T20 World Cup- ಅಸಲಂಕ ಆರ್ಭಟ; ಬಾಂಗ್ಲಾದೇಶಿಗರನ್ನ ಮಣಿಸಿದ ಶ್ರೀಲಂಕಾ

Sri Lanka beat Bangladesh, T20 World Cup 2021: ಬಾಂಗ್ಲಾದೇಶದ 171 ರನ್ ಮೊತ್ತಕ್ಕೆ ಪ್ರತಿಯಾಗಿ ಶ್ರೀಲಂಕಾ 7 ಎಸೆತ ಇರುವಂತೆ 5 ವಿಕೆಟ್ಗಳಿಂದ ಗೆಲುವು ಸಾಧಿಸಿತು. ಅಜೇಯ 80 ರನ್ ಗಳಿಸಿದ ಅಸಲಂಕಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಶ್ರೀಲಂಕಾ ಕ್ರಿಕೆಟ್ ತಂಡ

ಶ್ರೀಲಂಕಾ ಕ್ರಿಕೆಟ್ ತಂಡ

 • Share this:
  ಶಾರ್ಜಾ, ಅ. 24: ಶ್ರೀಲಂಕಾ ಕ್ರಿಕೆಟ್ ತಂಡ ಈ ವಿಶ್ವಕಪ್​ನಲ್ಲಿ ಸತತ ನಾಲ್ಕನೇ ಪಂದ್ಯ ಗೆದ್ದಿದೆ. ಸೂಪರ್-12 ಹಂತದಲ್ಲಿ ಲಂಕನ್ನರು ಶುಭಾರಂಭ ಮಾಡಿದ್ಧಾರೆ. ಇಂದು ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 5 ವಿಕೆಟ್​ಗಳಿಂದ ಜಯಭೇರಿ ಭಾರಿಸಿದ್ದಾರೆ. ಗೆಲ್ಲಲು 172 ರನ್​ಗಳ ಕಠಿಣ ಗುರಿಯನ್ನ ಲಂಕಾ ಯಶಸ್ವಿಯಾಗಿ ಬೆನ್ನತ್ತಿತು. ಚರಿತ್ ಅಸಲಂಕಾ ಈ ಪಂದ್ಯದಲ್ಲಿ ವಿಜೃಂಬಿಸಿದರು. ಅಜೇಯ 80 ರನ್ ಗಳಿಸಿ ಲಂಕಾ ಗೆಲುವಿನ ರೂವರಿಯಾದರು. ಒಂದು ಹಂತದಲ್ಲಿ 8 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಶ್ರೀಲಂಕಾವನ್ನು ಗೆಲುವಿನ ದಡದವರೆಗೂ ಮುಟ್ಟಿಸಿದವರು ಅಸಲಂಕಾ.

  ಚರಿತ್ ಅಸಲಂಕಾ ಮತ್ತು ಭನುಕ ರಾಜಪಕ್ಸ ಇಬ್ಬರೂ 5ನೇ ವಿಕೆಟ್​ಗೆ 86 ರನ್ ಜೊತೆಯಾಟ ಆಡಿದ್ದು ಶ್ರೀಲಂಕಾವನ್ನು ಅಪಾಯದಿಂದ ಪಾರು ಮಾಡಿದಷ್ಟೇ ಅಲ್ಲ ಗೆಲುವಿನ ಸಮೀಪ ಕೊಂಡೊಯ್ಯಲು ಸಾಧ್ಯವಾಯಿತು.

  ಇದಕ್ಕೆ ಮುನ್ನ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 171 ರನ್​ಗಳ ಬೃಹತ್ ಮೊತ್ತವನ್ನೇ ಕಲೆಹಾಕಿತು. ಮೊಯಮ್ಮದ್ ನಯೀಮ್ ಮತ್ತು ಮುಷ್ಫಿಕುರ್ ರಹೀಮ್ ಇಬ್ಬರೂ ಭರ್ಜರಿ ಅರ್ಧಶತಕಗಳನ್ನ ಗಳಿಸಿದರು. ಮೊಹಮ್ಮದ್ ನಯೀಮ್ 52 ಬಾಲ್​ನಲ್ಲಿ 62 ರನ್ ಗಳಿಸಿದರೆ, ಮುಷ್ಫಿಕುರ್ ರಹೀಮ್ 37 ಎಸೆತದಲ್ಲಿ ಅಜೇಯ 57 ರನ್ ಭಾರಿಸಿದರು. ಆದರೆ, 171 ರನ್​ಗಳ ಉತ್ತಮ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳಲು ಬಾಂಗ್ಲಾದೇಶ ವಿಫಲವಾಯಿತು. ಕೆಲ ಡ್ರಾಪ್ ಕ್ಯಾಚ್​ಗಳು ಹಾಗೂ ಕಳಪೆ ಫೀಲ್ಡಿಂಗ್ ಬಾಂಗ್ಲಾದೇಶಕ್ಕೆ ಹಿನ್ನಡೆ ಉಂಟು ಮಾಡಿತು.

  ಶ್ರೀಲಂಕಾ, ಬಾಂಗ್ಲಾದೇಶ ತಂಡಗಳ ಮುಂದಿನ ಪಂದ್ಯಗಳು: 

  ಬಾಂಗ್ಲಾದೇಶ ತನ್ನ ಮುಂದಿನ ಪಂದ್ಯವನ್ನ ಅಕ್ಟೋಬರ್ 27ರಂದು ಇಂಗ್ಲೆಂಡ್ ವಿರುದ್ಧ ಆಡಲಿದೆ. ಶ್ರೀಲಂಕಾದ ಮುಂದಿನ ಪಂದ್ಯ ಅ. 28ರಂದು ಆಸ್ಟ್ರೇಲಿಯಾ ವಿರುದ್ಧ ಇದೆ.

  ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

  ನಿನ್ನೆಯ ಗ್ರೂಪ್ 1 ಪಂದ್ಯಗಳ ಫಲಿತಾಂಶ: 

  ನಿನ್ನೆ ನಡೆದ ಮೊದಲ ಗುಂಪಿನ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಗೆಲುವು ಸಾಧಿಸಿ ಶುಭಾರಂಭ ಮಾಡಿವೆ. ನಿನ್ನೆಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸೌತ್ ಆಫ್ರಿಕಾ ವಿರುದ್ಧ 5 ವಿಕೆಟ್​ಗಳಿಂದ ಸೋಲಿಸಿತ್ತು. ಮತ್ತೊಂದು ಪಂದ್ಯ ಏಕಪಕ್ಷೀಯವಾಗಿತ್ತು. ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಕೇವಲ 55 ರನ್​ಗೆ ಆಲೌಟ್ ಆಗಿ 6 ವಿಕೆಟ್​ಗಳಿಂದ ಸೋಲಪ್ಪಿತ್ತು.

  ತಂಡಗಳು:

  ಬಾಂಗ್ಲಾದೇಶ ತಂಡ: ಮೊಹಮ್ಮದ್ ನಯೀಮ್, ಲಿಟನ್ ದಾಸ್, ಶಾಕಿಬ್ ಅಲ್ ಹಸನ್, ಮುಷ್ಫಿಕುರ್ ರಹೀಮ್, ಅಫೀಫ್ ಹುಸೇನ್, ಮಹಮುದುಲ್ಲಾ, ನೂರುಲ್ ಹಸನ್, ಮಹೆದಿ ಹಸನ್, ಮೊಹಮ್ಮದ್ ಸೈಫುದ್ದೀನ್, ನಸುಮ್ ಅಹ್ಮದ್, ಮುಸ್ತಾಫಿಜುರ್ ರಹಮಾನ್.

  ಶ್ರೀಲಂಕಾ ತಂಡ: ಕುಸಾಲ್ ಪೆರೇರಾ, ಪಥುಮ್ ನಿಸ್ಸಾಂಕ, ಚರಿತ್ ಅಸಲಂಕಾ, ಅವಿಷ್ಕಾ ಫರ್ನಾಂಡೋ, ವನಿಂದು ಹಸರಂಗ, ಭನುಕಾ ರಾಜಪಕ್ಷ, ದಾಸುನ್ ಶಾನಕ, ಚಮಿಕಾ ಕರುಣಾರತ್ನೆ, ದುಷ್ಮಂತ ಚಮೀರಾ, ಲಾಹಿರು ಕುಮಾರ, ಬಿನುರ ಫರ್ನಾಂಡೋ.

  ಇದನ್ನೂ ಓದಿ: Virender Sehwag- ಏಕಾಂಗಿಯಾಗೇ ಪಾಕ್ ವಿರುದ್ಧ ಇವರು ಪಂದ್ಯ ಗೆಲ್ಲಿಸಬಲ್ಲರು ಎಂದ ಸೆಹ್ವಾಗ್

  ಸ್ಕೋರು ವಿವರ:

  ಬಾಂಗ್ಲಾದೇಶ 20 ಓವರ್ 171/4
  (ಮೊಹಮ್ಮದ್ ನಯೀಮ್ 62, ಮುಷ್ಫಿಕುರ್ ರಹೀಮ್ ಅಜೇಯ 57, ಲಿಟಾನ್ ದಾಸ್ 16 ರನ್)

  ಶ್ರೀಲಂಕಾ 18.5 ಓವರ್ 172/5
  (ಚರಿತ್ ಅಸಲಂಕಾ ಅಜೇಯ 80, ಭನುಕಾ ರಾಜಪಕ್ಸ 53, ಪಿಥುಮ್ ನಿಸ್ಸಾಂಕ 24 ರನ್ – ನಸುಮ್ ಅಹ್ಮದ್ 29/2, ಶಾಕಿಬ್ ಅಲ್ ಹಸನ್ 17/2)
  Published by:Vijayasarthy SN
  First published: