T20 Wold Cup- ಕೊಹ್ಲಿಗೂ ಹೆದರಲ್ಲ, ಬಾಬರ್​ಗೂ ಹೆದರಲ್ಲ: ತೊಡೆತಟ್ಟಿದ ಸ್ಕಾಟ್ಲೆಂಡ್ ಆಟಗಾರ

Scotland Team in huge confidence- ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸತತ ಮೂರು ಪಂದ್ಯ ಗೆದ್ದು ಭರ್ಜರಿ ಫಾರ್ಮ್ನಲ್ಲಿರುವ ಸ್ಕಾಟ್ಲೆಂಡ್ ತಂಡ ಈಗ ಸೂಪರ್-12 ಹಂತದಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಗಾನಿಸ್ತಾನ್ ತಂಡಗಳಿಗೆ ಸವಾಲೊಡ್ಡುತ್ತಿದೆ.

ಮಾರ್ಕ್ ವಾಟ್

ಮಾರ್ಕ್ ವಾಟ್

  • Share this:
    ದುಬೈ, ಅ. 22: ನೆದರ್​ಲೆಂಡ್ಸ್, ಐರ್​ಲೆಂಡ್ ತಂಡಗಳ ಸಾಲಿನಲ್ಲಿ ವಿಶ್ವ ಪ್ರಬಲ ತಂಡಗಳ ಎದುರು ಎಲೆಮರೆ ಕಾಯಿಯಂತಿದ್ದ ಸ್ಕಾಟ್​ಲೆಂಡ್ ತಂಡ ದೊಡ್ಡ ವೇದಿಕೆಯಲ್ಲಿ ಸಿಡಿಲಮರಿಯಂತೆ ಎದ್ದಿದೆ. ಮೊದಲ ಸುತ್ತಿನ ಮೂರೂ ಪಂದ್ಯಗಳನ್ನ ಗೆದ್ದು ಅಗ್ರಸ್ಥಾನದೊಂದಿಗೆ ಸೂಪರ್-12 ಹಂತಕ್ಕೆ ಪ್ರವೇಶ ಪಡೆದಿದೆ. ಸೂಪರ್-12 ಹಂತದಲ್ಲಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ಇರುವ ಎರಡನೇ ಗುಂಪಿಗೆ ಸೇರಿಕೊಂಡಿದೆ. ತನ್ನ ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಪಪುವಾ ನ್ಯೂಗಿನಿಯಾ ಮತ್ತು ಓಮನ್ ತಂಡಗಳನ್ನ ಸ್ಕಾಟ್ಲೆಂಡ್ ಸೋಲಿಸಿತ್ತು. ಇದಕ್ಕೆ ಮುನ್ನ ನಡೆದ ಎರಡು ಅಭ್ಯಾಸ ಪಂದ್ಯಗಳನ್ನೂ ಸ್ಕಾಟ್ಲೆಂಡ್ ಗೆದ್ದದ್ದನ್ನ ಪರಿಗಣಿಸಿದರೆ ಈ ವಿಶ್ವಕಪ್​ನಲ್ಲಿ ಸತತ ಐದು ಜಯಭೇರಿ ಭಾರಿಸಿದೆ. ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ತಂಡಗಳಿಗೆ ಸ್ಕಾಟ್ಲೆಂಡ್ ಎಚ್ಚರಿಕೆಯ ಕರೆಗಂಟೆ ಒತ್ತಿದೆ.

    ಸ್ಕಾಟ್ಲೆಂಡ್ ತಂಡದ ಆಟಗಾರರು ದೊಡ್ಡ ವೇದಿಕೆಯಲ್ಲಿ ದೊಡ್ಡ ತಂಡಗಳ ವಿರುದ್ಧ ಆಡಲು ಯಾವ ಹಿಂಜರಿಕೆಯನ್ನ ಹೊಂದಿಲ್ಲ. ಬಾಂಗ್ಲಾದೇಶದಂಥ ಪ್ರಬಲ ತಂಡವನ್ನು ಸೋಲಿಸಿದ ಬಳಿಕ ಸ್ಕಾಟ್ಲೆಂಡ್ ಆಟಗಾರರ ಆತ್ಮವಿಶ್ವಾಸ ಬಹಳ ಹೆಚ್ಚಾಗಿರುವುದು ಆ ಆಟಗಾರರ ಮಾತುಗಳಲ್ಲೇ ಗುತ್ತಾಗುತ್ತದೆ. ಸೂಪರ್-12 ಹಂತದಲ್ಲಿ ಕೆಲ ಪಂದ್ಯಗಳನ್ನ ಗೆಲ್ಲುತ್ತೇವೆ ಎಂದು ಸ್ಕಾಟ್​ಲೆಂಡ್ ಬೌಲರ್ ಮಾರ್ಕ್ ವ್ಯಾಟ್ ಹೇಳಿದ್ಧಾರೆ.

    ಅಚ್ಚರಿಯ ಫಲಿತಾಂಶ ಕೊಡುತ್ತೇವೆ:

    “ನಾವು ಕೆಲ ಆಘಾತಕಾರಿ ಫಲಿತಾಂಶ ಕೊಡಲು ಹೊರಟಿದ್ದೇವೆ. ನಮಗೆ ಗೆಲ್ಲೋಕೆ ಆಗಲ್ಲವಾ? ಈ ಹಿಂದೆ ಗೆದ್ದು ತೋರಿಸಿದ್ದೇವೆ. ವಿಶ್ವದ ಅತ್ಯುತ್ತಮ ಏಕದಿನ ಕ್ರಿಕೆಟ್ ತಂಡವನ್ನ ಸೋಲಿಸಿದ್ದೇವೆ. ಬಾಂಗ್ಲಾದೇಶಕ್ಕೆ ಸೋಲುಣಿಸಿದ್ದೇವೆ. ನಾವು ನಿಜಕ್ಕೂ ಒಳ್ಳೆಯ ಫಾರ್ಮ್​ನಲ್ಲಿ ಇದ್ದೇವೆ ಎನಿಸುತ್ತದೆ.

    “ಸೂಪರ್-12 ಹಂತದಲ್ಲಿರುವ ಇತರ ತಂಡಗಳು ನಮ್ಮನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಸ್ಕಾಟ್​ಲೆಂಡ್ ಬಗ್ಗೆ ಆ ತಂಡಗಳು ಚಿಂತೆಪಡಬೇಕು. ನಾವು ಒಳ್ಳೆಯ ಫಾರ್ಮ್​ನಲ್ಲಿದ್ದೇವೆ, ಅದನ್ನ ಮುಂದುವರಿಸುತ್ತೇವೆ” ಎಂದು ಮಾರ್ಕ್ ವಾಟ್ ತಿಳಿಸಿದ್ದಾರೆ.

    ಇದನ್ನೂ ಓದಿ: T20 World Cup, Super-12- ಭಾರತ, ಪಾಕ್ ಇರುವ ಗುಂಪಿಗೆ ಲಂಕಾವೂ ಇಲ್ಲ, ಬಾಂಗ್ಲಾವೂ ಇಲ್ಲ

    ಭಾರತ, ಪಾಕಿಸ್ತಾನ ತಂಡಗಳಿಗೆ ಹೆದರಲ್ಲ:

    ಸೂಪರ್-12 ಹಂತದಲ್ಲಿ ಎರಡನೇ ಗುಂಪಿನಲ್ಲಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ, ಬಾಬರ್ ಅಜಂ ನೇತೃತ್ವದ ಪಾಕಿಸ್ತಾನದಂಥ ಪ್ರಬಲ ತಂಡಗಳನ್ನ ಎದುರಿಸುವ ಯಾವ ಭಯವೂ ಇಲ್ಲ ಎಂದು ಸ್ಕಾಟ್​ಲೆಂಡ್​ನ 25 ವರ್ಷದ ಸ್ಪಿನ್ನರ್ ಆದ ಮಾರ್ಕ್ ವಾಟ್ ಅಭಿಪ್ರಾಯಪಟ್ಟಿದ್ಧಾರೆ.

    ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

    “ನೀವು ಆಟ ಆಡುವುದೇ ಇಂಥ ಕ್ಷಣಗಳಿಗಾಗಿ ಅಲ್ಲವಾ? ವಿರಾಟ್ ಕೊಹ್ಲಿ, ಬಾಬರ್ ಅಜಯಂ, ಕೇನ್ ವಿಲಿಯಮ್ಸನ್ ಅವರಂಥ ದೊಡ್ಡ ಸ್ಟಾರ್​ಗಳ ವಿರುದ್ಧ ಆಡುವುದು ಬಹಳ ಮುಖ್ಯ. ಇವು ವಿಶ್ವದ ಅತ್ಯುತ್ತಮ ತಂಡಗಳು. ಅತ್ಯುತ್ತಮ ಆಟಗಾರರ ಎದುರು ನಿಮ್ಮ ಸಾಮರ್ಥ್ಯವನ್ನ ಒರೆಗೆ ಹಚ್ಚಬೇಕೆನ್ನುವುದು ಎಲ್ಲ ಆಟಗಾರರ ಬಯಕೆಯಾಗಿರುತ್ತದೆ. ಸ್ಕಾಟ್ಲೆಂಡ್ ಆಟಗಾರರು ತಮ್ಮ ಪ್ರತಿಭೆಯನ್ನ ಇಡೀ ವಿಶ್ವದೆದುರು ತೋರಿಸಲು ತುದಿಗಾಲಲ್ಲಿದ್ದಾರೆ. ಇದಕ್ಕಾಗಿಯೇ ನೀವು ವಿಶ್ವಕಪ್​ನಲ್ಲಿ ಆಡಲು ಬಯಸುವುದು. ಇಲ್ಲಿ ಅತ್ಯುತ್ತಮ ತಂಡಗಳು ಹಾಗೂ ಅತ್ಯುತ್ತಮ ಆಟಗಾರರು ಇರುತ್ತಾರೆ. ಅವರ ವಿರುದ್ಧ ಹೋರಾಡುವುದು ಬಹಳ ಮುಖ್ಯ” ಎಂದು ಮಾರ್ಕ್ ವಾಟ್ ಹೇಳಿದ್ದಾರೆ.

    ಇದನ್ನೂ ಓದಿ: India vs Pak- ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಈ ಆಟಗಾರರು ಆಡಬೇಕು: ತಂಡ ಕಟ್ಟಿದ ಪಾರ್ಥಿವ್ ಪಟೇಲ್

    ಬಾಂಗ್ಲಾಗೆ ಬದಲಾವಣೆ ಅಗತ್ಯ, ಸ್ಕಾಟ್ಲೆಂಡ್​ಗಲ್ಲ:

    ಸೂಪರ್-12ರಲ್ಲಿ ದೊಡ್ಡ ತಂಡಗಳನ್ನ ಎದುರಿಸುವಾಗ ಬೇರೆ ರೀತಿಯ ರಣತಂತ್ರಗಳನ್ನ ಸ್ಕಾಟ್​ಲೆಂಡ್ ಸಿದ್ಧಪಡಿಸಿದೆಯೇ? ಹಾಗೇನಿಲ್ಲ ಅಂತರಾ ಮಾರ್ಕ್ ವಾಟ್. ಗ್ರೂಪ್ ಪಂದ್ಯಗಳಲ್ಲಿ ಇದ್ದ ತಂತ್ರಗಳನ್ನೇ ಸೂಪರ್-12ರ ಪಂದ್ಯಗಳಲ್ಲೂ ಮುಂದುವರಿಸುತ್ತೇವೆ ಎಂದಿದ್ಧಾರೆ.

    “ನಾವು ವಿಭಿನ್ನ ಪ್ರಯತ್ನ ಮಾಡುವ ಅಗತ್ಯ ಇಲ್ಲ ಎನಿಸುತ್ತದೆ. ಮೂರು ಪಂದ್ಯಗಳಲ್ಲಿ ಮೂರನ್ನೂ ಗೆದ್ದಿದ್ದೇವೆ. ಟಿ20 ಕ್ರಿಕೆಟ್​ನ ನಂಬರ್ 6 ತಂಡ ಬಾಂಗ್ಲಾದೇಶವನ್ನೂ ಸೋಲಿಸಿದ್ದೇವೆ. ನಾವು ಯಾವ ಬದಲಾವಣೆ ಮಾಡಿಕೊಳ್ಳಬೇಕೆಂದು ಅನಿಸುವುದಿಲ್ಲ. ಇನ್ನು ಬೇಕಾದರೆ ಬಾಂಗ್ಲಾದೇಶವು ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗಬಹುದು. ಯಾಕೆಂದರೆ ನಾವಿದ್ದ ಗುಂಪಿನಲ್ಲಿ ಆ ತಂಡ ಸ್ವಲ್ಪ ಪ್ರಯಾಸ ಪಡಬೇಕಾಗಿತ್ತು. ಅಸೋಸಿಯೇಟ್ ಕ್ರಿಕೆಟ್ ಕ್ಷೇತ್ರ ನಿಜಕ್ಕೂ ಕಠಿಣ” ಎಂದು ಸ್ಕಾಟ್ಲೆಂಡ್ ಬೌಲರ್ ಮಾರ್ಕ್ ವಾಟ್ ತಿಳಿಸಿದ್ಧಾರೆ.
    Published by:Vijayasarthy SN
    First published: