ಶಾರ್ಜಾ: ಟಿ20 ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್ ರೇಸ್ನಿಂದ ನಿರ್ಗಮನದ ಹಾದಿಯಲ್ಲಿದೆ. ಸತತ ಸೋಲುಗಳಿಗೆ ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಕೇಳಿಬಂದಿರುವುದು ಟಾಸ್. ಎರಡೂ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟಾಸ್ ಸೋತರು. ತೇವಾಂಶದ ಕಾರಣ ದ್ವಿತೀಯ ಅವಧಿಯಲ್ಲಿ ಬೌಲಿಂಗ್ ಮಾಡುವುದು ಕಷ್ಟ. ಹೀಗಾಗಿ, ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ತಂಡಕ್ಕೆ ಗೆಲುವು ಸುಲಭ ಎಂಬ ಮಾತು ಕೇಳಿಬರುತ್ತಿದೆ.
ಭಾರತ ಸೋತ ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿತ್ತು. ಇದು ಸೋಲಿಗೆ ಕಾರಣ ಎಂದು ಜಸ್ಪ್ರೀತ್ ಬುಮ್ರಾ ಸೇರಿದಂತೆ ಕೆಲವರು ವಿಶ್ಲೇಷಿಸಿದ್ದಾರೆ. ವಿಶ್ವಕಪ್ ನಡೆಯುತ್ತಿರುವ ಯುಎಇಯ ಪಿಚ್ಗಳಲ್ಲಿ ಡ್ಯೂ ಫ್ಯಾಕ್ಟರ್ ವರ್ಕ್ ಅಗುತ್ತಾ? ಹೌದು ಎನ್ನುವ ತಜ್ಞರ ಅಭಿಪ್ರಾಯಕ್ಕೆ ಪೂರಕವಾಗಿವೆ ಈವರೆಗಿನ ಫಲಿತಾಂಶಗಳು.
ಯುಎಇಯ ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ನಡೆದಿರುವ ಈ ವಿಶ್ವಕಪ್ ಪಂದ್ಯಗಳ ಅಂಕಿ ಅಂಶಗಳ ಪ್ರಕಾರ ಇಲ್ಲಿ ಇದೂವರೆಗೆ 22 ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು ಗೆದ್ದಿರುವುದು ಕೇವಲ 4 ಬಾರಿ ಮಾತ್ರ. ಚೇಸಿಂಗ್ ಮಾಡಿದ ತಂಡಗಳು 18 ಪಂದ್ಯಗಳಲ್ಲಿ ಗೆದ್ದಿವೆ. ಅಂದರೆ ಮೊದಲು ಬ್ಯಾಟ್ ಮಾಡಿ ಗೆದ್ದ ತಂಡಗಳ ವಿನಿಂಗ್ ಪರ್ಸೆಂಟೇಜ್ ಕೇವಲ ಶೇ. 18 ಮಾತ್ರ.
ಮೊದಲು ಬ್ಯಾಟ್ ಮಾಡಿದ ತಂಡ ಗೆಲುವು ಸಾಧಿಸಿದ ಪಂದ್ಯಗಳಲ್ಲಿ ಅಫ್ಘಾನಿಸ್ತಾನವೇ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದು. ಅದು ಬಿಟ್ಟರೆ ಈ ಮೂರು ಪಿಚ್ಗಳಲ್ಲಿ ನಡೆದ ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡಗಳು ಬಹುತೇಕ ಫೀಲ್ಡಿಂಗ್ ಅನ್ನೇ ಆರಿಸಿಕೊಂಡಿವೆ ಎಂಬುದು ಇಲ್ಲಿ ಗಮನಾರ್ಹ. ಅದೇನೇ ಆದರೂ ಟಾಸ್ ಗೆಲುವು ಒಂದು ಹಂತದವರೆಗೆ ಒಂದು ತಂಡಕ್ಕೆ ಅನುಕೂಲ ಮಾಡಿಕೊಡಬಹುದು.
ಇದನ್ನೂ ಓದಿ: Shakib Al Hasan- ಬಾಂಗ್ಲಾಗೆ ಆಘಾತ; ಗಾಯದ ಕಾರಣ ಆಲ್ರೌಂಡರ್ ಶಾಕಿಬ್ ವಿಶ್ವಕಪ್ನಿಂದ ಔಟ್
ಶಾರ್ಜಾ, ಅಬುಧಾಬಿ ಮತ್ತು ದುಬೈನಲ್ಲಿ ನಡೆದ ಪಂದ್ಯಗಳ ಫಲಿತಾಂಶ:
ಒಟ್ಟು ಪಂದ್ಯಗಳು ನಡೆದಿರುವುದು: 22
ಮೊದಲು ಬ್ಯಾಟ್ ಮಾಡಿದ ತಂಡಗಳು ಗೆದ್ದದ್ದು: 4
ಚೇಸಿಂಗ್ ಮಾಡಿದ ತಂಡಗಳು ಗೆದ್ದದ್ದು: 18
ಶಾರ್ಜಾದಲ್ಲಿ:
ಇದುವರೆಗೆ ನಡೆದ ಪಂದ್ಯಗಳು: 7
ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದದ್ದು: 2
ಚೇಸಿಂಗ್ ಮಾಡಿದ ತಂಡಗಳು ಗೆದ್ದದ್ದು: 5
ಮೊದಲು ಬ್ಯಾಟ್ ಮಾಡಿದ ತಂಡ ಗೆಲುವು ಸಾಧಿಸಿದ ಪಂದ್ಯಗಳು:
* ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್ 3 ರನ್ಗಳಿಂದ ರೋಚಕ ಗೆಲುವು ಸಾಧಿಸಿತು.
* ಸ್ಕಾಟ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ 130 ರನ್ಗಳಿಂದ ಜಯಭೇರಿ ಭಾರಿಸಿತು. ಇಲ್ಲಿ ಅಪರೂಪವೆಂಬಂತೆ ಅಫ್ಘಾನಿಸ್ತಾನವೇ ಟಾಸ್ ಗೆದ್ದು ಬ್ಯಾಟ್ ಆರಿಸಿಕೊಂಡಿತ್ತು. ಹೀಗಾಗಿ, ಟಾಸ್ ಗೆದ್ದ ತಂಡವೇ ಗೆಲುವು ಸಾಧಿಸಿದಂತಾಗಿದೆ.
ಅಬುಧಾಬಿಯಲ್ಲಿ:
ಇದುವರೆಗೆ ನಡೆದ ಪಂದ್ಯಗಳು: 8
ಮೊದಲು ಬ್ಯಾಟ್ ಮಾಡಿದ ತಂಡಗಳು ಗೆದ್ದದ್ದು: 2
ಚೇಸಿಂಗ್ ಮಾಡಿದ ತಂಡಗಳು ಗೆದ್ದದ್ದು: 6
ಮೊದಲು ಬ್ಯಾಟ್ ಮಾಡಿದ ತಂಡ ಗೆಲುವು ಸಾಧಿಸಿದ ಪಂದ್ಯಗಳು:
* ನಮೀಬಿಯಾ ವಿರುದ್ಧ ಅಫ್ಘಾನಿಸ್ತಾನ್ 62 ರನ್ಗಳಿಂದ ಗೆಲುವು ಪಡೆಯಿತು. ಇಲ್ಲಿ ಅಫ್ಗನ್ನರೇ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದು.
* ಶ್ರೀಲಂಕಾ ವಿರುದ್ಧ ಐರ್ಲೆಂಡ್ ತಂಡಕ್ಕೆ 70 ರನ್ಗಳಿಂದ ಸೋಲು.
ದುಬೈನಲ್ಲಿ:
ಇದುವರೆಗೆ ನಡೆದ ಪಂದ್ಯಗಳು: 7
ಮೊದಲು ಬ್ಯಾಟ್ ಮಾಡಿದ ತಂಡಗಳು ಗೆದ್ದದ್ದು: 0
ಫೀಲ್ಡಿಂಗ್ ಮಾಡಿದ ತಂಡಗಳು ಗೆದ್ದದ್ದು: 7
ಈ ವಿಶ್ವಕಪ್ನ ಆತಿಥ್ಯ ರಾಷ್ಟ್ರಗಳಲ್ಲಿ ಓಮನ್ ಕೂಡ ಒಂದು. ಆದರೆ, ಮೊದಲ ಸುತ್ತಿನ ಗ್ರೂಪ್ ಬಿ ಪಂದ್ಯಗಳು ಮಾತ್ರ ಓಮನ್ನ ಮಸ್ಕಟ್ನಲ್ಲಿ ನಡೆದಿದ್ದವು. ಅದು ಬಿಟ್ಟರೆ ಉಳಿದೆಲ್ಲವೂ ಯುಎಇಯ ಮೂರು ನಗರಗಳಲ್ಲಿ ನಡೆಯುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ