Shakib Record- ಅಫ್ರಿದಿ ದಾಖಲೆ ಮುರಿದ ಶಾಕಿಬ್; ಟಿ20 ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್

T20 World Cup 2021- ಬಾಂಗ್ಲಾದೇಶ ತಂಡದ ಆಲ್ರೌಂಡ್ ಆಟಗಾರ ಶಾಕಿಬ್ ಅಲ್ ಹಸನ್ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ನಿರ್ಮಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರು ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದಿದ್ದರು.

ಶಾಕಿಬ್ ಅಲ್ ಹಸನ್

ಶಾಕಿಬ್ ಅಲ್ ಹಸನ್

 • Share this:
  ಶಾರ್ಜಾ: ನಿನ್ನೆ ಭಾನುವಾರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶದ ಆಲ್​ರೌಂಡರ್ ಶಾಕಿಬ್ ಅಲ್ ಹಸನ್ ಹೊಸ ದಾಖಲೆ ಬರೆದರು. ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹ ಎಚ್ಚು ವಿಕೆಟ್ ಪಡೆದು ಹೊಸ ಇತಿಹಾಸ ಸೃಷ್ಟಿಸಿದರು. ಪಥುಮ್ ನಿಸ್ಸಾಂಕ ಮತ್ತು ಅವಿಷ್ಕಾ ಫರ್ನಾಂಡೋ ಅವರ ವಿಕೆಟ್​ಗಳನ್ನ ಪಡೆದ ಶಾಕಿಬ್, ಎಲ್ಲಾ ಟಿ20 ವಿಶ್ವಕಪ್​ಗಳಿಂದ ಸೇರಿ ಒಟ್ಟು 40 ವಿಕೆಟ್​ಗಳನ್ನ ಹೊಂದಿದ್ದಾರೆ.

  ಪಾಕಿಸ್ತಾನದ ಶಾಹಿದ್ ಅಫ್ರಿದಿ 39 ವಿಕೆಟ್​ಗಳನ್ನ ಪಡೆದಿದ್ದಾರೆ. ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಮತ್ತು ಸಯೀದ್ ಅಜ್ಮಲ್ 38 ಮತ್ತು 36 ವಿಕೆಟ್ ಪಡೆದು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

  ಟಿ20 ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು:

  1) 40 ವಿಕೆಟ್: ಶಾಕಿಬ್ ಅಲ್ ಹಸನ್, ಬಾಂಗ್ಲಾದೇಶ

  2) 39 ವಿಕೆಟ್: ಶಾಹಿದ್ ಅಫ್ರಿದಿ, ಪಾಕಿಸ್ತಾನ

  3) 38 ವಿಕೆಟ್: ಲಸಿತ್ ಮಾಲಿಂಗ, ಶ್ರೀಲಂಕಾ

  4) 26 ವಿಕೆಟ್: ಸಯೀದ್ ಅಜ್ಮಲ್, ಪಾಕಿಸ್ತಾನ

  ಟಿ20 ಕ್ರಿಕೆಟ್​ನಲ್ಲೂ ಶಾಕಿಬ್ ಅತಿ ಹೆಚ್ಚು ವಿಕೆಟ್ ದಾಖಲೆ:

  ಶಾಕಿಬ್ ಅಲ್ ಹಸನ್ ಅವರು ಟಿ20 ವಿಶ್ವಕಪ್​ನಲ್ಲಷ್ಟೇ ಅಲ್ಲ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲೂ ಹೊಸ ದಾಖಲೆ ಬರೆದಿದ್ದಾರೆ. ಮೊದಲ ಸುತ್ತಿನಲ್ಲಿ ಸ್ಕಾಟ್​ಲೆಂಡ್ ವಿರುದ್ಧದ ಪಂದ್ಯದಲ್ಲಿ ಶಾಕಿಬ್ ಅವರು 108ನೇ ವಿಕೆಟ್ ಪಡೆದರು. 107 ವಿಕೆಟ್ ಪಡೆದಿದ್ದ ಲಸಿತ್ ಮಾಲಿಂಗ ಅವರ ದಾಖಲೆಯನ್ನ ಶಾಕಿಬ್ ಮುರಿದಿದ್ದರು.

  ಕಾಕತಾಳೀಯವಾಗಿ ಶಾಕಿಬ್ ಅಲ್ ಹಸನ್ ಬರೆದ ಎರಡು ದಾಖಲೆಗಳಿಗೆ ಕಾರಣವಾದ ಪಂದ್ಯಗಳಲ್ಲಿ ಬಾಂಗ್ಲಾದೇಶ ಸೋತಿತು.

  34 ವರ್ಷದ ಶಾಕಿಬ್ ಅಲ್ ಹಸನ್ ಅವರು ಬಾಂಗ್ಲಾದೇಶ ಕ್ರಿಕೆಟ್ ಇತಿಹಾಸದಲ್ಲೇ ಕಂಡ ಅತ್ಯಂತ ಶ್ರೇಷ್ಠ ಆಲ್​ರೌಂಡರ್ ಎನಿಸಿದ್ದಾರೆ. ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನದ ಮೂಲಕ ಅನೇಕ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಐಪಿಎಲ್​ನಲ್ಲೂ ಬೇಡಿಕೆ ಇರುವ ಆಟಗಾರ ಅವರು. ಈ ಬಾರಿಯ ಐಪಿಎಲ್​ನಲ್ಲಿ ಅಷ್ಟೇನೂ ಯಶಸ್ವಿ ಕಾಣದೇ ಹೋದರೂ ವಿಶ್ವಕಪ್​ನಲ್ಲಿ ತಮ್ಮ ಕರಾಮತ್ತು ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಇದನ್ನೂ ಓದಿ: Shaheen Afridi- ಶಾಹೀನ್ ಮೊದಲ ಓವರ್ ತಂಬಾ ಡೇಂಜರ್ ಎಂದು ಇವರಂದದ್ದು ನಿಜ ಆಯ್ತು

  ಲಂಕಾ ವಿರುದ್ಧ ಬಾಂಗ್ಲಾಗೆ ಸೋಲು: 

  ಶ್ರೀಲಂಕಾ ಕ್ರಿಕೆಟ್ ತಂಡ ಈ ವಿಶ್ವಕಪ್​ನಲ್ಲಿ ಸತತ ನಾಲ್ಕನೇ ಪಂದ್ಯ ಗೆದ್ದಿದೆ. ಸೂಪರ್-12 ಹಂತದಲ್ಲಿ ಲಂಕನ್ನರು ಶುಭಾರಂಭ ಮಾಡಿದ್ಧಾರೆ. ಇಂದು ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 5 ವಿಕೆಟ್​ಗಳಿಂದ ಜಯಭೇರಿ ಭಾರಿಸಿದ್ದಾರೆ. ಗೆಲ್ಲಲು 172 ರನ್​ಗಳ ಕಠಿಣ ಗುರಿಯನ್ನ ಲಂಕಾ ಯಶಸ್ವಿಯಾಗಿ ಬೆನ್ನತ್ತಿತು. ಚರಿತ್ ಅಸಲಂಕಾ ಈ ಪಂದ್ಯದಲ್ಲಿ ವಿಜೃಂಬಿಸಿದರು. ಅಜೇಯ 80 ರನ್ ಗಳಿಸಿ ಲಂಕಾ ಗೆಲುವಿನ ರೂವರಿಯಾದರು. ಒಂದು ಹಂತದಲ್ಲಿ 8 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಶ್ರೀಲಂಕಾವನ್ನು ಗೆಲುವಿನ ದಡದವರೆಗೂ ಮುಟ್ಟಿಸಿದವರು ಅಸಲಂಕಾ.

  ಚರಿತ್ ಅಸಲಂಕಾ ಮತ್ತು ಭನುಕ ರಾಜಪಕ್ಸ ಇಬ್ಬರೂ 5ನೇ ವಿಕೆಟ್​ಗೆ 86 ರನ್ ಜೊತೆಯಾಟ ಆಡಿದ್ದು ಶ್ರೀಲಂಕಾವನ್ನು ಅಪಾಯದಿಂದ ಪಾರು ಮಾಡಿದಷ್ಟೇ ಅಲ್ಲ ಗೆಲುವಿನ ಸಮೀಪ ಕೊಂಡೊಯ್ಯಲು ಸಾಧ್ಯವಾಯಿತು.

  ಇದಕ್ಕೆ ಮುನ್ನ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 171 ರನ್​ಗಳ ಬೃಹತ್ ಮೊತ್ತವನ್ನೇ ಕಲೆಹಾಕಿತು. ಮೊಯಮ್ಮದ್ ನಯೀಮ್ ಮತ್ತು ಮುಷ್ಫಿಕುರ್ ರಹೀಮ್ ಇಬ್ಬರೂ ಭರ್ಜರಿ ಅರ್ಧಶತಕಗಳನ್ನ ಗಳಿಸಿದರು. ಮೊಹಮ್ಮದ್ ನಯೀಮ್ 52 ಬಾಲ್​ನಲ್ಲಿ 62 ರನ್ ಗಳಿಸಿದರೆ, ಮುಷ್ಫಿಕುರ್ ರಹೀಮ್ 37 ಎಸೆತದಲ್ಲಿ ಅಜೇಯ 57 ರನ್ ಭಾರಿಸಿದರು. ಆದರೆ, 171 ರನ್​ಗಳ ಉತ್ತಮ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳಲು ಬಾಂಗ್ಲಾದೇಶ ವಿಫಲವಾಯಿತು. ಕೆಲ ಡ್ರಾಪ್ ಕ್ಯಾಚ್​ಗಳು ಹಾಗೂ ಕಳಪೆ ಫೀಲ್ಡಿಂಗ್ ಬಾಂಗ್ಲಾದೇಶಕ್ಕೆ ಹಿನ್ನಡೆ ಉಂಟು ಮಾಡಿತು.

  ಬಾಂಗ್ಲಾದೇಶ ತನ್ನ ಮುಂದಿನ ಪಂದ್ಯವನ್ನ ಅಕ್ಟೋಬರ್ 27ರಂದು ಇಂಗ್ಲೆಂಡ್ ವಿರುದ್ಧ ಆಡಲಿದೆ. ಶ್ರೀಲಂಕಾದ ಮುಂದಿನ ಪಂದ್ಯ ಅ. 28ರಂದು ಆಸ್ಟ್ರೇಲಿಯಾ ವಿರುದ್ಧ ಇದೆ.
  Published by:Vijayasarthy SN
  First published: