Rashid Khan- ಲಸಿತ್ ಮಾಲಿಂಗ ವಿಶ್ವದಾಖಲೆ ಮುರಿದ ಅಫ್ಘಾನ್ ಬೌಲರ್ ರಷೀದ್ ಖಾನ್

Fastest to reach 100 T20I wickets: ಅಫ್ಘಾನಿಸ್ತಾನದ ಬೌಲರ್ ರಷೀದ್ ಖಾನ್ ಟಿ20 ಕ್ರಿಕೆಟ್ನಲ್ಲಿ ಕೇವಲ 54 ಇನ್ನಿಂಗ್ಸಲ್ಲಿ 100 ವಿಕೆಟ್ ಕಿತ್ತಿದ್ಧಾರೆ. ಅತಿ ಕಡಿಮೆ ಪಂದ್ಯದಲ್ಲಿ ವಿಕೆಟ್ ಶತಕ ಭಾರಿಸಿದ ದಾಖಲೆ ಅವರದ್ದು.

ರಷೀದ್ ಖಾನ್

ರಷೀದ್ ಖಾನ್

 • Share this:
  ದುಬೈ: ನಿನ್ನೆ ನಡೆದ ಎರಡನೇ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲುವ ಮುನ್ನ ಅಫ್ಘಾನಿಸ್ತಾನ್ ವೀರೋಚಿತ ಹೋರಾಟ ತೋರುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಅಫ್ಘಾನ್ ಹೋರಾಟ ಅವಿಸ್ಮರಣೀಯ ಎನಿಸಿದರೆ ತಂಡದ ಸ್ಪಿನ್ನರ್ ರಷೀದ್ ಖಾನ್ ಹೊಸ ದಾಖಲೆ ಕೂಡ ಬರೆದಿದ್ದಾರೆ. ವಿಶ್ವದ ಅತ್ಯುತ್ತಮ ಸ್ಪಿನ್ನರ್​ಗಳಲ್ಲೊಬ್ಬರೆನಿಸಿರುವ ರಷೀದ್ ಖಾನ್ ಟಿ20 ಕ್ರಿಕೆಟ್​​ನಲ್ಲಿ 100 ವಿಕೆಟ್ ಮೈಲಿಗಲ್ಲು ಮುಟ್ಟಿದ್ದಾರೆ. ಇಷ್ಟೇ ಆಗಿದ್ದರೆ ಇದು ಕೇವಲ ಮೈಲಿಗಲ್ಲು ಮಾತ್ರ ಆಗಿರುತಿತ್ತು. ಆದರೆ, ರಷೀದ್ ಖಾನ್ ವಿಶ್ವದಾಖಲೆ ಬರೆದಿದ್ದಾರೆ.

  ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ವಿಕೆಟ್ ಕಿತ್ತ ವಿಶ್ವದ ನಾಲ್ಕನೇ ಬೌಲರ್ ಆಗಿದ್ದಾರೆ. ಆದರೆ, ಅತಿ ಕಡಿಮೆ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ದಾಖಲೆ ನಿರ್ಮಿಸಿದ್ಧಾರೆ. ಶ್ರೀಲಂಕಾದ ದಂತಕಥೆ ಲಸಿತ್ ಮಾಲಿಂಗ ಅವರ ದಾಖಲೆ ಮುರಿದಿದ್ದಾರೆ. ಲಸಿತ್ ಮಾಲಿಂಗ ಅವರು 100 ವಿಕೆಟ್ ಮೈಲಿಗಲ್ಲು ಮುಟ್ಟಲು 76 ಪಂದ್ಯ ಬೇಕಾಗಿತ್ತು. ಆದರೆ ರಷೀದ್ ಖಾನ್ ಕೇವಲ 54 ಇನಿಂಗ್ಸ್​ನಲ್ಲೇ ಈ ಸಾಧನೆ ಮಾಡಿದ್ಧಾರೆ. ನೂರು ವಿಕೆಟ್ ಮೈಲಿಗಲ್ಲು ಮುಟ್ಟಿರುವ ಇತರ ಆಟಗಾರರಾದ ಟಿಮ್ ಸೌಥಿ ಮತ್ತು ಶಾಕಿಬ್ ಅಲ್ ಹಸನ್ ಅವರು 82 ಮತ್ತು 83 ಇನ್ನಿಂಗ್ಸ್ ಆಡಬೇಕಾಯಿತು.

  ಟಿ20 ಕ್ರಿಕೆಟ್​ನಲ್ಲಿ 100 ವಿಕೆಟ್ ಮೈಲಿಗಲ್ಲು ಮುಟ್ಟಿದವರು:

  1) ರಷೀದ್ ಖಾನ್, ಅಫ್ಘಾನಿಸ್ತಾನ: 54ನೇ ಇನ್ನಿಂಗ್ಸ್

  2) ಲಸಿತ್ ಮಾಲಿಂಗ, ಶ್ರೀಲಂಕಾ: 76ನೇ ಇನ್ನಿಂಗ್ಸ್

  3) ಟಿಮ್ ಸೌಥೀ, ನ್ಯೂಜಿಲೆಂಡ್: 82ನೇ ಇನ್ನಿಂಗ್ಸ್

  4) ಶಾಕಿಬ್ ಅಲ್ ಹಸನ್, ಬಾಂಗ್ಲಾದೇಶ: 83ನೇ ಇನ್ನಿಂಗ್ಸ್

  ಇದನ್ನೂ ಓದಿ: T20 World Cup- ಪಾಕ್​ಗೆ ಬೆವರಿಳಿಸಿದ ಅಫ್ಘಾನ್; ವೀರೋಚಿತ ಸೋಲುಂಡು ಹೊರಬಿದ್ದ ಬಾಂಗ್ಲಾ

  ರಷೀದ್ ಖಾನ್ ಸರಾಸರಿ ರೇಟ್ ಅದ್ಭುತ:

  ರಷೀದ್ ಖಾನ್ ಟಿ20 ಕ್ರಿಕೆಟ್​ನಲ್ಲಿ ಸರಿಸಾಟಿ ಇಲ್ಲದ ಬೌಲರ್. ತಮ್ಮ 100 ವಿಕೆಟ್​ಗಳನ್ನ ಇವರು 12 ರನ್ ಸರಾಸರಿಯಂತೆ ಪಡೆದುಕೊಂಡಿದ್ಧಾರೆ. ಇವರ ಬೌಲಿಂಗ್ ಎಕನಾಮಿ, ಅಂದರೆ ಪ್ರತೀ ಓವರ್​ಗೆ ನೀಡಿರುವ ಸರಾಸರಿ ರನ್ ಕೇವಲ 6 ರನ್​ಗಿಂತ ತುಸು ಹೆಚ್ಚು ಅಷ್ಟೇ.

  ಐಪಿಎಲ್ ಅಷ್ಟೇ ಅಲ್ಲ ವಿಶ್ವದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಬೌಲರ್:

  ರಷೀದ್ ಖಾನ್ 17ನೇ ವಯಸ್ಸಿಗೆ ಅಫ್ಘಾನಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದವರು. ಅವರ ಸ್ಪಿನ್ ಕರಾಮತ್ತಿಗೆ ಬಹುತೇಕ ಬ್ಯಾಟುಗಾರರು ತಲ್ಲಣಗೊಳ್ಳುತ್ತಾರೆ. ವಿಶ್ವದ ವಿವಿಧ ದೇಶಗಳಲ್ಲಿರುವ ಟ್ವೆಂಟಿ20 ಟೂರ್ನಿಗಳಲ್ಲಿ ರಷೀದ್ ಖಾನ್ ಅವರಿಗೆ ಬಹಳ ಬೇಡಿಕೆ ಇದೆ. ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿ ನಾಲ್ಕು ಸೀಸನ್ ಆಡಿದ್ದಾರೆ. ಭಾರತ ಅಷ್ಟೇ ಅಲ್ಲ ಇಂಗ್ಲೆಂಡ್, ಪಾಕಿಸ್ತಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಸೌತ್ ಆಫ್ರಿಕಾದ ಟ್ವೆಂಟಿ20 ಟೂರ್ನಿಗಳಲ್ಲಿ ರಷೀದ್ ಖಾನ್ ಅವರು ಆಡುತ್ತಾ ಬಂದಿದ್ಧಾರೆ.

  ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

  ಯುಎಇ ಪಿಚ್ ವರ್ತನೆ ಬಗ್ಗೆ ಮೊದಲೇ ತಿಳಿಸಿದ್ದ ರಷೀದ್ ಖಾನ್:

  ಯುಎಇಯಲ್ಲಿರುವ ಪಿಚ್​ಗಳ ಬಗ್ಗೆ ಪಾಕಿಸ್ತಾನ್ ಮತ್ತು ಅಫ್ಘಾನಿಸ್ತಾನ ಆಟಗಾರರಿಗೆ ಬಹಳ ಜ್ಞಾನ ಉಂಟು. ಇದು ಇವರಿಗೆ ಒಂದು ರೀತಿಯಲ್ಲಿ ಹೋಮ್ ಗ್ರೌಂಡ್​ನಂತಾಗಿದೆ. ವಿಶ್ವಕಪ್​ಗೆ ಮುನ್ನ ಇಲ್ಲಿ ಐಪಿಎಲ್​ನಲ್ಲಿ ಆಡಿದ್ದ ರಷೀದ್ ಖಾನ್, ದಿನಗಳೆದಂತೆ ಇಲ್ಲಿನ ಪಿಚ್​​ಗಳು ನಿಧಾನಗೊಳ್ಳುತ್ತಾ ಹೋಗುತ್ತವೆ. ತಮ್ಮ ಬೌಲಿಂಗ್ ಶೈಲಿಗೆ ಇವು ಸಹಕಾರಿ ಆಗುತ್ತವೆ ಎಂದು ಹೇಳಿಕೊಂಡಿದ್ದರು. “ಇಲ್ಲಿರುವ ವಿಕೆಟ್​ಗಳು ಸ್ಪಿನ್ನರ್ಸ್​ಗೆ ಬಹಳ ಸಹಾಯವಾಗುತ್ತವೆ. ಇದೇ ಕಾರಣಕ್ಕೆ ಬಹುತೇಕ ತಂಡಗಳಲ್ಲಿ ಸ್ಪಿನರ್ಸ್ ಹೆಚ್ಚು ಇದ್ದಾರೆ” ಎಂದು ರಷೀದ್ ಹೇಳಿದ್ದಾಗಿ ಎಎಫ್​ಪಿ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

  ಐಪಿಎಲ್​ನದಕ್ಕಿಂತ ವಿಶ್ವಕಪ್​ನಲ್ಲಿ ಸ್ಪಿನ್​ಗೆ ಹೆಚ್ಚು ಅನುಕೂಲ:

  ಐಪಿಎಲ್ ಪಂದ್ಯಗಳು ನಡೆದಾಗ ಪಿಚ್ ಚೆನ್ನಾಗಿಯೇ ಇತ್ತು. ಆದರೆ ಸ್ಪಿನ್ನರ್ಸ್​ಗೆ ಹೆಚ್ಚು ನೆರವಾಗುತ್ತಿರಲಿಲ್ಲ. ಈ ವಿಶ್ವಕಪ್​ನಲ್ಲಿ ಪಂದ್ಯಗಳು ಹೆಚ್ಚು ನಡೆದಂತೆಲ್ಲಾ ಪಿಚ್ ನಿಧಾನಗೊಳ್ಳುತ್ತಾ ಹೋಗುತ್ತದೆ. ಆಗ ಸ್ಪಿನ್ನರ್ಸ್​ಗೆ ಅನುಕೂಲವಾಗುತ್ತದೆ ಎಂದು ರಷೀದ್ ಅಂದಾಜು ಮಾಡಿದ್ದು ಈಗ ನಿಜವಾಗಿದೆ.
  Published by:Vijayasarthy SN
  First published: