T20 World Cup| ಕುತೂಹಲ ಹೆಚ್ಚಿಸಿರುವ IND vs PAK ಪಂದ್ಯ, ಮೌಕಾ ಮೌಕಾ ಜಾಹೀರಾತು ಮತ್ತೆ ವಾಪಸ್!

ಪಾಕಿಸ್ತಾನ ತಂಡ ಈವರೆಗೆ ಭಾರತದ ವಿರುದ್ಧ 12ಕ್ಕೂ ಹೆಚ್ಚು ವಿಶ್ವಕಪ್​ ಪಂದ್ಯಗಳಲ್ಲಿ ಕಣಕ್ಕೆ ಇಳಿದಿದೆ. ಆದರೆ, ಈವರೆಗೆ ಒಂದೇ ಒಂದು ಪಂದ್ಯದಲ್ಲೂ ಗೆಲುವು ಸಾಧಿಸಿಲ್ಲ. ಇನ್ನೂ 2007ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ಪಾಕಿಸ್ತಾವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದನ್ನು ಈವರೆಗೆ ವಿಶ್ವ ಕ್ರಿಕೆಟ್​ ಇತಿಹಾಸದಲ್ಲಿ ಅಚ್ಚಳಿಯದ ನೆನೆಪು.

ಮೌಕಾ ಮೌಕಾ ಜಾಹೀರಾತಿನ ಚಿತ್ರ.

ಮೌಕಾ ಮೌಕಾ ಜಾಹೀರಾತಿನ ಚಿತ್ರ.

 • Share this:
  ಐಪಿಎಲ್​ (IPL 2021) ಬೆನ್ನಿಗೆ ಮುಂದಿನ ವಾರದಿಂದ ಟಿ20 ವಿಶ್ವಕಪ್ (T20 World Cup) ಆರಂಭವಾಗಲಿದೆ. ಆದರೆ, ಟಿ20 ವಿಶ್ವಕಪ್ ಒಂದು ತೂಕವಾದರೆ, ಭಾರತ-ಪಾಕಿಸ್ತಾನ ನಡುವಿನ ಪಂದ್ಯದ್ದೇ ಒಂದು ತೂಕ. ಅಕ್ಟೋಬರ್​ 24 ರಂದು ಬಹಳ ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ (IND vs PAK) ಮುಖಾಮುಖಿ ಯಾಗಲಿದೆ. ಈ ಪಂದ್ಯಕ್ಕೆ ಇಡೀ ವಿಶ್ವ ಕಾತರದಿಂದ ಕಾಯುತ್ತಿದೆ. ಅಲ್ಲದೆ ಎಂದಿನಂತೆ ಟೂರ್ನಿಯ ಅಧಿಕೃತ ಬ್ರಾಡ್‌ಕಾಸ್ಟರ್ ಅನ್ನು ಸ್ಟಾರ್ ಸ್ಪೋರ್ಟ್ಸ್ (Star Sports) ತೆಗೆದುಕೊಂಡಿದೆ. ವಿಶೇಷವೆಂದರೆ ಈ ಪಂದ್ಯದ ಜೊತೆಗೆ ಸಾಂಪ್ರದಾಯಿಕ 'ಮೌಕಾ ಮೌಕಾ' (Mauka Mauka Ad Campaign) ಜಾಹೀರಾತು ಸಹ ಮತ್ತೆ ವಾಪಾಸ್ ಆಗಿದೆ. ಸ್ಟಾರ್​ ಸ್ಪೋರ್ಟ್​ 'ಮೌಕಾ ಮೌಕಾ' ಅಭಿಯಾನವನ್ನು ಮರಳಿ ತಂದಿದ್ದು, ಈ ಜಾಹೀರಾತು ಈಗಾಗಲೇ ಸಾಕಷ್ಟು ವೈರಲ್ ಆಗಿದೆ. 2015ರ ವಿಶ್ವಕಪ್‌ಗೆ (World Cup 2015) ಮುನ್ನ ಮೌಕಾ ಮೌಕಾ ಅಭಿಯಾನವನ್ನು ಆರಂಭಿಸಲಾಗಿತ್ತು. ಈ ಜಾಹೀರಾತು ಹಾಸ್ಯ ಮತ್ತು ಸ್ನೇಹದ ಸಂಯೋಜನೆಯಾಗಿದ್ದು ಇಂದಿಗೂ ಸಹ ಸಾಕಷ್ಟು ಜನಪ್ರಿಯತೆಯನ್ನು ಉಳಿಸಿಕೊಂಡಿದೆ.  ಜನರಂಜನೆಯ ಜಾಹೀರಾತು "ಮೌಕಾ ಮೌಕಾ";

  ಪಾಕಿಸ್ತಾನ ತಂಡ ಈವರೆಗೆ ಭಾರತದ ವಿರುದ್ಧ 12ಕ್ಕೂ ಹೆಚ್ಚು ವಿಶ್ವಕಪ್​ ಪಂದ್ಯಗಳಲ್ಲಿ ಕಣಕ್ಕೆ ಇಳಿದಿದೆ. ಆದರೆ, ಈವರೆಗೆ ಒಂದೇ ಒಂದು ಪಂದ್ಯದಲ್ಲೂ ಗೆಲುವು ಸಾಧಿಸಿಲ್ಲ. ಇನ್ನೂ 2007ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ಪಾಕಿಸ್ತಾವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದನ್ನು ಈವರೆಗೆ ವಿಶ್ವ ಕ್ರಿಕೆಟ್​ ಇತಿಹಾಸದಲ್ಲಿ ಅಚ್ಚಳಿಯದ ನೆನೆಪು.

  ಹೀಗಾಗಿ ಸ್ಟಾರ್​ ಸ್ಪೋರ್ಟ್​ ಪ್ರತಿ ವಿಶ್ವಕಪ್ ವೇಳೆಯೂ ಪಾಕಿಸ್ತಾನ ಈ ವರ್ಷವಾದರೂ ಭಾರತದ ವಿರುದ್ಧ ಗೆಲ್ಲುತ್ತದೆಯೇ? ಎಂಬ ಕಾನ್ಸೆಪ್ಟ್​ ಅನ್ನು ಮುಂದಿಟ್ಟು ಜಾಹೀರಾತು ನಿರ್ಮಾಣ ಮಾಡುತ್ತಲೇ ಇದೆ. ಆದರೆ, ಪಾಕಿಸ್ತಾನ ಮಾತ್ರ ಸತತ ನಿರಾಸೆ ಅನುಭವಿಸುತ್ತಲೇ ಇದೆ. ಈ ವರ್ಷವೂ ಸಹ ಸ್ಟಾರ್​ ಸ್ಪೋರ್ಟ್​ ಇದೇ ಅಂಶವನ್ನು ಮುಂದಿಟ್ಟು ಮತ್ತೊಂದು ಹೊಸ ಜಾಹೀರಾತನ್ನು ರಚಿಸಿದ್ದು, ಈ ಜಾಹೀರಾತು ಸಹ ಸಾಕಷ್ಟು ವೈರಲ್ ಆಗುತ್ತಿದೆ.

  ಇದನ್ನೂ ಓದಿ: Orange Cap: ಕೆಎಲ್ ರಾಹುಲ್ ಹಿಂದಿಕ್ಕುವವರು ಯಾರು? ಸಾಧ್ಯತೆ ಇರುವುದು ಇಬ್ಬರಿಗೆ ಮಾತ್ರ

  ಇದು ಕ್ರೀಡಾ ಮನೋಭಾವದ ಜಾಹೀರಾತು:

  ಜಾಹೀರಾತಿನ ಬಗ್ಗೆ ಮಾತನಾಡಿರುವ ಸ್ಟಾರ್​ ಸ್ಪೋರ್ಟ್​ ವಾಹಿನಿಯ ಮುಖ್ಯಸ್ತ ಸಂಜೋಗ್ ಗುಪ್ತಾ, "ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಐತಿಹಾಸಿಕ ಪೈಪೋಟಿ ಸಾಟಿಯಿಲ್ಲ. ಸಾಂಪ್ರದಾಯಿಕ 'ಮೌಕಾ ಮೌಕಾ' ಅಭಿಯಾನವು ಈ ಪೈಪೋಟಿಯ ಮಿಶ್ರ ಸ್ಪರ್ಧೆ, ವಿಡಂಬನೆ ಮತ್ತು ಕ್ರೀಡಾ ಮನೋಭಾವವನ್ನು ಸೆರೆಹಿಡಿಯುವ ಪ್ರಯತ್ನವಾಗಿದೆ. ಈ ಪಂದ್ಯವನ್ನು ಪ್ರಸಾರ ಮಾಡುವುದಕ್ಕಾಗಿ ಸ್ಟಾರ್ ಮತ್ತು ಡಿಸ್ನಿ ಇಂಡಿಯಾ ಹೆಮ್ಮೆಪಡುತ್ತದೆ" ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: T20 World Cup- ಅಕ್ಷರ್​ಗೆ ಕೊಕ್; ಶಾರ್ದೂಲ್ ಎಂಟ್ರಿ; ಭಾರತ ಟಿ20 ವಿಶ್ವಕಪ್ ತಂಡದಲ್ಲಿ ಬದಲಾವಣೆ

  ವಿಶ್ವ ಕ್ರಿಕೆಟ್​ನಲ್ಲಿ ಭಾರತ ಮತ್ತು ಪಾಕಿಸ್ತಾನದ  ನಡುವಿನ ಪಂದ್ಯಕ್ಕೆ ತನ್ನದೇ ಆದ ಮಹತ್ವ ಇದೆ. ಏಕದಿನ ಮತ್ತು ಟಿ20 ಎರಡರಲ್ಲೂ ಈವರೆಗೆ ಪಾಕಿಸ್ತಾನ ಭಾರತದ ವಿರುದ್ಧ ಗೆದ್ದಿಲ್ಲ. ಸತತ ಐದು ಐಸಿಸಿ ಟಿ-20 ವಿಶ್ವಕಪ್ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಉತ್ತಮ ಆಟದ ಮೂಲಕ ಗೆಲುವು ದಾಖಲಿಸಿದೆ. 2007 ಟಿ 20 ವಿಶ್ವಕಪ್‌ನಲ್ಲಿ ಎರಡು ಬಾರಿ, ನಂತರ 2012, 2014, ಮತ್ತು 2016 ರಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದೆ. ಹೀಗಾಗಿ ಸಾಮಾನ್ಯವಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
  Published by:MAshok Kumar
  First published: