T20 World Cup- ಓಮನ್​ಗೆ ಜಯ ತಂದಿತ್ತ ಜತೀಂದರ್; ಸ್ಕಾಟ್​ಲೆಂಡ್ ಎದುರು ಬಾಂಗ್ಲಾಗೆ ಸೋಲಿನ ಆಘಾತ

Oman and Scotland win on first day of T20 World Cup- ಪಂಜಾಬ್ ಮೂಲದ ಜತೀಂದರ್ ಸಿಂಗ್ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಆತಿಥೇಯ ಓಮನ್ ದೇಶ ಈ ಬಾರಿಯ ಟಿ20 ವಿಶ್ವಕಪ್​ನ ಚೊಚ್ಚಲ ಪಂದ್ಯ ಗೆದ್ದುಕೊಂಡಿದೆ. ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾ ಸೋಲಿನ ಆಘಾತ ಉಂಡಿದೆ.

ಜತೀಂದರ್ ಸಿಂಗ್

ಜತೀಂದರ್ ಸಿಂಗ್

 • Share this:
  ಅಲ್ ಅಮಿರಾತ್, ಓಮನ್, ಅ. 17: ಟಿ20 ವಿಶ್ವಕಪ್​ನ ಚೊಚ್ಚಲ ಪಂದ್ಯವನ್ನು ಆತಿಥೇಯ ಓಮನ್ ದೇಶ ಗೆದ್ದುಕೊಂಡಿದೆ. ಇಲ್ಲಿ ನಡೆದ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ತಂಡದ ವಿರುದ್ಧ ಓಮನ್ 10 ವಿಕೆಟ್​ಗಳಿಂದ ನಿರಾಯಾಸ ಗೆಲುವು ಪಡೆಯಿತು. ಗೆಲ್ಲಲು 130 ರನ್ ಗುರಿಯನ್ನು ಓಮನ್ 40 ಬಾಲ್ ಬಾಕಿ ಇರುವಂತೆಯೇ ಮುಟ್ಟಿ ಜಯಭೇರಿ ಭಾರಿಸಿತು. ಓಮನ್ ಗೆಲುವಿಗೆ ಜೀಶನ್ ಮಕ್​ಸೂದ್ ಅವರ ಅಮೋಘ ಬೌಲಿಂಗ್ ಮತ್ತು ಜತೀಂದರ್ ಸಿಂಗ್ ಅವರ ಭರ್ಜರಿ ಬ್ಯಾಟಿಂಗ್ ಪ್ರಮುಖ ಕಾರಣವಾಯಿತು.

  ಪಂಜಾಬ್​ನ ಲೂದಿಯಾನ ಮೂಲದ ಜತೀಂದರ್ ಸಿಂಗ್ ಕೇವಲ 42 ಬಾಲ್​ನಲ್ಲಿ ಅಜೇಯ 73 ರನ್ ಗಳಿಸಿ ಪಪುವಾ ತಂಡಕ್ಕೆ ಕಿಂಚಿತ್ತೂ ಗೆಲುವಿನ ಆಸೆ ಚಿಗುರದಂತೆ ನೋಡಿಕೊಂಡರು. ಇವರ ಜೊತೆ ಓಪನಿಂಗ್ ಮಾಡಿದ ಆಕಿಬ್ ಇಲ್ಯಾಸ್ ಕೂಡ 43 ಬಾಲ್​ನಲ್ಲಿ 50 ರನ್ ಗಳಿಸಿದರು. ಇಬ್ಬರೂ 131 ರನ್​ಗಳ ಮುರಿಯದ ಜೊತೆಯಾಟ ಆಡಿದರು. ಜತೀಂದರ್ ಸಿಂಗ್ ನಿಧಾನಗತಿಯ ಸ್ಪಿನ್ ಬೌಲರ್ಸ್ ಅನ್ನು ಬಹಳ ಲೀಲಾಜಾಲವಾಗಿ ಎದುರಿಸಿ ರನ್ ಮಳೆ ಸುರಿಸಿದರು.

  ಇದಕ್ಕೆ ಮುನ್ನ ಮೊದಲು ಬ್ಯಾಟ್ ಮಾಡಿದ ಪಪುವಾ ನ್ಯೂಗಿನಿಯಾದ ಇನ್ನಿಂಗ್ಸಲ್ಲಿ ಮೂವರು ಬ್ಯಾಟರ್ಸ್ ಮಾತ್ರ ಎರಡಂಕಿ ಮೊತ್ತ ಕಲೆಹಾಕಿದರು. ಅಸ್ಸದ್ ವಾಲ 56 ರನ್ ಗಳಿಸಿದರೆ, ಚಾರ್ಲ್ಸ್ ಅಮಿನಿ 37 ರನ್ ಗಳಿಸಿದರು. ಇವರಿಬ್ಬರು ಸೇರಿ 3ನೇ ವಿಕೆಟ್​ಗೆ 81 ರನ್ ಜೊತೆಯಾಟ ನೀಡಿದರು. ಆದರೆ, ಚಾರ್ಲ್ಸ್ ಅಮಿನಿ ಮತ್ತು ಅಸ್ಸದ್ ವಾಲ ಔಟ್ ಆದ ಬಳಿಕ 27 ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಿತು. ಜೊತೆಗೆ ರನ್ ಗತಿಯೂ ನಿಧಾನಗೊಂಡು, ಪಪುವಾ ತಂಡ ಅಂತಿಮವಾಗಿ ಕೇವಲ 129 ರನ್ ಮಾತ್ರ ಗಳಿಸಲು ಶಕ್ಯವಾಯಿತು.

  ಎಡಗೈ ಸ್ಪಿನ್ನರ್ ಜೀಶನ್ ಮಕ್​ಸೂದ್ 20 ರನ್​ಗೆ ನಾಲ್ಕು ವಿಕೆಟ್ ಪಡೆದರು. ಬಿಲಾಲ್ ಖಾನ್ ಮತ್ತು ಕಲೀಮುಲ್ಲಾ ಇಬ್ಬರೂ ತಲಾ ಎರಡೆರಡು ವಿಕೆಟ್ ಸಂಪಾದಿಸಿದರು. ಇವರ ಉತ್ತಮ ಬೌಲಿಂಗ್ ಕಾರಣದಿಂದ ಓಮನ್ ದೇಶಕ್ಕೆ ಸುಲಭ ಗುರಿ ಸಿಗಲು ಸಾಧ್ಯವಾಯಿತು.

  ಇದನ್ನೂ ಓದಿ: Yuvraj Singh Arrest- ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬಂಧನ; ವಿಚಾರಣೆ ಬಳಿಕ ಬಿಡುಗಡೆ

  ಜತೀಂದರ್ ಸಿಂಗ್ ಸ್ಥಿರ ಪ್ರದರ್ಶನ ನೀಡುತ್ತಿರುವ ಬ್ಯಾಟರ್:

  ಪಂಜಾಬ್ ಮೂಲದ 32 ವರ್ಷದ ಜತೀಂದರ್ ಸಿಂಗ್ ಅನುಭವಿ ಬ್ಯಾಟ್ಸ್​ಮನ್. 2019ರಲ್ಲಿ ನಡೆದ ಕ್ವಾಲಿಫಯರ್ ಟೂರ್ನಮೆಂಟ್​ನಲ್ಲಿ ಓಮನ್ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅದೇ ಫಾರ್ಮ್ ಅನ್ನು ವಿಶ್ವಕಪ್​ನಲ್ಲೂ ಅವರು ಮುಂದುವರಿಸಿದ್ಧಾರೆ. ಓಮನ್ ದೇಶದ ಪರ 19 ಏಕದಿನ ಪಂದ್ಯಗಳನ್ನ ಆಡಿರುವ ಅವರು 434 ರನ್ ಗಳಿಸಿದ್ದಾರೆ. ಅದರಲ್ಲಿ ಒಂದು ಶತಕ ಸೇರಿದೆ. 29 ಟಿ20 ಪಂದ್ಯಗಳಲ್ಲಿ 770 ರನ್ ಗಳಿಸಿದ್ದಾರೆ.

  ಬಾಂಗ್ಲಾದೇಶಕ್ಕೆ ಸೋಲಿನ ಆಘಾತ:

  ಇಂದು ನಡೆದ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಸ್ಕಾಟ್​ಲೆಂಡ್ 6 ರನ್​ಗಳಿಂದ ರೋಚಕ ಗೆಲುವು ಸಾಧಿಸಿತು. ಸ್ಕಾಟ್​ಲೆಂಡ್ ತಂಡದ 140 ರನ್ ಮೊತ್ತಕ್ಕೆ ಪ್ರತಿಯಾಗಿ ಬಾಂಗ್ಲಾದೇಶ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು.

  ಬಿ ಗುಂಪಿನಲ್ಲಿ ಮಂಗಳವಾರ ಬಾಂಗ್ಲಾದೇಶ ಮತ್ತು ಓಮನ್ ದೇಶಗಳು ಮುಖಾಮುಖಿಯಾಗಲಿವೆ. ಅದೇ ದಿನ ಸ್ಕಾಟ್ಲೆಂಡ್ ಮತ್ತು ಪಿಎನ್​ಜಿ ತಂಡಗಳು ಹಣಾಹಣಿ ನಡೆಸಲಿವೆ. ನಾಳೆ ಎ ಗುಂಪಿನ ಮೊದಲ ಸುತ್ತಿನಲ್ಲಿ ಐರ್​ಲೆಂಡ್-ನೆದರ್​ಲೆಂಡ್ಸ್, ಹಾಗೂ ಶ್ರೀಲಂಕಾ-ನಮೀಬಿಯಾ ತಂಡಗಳ ಮಧ್ಯೆ ಪಂದ್ಯಗಳು ಇವೆ.

  ಇದನ್ನೂ ಓದಿ: India vs Pakistan- ಭಾರತ-ಪಾಕ್ ಪಂದ್ಯದ ದಿನ ಸಾನಿಯಾ ಮಿರ್ಜಾ ಮಾಯ ಆಗೋದು ಯಾಕೆ ಗೊತ್ತಾ?

  ಸ್ಕೋರು ವಿವರ:

  ಪಪುವಾ ನ್ಯೂ ಗಿನಿಯಾ 20 ಓವರ್ 129/9
  (ಅಸ್ಸದ್ ವಾಲ 56, ಚಾರ್ಲ್ಸ್ ಅಮಿನಿ 37, ಸೆಸೆ ಬಾವು 13 ರನ್ – ಜೀಶನ್ ಮಕ್​ಸೂದ್ 20/4, ಬಿಲಾಲ್ ಖಾನ್ 16/2, ಕಲೀಮುಲ್ಲಾ 19/2)

  ಓಮನ್ 13.4 ಓವರ್ 131/0
  (ಜತೀಂದರ್ ಸಿಂಗ್ ಅಜೇಯ 73, ಅಕಿಬ್ ಇಲ್ಯಾಸ್ ಅಜೇಯ 50 ರನ್)

  ಪಂದ್ಯ ಶ್ರೇಷ್ಠ: ಜೀಶನ್ ಮಕ್​ಸೂದ್

  ----

  ಸ್ಕಾಟ್​ಲೆಂಡ್ 20 ಓವರ್ 140/9
  (ಕ್ರಿಸ್ ಗ್ರೀವ್ಸ್ 45, ಮಾರ್ಕ್ ವ್ಯಾಟ್ 22, ಜಾರ್ಜ್ ಮುನ್ಸೀ 29 ರನ್- ಮಹೆದಿ ಹಸನ್ 19/3, ಶಾಕಿಬ್ ಅಲ್ ಹಸನ್ 17/2, ಮುಸ್ತಾಫಿಜುರ್ ರಹಮಾನ್ 32/2)

  ಬಾಂಗ್ಲಾದೇಶ 20 ಓವರ್
  (ಮುಷ್ಫಿಕುರ್ ರಹೀಮ್ 38, ಶಾಕಿಬ್ ಅಲ್ ಹಸನ್ 20, ಮಹಮದುಲ್ಲಾ 23, ಅಫೀಫ್ ಹುಸೇನ್ 18 ರನ್ – ಬ್ರಾಡ್ ವೀಲ್ 24/3, ಕ್ರಿಸ್ ಗ್ರೀವ್ಸ್ 19/2
  Published by:Vijayasarthy SN
  First published: