇಂಗ್ಲೆಂಡ್ 8.2 ಓವರ್​ನಲ್ಲಿ ಸ್ಕೋರನ್ನು ಚೇಸ್ ಮಾಡಿತು.

ಇಂಗ್ಲೆಂಡ್ ಕ್ರಿಕೆಟ್ ಆಟಗಾರರು

ಇಂಗ್ಲೆಂಡ್ ಕ್ರಿಕೆಟ್ ಆಟಗಾರರು

  • Share this:
    ದುಬೈ, ಅ. 23: ಟಿ20 ವಿಶ್ವಕಪ್​ನ ಸೂಪರ್-12 ಹಂತದ ಮೊದಲ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಮತ್ತು ವಿಶ್ವ ನಂಬರ್ ಒನ್ ಟಿ20 ತಂಡ ಇಂಗ್ಲೆಂಡ್ ನಡುವಿನ ಕಾಳಗದಲ್ಲಿ ಆಂಗ್ಲರ ಪಡೆ ಜಯಭೇರಿ ಭಾರಿಸಿದೆ. ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ 6 ವಿಕೆಟ್​ಗಳಿಂದ ಗೆಲುವು ಪಡೆಯಿತು. ವೆಸ್ಟ್ ಇಂಡೀಸ್ ತಂಡದ ಅತಿ ಸಾಧಾರಣ 55 ರನ್ ಮೊತ್ತವನ್ನು ಇಂಗ್ಲೆಂಡ್ 8.2 ಓವರ್​ನಲ್ಲೇ ಚೇಸ್ ಮಾಡಿತು. ಗೆಲುವಿನ ಹಾದಿಯಲ್ಲಿ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡರೂ ಕಡಿಮೆ ಓವರ್​ಗಳಲ್ಲಿ ಗೆಲುವು ಸಾಧಿಸಿದ್ದು ಇಂಗ್ಲೆಂಡ್ ತಂಡದ ರನ್ ರೇಟ್ ಹಿಗ್ಗಲು ಕಾರಣವಾಗಿದೆ.

    ಇದಕ್ಕೆ ಮುನ್ನ ಇಂಗ್ಲೆಂಡ್ ಬೌಲರ್​ಗಳ ಮಾರಕ ದಾಳಿಗೆ ಸಿಲುಕಿ ವೆಸ್ಟ್ ಇಂಡೀಸ್ ಬ್ಯಾಟರ್ಸ್ ತರಗೆಲೆಗಳಂತೆ ಉದುರಿದರು. ಕೆರಿಬಿಯನ್ನರು ಕೇವಲ 55 ರನ್​ಗೆ ಆಲೌಟ್ ಆದರು. ಇಂಗ್ಲೆಂಡ್ ತಂಡದ ಸ್ಪಿನ್ನರ್ ಅದಿಲ್ ರಷೀದ್ ಕೇವಲ 2 ರನ್ನಿತ್ತು 4 ವಿಕೆಟ್ ಕಿತ್ತರು. ಮೊಯೀನ್ ಅಲಿ 2 ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ಇನ್ನಿಂಗ್ಸಲ್ಲಿ ಕ್ರಿಸ್ ಗೇಲ್ ಗಳಿಸಿದ 13 ರನ್ ಮೊತ್ತವೇ ಗರಿಷ್ಠ ಎನಿಸಿತು. ಉಳಿದ ಬ್ಯಾಟುಗಾರರು 10 ರನ್ ಗಡಿಯನ್ನೂ ಮುಟ್ಟಲಿಲ್ಲ. 15 ಓವರ್ ಮುಗಿಯುವ ಮುನ್ನವೇ ಕೆರಿಬಿಯನ್ ದೈತ್ಯರ ಇನ್ನಿಂಗ್ಸ್ ಮುಕ್ತಾಯವಾಯಿತು. ಇದು ವೆಸ್ಟ್ ಇಂಡೀಸ್ ತಂಡ ಟಿ20 ಕ್ರಿಕೆಟ್​ನಲ್ಲಿ ಗಳಿಸಿದ ಎರಡನೇ ಅತಿ ಕಡಿಮೆ ಮೊತ್ತವಾಗಿದೆ.

    ನಂಬರ್ ಒನ್ ಟಿ20 ತಂಡ ಹಾಗೂ ಹಾಲಿ ಟಿ20 ವಿಶ್ವಚಾಂಪಿಯನ್ ತಂಡದ ನಡುವೆ ಹಣಾಹಣಿ: ಇಂಗ್ಲೆಂಡ್ ತಂಡ ವಿಶ್ವ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ರ್ಯಾಂಕಿಂಗ್ ಪ್ರಪಾತಕ್ಕೆ ಕುಸಿದಿದ್ದರೂ ಹಾಲಿ ಟಿ20 ವಿಶ್ವ ಚಾಂಪಿಯನ್ ಆಗಿದೆ. ಹಾಗೆಯೇ ಎರಡು ಬಾರಿ ಟಿ20 ವಿಶ್ವಕಪ್ ಎತ್ತಿಹಿಡಿದ ಏಕೈಕ ತಂಡ ಅದಾಗಿದೆ.

    ಕೆರಿಬಿಯನ್ನರು ಟಿ20 ಸ್ಪೆಷಲಿಸ್ಟ್​ಗಳೆನಿಸಿದರೂ ಇತ್ತೀಚಿನ ದಿನಗಳಲ್ಲಿ ಅವರ ಫಾರ್ಮ್ ಅಷ್ಟೇನೂ ಉತ್ತಮವಾಗಿಲ್ಲ. ತಂಡದ ಪ್ರಮುಖ ಆಟಗಾರರ ವಯಸ್ಸು 30 ದಾಟಿದೆ. ಕ್ರಿಸ್ ಗೇಲ್ ಅವರಿಗೆ 42 ವರ್ಷ ವಯಸ್ಸು. ಕೀರಾನ್ ಪೊಲಾರ್ಡ್, ಡ್ವೇನ್ ಬ್ರಾವೋ ಮೊದಲಾದ ಆಟಗಾರರೂ 35 ವರ್ಷದ ಆಸುಪಾಸಿನಲ್ಲಿದ್ಧಾರೆ.

    ಇದನ್ನೂ ಓದಿ: T20 World Cup- ಕೆಎಲ್ ರಾಹುಲ್, ಧೋನಿ, ಪಂತ್ ಬಗ್ಗೆ ಪಾಕಿಸ್ತಾನ್ ಕೋಚ್ ಹೇಡನ್ ಹೇಳಿದ್ದಿದು

    ವೆಸ್ಟ್ ಇಂಡೀಸ್ ಇಂದು ಗಳಿಸಿದ 55 ರನ್​ಗಳು ಟಿ20 ವಿಶ್ವಕಪ್​ನಲ್ಲಿ ಅದರ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಈ ವಿಶ್ವಕಪ್​ನಲ್ಲಿ ನೆದರ್​ಲೆಂಡ್ಸ್ ತಂಡದ 44 ರನ್ ನಂತರದ ಸ್ಥಾನ ವೆಸ್ಟ್ ಇಂಡೀಸ್​ನ 55 ರನ್ ಸ್ಕೋರ್ ಸೇರಿದೆ.

    ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಕಡಿಮೆ ಸ್ಕೋರ್:

    1) 39 ರನ್: ನೆದರ್​ಲೆಂಡ್ಸ್ (2014)

    2) 44 ರನ್: ನೆದರ್​ಲೆಂಡ್ಸ್ (2021)

    3) 55 ರನ್: ವೆಸ್ಟ್ ಇಂಡೀಸ್ (2021)

    4) 60 ರನ್: ನ್ಯೂಜಿಲೆಂಡ್ (2014)

    5) 68 ರನ್: ಐರ್​ಲೆಂಡ್ (2010)

    ಸೌತ್ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾಗೆ ಜಯ:

    ಇಂದು ನಡೆದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಪ್ರಯಾಸಕರ ಗೆಲುವು ಪಡೆಯಿತು. ದಕ್ಷಿಣ ಆಫ್ರಿಕಾದ 122 ರನ್​ಗಳ ಅಲ್ಪ ಮೊತ್ತ ಬೆನ್ನತ್ತಲು ಆಸ್ಟ್ರೇಲಿಯಾ ಬೆವರಿ ಹರಿಸಬೇಕಾಯಿತು. ಎರಡು ಎಸೆತ ಬಾಕಿ ಇದ್ದಾಗ ಗೆಲುವಿನ ದಡ ಮುಟ್ಟಿತು.

    ಸ್ಕೋರು ವಿವರ:

    ವೆಸ್ಟ್ ಇಂಡೀಸ್ 14.2 ಓವರ್ 55/10
    (ಕ್ರಿಸ್ ಗೇಲ್ 13 ರನ್ – ಅದಿಲ್ ರಷೀದ್ 2/4, ಮೊಯೀನ್ ಅಲಿ 17/2, ಟೈಮಲ್ ಮಿಲ್ಸ್ 17/2)

    ಇಂಗ್ಲೆಂಡ್ 8.2 ಓವರ್ 56/4
    (ಜೋಸ್ ಬಟ್ಲರ್ ಅಜೇಯ 24, ಜೇಸನ್ ರಾಯ್ 11 ರನ್- ಅಕೀಲ್ ಹುಸೇನ್ 24/2)
    Published by:Vijayasarthy SN
    First published: