Saqlain Mushtaq- ಭಾರತ-ಪಾಕ್ ಫೈನಲ್ ಆಗಬೇಕು ಎಂದು ಪಾಕ್ ಕೋಚ್ ಹೇಳಿದ್ದು ಈ ಕಾರಣಕ್ಕೆ

T20 World Cup: ಟಿ20 ವಿಶ್ವಕಪ್ ಫೈನಲ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಬೇಕು ಎಂದು ಅಭಿಪ್ರಾಯಪಟ್ಟಿರುವ ಪಾಕ್ ತಂಡದ ಹಂಗಾಮಿ ಕೋಚ್ ಸಕ್ಲೇನ್ ಮುಷ್ತಾಕ್, ಅಫ್ಘಾನಿಸ್ತಾನ ಯಾಕೆ ಡೇಂಜರಸ್ ಟೀಮ್ ಎಂಬುದಕ್ಕೆ ಕಾರಣ ಕೊಟ್ಟಿದ್ಧಾರೆ.

ಸಕ್ಲೇನ್ ಮುಷ್ತಾಕ್

ಸಕ್ಲೇನ್ ಮುಷ್ತಾಕ್

  • Share this:
    ದುಬೈ, ಅ. 29: ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ಈ ಎರಡು ತಂಡಗಳ ನಡುವಿನ ಕ್ರಿಕೆಟ್ ಪೈಪೋಟಿ ಬಗ್ಗೆ ಬಹಳಷ್ಟು ಕಾಮೆಂಟ್​ಗಳು ಬರುತ್ತಿವೆ. ಕೆಲ ಅನಗತ್ಯ ವಿವಾದಗಳೂ ತಲೆದೋರಿವೆ. ಪಾಕಿಸ್ತಾನದ ಹಂಗಾಮಿ ಮುಖ್ಯ ಕೋಚ್ ಸಕ್ಲೇನ್ ಮುಷ್ಕಾಕ್ ಕೂಡ ಪ್ರತಿಕ್ರಿಯಿಸಿದ್ದು, ಭಾರತ ಮತ್ತು ಪಾಕಿಸ್ತಾನ ಪಂದ್ಯ ಮಾನವೀಯತೆ ಮತ್ತು ಪ್ರೀತಿಗೆ ಸಂದ ಗೆಲುವು ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡ ಸೋತರೂ ವಿರಾಟ್ ಕೊಹ್ಲಿ ಮತ್ತು ಧೋನಿ ಪ್ರೀತಿಯಿಂದ ಪಾಕ್ ಆಟಗಾರರ ಜೊತೆ ವರ್ತಿಸಿದ ಘಟನೆಯನ್ನು ಅವರು ಉಲ್ಲೇಖಿಸಿದರು. ಹಾಗೆಯೇ, ಎಂಎಸ್ ಧೋನಿ ಅವರಿಂದ ಪಾಕ್ ಆಟಗಾರರು ಸಲಹೆ ಪಡೆದುಕೊಳ್ಳುತ್ತಿದ್ದ ಘಟನೆಯನ್ನೂ ಅವರು ಪ್ರಸ್ತಾಪಿಸಿ, ಇದು ಮಾನವೀಯತೆಗೆ ಸಂದ ಜಯ ಎಂದು ಬಣ್ಣಿಸಿದ್ದಾರೆ.

    “ಆ ಪಂದ್ಯದ ಫಲಿತಾಂಶ ಏನೇ ಇರಬಹುದು. ಆದರೆ ನಮ್ಮ ಆಟಗಾರರನ್ನ ವಿರಾಟ್ ಕೊಹ್ಲಿ, ಧೋನಿ ಆಲಂಗಿಸಿಕೊಂಡಿದ್ದು ವಿಶ್ವ ಕ್ರಿಕೆಟ್​ಗೆ ಶುಭ ಎನಿಸಿದೆ. ಭಾರತ ಮತ್ತು ಪಾಕಿಸ್ತಾನದ ಪಂದ್ಯ ಎಂಬುದನ್ನು ಬದಿಗಿಟ್ಟು ನೋಡಿದರೆ ಆ ಪಂದ್ಯದಲ್ಲಿ ನನಗೆ ಬಹಳ ಇಷ್ಟವಾಗಿದ್ದು ಮಾನವೀಯತೆ ಮತ್ತು ಪ್ರೀತಿಗೆ ಗೆಲುವು ಸಿಕ್ಕಿದ್ದು” ಎಂದು ಮಾಜಿ ಆಫ್ ಸ್ಪಿನ್ನರ್ ಸಕ್ಲೇನ್ ಹೇಳಿಕೊಂಡಿದ್ದಾರೆ.

    “ಅದೊಂದು ಆಟ. ಸೋಲು ಮತ್ತು ಗೆಲುವು ಈ ಆಟದಲ್ಲಿ ಇದ್ದಿದ್ದೇ. ಬಾಬರ್, ರಿಜ್ವಾನ್, ವಿರಾಟ್, ಧೋನಿ ಅವರಿಗೆ ನಾನು ಹ್ಯಾಟ್ಸಾಫ್ ಹೇಳಬೇಕು. ಯಾಕೆಂದರೆ ಅವರು ಎರಡು ದೇಶಗಳಿಗೆ ಮಾತ್ರವಲ್ಲ ಇಡೀ ವಿಶ್ವಕ್ಕೇ ಬಲವಾದ ಸಂದೇಶ ರವಾನಿಸಿದ್ದಾರೆ. ದ್ವೇಷದ ಮೇಲೆ ಗೆಲುವು ಸಾಧಿಸುವುದು ಪ್ರೀತಿಯೇ ಎಂದು ನಾನು ಯಾವಾಗಲೂ ಹೇಳುತ್ತೇನೆ” ಎಂದಿದ್ಧಾರೆ.

    ಭಾರತ ಮತ್ತು ಪಾಕಿಸ್ತಾನ ಫೈನಲ್ ಪಂದ್ಯ ಆಡಬೇಕು ಎಂದ ಸಕ್ಲೇನ್:

    ಈ ವಿಶ್ವಕಪ್​ನಲ್ಲಿ ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್​ನಲ್ಲೂ ಸಂದಿಸುವಂತಾಗಬೇಕು. ಅದರಿಂದ ಕ್ರಿಕೆಟ್​ಗೆ ಒಳಿತಾಗುತ್ತದೆ ಎಂಬುದು ಸಕ್ಲೇನ್ ಅನಿಸಿಕೆ.

    ಇದನ್ನೂ ಓದಿ: Ind vs Pak- ನಾನು ಕಂಡ ಅತ್ಯುತ್ತಮ ಎಸೆತಗಳವು: ಆ ಸೂಪರ್ ಓವರ್​ಗೆ ಹೇಡನ್ ಫುಲ್ ಮಾರ್ಕ್ಸ್

    ಭಾರತ ಬಹಳ ಪ್ರಬಲ ತಂಡ. ಇಂಗ್ಲೆಂಡ್ ಕೂಡ ಚೆನ್ನಾಗಿ ಆಡುತ್ತಿದೆ. ವಿಶ್ವಕಪ್ ಗೆಲ್ಲಲು ಅವರೂ ಫೇವರಿಟ್​ಗಳೇ. ಹಾಗೆಯೇ, ದೊಡ್ಡ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ಬಹಳ ಯೋಜಿತವಾಗಿ ಬರುತ್ತದೆ.

    ”ಭಾರತ ಮತ್ತು ಪಾಕಿಸ್ತಾನ ನೆರೆ ದೇಶಗಳಾದ್ದರಿಂದ ಈ ತಂಡಗಳು ಫೈನಲ್​ಗೆ ಹೋದರೆ ಐಸಿಸಿ ಹಾಗೂ ಇಡೀ ವಿಶ್ವ ಕ್ರಿಕೆಟ್​ಗೆ ಖುಷಿಯಾಗುತ್ತದೆ. ಕ್ರಿಕೆಟ್​ಗೂ ಒಳ್ಳೆಯದಾಗುತ್ತದೆ. ಈ ಎರಡು ದೇಶಗಳ ಸಂಬಂಧಕ್ಕೂ ಒಳ್ಳೆಯದಾಗುತ್ತದೆ” ಎಂದು ಪಾಕಿಸ್ತಾನದ ಕೋಚ್ ತಿಳಿಸಿದ್ಧಾರೆ.

    ಅಫ್ಘಾನಿಸ್ತಾನ ತಂಡದ ಬಗ್ಗೆ:

    ಇವತ್ತು ಎರಡನೇ ಗುಂಪಿನಲ್ಲಿ ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನ ಸವಾಲೊಡ್ಡುತ್ತಿದೆ. ಗುಂಪಿನ ಎರಡು ಪ್ರಬಲ ತಂಡಗಳನ್ನ ಸೋಲಿಸಿರುವ ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನ ಎಷ್ಟು ಪ್ರತಿರೋಧ ಒಡ್ಡಬಲ್ಲುದು ಎಂಬುದು ಪ್ರಶ್ನೆ. ಆದರೆ, ಸಕ್ಲೇನ್ ಮುಷ್ತಾಕ್ ಪ್ರಕಾರ ಅಫ್ಘಾನಿಸ್ತಾನ ಸುಲಭ ಎದುರಾಳಿಯಲ್ಲ. ಅದು ಬಹಳ ಡೇಂಜರಸ್ ಟೀಮ್ ಎನ್ನುತ್ತಾರೆ.

    ಇದನ್ನೂ ಓದಿ: T20 records- ಟಿ20 ಕ್ರಿಕೆಟ್​ನಲ್ಲಿ ಸೋಲೇ ಕಾಣದ 2 ತಂಡಗಳು; 10 ಇಂಟರೆಸ್ಟಿಂಗ್ ಸಂಗತಿಗಳು

    “ಅಫ್ಘಾನಿಸ್ತಾದ ಬೌಲಿಂಗ್ ದಾಳಿ, ಅದರಲ್ಲೂ ಅದರ ಸ್ಪಿನ್ ಪಡೆ ಅದ್ಭುತವಾಗಿದೆ. ಅವರು ಬ್ಯಾಟಿಂಗ್​ಗೆ ಇಳಿದರೆ ತಾವಂದುಕೊಂಡಂತೆ ಬ್ಯಾಟ್ ಮಾಡುತ್ತಾರೆ. ನಿರ್ಭೀತಿಯಿಂದ ಆಡುತ್ತಾರೆ. ಇಂಥ ತಂಡ ಬಹಳ ಅಪಾಯಕಾರಿ ಆಗಬಲ್ಲುದು” ಎಂದು ಸಕ್ಲೇನ್ ಮುಷ್ತಾಕ್ ವಿಶ್ಲೇಷಿಸಿದ್ದಾರೆ.

    ಅಫ್ಘಾನಿಸ್ತಾನ ತಂಡ ತನ್ನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಅದರ ಬೌಲಿಂಗ್ ದಾಳಿಗೆ ಸ್ಕಾಟ್​ಲೆಂಡ್ ಚಿಂದಿಯಾಗಿತ್ತು. ಇಂದು ಸಂಜೆ 7:30 ದುಬೈನಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಪಂದ್ಯ ಇದೆ.

    ಇದನ್ನೂ ಓದಿ: Pakistan coach- ವಿಶ್ವದ ಅತ್ಯುತ್ತಮ ಕೋಚ್ ಪಾಕಿಸ್ತಾನದ ಮುಂದಿನ ಕೋಚ್?

    ಸಕ್ಲೇನ್ ಕುರಿತು…

    44 ವರ್ಷದ ಸಕ್ಲೇನ್ ಮುಷ್ತಾಕ್ 1995ರಿಂದ 2004ರವರೆಗೆ ಪಾಕಿಸ್ತಾನ ತಂಡದ ಸ್ಟಾರ್ ಆಟಗಾರರ ಪೈಕಿ ಒಬ್ಬರೆನಿಸಿದ್ದರು. ಪಾಕಿಸ್ತಾನ ಕಂಡ ಅತ್ಯುತ್ತಮ ಸ್ಪಿನ್ನರ್​ಗಳಲ್ಲಿ ಅವರೂ ಒಬ್ಬರು. ಆಫ್ ಸ್ಪಿನ್ ಬೌಲಿಂಗ್ ಮಾಡುತ್ತಿದ್ದ ಅವರು ದೂಸ್ರಾ ಶೈಲಿಯ ಎಸೆತಗಳಿಗೆ ಫೇಮಸ್ ಆಗಿದ್ದರು. ಆಫ್ ಸ್ಪಿನ್ ಮಾರುವೇಷದಲ್ಲಿ ಅವರು ಲೆಗ್ ಸ್ಪಿನ್ ಮಾಡಬಲ್ಲ ವಿದ್ಯೆ ಕಲಿತಿದ್ದರು. ಹೀಗಾಗಿ, ಅವರು ತಮ್ಮ ಕಾಲಘಟ್ಟದಲ್ಲಿ ಬಹಳ ಡೇಂಜರಸ್ ಬೌಲರ್ ಎನಿಸಿದ್ದರು.

    ಟೆಸ್ಟ್, ಏಕದಿನ ಕ್ರಿಕೆಟ್ ಎರಡರಲ್ಲೂ ಅವರು 200ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 833 ವಿಕೆಟ್ ಪಡೆದು ಸೈ ಎನಿಸಿದ್ದರು
    Published by:Vijayasarthy SN
    First published: