T20 World Cup, Super-12- ಭಾರತ, ಪಾಕ್ ಇರುವ ಗುಂಪಿಗೆ ಲಂಕಾವೂ ಇಲ್ಲ, ಬಾಂಗ್ಲಾವೂ ಇಲ್ಲ

Super-12 of T20 World Cup- ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ಇರುವ ಗುಂಪಿಗೆ ಸ್ಕಾಟ್ಲೆಂಡ್ ಪ್ರವೇಶ ಪಡೆದಿದೆ. ಇವತ್ತು ಐರ್ಲೆಂಡ್ ಮತ್ತು ನಮೀಬಿಯಾ ನಡುವಿನ ವಿಜೇತರು ಇದೇ ಗುಂಪಿಗೆ ಎರಡನೇ ತಂಡವೇ ಎಂಟ್ರಿ ಕೊಡಲಿದ್ದಾರೆ.

ಬಾಂಗ್ಲಾದೇಶ ಕ್ರಿಕೆಟ್ ತಂಡ

ಬಾಂಗ್ಲಾದೇಶ ಕ್ರಿಕೆಟ್ ತಂಡ

  • Share this:
    ದುಬೈ, ಅ. 22: ಇಂದು ಮೊದಲ ಸುತ್ತಿನ ಕೊನೆಯ ದಿನದ ಪಂದ್ಯಗಳು ನಡೆಯುತ್ತಿವೆ. ಮೊದಲ ಸುತ್ತಿನಿಂದ ಸೂಪರ್-12 ಹಂತಕ್ಕೆ ಯಾವೆಲ್ಲ ತಂಡಗಳು ಪ್ರವೇಶಿಸುತ್ತವೆ ಎಂಬುದು ಬಹುತೇಕ ಖಚಿತವಾಗಿದೆ. ಗ್ರೂಪ್ ಬಿ ಇಂದ ಸ್ಕಾಟ್​ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಮುಂದಿನ ಹಂತ ತಲುಪಿವೆ. ಎ ಗುಂಪಿನಿಂದ ಶ್ರೀಲಂಕಾ ಅಗ್ರಸ್ಥಾನದೊಂದಿಗೆ ಸೂಪರ್-12 ಹಂತ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಐರ್​ಲೆಂಡ್ ಅಥವಾ ನಮೀಬಿಯಾ ತಂಡ ಸೂಪರ್-12 ಪ್ರವೇಶಿಸುತ್ತದಾ ಎಂಬ ಕುತೂಹಲ ಮಾತ್ರ ಉಳಿದುಕೊಂಡಿದೆ. ಇಂದು ಈ ಎರಡು ತಂಡಗಳ ಮಧ್ಯೆ ಹಣಾಹಣಿ ಇದ್ದು, ಗೆದ್ದವರು ಮುಂದಿನ ಹಂತಕ್ಕೇರುತ್ತಾರೆ. ಇಂದು ಸಂಜೆ ಫಲಿತಾಂಶ ಗೊತ್ತಾಗುತ್ತದೆ.

    ಸೂಪರ್-12 ಹಂತದಲ್ಲಿ ಗ್ರೂಪ್ 1 ಮತ್ತು ಗ್ರೂಪ್ 2 ಎಂದು ಎರಡು ಗುಂಪುಗಳನ್ನ ಮಾಡಲಾಗಿದೆ. ಗ್ರೂಪ್ ಒಂದರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌಥ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಟಿ20 ರ್ಯಾಂಕಿಂಗ್ ಆಧಾರದ ಮೇಲೆ ನೇರವಾಗಿ ಪ್ರವೇಶ ಪಡೆದಿವೆ. ಎರಡನೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಅಫ್ಘನಿಸ್ತಾನ ತಂಡಗಳು ನೇರ ಪ್ರವೇಶ ಮಾಡಿವೆ. ಈಗ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಮೊದಲ ಗುಂಪಿಗೆ ತೇರ್ಗಡೆ ಹೊಂದಿಗೆ. ಸ್ಕಾಟ್​ಲೆಂಡ್ ತಂಡ ಭಾರತ ಇರುವ ಎರಡನೇ ಗುಂಪಿಗೆ ಕಾಲಿಟ್ಟಿದೆ. ಐರ್ಲೆಂಡ್ ಅಥವಾ ನಮೀಬಿಯಾ ತಂಡಗಳಲ್ಲಿ ಒಂದು ಇದೇ ಗುಂಪಿಗೆ ಬರಲಿವೆ.

    ಸೂಪರ್-12 ಹಂತದಲ್ಲಿರುವ ತಂಡಗಳು:

    ಗ್ರೂಪ್ 1: ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌಥ್ ಆಫ್ರಿಕಾ, ವೆಸ್ಟ್ ಇಂಡೀಸ್, ಶ್ರೀಲಂಕಾ, ಬಾಂಗ್ಲಾದೇಶ.

    ಗ್ರೂಪ್ 2: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ್, ಸ್ಕಾಟ್ಲೆಂಡ್ ಮತ್ತು ಐರ್​ಲೆಂಡ್/ನಮೀಬಿಯಾ.

    ಸ್ಕಾಟ್​ಲೆಂಡ್ ಹೊಸ ಇತಿಹಾಸ:

    ನಿನ್ನೆ ಸ್ಕಾಟ್​ಲೆಂಡ್ ತಂಡ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್​ನ ಪ್ರಧಾನ ಹಂತಕ್ಕೇರಿದೆ. ಮಸ್ಕಟ್​ನ ಅಲ್-ಅಮೀರಾತ್​ನಲ್ಲಿ ಆತಿಥೇಯ ಓಮನ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಕಾಟ್​ಲೆಂಡ್ 8 ವಿಕೆಟ್​ಗಳಿಂದ ಸುಲಭ ಗೆಲುವು ಸಾಧಿಸಿತು. 123 ರನ್​ಗಳ ಅಲ್ಪಮೊತ್ತದ ಗುರಿಯನ್ನ ಸ್ಕಾಟ್ಲೆಂಡ್ 3 ಓವರ್ ಬಾಕಿ ಇರುವಂತೆ ಸಲೀಸಾಗಿ ದಿಗ್ವಿಜಯ ಸಾಧಿಸಿತು. ಸ್ಕಾಟ್​ಲೆಂಡ್ ಗೆಲುವಿನಲ್ಲಿ ಅದರ ಬೌಲರ್​ಗಳು ಪ್ರಮುಖ ಪಾತ್ರ ವಹಿಸಿದರು. ಜೋಶ್ ಡೇವೀ 3 ವಿಕೆಟ್ ಪಡೆದರೆ ಸಫ್ಯಾನ್ ಶರೀಫ್ ಮತ್ತು ಮೈಕೇಲ್ ಲೀಸ್ಕ್ ತಲಾ 2 ವಿಕೆಟ್ ಸಂಪಾದಿಸಿದರು. ಓಮನ್ ತಂಡದ ಅಲ್ಪಮೊತ್ತದ ಗುರಿಯನ್ನ ಬೆನ್ನತ್ತುವ ಹಾದಿಯಲ್ಲಿ ಸ್ಕಾಟ್ಲೆಂಡ್ ಬ್ಯಾಟರ್ಸ್ ಎಲ್ಲಿಯೂ ಎಡವಲಿಲ್ಲ.

    ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

    ಶಾಕಿಬ್ ಮಾರಕ ಆಟ; ಬಾಂಗ್ಲಾದೇಶಕ್ಕೆ ಭರ್ಜರಿ ಜಯ:

    ನಿನ್ನೆ ಎರಡನೇ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ವಿರುದ್ಧ ಬಾಂಗ್ಲಾದೇಶ ಭರ್ಜರಿ ಜಯ ಸಾಧಿಸಿತು. ಶಾಕಿಬ್ ಅಲ್ ಹಸನ್ ಅಮೋಘ ಆಲ್​ರೌಂಡ್ ಆಟಕ್ಕೆ ಪಿಎನ್​ಜಿ ತತ್ತರಿಸಿತು. ಬ್ಯಾಟಿಂಗ್​ನಲ್ಲಿ 37 ಎಸೆತದಲ್ಲಿ 46 ರನ್ ಗಳಿಸಿದ ಶಾಕಿಬ್, ಬೌಲಿಂಗ್​ನಲ್ಲಿ ಇನ್ನೂ ಅದ್ಭತು ಪ್ರದರ್ಶನ ನೀಡಿದರು. 4 ಓವರ್​ನಲ್ಲಿ 9 ರನ್​ಗೆ 4 ವಿಕೆಟ್ ಪಡೆದ ಶಾಕಿಬ್ ಬಾಂಗ್ಲಾದೇಶದ ಪ್ಲೇ ಆಫ್ ಪ್ರವೇಶ ಸುಸೂತ್ರವಾಗಿರುವಂತೆ ನೋಡಿಕೊಂಡರು.

    ಬಾಂಗ್ಲಾದೇಶ ಮೊದಲು ಬ್ಯಾಟ್ ಮಾಡಿ 181 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಪಿಎನ್​ಜಿ ತಂಡ 97 ರನ್​ಗೆ ಆಲೌಟ್ ಆಯಿತು. ಕಿಪ್ಲಿನ್ ಡೋರಿಗಾ ಅಜೇಯ 46 ರನ್ ಗಳಿಸಿ ಏಕಾಂಗಿಯಾಗಿ ಹೋರಾಡಿದರಾದರೂ ಗೆಲುವಿಗೆ ಸಮೀಪವೂ ಕರೆದೊಯ್ಯಲಾಗಲಿಲ್ಲ. ಬಾಂಗ್ಲಾದೇಶಕ್ಕೆ ಇದು ಟಿ20 ಕ್ರಿಕೆಟ್​ನಲ್ಲಿ ಸಿಕ್ಕ ಅತಿದೊಡ್ಡ ಗೆಲುವಾಗಿದೆ.
    Published by:Vijayasarthy SN
    First published: