ಅಬುಧಾಬಿ, ಅ. 23: ಟಿ20 ವಿಶ್ವಕಪ್ನ ಸೂಪರ್012 ಹಂತದ ಮೊದಲ ಗುಂಪಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಆಸ್ಟ್ರೇಲಿಯಾ (Australia Cricket Team) 5 ವಿಕೆಟ್ಗಳಿಂದ ಜಯ ಸಾಧಿಸಿದೆ. ಕಡಿಮೆ ಸ್ಕೋರ್ನದ್ದಾಗಿದ್ದ ಈ ಪಂದ್ಯದಲ್ಲಿ ಸೌಥ್ ಆಫ್ರಿಕಾದ 118 ರನ್ಗೆ ಪ್ರತಿಯಾಗಿ ಆಸ್ಟ್ರೇಲಿಯಾ 2 ಎಸೆತ ಇರುವಂತೆ ಗೆಲುವಿನ ದಡ ಮುಟ್ಟಿತು. ಚೇಸಿಂಗ್ ವೇಳೆ ಡೇವಿಡ್ ವಾರ್ನರ್, ನಾಯಕ ಆರೋನ್ ಫಿಂಚ್ ಮತ್ತು ಮಿಶೆಲ್ ಮಾರ್ಷ್ ಈ ಮೂವರೂ ಬೇಗನೇ ಔಟಾದರೂ ಆಸ್ಟ್ರೇಲಿಯಾ ಚೇತರಿಸಿಕೊಂಡು ಗೆಲುವಿನ ಹಾದಿಗೆ ಸಾಗಿತು. ಮಾಜಿ ನಾಯಕ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟಾಯ್ನಿಸ್, ಮ್ಯಾಥ್ಯೂ ವೇಡ್ ಅವರು ಹೆಚ್ಚು ಅಪಾಯಕ್ಕೆ ಆಸ್ಪದಗೊಡದೆ ತಂಡದ ಚೇಸಿಂಗ್ ಮುನ್ನಡೆಸಿದರು.
ಐಪಿಎಲ್ನಲ್ಲಿ ಮಿಂಚಿದ್ದ ಆನ್ರಿಕ್ ನೋರ್ಟಿಯಾ ಅವರು ಈ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಒಂದಷ್ಟು ಮಟ್ಟಿಗೆ ಕಾಡಿದ್ದು ಬಿಟ್ಟರೆ ಉಳಿದಂತೆ ಸೌಥ್ ಆಫ್ರಿಕಾ ಬೌಲರ್ಗಳು ಹೆಚ್ಚು ಪರಿಣಾಮಕಾರಿ ಎನಿಸಲಿಲ್ಲ.
ಕಾಂಗರೂಗಳ ಪಡೆಯ ಪ್ರಬಲ ಬೌಲಿಂಗ್ ದಾಳಿ:
ಇದಕ್ಕೆ ಮೊದಲು ಬ್ಯಾಟ್ ಮಾಡಿದ ಸೌಥ್ ಆಫ್ರಿಕಾದ ಆರಂಭ ಕೂಡ ಉತ್ತಮವಾಗಿರಲಿಲ್ಲ. 45 ರನ್ಗೆ 4 ವಿಕೆಟ್ ಕಳೆದುಕೊಂಡಿತು. ಏಡನ್ ಮಾರ್ಕ್ರಮ್ ಅವರೊಬ್ಬರೇ ಆಸ್ಟ್ರೇಲಿಯಾ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ್ದು. ಐಪಿಎಲ್ ಸ್ಟಾರ್ ಬೌಲರ್ ಎನಿಸಿದ್ದ ಜೋಶ್ ಹೇಜಲ್ವುಡ್ 19 ರನ್ನಿತ್ತು 2 ವಿಕೆಟ್ ಪಡೆದರು. ಮಿಶೆಲ್ ಸ್ಟಾರ್ಕ್ ದುಬಾರಿ ಎನಿಸಿದರು 2 ವಿಕೆಟ್ ಪಡೆದರು. ಅಡಂ ಜಂಪ, ಪ್ಯಾಟ್ ಕುಮಿನ್ಸ್ ಅವರೂ ಉತ್ತಮ ಬೌಲಿಂಗ್ ನಡೆಸಿದರು. ಆರ್ಸಿಬಿ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಕೂಡ 4 ಓವರ್ ಪೂರ್ಣಗೊಳಿಸಿ ಕೇವಲ 24 ರನ್ ನೀಡಿದರು. ಒಂದು ವಿಕೆಟ್ ಸಂಪಾದನೆ ಕೂಡ ಮಾಡಿದರು.
ಆಸ್ಟ್ರೇಲಿಯಾ, ಸೌಥ್ ಆಫ್ರಿಕಾದ ಮುಂದಿನ ಪಂದ್ಯಗಳು:
ಆಸ್ಟ್ರೇಲಿಯಾ ತನ್ನ ಮುಂದಿನ ಪಂದ್ಯವನ್ನು ದುಬೈನಲ್ಲಿ ಶ್ರೀಲಂಕಾ ವಿರುದ್ಧ ಆಡಲಿದೆ. ಅಕ್ಟೋಬರ್ 28ರಂದು ಈ ಪಂದ್ಯ ಇದೆ. ಅದಕ್ಕೆ ಮುನ್ನ ಅಕ್ಟೋಬರ್ 26ರಂದು ದುಬೈನಲ್ಲೇ ಸೌಥ್ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ತಂಡವನ್ನು ಎದಿರುಗೊಳ್ಳಲಿದೆ.
ಇದನ್ನೂ ಓದಿ: India Pak Cricket Love Stories- ಭಾರತದ ಹುಡುಗಿಯರನ್ನ ಪ್ರೀತಿಸಿ ವಿವಾಹವಾದ ಪಾಕಿಸ್ತಾನದ ಕ್ರಿಕೆಟಿಗರು
ಇಂಗ್ಲೆಂಡ್ - ವೆಸ್ಟ್ ಇಂಡೀಸ್ ಹಣಾಹಣಿ:
ಇಂದು ನಡೆಯುವ ಮತ್ತೊಂದು ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಟಿ20 ತಂಡವೆನಿಸಿರುವ ಇಂಗ್ಲೆಂಡ್ ಹಾಗೂ ಹಾಲಿ ಟಿ20 ವಿಶ್ವಚಾಂಪಿಯನ್ ವೆಸ್ಟ್ ಇಂಡೀಸ್ ತಂಡಗಳು ಹಣಾಹಣಿ ನಡೆಸುತ್ತಿವೆ. ಈ ಪಂದ್ಯ ದುಬೈನಲ್ಲಿ ನಡೆಯುತ್ತಿದೆ.
ಸೂಪರ್-12 ರ ಗ್ರೂಪ್ ಒಂದರಲ್ಲಿ ಆಸ್ಟ್ರೇಲಿಯಾ, ಸೌಥ್ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳಿವೆ. ಗ್ರೂಪ್ ಎರಡರಲ್ಲಿ ಭಾರತ, ಪಾಕಿಸ್ತಾನ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ್, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳಿವೆ.
ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ
ಸ್ಕೋರು ವಿವರ:
ಸೌಥ್ ಆಫ್ರಿಕಾ 20 ಓವರ್ 118/9
(ಏಡನ್ ಮಾರ್ಕ್ರಮ್ 40, ಕಗಿಸೊ ರಬಡ ಅಜೇಯ 19, ಡೇವಿಡ್ ಮಿಲ್ಲರ್ 16 ರನ್ – ಜೋಶ್ ಹೇಜಲ್ವುಡ್ 19/2, ಅಡಂ ಜಂಪ 21/2, ಮಿಶೆಲ್ ಸ್ಟಾರ್ಕ್ 32/2)
ಆಸ್ಟ್ರೇಲಿಯಾ 19.4 ಓವರ್ 121/5
(ಸ್ಟೀವ್ ಸ್ಮಿತ್ 35, ಮಾರ್ಕಸ್ ಸ್ಟಾಯ್ನಿಸ್ ಅಜೇಯ 24, ಗ್ಲೆನ್ ಮ್ಯಾಕ್ಸ್ವೆಲ್ 18, ಮ್ಯಾಥ್ಯೂ ವೇಡ್ ಅಜೇಯ 15, ಡೇವಿಡ್ ವಾರ್ನರ್ 14 ರನ್ – ಆನ್ರಿಕ್ ನೋರ್ಟಿಯಾ 21/2)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ