T20 World Cup: ಶ್ರೀಲಂಕಾ, ಐರ್​ಲೆಂಡ್ ತಂಡಗಳಿಗೆ ನಿರಾಯಾಸ ಗೆಲುವು; ಇಲ್ಲಿದೆ ಅಂಕಪಟ್ಟಿ

Srilanka vs Namibia and Ireland vs Netherlands Matches- ಅಬುಧಾಬಿಯಲ್ಲಿ ನಡೆದ ಮೊದಲ ಸುತ್ತಿನ ಗ್ರೂಪ್ ಎ ಪಂದ್ಯಗಳಲ್ಲಿ ನಮೀಬಿಯಾ ವಿರುದ್ಧ ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್ ವಿರುದ್ಧ ಐರ್ಲೆಂಡ್ ಸುಲಭ ಗೆಲುವು ದಾಖಲಿಸಿವೆ.

ಲಂಕಾ ಸ್ಪಿನ್ನರ್ ವನಿಂದು ಹಸರಂಗ

ಲಂಕಾ ಸ್ಪಿನ್ನರ್ ವನಿಂದು ಹಸರಂಗ

  • Share this:
    ಅಬುಧಾಬಿ, ಅ. 18: ಇಂದು ಟಿ20 ವಿಶ್ವಕಪ್​ನ ಎರಡನೇ ದಿನದಂದು ಶ್ರೀಲಂಕಾ ಮತ್ತು ಐರ್​ಲೆಂಡ್ ತಂಡಗಳು ಶುಭಾರಂಭ ಮಾಡಿವೆ. ಅಬುಧಾಬಿಯಲ್ಲಿ ನಡೆದ ಮೊದಲ ಸುತ್ತಿನ ಗ್ರೂಪ್ ಎ ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಐರ್​ಲೆಂಡ್ ತಂಡಗಳು ತಂತಮ್ಮ ಪಂದ್ಯಗಳನ್ನ 7 ವಿಕೆಟ್​​ಗಳಿಂದ ನಿರಾಯಾಸವಾಗಿ ಗೆದ್ದಿವೆ. ಹೆಚ್ಚಿನ ರನ್ ರೇಟ್ ಆಧಾರದಲ್ಲಿ ಎ ಗುಂಪಿನಲ್ಲಿ ಶ್ರೀಲಂಕಾ ಮೊದಲ ಸ್ಥಾನದಲ್ಲಿದೆ.

    ಐರ್ಲೆಂಡ್ ಗೆಲುವಿಗೆ ಕ್ಯಾಂಪರ್ ಕೊಡುಗೆ: ದಿನದ ಮೊದಲ ಪಂದ್ಯದಲ್ಲಿ ನೆದರ್​ಲೆಂಡ್ಸ್ ತಂಡ ಮೊದಲ ಬ್ಯಾಟ್ ಮಾಡಿ ಕೇವಲ 106 ರನ್ ಗಳಿಸಿತು. ಮ್ಯಾಕ್ಸ್ ಓಡೌಡ್ ಅರ್ಧಶತಕ ಗಳಿಸಿದ್ದೇ ಆ ಇನಿಂಗ್ಸ್​ನ ಹೈಲೈಟ್. ಐರ್​ಲೆಂಡ್​ನ ಕರ್ಟಿಸ್ ಕ್ಯಾಂಫರ್ 26 ರನ್ನಿತತು 4 ವಿಕೆಟ್ ಪಡೆದರೆ, ಮಾರ್ಕ್ ಅಡೇರ್ ಕೇವಲ 9 ರನ್ನಿತ್ತು 3 ವಿಕೆಟ್ ಕಿತ್ತರು.

    ಗೆಲ್ಲಲು 107 ರನ್ ಗುರಿ ಪಡೆದ ಐರ್ಲೆಂಡ್ ಅರಂಭಿಕ ಆಘಾತ ಅನುಭವಿಸಿದರೂ ಪೌಲ್ ಸ್ಟರ್ಲಿಂಗ್ ಮತ್ತು ಗರೆತ್ ಡೆಲಾನಿ ಅವರಿಬ್ಬರ 59 ರನ್ ಜೊತೆಯಾಟದಿಂದ ಸುಲಭವಾಗಿ ಗುರಿ ಮುಟ್ಟಿತು.

    ಲಂಕಾ ಬೌಲರ್ಸ್ ಕರಾಮತ್ತು:

    ಇದೇ ಜಾವೇದ್ ಶೇಖ್ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ತಂಡ 39 ಎಸೆತ ಬಾಕಿ ಇರುವಂತೆ ನಮೀಬಿಯಾದ ಸವಾಲನ್ನ ಹಿಮ್ಮೆಟ್ಟಿಸಿತು. ಮೊದಲು ಬ್ಯಾಟ್ ಮಾಡಿದ ನಮೀಬಿಯಾ 96 ರನ್ ಮಾತ್ರ ಗಳಿಸಲು ಶಕ್ಯವಾಯಿತು. 20 ಓವರ್ ಪೂರ್ತಿ ಆಡಲೂ ಅದಕ್ಕೆ ಸಾಧ್ಯವಾಗಲಿಲ್ಲ. ಕ್ರೆಗ್ ವಿಲಿಯಮ್ಸ್ 29 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಎನಿಸಿತು. ಶ್ರೀಲಂಕಾದ ವೇಗದ ಬೌಲರ್ ಲಾಹಿರು ಕುಮಾರ, ಸ್ಪಿನ್ನರ್ಸ್ ಮಹೀಶ್ ತೀಕ್ಷಣ ಮತ್ತು ವನಿಂದು ಹಸರಂಗ ಅವರ ಮಾರಕ ಬೌಲಿಂಗ್​ಗೆ ನಮೀಬಿಯಾ ಬ್ಯಾಟರ್ಸ್ ತರಗೆಲೆಗಳಂತೆ ಉದುರಿದರು.

    ಇದಕ್ಕೆ ಪ್ರತಿಯಾಗಿ ಚೇಸಿಂಗ್ ಆರಂಭಿಸಿದ ಲಂಕಾ 26 ರನ್​ಗೆ 3 ವಿಕೆಟ್ ಕಳೆದುಕೊಂಡಿತು. ಆದರೆ, ಅವಿಷ್ಕಾ ಫರ್ನಾಂಡೋ ಮತ್ತು ಭನುಕ ರಾಜಪಕ್ಸ ತಂಡವನ್ನ ಗೆಲುವಿನ ದಡ ಮುಟ್ಟಿಸಿದರು.

    ಇದನ್ನೂ ಓದಿ: KL Rahul’s Girlfriend- ಕೆಎಲ್ ರಾಹುಲ್ ಗರ್ಲ್​ಫ್ರೆಂಡ್ ಎನ್ನಲಾದ ಚೆಲುವೆಯ ಒಂದು ಪರಿಚಯ

    ಗ್ರೂಪ್ ಬಿ ಪಂದ್ಯಗಳು:

    ನಿನ್ನೆ ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಬಾಂಗ್ಲಾದೇಶ ಸೋಲಿನ ಕಹಿ ಉಂಡಿತ್ತು. ಸ್ಕಾಟ್​ಲೆಂಡ್ ತಂಡ ಬಾಂಗ್ಲಾ ಹುಲಿಗಳನ್ನ ರೋಚಕವಾಗಿ ಮಣಿಸಿದ್ದರು. ಮತ್ತೊಂದು ಪಂದ್ಯದಲ್ಲಿ ಆತಿಥೇಯ ಓಮನ್ ತಂಡ ಪಪುವಾ ನ್ಯೂಗಿನಿಯಾವನ್ನು ಸುಲಭವಾಗಿ ಸೋಲಿಸಿತು. ನಾಳೆ ಇದೇ ಗುಂಪಿನಲ್ಲಿ ಓಮನ್ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಎರಡನೇ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ಮತ್ತು ಸ್ಕಾಟ್ಲೆಂಡ್ ತಂಡಗಳು ಹಣಾಹಣಿ ನಡೆಸಲಿವೆ.

    ಸ್ಕೋರು ವಿವರ:

    ನೆದರ್​ಲೆಂಡ್ಸ್ vs ಐರ್​ಲೆಂಡ್ ಪಂದ್ಯದ ಸ್ಕೋರು ವಿವರ:

    ನೆದರ್​ಲೆಂಡ್ಸ್ 20 ಓವರ್ 106/10
    (ಮ್ಯಾಕ್ಸ್ ಒಡೌಡ್ 51, ಪೀಟರ್ ಸೀಲರ್ 21 ರನ್- ಕರ್ಟಿಸ್ ಕ್ಯಾಂಫರ್ 26/4, ಮಾರ್ಕ್ ಅಡೇರ್ 9/3)

    ಐರ್​ಲೆಂಡ್ 15.1 ಓವರ್ 107/3
    (ಪೌಲ್ ಸ್ಟರ್ಲಿಂಗ್ ಅಜೇಯ 30, ಗರೆತ್ ಡೆಲಾನಿ 44 ರನ್)




    ಇದನ್ನೂ ಓದಿ: T20 World Cup- ಡೆಲಿವರಿ ಬಾಯ್ ಆಗಿದ್ದ ಕ್ರಿಸ್ ಗ್ರೀವ್ಸ್ ಈಗ ಟಿ20 ವಿಶ್ವಕಪ್​ನಲ್ಲಿ ಮ್ಯಾಚ್ ವಿನ್ನರ್

    ಶ್ರೀಲಂಕಾ vs ನಮೀಬಿಯಾ ಪಂದ್ಯದ ಸ್ಕೋರು ವಿವರ:

    ನಮೀಬಿಯಾ 19.3 ಓವರ್ 96/10
    (ಕ್ರೆಗ್ ವಿಲಿಯಮ್ಸ್ 29, ಗೆರಾರ್ಡ್ ಎರಾಸ್ಮಸ್ 20 ರನ್- ಮಹೇಶ್ ತೀಕ್ಷಣ 25/3, ಲಾಹಿರು ಕುಮಾರ 9/2, ವನಿಂದು ಹಸರಂಗ 24/2)

    ಶ್ರೀಲಂಕಾ 13.3 ಓವರ್ 100/3
    (ಅವಿಷ್ಕಾ ಫರ್ನಾಂಡೋ ಅಜೇಯ 30, ಭನುಕ ರಾಜಪಕ್ಸ ಅಜೇಯ 42 ರನ್)

    ------

    ಮೊದಲ ಸುತ್ತಿನ ಪಾಯಿಂಟ್ ಪಟ್ಟಿ:

    ಗ್ರೂಪ್ ಎ:
    1) ಶ್ರೀಲಂಕಾ: 1 ಪಂದ್ಯ 2 ಅಂಕ
    2) ಐರ್​ಲೆಂಡ್: 1 ಪಂದ್ಯ 2 ಅಂಕ
    3) ನೆದರ್​ಲೆಂಡ್ಸ್: 1 ಪಂದ್ಯ 0 ಅಂಕ
    4) ನಮೀಬಿಯಾ: 1 ಪಂದ್ಯ 0 ಅಂಕ

    ಗ್ರೂಪ್ ಬಿ:
    1) ಓಮನ್: 1 ಪಂದ್ಯ 2 ಅಂಕ
    2) ಸ್ಕಾಟ್ಲೆಂಡ್: 1 ಪಂದ್ಯ 2 ಅಂಕ
    3) ಬಾಂಗ್ಲಾದೇಶ: 1 ಪಂದ್ಯ 0 ಅಂಕ
    4) ಪಪುವಾ ನ್ಯೂಗಿನಿಯಾ: 1 ಪಂದ್ಯ 0 ಅಂಕ
    Published by:Vijayasarthy SN
    First published: